17ನೇ ಲೋಕಸಭೆ ಮೊದಲ ಸಂಸತ್ ಅಧಿವೇಶನ ಜೂನ್ 17 ರಿಂದ ಪ್ರಾರಂಭ

17 ನೇ ಲೋಕಸಭೆ ಮೊದಲ ಸಂಸತ್ ಅಧಿವೇಶನ ಜೂನ್ 17 ರಿಂದ ಜುಲೈ 26 ರವರೆಗೆ ನಡೆಯಲಿದೆ.

Last Updated : May 31, 2019, 08:05 PM IST

Trending Photos

17ನೇ ಲೋಕಸಭೆ ಮೊದಲ ಸಂಸತ್ ಅಧಿವೇಶನ ಜೂನ್ 17 ರಿಂದ ಪ್ರಾರಂಭ  title=
file photo

ನವದೆಹಲಿ: 17 ನೇ ಲೋಕಸಭೆ ಮೊದಲ ಸಂಸತ್ ಅಧಿವೇಶನ ಜೂನ್ 17 ರಿಂದ ಪ್ರಾರಂಭವಾಗಿ ಜುಲೈ 26 ರವರೆಗೆ ನಡೆಯಲಿದೆ.ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಸಂಸತ್ ಅಧಿವೇಶನದ ಮೊದಲ ದಿನ ಲೋಕಸಭೆ ಮತ್ತು ರಾಜ್ಯಸಭೆ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.

ಗುರುವಾರದಂದು ಹಂಗಾಮಿ ಸ್ಪೀಕರ್ ಆಗಿ ನೇಮಕಗೊಂಡಿದ್ದ ಮನೇಕಾ ಗಾಂಧಿ ಚುನಾಯಿತರಾದ ನೂತನ ಸದಸ್ಯರೆಲ್ಲರಿಗೂ ಪ್ರಮಾಣ ವಚನ ಬೋಧಿಸಲಿದ್ದಾರೆ.ತದನಂತರ ಪೂರ್ಣಾವಧಿ ಸ್ಪೀಕರ್ ನೇಮಕ ಜೂನ್ 19 ರ ಒಳಗಾಗಿ ನಡೆಯಲಿದೆ ಎನ್ನಲಾಗಿದೆ. ಇದಾದ ನಂತರ ಎರಡು ಸದನದಲ್ಲಿ ನೂತನ ಸರ್ಕಾರಕ್ಕೆ ಧನ್ಯವಾದಗಳನ್ನು ಸಲ್ಲಿಸಲಾಗುತ್ತದೆ. ಇದಕ್ಕೆ ಪ್ರಧಾನಿ ಮೋದಿ ಉತ್ತರ ನೀಡಲಿದ್ದಾರೆ.

ಪ್ರಧಾನಿ ಮೋದಿ ಸತತವಾಗಿ ಐದು ವರ್ಷಗಳ ಕಾಲಾವಧಿಯನ್ನು ಪೂರೈಸಿ ಎರಡನೇ ಬಾರಿಗೆ ಆಯ್ಕೆಯಾಗಿದ್ದಾರೆ.ಆ ಮೂಲಕ ಈ ಸಾಧನೆ ಮಾಡಿದ ಮೊದಲ ಕಾಂಗ್ರೆಸೇತರ ಪ್ರಧಾನಿ ಎನ್ನುವ ಖ್ಯಾತಿಯನ್ನು ಪಡೆದಿದ್ದಾರೆ. ಕಾಂಗ್ರೆಸ್ ಪಕ್ಷದ ಪರವಾಗಿ ಇದುವರೆಗೆ ಜವಾಹರಲಾಲ್ ನೆಹರೂ, ಇಂದಿರಾ ಗಾಂಧಿ ಮತ್ತು ಮನಮೋಹನ್ ಸಿಂಗ್ ಈ ಸಾಧನೆ ಮಾಡಿದ್ದಾರೆ.

ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್ಡಿಎ ಒಕ್ಕೂಟ  352 ಸ್ಥಾನಗಳನ್ನು ಗೆದ್ದುಕೊಂಡಿದೆ. ಅದರಲ್ಲಿ ಬಿಜೆಪಿ 303 ಸ್ಥಾನಗಳನ್ನು ತನ್ನದಾಗಿಸಿಕೊಂಡಿದೆ. ಇನ್ನೊಂದೆಡೆಗೆ ಕಾಂಗ್ರೆಸ್ ಪಕ್ಷವು 52 ಸ್ಥಾನಗಳನ್ನು ಗೆಲ್ಲುವಲ್ಲಿ ಸಫಲವಾಗಿದೆ.
 

Trending News