1984ರ ಸಿಖ್ ವಿರೋಧಿ ದಂಗೆ: ಯಶ್ಪಾಲ್ ಸಿಂಗ್ ಗೆ ಮರಣದಂಡನೆ, ಶೇರಾವತ್ ಗೆ ಜೀವಾವಧಿ ಶಿಕ್ಷೆ

1984ರ ಸಿಖ್ ವಿರೋಧಿ ದಂಗೆಯ ಪ್ರಕರಣದಲ್ಲಿ ಆರೋಪಿ ಯಶ್ಪಾಲ್ ಸಿಂಗ್ ಗೆ ಮರಣ ದಂಡನೆ ಹಾಗೂ ನರೇಶ್ ಶೆರಾವತ್ ಗೆ ಜೀವಾವಧಿ ಶಿಕ್ಷೆಯನ್ನು ದೆಹಲಿ ನ್ಯಾಯಾಲಯ ವಿಧಿಸಿದೆ. 

Last Updated : Nov 20, 2018, 06:47 PM IST
1984ರ ಸಿಖ್ ವಿರೋಧಿ ದಂಗೆ: ಯಶ್ಪಾಲ್ ಸಿಂಗ್ ಗೆ ಮರಣದಂಡನೆ, ಶೇರಾವತ್ ಗೆ ಜೀವಾವಧಿ ಶಿಕ್ಷೆ title=

ನವದೆಹಲಿ: 1984ರ ಸಿಖ್ ವಿರೋಧಿ ದಂಗೆಯ ಪ್ರಕರಣದಲ್ಲಿ ಆರೋಪಿ ಯಶ್ಪಾಲ್ ಸಿಂಗ್ ಗೆ ಮರಣ ದಂಡನೆ ಹಾಗೂ ನರೇಶ್ ಶೆರಾವತ್ ಗೆ ಜೀವಾವಧಿ ಶಿಕ್ಷೆಯನ್ನು ದೆಹಲಿ ನ್ಯಾಯಾಲಯ ವಿಧಿಸಿದೆ. 

ಈ ಇಬ್ಬರು ಸಿಖ್ ಸಮುದಾಯದ ಸದಸ್ಯರನ್ನು ಕೊಂದ ಆರೋಪವನ್ನು ಹೊಂದಿದ್ದ ಹಿನ್ನಲೆಯಲ್ಲಿ ವಿಶೇಷ ತನಿಖಾ ತಂಡ (ಸಿಐಟಿ) ಇಬ್ಬರು ಆರೋಪಿಗಳಿಗೆ ಮರಣದಂಡನೆ ನೀಡಲು ಕೇಳಿಕೊಂಡಿತ್ತು. ಈ ಪ್ರಕರಣವು ಅತಿ ಅಪರೂಪದ ಪ್ರಕರಣ ಭಾಗವಾಗಿದೆ ಮತ್ತು ಒಂದು ಜನಾಂಗದ ವಿರುದ್ದ ನಡೆಸಿದ ಹತ್ಯೆಯಾಗಿದೆ ಎಂದು ಎಸ್ಐಟಿ ವಿಚಾರಣೆ ವೇಳೆ ತಿಳಿಸಿದೆ.  

ಸಿಖ್ ವಿರೋಧಿ ಗಲಭೆಯ ಸಂದರ್ಭದಲ್ಲಿ ದಕ್ಷಿಣ ದೆಹಲಿಯ ಮಣಿಪಾಪುರದ ಪ್ರದೇಶದಲ್ಲಿ ಹರ್ದೇವ್ ಸಿಂಗ್ ಮತ್ತು ಅವತಾರ್ ಸಿಂಗ್ ರನ್ನು ಕೊಂದ ಆರೋಪವನ್ನು ಈ ಇಬ್ಬರು ಆರೋಪಿಗಳು ಹೊಂದಿದ್ದರು.

ಎಸ್ಐಟಿಯು ಸಿಖ್ ವಿರೋಧಿ ಗಲಭೆ ಪ್ರಕರಣದ ವಿಚಾರವಾಗಿ ಮೊದಲ ಬಾರಿಗೆ 2015ರಲ್ಲಿ ತೆರೆದಿತ್ತು. ಈ ಹಿಂದೆ ದೆಹಲಿ ಪೋಲಿಸರು ಸಾಕ್ಷ್ಯಾಧಾರದ ಅಗತ್ಯಕ್ಕಾಗಿ 1994ರಲ್ಲಿ ಪ್ರಕರಣವನ್ನು ಮುಚ್ಚಿದ್ದರು.ವಿಚಾರಣೆಯ ಸಮಯದಲ್ಲಿ ಎಸ್ಐಟಿಯ ಪಬ್ಲಿಕ್ ಪ್ರಾಸಿಕ್ಯೂಟರ್ ಸುರೀಂದರ್ ಮೋಹಿತ್ ಸಿಂಗ್ ಹೇಳುವಂತೆ ಇಬ್ಬರು 25 ರ ಹರಯದ ಯುವಕರ ಕ್ರೂರ ಹತ್ಯೆ ಇದು ದೆಹಲಿಯಲ್ಲಿ ನಡೆದ ಕೇವಲ ಒಂದು ಘಟನೆಯಲ್ಲ ಸುಮಾರು 3000 ಸಾವಿರ ಜನರು ಈ ಗಲಭೆಯಲ್ಲಿ ಸಾವನ್ನಪ್ಪಿದ್ದರು ಎಂದು ತಿಳಿಸಿದರು.

Trending News