ಬಿಸಿಲಿನ ಬೇಗೆ ತಾಳಲಾರದೆ ಕಾರಿನಲ್ಲಿ ಕುಳಿತ 12 ವರ್ಷದ ಬಾಲಕ, ಮುಂದೇನಾಯ್ತು...?

ಪೊದೆಯೊಳಗೆ ನಿಲುಗಡೆ ಮಾಡಲಾಗಿದ್ದ ಕಾರಿನಲ್ಲಿ ಕುಳಿತಿದ್ದ 12 ವರ್ಷದ ಬಾಲಕ.  

Last Updated : Jun 6, 2019, 11:18 AM IST
ಬಿಸಿಲಿನ ಬೇಗೆ ತಾಳಲಾರದೆ ಕಾರಿನಲ್ಲಿ ಕುಳಿತ 12 ವರ್ಷದ ಬಾಲಕ, ಮುಂದೇನಾಯ್ತು...? title=
Representational Image

ಅಕೋಲಾ (ಮಹಾರಾಷ್ಟ್ರ): ಬಿಸಿಲ ಬೇಗೆ ತಾಳಲಾರದೆ ಪೊದೆಯೊಳಗೆ ನಿಲ್ಲಿಸಿದ್ದ ಕಾರಿನೊಳಗೆ ಕುಳಿತ 12 ವರ್ಷದ ಬಾಲಕನಿಗೆ ಅದೇ ಮೃತ್ಯುವಾಗಿ ಪರಿಣಮಿಸಿರುವ ಮನಕಲಕುವ ಘಟನೆ ಮಹಾರಾಷ್ಟ್ರದ ಅಕೋಲಾ ಜಿಲ್ಲೆಯ ಜಲ್ವಾಡಿ ಗ್ರಾಮದಲ್ಲಿ ನಡೆದಿದೆ.

ಬಿಸಿಲಿನಿಂದ ರಕ್ಷಣೆಗಾಗಿ ಬಾಲಕ ಪೊದೆಯೊಳಗೆ ನಿಲುಗಡೆ ಮಾಡಲಾಗಿದ್ದ ಕಾರಿನಲ್ಲಿ ಕುಳಿತಿದ್ದ. ಆ ವೇಳೆ ಕಾರಿನ ಬಾಗಿಲುಗಳು ಆಟೋಮ್ಯಾಟಿಕ್(ಸ್ವಯಂ ಚಾಲಿತ) ಆಗಿ ಮುಚ್ಚಿವೆ. ಇದರಿಂದಾಗಿ ಕಾರಿನೊಳಗೆ ಸಿಲುಕಿದ ಬಾಲಕನಿಗೆ ಉಸಿರಾಡುವುದೂ ಕಷ್ಟವಾಗಿದ್ದು, ಬಾಲಕ ಸಾವನ್ನಪ್ಪಿದ್ದಾನೆ.

ತಾಂತ್ರಿಕ ತೊಂದರೆಗಳ ಕಾರಣ ಕಳೆದ ಎರಡು ವರ್ಷಗಳಿಂದ ಕಾರನ್ನು ಬಳಸುತ್ತಿರಲಿಲ್ಲ. ಕಾರಿನ ಮಾಲೀಕರು ಅದನ್ನು ಪೊದೊಯೊಳಗೆ ನಿಲ್ಲಿಸಿದ್ದರು. ಮೃತ ಬಾಲಕ ತನೆಶ್ ಬಲಾಲ್ ತನ್ನ ಅಜ್ಜಿಯ ಜೊತೆ ಪ್ಲಾಸ್ಟಿಕ್ ಕಸವನ್ನು ತೆಗೆದುಕೊಳ್ಳಲು ಬಂದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. 

ಬಿಸಿಲಿನ ಬೇಗೆ ತಾಳಲಾರದೆ ಬಾಲಕ ಕಾರಿನಲ್ಲಿ ಕುಳಿತುಕೊಂಡಿದ್ದಾನೆ. ಆ ವೇಳೆ ಕಾರಿನ ಬಾಗಿಲು ಮುಚ್ಚಿರಬಹುದು. ಈ ವಿಷಯ ತಿಳಿಯದೆ ಆತನ ಅಜ್ಜಿ ಅವನಿಗಾಗಿ ದಿನವಿಡೀ ಹುಡುಕಿದ್ದಾರೆ. ಆದರೆ ಬಾಲಕ ಸಿಗಲಿಲ್ಲ. ಏತನ್ಮಧ್ಯೆ, ಕಾರಿನ ಮಾಲೀಕ ರಾತ್ರಿ ಕಾರಿನ ಬಾಗಿಲು ತೆರೆದಾಗ ಪ್ರಜ್ಞಾ ಹೀನ ಸ್ಥಿತಿಯಲ್ಲಿ ಬಾಲಕ ಸಿಕ್ಕಿದ್ದಾನೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.  ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
 

Trending News