Black Fungus: ಕೊವಿಡ್-19 ಒಂದು ಜಾಗತಿಕ ಮಹಾಮಾರಿ, ಆದರೆ Black Fungus ಮಾತ್ರ ಭಾರತದಲ್ಲಿಯೇ ಏಕೆ ವೇಗವಾಗಿ ಹರಡುತ್ತಿದೆ?

Why Black Fungus More Rampant In India - ಕೊರೊನಾ ಮಹಾಮಾರಿಗೆ (Corona Pandemic) ಇಡೀ ವಿಶ್ವವೇ ತಲ್ಲಣಿಸಿದೆ. ಆದರೆ, ಬ್ಲಾಕ್ ಫಂಗಸ್ ಕೇವಲ ಭಾರತದಲ್ಲಿಯೇ ಯಾಕೆ ಭಾರಿ ಹಾನಿಗೆ ಕಾರಣವಾಗುತಿದೆ. ಉಳಿದ ದೇಶಗಳು ಈ ಹೊಸ ವಿಪತ್ತಿನಿಂದ ಹೇಗೆ ಸುರಕ್ಷಿತವಾಗಿವೆ.

Written by - Nitin Tabib | Last Updated : May 23, 2021, 02:59 PM IST
  • Covid-19 Pandemic ಒಂದು ಜಾಗತಿಕ ಮಹಾಮಾರಿಯಾಗಿದೆ.
  • ಆದರೆ, ಬ್ಲಾಕ್ ಫಂಗಸ್ ಕೇವಲ ಭಾರತದಲ್ಲಿಯೇ ಏಕೆ ವೇಗವಾಗಿ ಹರಡುತ್ತಿದೆ.
  • ಈ ಕುರಿತು ತಜ್ಞರ ಅಬಿಪ್ರಾಯ ಏನು ತಿಳಿದುಕೊಳ್ಳೋಣ ಬನ್ನಿ.
Black Fungus: ಕೊವಿಡ್-19 ಒಂದು ಜಾಗತಿಕ ಮಹಾಮಾರಿ, ಆದರೆ  Black Fungus ಮಾತ್ರ ಭಾರತದಲ್ಲಿಯೇ ಏಕೆ ವೇಗವಾಗಿ ಹರಡುತ್ತಿದೆ? title=
Why Black Fungus More Rampant In India (File Photo)

ನವದೆಹಲಿ:  Why Black Fungus More Rampant In India - ಕೊರೊನಾ ವೈರಸ್ ನ ಎರಡನೇ ಅಲೆ (Coronavirus Second Wave In India) ಭಾರತದಲ್ಲಿ ಅಪಾರ ಪ್ರಾಣಹಾನಿಯುಂಟು ಮಾಡಿದೆ. ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಸ್ಪತ್ರೆಗಳಲ್ಲಿ ಆಕ್ಸಿಜನ್ ಹಾಗೂ ಬೆಡ್ ಕೊರತೆ ಎದುರಿಸುತ್ತಿದ್ದಾರೆ. ಆದರೆ, ಕಳೆದ ಕೆಲ ದಿನಗಳಿಂದ ಬ್ಲಾಕ್ ಫಂಗಸ್ (Black Fungus) ಎಂಬ ಹೆಸರಿನ ಮತ್ತೊಂದು ಕಾಯಿಲೆ ಜನರನ್ನು ಚಿಂತೆಗೀಡು ಮಾಡಿದೆ. ಈ ಅಪಾಯಕಾರಿ ಸಿಲಿಂಧ್ರಿ ರೋಗದ (Mucormycosis) ಕಾರಣ ಕೊರೊನಾ ದಿನ ಹೇಗೆ ಚೇತರಿಸಿಕೊಂಡ ಜನರು ಮತ್ತೆ ಪ್ರಾಣಾಪಾಯ ಎದುರಿಸುತ್ತಿದ್ದಾರೆ.

ಆದರೆ, ಭಾರತದಲ್ಲಿ ಕಪ್ಪು ಶಿಲೀಂಧ್ರ ಪ್ರಕರಣಗಳನ್ನು ನೋಡಿ ಇದೀಗ ಹೊಸದೊಂದು ಪ್ರಶ್ನೆ ಉದ್ಭವಿಸಿದೆ. ಅದೇನೆಂದರೆ, ಇಡೀ ವಿಶ್ವವೆ ಕೊರೊನಾ ಮಹಾಮಾರಿಗೆ ಗುರಿಯಾಗಿದೆ, ಆದರೆ, ಬ್ಲಾಕ್ ಫಂಗಸ್ ಪ್ರಕರಣಗಳು ಕೇವಲ ಭಾರತದಲ್ಲಿ ಮಾತ್ರವೇ ಏಕೆ ವೇಗವಾಗಿ ಹರಡುತ್ತಿವೆ? ಎಂಬ ಪ್ರಶ್ನೆ ಇದೀಗ ಜನರನ್ನು ಕಾಡಲಾರಂಭಿಸಿದೆ.  ಇದಲ್ಲದೆ ವಿಶ್ವದ ಇತರೆ ದೇಶಗಳು ಈ ಹೊಸ ಅಪಾಯದಿಂದ ಹೇಗೆ ತನ್ನನ್ನು ತಾನು ರಕ್ಷಿಸಿಕೊಂಡಿವೆ. ಹಾಗಾದರೆ, ಈ ಕುರಿತು ತಜ್ಞರು ಏನು ಹೇಳುತ್ತಾರೆ ತಿಳಿಯೋಣ ಬನ್ನಿ.

ಈ ಕುರಿತು ಆಂಗ್ಲ ಮಾಧ್ಯಮದ ದಿನಪತ್ರಿಕೆಯೊಂದರ ಜೊತೆಗೆ ಮಾತನಾಡಿರುವ ವೈದ್ಯಕೀಯ ತಜ್ಞರು, ಕೊರೊನಾ (Coronavirus) ಮಹಾಮಾರಿಯ ಎರಡನೇ ಅಲೆ ಬರುವುದಕ್ಕೂ ಮುನ್ನ ವರ್ಷದಲ್ಲಿ ಸಾಮಾನ್ಯವಾಗಿ ಬ್ಲಾಕ್ ಫಂಗಸ್ ನ ಒಂದು ಅಥವಾ ಎರಡು ಪ್ರಕರಣಗಳು ವರದಿಯಾಗುತ್ತಿದ್ದವು. ಅದೂ ಕೂಡ ರೋಗ ಪ್ರತಿರೋಧಕ ಕ್ಷಮತೆ ಕಡಿಮೆ ಇರುವ ರೋಗಿಗಳಲ್ಲಿ ಮಾತ್ರ ಇದು ಕಾಣಿಸಿಕೊಳ್ಳುತ್ತಿತ್ತು. ಆದರೆ ಪರಿಸ್ಥಿತಿ ಎಷ್ಟೊಂದು ಹದಗೆಟ್ಟಿದೆ ಎಂದರೆ ಒಂದೇ ಆಸ್ಪತ್ರೆಯಲ್ಲಿ ತಿಂಗಳಲ್ಲಿ ಇಂತಹ ಸುಮಾರು 30 ರಿಂದ 35 ಪ್ರಕರಣಗಳು ವರದಿಯಾಗುತ್ತಿವೆ. ಅಂದರೆ, ದಿನಗಳ ಲೆಕ್ಕಾಚಾರದಲ್ಲಿ ದಿನಕ್ಕೊಂದು ಪ್ರಕರಣ ವರದಿಯಾಗುತ್ತಿದೆ ಎಂದರ್ಥ.

ಡಯಾಬಿಟಿಸ್ ರೋಗಿಗಳಲ್ಲಿ ವೇಗವಾಗಿ ಹರಡುತ್ತಿದೆ ಸೋಂಕು
ಭಾರತದಲ್ಲಿ ಬ್ಲಾಕ್ ಫಂಗಸ್ ನ ಅತಿ ಹೆಚ್ಚು ಪ್ರಕರಣಗಳು ವರದಿಯಾಗುತ್ತಿರುವುದರ ಹಿಂದಿನ ಕಾರಣ ಎಂದರೆ, ವಿಶ್ವದಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಡಯಾಬಿಟಿಸ್ ರೋಗಿಗಳನ್ನು ಹೊಂದಿರುವ ದೇಶ ಎಂದರೆ ಅದು ಭಾರತ. ಭಾರತದಲ್ಲಿ ಡಯಾಬಿಟಿಸ್ ಕಾಯಿಲೆಯಿಂದ ಬಳಲುತ್ತಿರುವವರ ಸಂಖ್ಯೆ ಸುಮಾರು 7 ಕೋಟಿಯಷ್ಟಿದೆ. ಇವರಲ್ಲಿ ಕೊರೊನಾ ಸೋಂಕಿಗೆ ಗುರಿಯಾದ ಬಹುತೇಕರಿಗೆ ಸ್ಟೇರಾಯಿಡ್ ಇಂಜೆಕ್ಷನ್ ನೀಡಲೇಬೇಕು. ಇದರಿಂದ ಅವರ ದೇಹದ ರೋಗ ಪ್ರತಿರೋಧಕ ಶಕ್ತಿ ಮತ್ತಷ್ಟು ಕುಗ್ಗುತ್ತದೆ. ಇಂತಹ ರೋಗಿಗಳು ಬ್ಲಾಕ್ ಫಂಗಸ್ ಸೋಂಕಿಗೆ ಗುರಿಯಾಗುವ ಅಪಾಯ ಹೆಚ್ಚುತ್ತದೆ.

ಈ ಕುರಿತು ಹೇಳುವ ತಜ್ಞರು, ಭಾರತದಲ್ಲಿ ಕೇವಲ ಡಯಾಬಿಟಿಸ್ ರೋಗಿಗಳ ಸಂಖ್ಯೆ ಹೆಚ್ಚಾಗಿರುವುದು ಮಾತ್ರವಲ್ಲದೆ, ಬಹುತೇಕ ಡಯಾಬಿಟಿಸ್ ರೋಗಿಗಳಲ್ಲಿ ಬ್ಲಡ್ ಶುಗರ್ ಲೆವಲ್ ಕೂಡ ನಿಯಂತ್ರಣದಲ್ಲಿರುವುದಿಲ್ಲ ಎನ್ನುತ್ತಾರೆ.  ಇದಲ್ಲದೆ ಭಾರತದಲ್ಲಿ ದೀರ್ಘ ಕಾಲದವರೆಗೆ ಸ್ಟೇರಾಯಿಡ್ ಚಿಕಿತ್ಸೆ ನೀಡಲಾಗುತ್ತಿದ್ದು, ಇದು ತುಂಬಾ ಅಪಾಯಾರಿಯಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.  ಇನ್ನೊಂದೆಡೆ ಈ ಕುರಿತು ಮಾತನಾಡುವ ಮತ್ತೋರ್ವ ಆರೋಗ್ಯ ತಜ್ಞರು, ಭಾತದಲ್ಲಿ ಆಸ್ಪತ್ರೆಗಳಲ್ಲಿ ಸ್ವಚ್ಚತೆಯ ಕೊರತೆ ಹಾಗೂ ಸೋಂಕಿತ ಉಪಕರಣಗಳ ಬಳಕೆಯಿಂದಲೂ ಕೂಡ ಈ ಫಂಗಸ್ ಪ್ರಕರಣಗಳು ಹೆಚ್ಚಾಗುತ್ತಿವೆ ಎನ್ನಲಾಗಿದೆ. ಹೀಗಾಗಿ ಆಸ್ಪತ್ರೆಗಳು ಸ್ವಚ್ಚತೆಯ ಕಡೆಗೆ ಹೆಚ್ಚಿನ ಗಮನ ನೀಡುವ ಅವಶ್ಯಕತೆ ಇದೆ. ಏಕೆಂದರೆ ಅಸ್ವಚ್ಚತೆಯ ಕಾರಣ ವೈದ್ಯಕೀಯ ಉಪಕರಣಗಳ ಒಳಗೆ ಮತ್ತು ಹೊರಗೆ ಫಂಗಸ್ ಇರುವ ಸಾಧ್ಯತೆ ಇದೆ ಎನ್ನುತ್ತಾರೆ. 

ಆಕ್ಸಿಜನ್ ಥೆರಪಿ ಹಾಗೂ ಸ್ಟೇರಾಯಿಡ್ ಹಿನ್ನೆಲೆ ಪ್ರಕರಣಗಳು ಹೆಚ್ಚಾಗುತ್ತಿವೆ
ಈ ಕುರಿತು ಮಾತನಾಡುವ ದೇಶದ ಮುಂಚೂಣಿಯಲ್ಲಿರುವ ವ್ಯಾಕ್ಸಿನ್ ತಜ್ಞರೊಬ್ಬರು, ಭಾರತದಲ್ಲಿ ಆಕ್ಸಿಜನ್ ಥೆರಪಿಯಿಂದ ಎಷ್ಟು ಜನರು ಈ ಸೋಂಕಿಗೆ ಗುರಿಯಾಗುತ್ತಿದ್ದಾರೆ ಮತ್ತು ಅವರಲ್ಲಿ ಎಷ್ಟು ಜನರಿಗೆ ಸ್ಟೆರಾಯಿಡ್ ಇಂಜೆಕ್ಷನ್ ನೀಡಲಾಗುತ್ತಿದೆ ಎಂಬುದನ್ನು ಗಮನಿಸುವುದು ಅತ್ಯಾವಶ್ಯಕ ಎನ್ನುತ್ತಾರೆ. ಏಕೆಂದರೆ, ಸ್ಟೆರಾಯಿಡ್ ಬಳಕೆ ಅಪಾಯಕಾರಿಯಾಗಿದೆ. ಇದರ ಜೊತೆಗೆ ಆಕ್ಸಿಜನ್ ಥೆರಪಿಗಾಗಿ ಬಳಸಲಾಗುವ ಉಪಕರಣಗಳನ್ನು ಕೂಡ ಡಿಸ್ಇನ್ಫೆಕ್ಟ್ ಮಾಡುವುದು ಆವಶ್ಯಕವಾಗಿದೆ. ಏಕೆಂದರೆ ಈ ಸಂಗತಿಗಳ ಮೇಲೆ ಹೆಚ್ಹಿನ ಗಮನ ನೀಡದೆ ಇರುವ ಕಾರಣ ಬ್ಲಾಕ್ ಫಂಗಸ್ ಪ್ರಕರಣಗಳಲ್ಲಿ ಏರಿಕೆಯಾಗುತ್ತಿವೆ ಎಂಬುದು ಅವರ ಅಭಿಪ್ರಾಯ. ಇನ್ನೊಂದೆಡೆ ಅವಶ್ಯಕತೆಗಿಂತ 6 ಪಟ್ಟು ಹೆಚ್ಚು ಸ್ಟೇರಾಯಿಡ್ ಗಳ ಬಳಕೆಯಾಗುತ್ತಿದೆ ಎಂದೂ ಕೂಡ ಅವರು ಹೇಳಿದ್ದಾರೆ. ಇದರಿಂದ ಕೊರೊನಾ ಸೋಂಕಿಗೆ ಗುರಿಯಾದ ರೋಗಿಗಳ ಪ್ರತಿರೋಧ ಶಕ್ತಿ ತುಂಬಾ ಕುಂಠಿತಗೊಳ್ಳುತ್ತಿದೆ ಎಂದು ತಜ್ಞರು ಹೇಳಿದ್ದಾರೆ.

ಇದನ್ನೂ ಓದಿ - ಅಂತರ ರಾಜ್ಯ ಪ್ರಯಾಣಿಕರಿಗೆ 'ಕೋವಿಡ್ ನೆಗೆಟಿವ್' ಕಡ್ಡಾಯ!

ಮೂರು ಹಂತಗಳಲ್ಲಿ ಬ್ಲಾಕ್ ಫಂಗಸ್ ಚಿಕಿತ್ಸೆ
- ಈ ಕುರಿತು ಮಾತನಾಡಿರುವ ತಜ್ಞರು, ಬ್ಲಾಕ್ ಫಂಗಸ್ ಚಿಕಿತ್ಸೆಯನ್ನು ಒಟ್ಟು ಮೂರು ಹಂತಗಳಲ್ಲಿ ನಡೆಸಲಾಗುತ್ತದೆ ಎಂದಿದ್ದಾರೆ. ಮೊದಲ ಹಂತದಲ್ಲಿ ಬ್ಲಾಕ್ ಫಂಗಸ್ ಅಂಟಿಕೊಂಡಿದ್ದರ ಮೂಲ ಕಾರಣ ಪತ್ತೆಹಚ್ಚುವುದು,  ರೋಗಿಗಳ ಸ್ಟೇರಾಯಿಡ್ ಬಳಕೆ ನಿಲ್ಲಿಸಿ , ಶುಗರ್ ಲೆವಲ್ ಹಾಗೂ ಅಸಿಡೋಸಿಸ್ ಪರೀಕ್ಷೆ ನಡೆಸಬೇಕು.

- ಇದಾದ ಬಳಿಕ ಎರಡನೆಯ ಹಂತದಲ್ಲಿ ಶಸ್ತ್ರ ಚಿಕಿತ್ಸೆ ನಡೆಸುವ ಮೂಲಕ ಸತ್ತ ಜೀವಕೋಶಗಳನ್ನು ತೆಗೆದು ಹಾಕಬೇಕು. ಇದಕ್ಕೆ ಹಲವು ನುರಿತ ಶಸ್ತ್ರ ಚಿಕಿತ್ಸಕರ ಅವಶ್ಯಕತೆ ಬೀಳುತ್ತದೆ. ಈ ಹಂತದಲ್ಲಿ ಫಂಗಸ್ ಪುನಃ ಹರಡಬಾರದು ಎಂಬುದನ್ನು ಕೂಡ ಸುನಿಶ್ಚಿತಗೊಳಿಸಬೇಕು.

ಇದನ್ನೂ ಓದಿ- ಕೊರೋನಾ ದಿಂದ ಮಗನ ಕಳೆದುಕೊಂಡ ತಂದೆಗೆ ₹ 1 ಕೋಟಿ ಪರಿಹಾರ ನೀಡಿದ ದೆಹಲಿ ಸಿಎಂ​!

- ಮೂರನೇ ಹಂತದಲ್ಲಿ ಬ್ಲಾಕ್ ಫಂಗಸ್ ಅನ್ನು ಹತೋಟಿಗೆ ತರಲು ಔಷಧಿಗಳ ಪ್ರಯೋಗ ಮಾಡಬೇಕು. ಪ್ರಸ್ತುತ ಈ ಫಂಗಸ್ ನ ಚಿಕಿತ್ಸೆಗಾಗಿ Amphotericin B ಇಂಜೆಕ್ಷನ್ ಬಳಸಲಾಗುತ್ತಿದೆ. ಈ ಔಷಧಿಯ ಬೇಡಿಕೆ ಇದಕ್ಕೂ ಮೊದಲು ಹೆಚ್ಚಾಗಿರಲಿಲ್ಲ. ಈ ಕಾರಣದಿಂದ ಇದರ ಉತ್ಪಾದನೆ ಕೂಡ ಕುಂಠಿತಗೊಂಡಿತ್ತು ಮತ್ತು ಇದೆ ಕಾರಣದಿಂದ ಸದ್ಯ ಈ ಔಷಧಿಯ ಬೇಡಿಕೆ ಕೂಡ ಹೆಚ್ಚಾಗಿಸಿದೆ. 

- ಇತ್ತೀಚೆಗಷ್ಟೇ ಭಾರತ ಸರ್ಕಾರ ಸನ್ ಫಾರ್ಮಾ ಸಿಪ್ಲಾ, ಭಾರತ್ ಸೀರಂ ಸೇರಿದಂತೆ ಹಲವು ಕಂಪನಿಗಳಿಗೆ ಈ ಔಷಧಿಯ ಉತ್ಪಾದನೆಯನ್ನು ಹೆಚ್ಚಿಸುವ ಸ್ವಾತಂತ್ರ್ಯ ನೀಡಿದೆ. ಈ ಕುರಿತು ಮಾಹಿತಿ ನೀಡಿರುವ ದೇಶದ ಅತಿ ದೊಡ್ಡ ಔಷಧಿ ತಯಾರಿಕಾ ಕಂಪನಿಯ ವಕ್ತಾರರು, Lambin 50 (ಸಿಪ್ಲಾ ಕಂಪನಿಯ Amphotericin B ಔಷಧಿಯ ಬ್ರಾಂಡ್ ಹೆಸರು) ಉತ್ಪಾದನೆಯನ್ನು ಬೇಡಿಕೆಗೆ ಅನುಗುಣವಾಗಿ ಹೆಚ್ಚಿಸಲಾಗುತ್ತಿದೆ. ಆದರೆ, ಹೆಚ್ಚುವರಿ ಸ್ಟಾಕ್ ಮಾರುಕಟ್ಟೆಗೆ ತಲುಪಲು 2 ರಿಂದ ನಾಲ್ಕು ವಾರಗಳ ಕಾಲಾವಕಾಶ ಬೆಕಗಲಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ-ವ್ಯಾಕ್ಸಿನ್ ಭಯದಿಂದ ನದಿಗೆ ಹಾರಿದ ಗ್ರಾಮೀಣ ಜನ, ಲಸಿಕೆ ಹಾಕಿಸಿಕೊಂಡಿದ್ದು ಕೇವಲ 14 ಜನ ಮಾತ್ರ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News