Weight Loss Fruits: ತೂಕ ಇಳಿಸಿಕೊಳ್ಳಲು ಸಹಾಯಕವಾದ ಈ ಹಣ್ಣುಗಳನ್ನು ತಪ್ಪದೇ ಸೇವಿಸಿ

Weight Loss Fruits: ಉತ್ತಮ ಆರೋಗ್ಯಕ್ಕೆ ಹಣ್ಣುಗಳ ಸೇವನೆ ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ. ಆದರೆ, ಕೆಲವು ಹಣ್ಣುಗಳ ಸೇವನೆಯಿಂದ ತೂಕವನ್ನೂ ಸಹ ಕಡಿಮೆ ಮಾಡಬಹುದು ಎಂದು ತಿಳಿದಿದೆಯೇ? 

Written by - Yashaswini V | Last Updated : Mar 29, 2022, 02:32 PM IST
  • ಈ ಹಣ್ಣುಗಳ ಸೇವನೆಯಿಂದ ತೂಕ ಕಡಿಮೆ ಆಗುತ್ತದೆ
  • ಆರೋಗ್ಯಕರವಾಗಿ ತೂಕ ಕಳೆದುಕೊಳ್ಳಲು ಈ ಹಣ್ಣುಗಳನ್ನು ನಿಮ್ಮ ಡಯಟ್ನಲ್ಲಿ ಸೇರಿಸಿ
  • ತೂಕ ನಷ್ಟಕ್ಕ ಸಹಾಯಕವಾಗುವ ಹಣ್ಣುಗಳ ಬಗ್ಗೆ ತಿಳಿಯೋಣ...
Weight Loss Fruits: ತೂಕ ಇಳಿಸಿಕೊಳ್ಳಲು ಸಹಾಯಕವಾದ ಈ ಹಣ್ಣುಗಳನ್ನು ತಪ್ಪದೇ ಸೇವಿಸಿ  title=
Fruits for weight loss

Weight Loss Fruits: ಹಣ್ಣುಗಳನ್ನು ತಿನ್ನುವುದು ಯಾವಾಗಲೂ ಆರೋಗ್ಯಕ್ಕೆ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಆದರೆ, ಕೆಲವು ಹಣ್ಣುಗಳ ಸೇವನೆಯಿಂದ ತೂಕವನ್ನೂ ಸಹ ಕಡಿಮೆ ಮಾಡಬಹುದು ಎಂದು ತಿಳಿದಿದೆಯೇ? ತೂಕವನ್ನು ಕಳೆದುಕೊಳ್ಳಲು ಇಚ್ಚಿಸುವ ಜನರು ಕೆಲವು ಹಣ್ಣುಗಳನ್ನು ತಮ್ಮ ಉತ್ತಮ ಸ್ನೇಹಿತರನ್ನಾಗಿ ಮಾಡಿಕೊಳ್ಳಬೇಕು, ಇದರಿಂದ ನೀವು ಸುಲಭವಾಗಿ ತೂಕವನ್ನು ಕಳೆದುಕೊಳ್ಳಬಹುದು. ಹಾಗಾದರೆ ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುವ ಹಣ್ಣುಗಳು ಯಾವುವು ಎಂದು ತಿಳಿಯೋಣ.

ದ್ರಾಕ್ಷಿಯಿಂದ ಕಡಿಮೆಯಾಗುತ್ತೆ ತೂಕ:
ವರದಿಯ ಪ್ರಕಾರ, ದ್ರಾಕ್ಷಿ ಹಣ್ಣು ತಿನ್ನುವುದರಿಂದ ನಿಮ್ಮ ತೂಕವನ್ನು ಕಡಿಮೆ (Weight Loss) ಮಾಡಬಹುದು. ನೀವೂ ಈ ಹಣ್ಣನ್ನು ತಿನ್ನದೇ ಇದ್ದರೆ ಇಂದೇ ಇದನ್ನು ನಿಮ್ಮ ಆಹಾರದಲ್ಲಿ ಸೇರಿಸಿಕೊಳ್ಳಿ.

ಇದನ್ನೂ ಓದಿ- Tea For Weight Loss: ಮನೆಯಲ್ಲಿ ಮಾಡುವ ಸಾಮಾನ್ಯ ಚಹಾದಿಂದಲೂ ತೂಕ ಇಳಿಕೆ ಸಾಧ್ಯ!

ಸೇಬು ತಿನ್ನುವುದರಿಂದಲೂ ಕಡಿಮೆಯಾಗುತ್ತೆ ತೂಕ:
ದಿನಕ್ಕೊಂದು ಸೇಬು ತಿನ್ನುವುದರಿಂದ ವೈದ್ಯರಿಂದ ದೂರ ಉಳಿಯಬಹುದು ಎಂದು ಹೇಳಲಾಗುತ್ತದೆ. ಹಾಗಾಗಿಯೇ, ಪ್ರತಿಯೊಬ್ಬರಿಗೂ ಪ್ರತಿದಿನ ಸೇಬು ತಿನ್ನಲು ಸಲಹೆ ನೀಡಲಾಗುತ್ತದೆ.  ವಾಸ್ತವವಾಗಿ,  ಸೇಬುಗಳು ಕಡಿಮೆ ಕ್ಯಾಲೋರಿಗಳನ್ನು ಹೊಂದಿರುತ್ತವೆ ಮತ್ತು ತೂಕ ನಷ್ಟಕ್ಕೆ ಸಹಾಯಕವಾಗಿವೆ ಎಂದು ಹಲವು ಸಂಶೋಧನೆಗಳಲ್ಲಿ ದೃಢಪಟ್ಟಿದೆ. ಒಂದು ಸೇಬಿನಲ್ಲಿ ಸುಮಾರು 110 ಕ್ಯಾಲೋರಿಗಳನ್ನು ಹೊಂದಿರುತ್ತದೆ. ಇದು  ದೇಹಕ್ಕೆ ಉತ್ಕರ್ಷಣ ನಿರೋಧಕಗಳನ್ನು ಒದಗಿಸುತ್ತದೆ. ಜೊತೆಗೆ ಕೊಲೆಸ್ಟ್ರಾಲ್ ಅನ್ನು ಸಾಮಾನ್ಯವಾಗಿರಿಸುತ್ತದೆ.

ತೂಕವನ್ನು ಕಳೆದುಕೊಳ್ಳಲು ನಿಮ್ಮ ಆಹಾರದಲ್ಲಿ ಬೆರ್ರಿಗಳನ್ನು ಸೇರಿಸಿ:
ಬೆರ್ರಿ ಹಣ್ಣುಗಳನ್ನು ತಿನ್ನುವ ಮೂಲಕವೂ ನಿಮ್ಮ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು. ನಿತ್ಯ ನಿಮ್ಮ ಆಹಾರದಲ್ಲಿ ಅರ್ಧ ಕಪ್ ಬೆರ್ರಿಗಳನ್ನು ಸೇವಿಸಿದರೆ, ಅದು ನಿಮಗೆ 42 ಕ್ಯಾಲೋರಿಗಳನ್ನು ಒದಗಿಸುತ್ತದೆ. ಇದು ತುಂಬಾ ಪರಿಣಾಮಕಾರಿ ಎನ್ನಲಾಗುತ್ತದೆ. ಏಕೆಂದರೆ ಇದು ದೇಹದಲ್ಲಿ ಸುಮಾರು 12 ಪ್ರತಿಶತದಷ್ಟು ವಿಟಮಿನ್-ಸಿ (Vitamin C) ಮತ್ತು ಮ್ಯಾಂಗನೀಸ್ ಮಟ್ಟವನ್ನು ಒದಗಿಸುತ್ತದೆ. 

ಇದನ್ನೂ ಓದಿ- Weight Loss Tips : ಹೊಟ್ಟೆ ಬೊಜ್ಜು ಇಳಿಸಿಕೊಳ್ಳಲು ಸೇವಿಸಿ ಬ್ರೌನ್ ರೈಸ್..!

ಕಿವಿ ಹಣ್ಣನ್ನು ತಿಂದು ತೂಕ ಇಳಿಸಿ:
ಇದಲ್ಲದೆ, ಕಿವಿ ಹಣ್ಣನ್ನು ತಿನ್ನುವುದರಿಂದಲೂ ತೂಕವನ್ನು ಕಡಿಮೆ ಮಾಡಬಹುದು ಎಂದು ನಂಬಲಾಗಿದೆ. ಸಪೋಟ ಹಣ್ಣಿನಂತೆ ಕಾಣುವ ಈ ಹಣ್ಣು ಉತ್ತಮ ಪೌಷ್ಟಿಕಾಂಶಗಳಿಂದ ಸಮೃದ್ಧವಾಗಿದೆ. ಈ ಹಣ್ಣನ್ನು ಪ್ರತಿದಿನ ಸೇವಿಸುವುದರಿಂದ ಕೆಲವೇ ದಿನಗಳಲ್ಲಿ ಪ್ರಯೋಜನ ಗೋಚರಿಸುತ್ತದೆ.

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ನಂಬಿಕೆಗಳನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ಖಂಡಿತವಾಗಿಯೂ ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News