Winter Weight Loss Tip: ಚಳಿಗಾಲದಲ್ಲಿ ತೂಕ ಕಡಿಮೆ ಮಾಡಲು ನಿಮ್ಮ ಉಪಹಾರದ ಬಗ್ಗೆ ನಿಗಾವಹಿಸಿ

ನಿರಂತರವಾಗಿ ಬದಲಾಗುತ್ತಿರುವ ಹವಾಮಾನದಿಂದಾಗಿ ಹಲವು ರೀತಿಯ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಅಂತಹ ಪರಿಸ್ಥಿತಿಯಲ್ಲಿ ಈ ಸಮಯದಲ್ಲಿ ನಿಮ್ಮ ಆಹಾರದ ಬಗ್ಗೆ ನೀವು ವಿಶೇಷ ಕಾಳಜಿ ವಹಿಸಿದರೆ, ನಿಮ್ಮ ದೇಹವು ಸದೃಢವಾಗಿರಲು ಸಹಾಯಕವಾಗುತ್ತದೆ.

Last Updated : Nov 13, 2020, 02:55 PM IST
  • ನಿರಂತರವಾಗಿ ಬದಲಾಗುತ್ತಿರುವ ಹವಾಮಾನದಿಂದಾಗಿ ಹಲವು ರೀತಿಯ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.
  • ಚಳಿಗಾಲದಲ್ಲಿ ನೀವು ಕರಿದ ಪದಾರ್ಥಗಳು ಮತ್ತು ಹೆಚ್ಚು ಮಸಾಲೆಯುಕ್ತ ಆಹಾರಗಳಿಂದ ದೂರ ಇರುವುದರಿಂದ ನಿಮ್ಮ ತೂಕ ನಿಯಂತ್ರಣದಲ್ಲಿರುವುದು ಮಾತ್ರವಲ್ಲ, ನಿಮ್ಮ ಆರೋಗ್ಯವೂ ಉತ್ತಮವಾಗಿರುತ್ತದೆ.
Winter Weight Loss Tip: ಚಳಿಗಾಲದಲ್ಲಿ ತೂಕ ಕಡಿಮೆ ಮಾಡಲು ನಿಮ್ಮ ಉಪಹಾರದ ಬಗ್ಗೆ ನಿಗಾವಹಿಸಿ title=

ಬೆಂಗಳೂರು: ಚಳಿಗಾಲದಲ್ಲಿ ವಾತಾವರಣದ ಜೊತೆಗೆ ನಿಮ್ಮ ಆಹಾರ ಶೈಲಿಯೂ ಬದಲಾಗುತ್ತದೆ. ಈ ಋತುವಿನಲ್ಲಿ ಎದುರಾಗುವ ಅತಿ ದೊಡ್ಡ ಸಮಸ್ಯೆ ಎಂದರೆ ತೂಕ ಹೆಚ್ಚಾಗುವುದು. ಏಕೆಂದರೆ ಚಳಿಗಾಲದಲ್ಲಿ ಸಾಮಾನ್ಯವಾಗಿ ಹೆಚ್ಚು ಕರಿದ ಆಹಾರವನ್ನು ಸೇವಿಸುತ್ತೇವೆ.

ಚಳಿಗಾಲದಲ್ಲಿ ನೀವು ಕರಿದ ಪದಾರ್ಥಗಳು ಮತ್ತು ಹೆಚ್ಚು ಮಸಾಲೆಯುಕ್ತ ಆಹಾರಗಳಿಂದ ದೂರ ಇರುವುದರಿಂದ ನಿಮ್ಮ ತೂಕ (Weight) ನಿಯಂತ್ರಣದಲ್ಲಿರುವುದು ಮಾತ್ರವಲ್ಲ, ನಿಮ್ಮ ಆರೋಗ್ಯವೂ ಉತ್ತಮವಾಗಿರುತ್ತದೆ. ನಿರಂತರವಾಗಿ ಬದಲಾಗುತ್ತಿರುವ ಹವಾಮಾನದಿಂದಾಗಿ ಹಲವು ರೀತಿಯ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಅಂತಹ ಪರಿಸ್ಥಿತಿಯಲ್ಲಿ ಈ ಸಮಯದಲ್ಲಿ ನಿಮ್ಮ ಆಹಾರದ ಬಗ್ಗೆ ನೀವು ವಿಶೇಷ ಕಾಳಜಿ ವಹಿಸಿದರೆ, ನಿಮ್ಮ ದೇಹವು ಸದೃಢವಾಗಿರಲು ಸಹಕಾರಿಯಾಗುತ್ತದೆ. 

ಚಳಿಗಾಲದಲ್ಲಿ ನಿಮ್ಮ ಆಹಾರವನ್ನು ನೀವು ಹೇಗೆ ಉತ್ತಮವಾಗಿರಿಸಿಕೊಳ್ಳಬಹುದು ಎಂಬುದರ ಬಗ್ಗೆ ತಿಳಿಸುತ್ತೇವೆ. ಇದರಿಂದ ನೀವು ಈ ಸಮಯದಲ್ಲಿ ಸದೃಢರಾಗಿರುತ್ತೀರಿ ಮತ್ತು ನಿಮ್ಮ ತೂಕವನ್ನು ಸಹ ಕಾಪಾಡಿಕೊಳ್ಳುತ್ತೀರಿ.

1. ಸಂಸ್ಕರಿಸಿದ ಆಹಾರ
ಶೀತ ವಾತಾವರಣವು ಜನರು ಹೆಚ್ಚಾಗಿ ಹುರಿದ, ತುಪ್ಪ ಮತ್ತು ಮಸಾಲೆ ಪದಾರ್ಥಗಳಿಂದ ಮಾಡಿದ ಆಹಾರ (Food) ಪದಾರ್ಥಗಳನ್ನು ಸೇವಿಸುತ್ತಾರೆ. ನೀವೂ ಕೂಡ ಇಂತಹ ಆಹಾರಗಳನ್ನು ಇಷ್ಟ ಪಡುತ್ತಿದ್ದಾರೆ ಚಳಿಗಾಲದಲ್ಲಿ ಇವುಗಳಿಂದ ದೂರವಿರುವುದು ಉತ್ತಮ. ಏಕೆಂದರೆ ಅದು ನಿಮ್ಮ ಆರೋಗ್ಯವನ್ನು ಹಾಳು ಮಾಡುತ್ತದೆ ಮತ್ತು ದೇಹದಲ್ಲಿ ಕೊಬ್ಬನ್ನು ಹೆಚ್ಚಿಸುತ್ತದೆ.

ಕಠಿಣ ಪರಿಶ್ರಮದ ನಂತರವೂ ನಿಮ್ಮ ತೂಕ ಕಡಿಮೆಯಾಗುತ್ತಿಲ್ಲವೇ? ಇದನ್ನು ಒಮ್ಮೆ ಟ್ರೈ ಮಾಡಿ...

2. ಕೇಕ್, ಕುಕೀಸ್

ಅನೇಕ ಬಾರಿ ಜನರು ಬೆಳಿಗ್ಗೆ ಚಹಾದೊಂದಿಗೆ ಕುಕೀಗಳನ್ನು ತಿನ್ನುತ್ತಾರೆ ಮತ್ತು ಕೇಕ್ (Cake) ಕೂಡ ತಿನ್ನುತ್ತಾರೆ ಅದು ಬಾಯಿಗೆ ರುಚಿಕರವಾಗಿತ್ತದೆ. ಆದರೆ  ವಾಸ್ತವವಾಗಿ ಕೇಕ್ ಮತ್ತು ಕುಕೀಗಳನ್ನು ತಯಾರಿಸಲು ಹಿಟ್ಟಿನ ಜೊತೆಗೆ ತುಪ್ಪ ಮತ್ತು ಕೆನೆ ಬಳಸಲಾಗುತ್ತದೆ. ಇದು ನಿಮ್ಮ ಫಿಟ್‌ನೆಸ್‌ ದೃಷ್ಟಿಯಿಂದ ಒಳ್ಳೆಯ ಆಹಾರವಲ್ಲ, ಆದ್ದರಿಂದ ನೀವು ಈ ಆಹಾರಗಳನ್ನು ಉಪಾಹಾರದಲ್ಲಿ ತಿನ್ನಬಾರದು.

3. ನೂಡಲ್ಸ್


ಆಗಾಗ್ಗೆ ಜನರು ನೂಡಲ್ಸ್ ಅನ್ನು ಮಸಾಲೆಯುಕ್ತ ಮತ್ತು ವಿಶೇಷವಾದ ಏನನ್ನಾದರೂ ತಿನ್ನಬೇಕೆಂಬ ಬಯಕೆಯಿಂದ ತಯಾರಿಸುತ್ತಾರೆ. ಹೆಚ್ಚು ರುಚಿಕರವಾದ ಆಹಾರವನ್ನು ಸೇವಿಸಲು ಇಚ್ಚಿಸುತ್ತಾರೆ. ಆದರೆ ಇವು ಆರೋಗ್ಯಕರವಲ್ಲ, ಇದು ನಿಮ್ಮ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತವೆ, ಈ ಸಂದರ್ಭದಲ್ಲಿ ನೀವು ಉಪಾಹಾರದಲ್ಲಿ ನೂಡಲ್ಸ್‌ನಿಂದ ದೂರವಿರಬೇಕು.

ಸಿಹಿತಿಂಡಿ ತಿನ್ನುವಾಗ ಈ ವಿಧಾನ ಅಳವಡಿಸಿಕೊಂಡರೆ ಹೆಚ್ಚಾಗಲ್ಲ ನಿಮ್ಮ ತೂಕ

4. ವಡೆ, ಪಕೋಡ


ಚಳಿಗಾಲ (Winter) ದಲ್ಲಿ ಸಾಮಾನ್ಯವಾಗಿ ಬೇಲಿಗೆ ವೇಳೆ ಕರಿದ ಪದಾರ್ಥಗಳನ್ನು ಹೆಚ್ಚಾಗಿ ಮಾಡಲಾಗುತ್ತದೆ. ಆದರೆ ಬೆಳಗಿನ ಉಪಾಹಾರದಲ್ಲಿ ವಡೆ, ಪಕೋಡ, ಪೂರಿ, ಕಚೋರಿಯಂತಹ ತಿನಿಸುಗಳನ್ನು ಸೇವಿಸುವುದರಿಂದ ನಿಮಗೆ ಹಲವು ರೀತಿಯ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಇದರಿಂದಾಗಿ ಬೆಳಗ್ಗೆ ಉಪಹಾರದ ವೇಳೆ ಈ ರೀತಿಯ ಕರಿದ ಪದಾರ್ಥಗಳ ಸೇವನೆಯನ್ನು ತಪ್ಪಿಸಿ.

Trending News