Turmeric Water benefits: ನೀವು ಸಹ ಅರಿಶಿನ ನೀರನ್ನು ಕುಡಿಯುತ್ತಿಲ್ಲ ಎಂದಾದರೆ, ಇಂದಿನಿಂದಲೇ ಅದರ ರೂಢಿಯನ್ನು ನೀವು ಮಾಡಿಕೊಳ್ಳಿ. ಏಕೆಂದರೆ ಇದರ ಅದ್ಭುತ ಪ್ರಯೋಜನಗಳು ನಿಮ್ಮ ಆರೋಗ್ಯವನ್ನು ಫಿಟ್ ಆಗಿರಿಸುವುದರ ಜೋಗೆಗೆ ದೇಹದ ಅನೇಕ ಸಮಸ್ಯೆಗಳ ನಿವಾರಣೆಗೆ ಇದು ಸಹಕಾರಿಯಾಗಿದೆ. ಹಾಲಿನ ಜೊತೆಗೆ ಅರಿಶಿನ ಬೆರೆಸಿದರೆ ಹೆಚ್ಚು ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ, ಆದರೆ ನೀವು ಎಂದಾದರೂ ಅರಿಶಿನ ನೀರನ್ನು ಸೇವಿಸಿದ್ದೀರಾ? ಈ ಪ್ರಶ್ನೆಗೆ ನಿಮ್ಮ ಉತ್ತರ ಇಲ್ಲ ಎಂದಾದಲ್ಲಿ, ಇಂದಿನಿಂದಲೇ ಅದನ್ನು ರೂಢಿಸಿಕೊಳ್ಳಿ.
ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ
ಪ್ರತಿ ಭಾರತೀಯ ಅಡುಗೆ ಮನೆಯಲ್ಲಿ ಅರಿಶಿನವನ್ನು ಬಳಸಲಾಗುತ್ತದೆ. ಅರಿಶಿನವನ್ನು ಅನೇಕ ಆಯುರ್ವೇದ ಔಷಧಿಗಳಲ್ಲಿಯೂ ಬಳಸಲಾಗುತ್ತದೆ. ಅರಿಶಿನವು ಆಹಾರದ ರುಚಿಯನ್ನು ಹೆಚ್ಚಿಸುವುದರ ಜೊತೆಗೆ ದೇಹದ ಗಂಭೀರ ಸಮಸ್ಯೆಗಳನ್ನು ನಿವಾರಿಸಲು ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಚರ್ಮದ ಸೌಂದರ್ಯವಾಗಿರಲಿ ಅಥವಾ ರೋಗನಿರೋಧಕ ಶಕ್ತಿಯಾಗಿರಲಿ, ಅರಿಶಿನವನ್ನು ಎಲ್ಲಾ ರೀತಿಯಲ್ಲಿ ಬಳಸುವುದು ನಿಮಗೆ ಲಾಭ ನೀಡಲಿದೆ.
ಹಲವು ವಿಧಗಳಲ್ಲಿ ಅರಿಸಿನ ಬಳಕೆ
ಅರಿಶಿನವನ್ನು ಹಲವು ವಿಧಗಳಲ್ಲಿ ಬಳಸಲಾಗುತ್ತದೆ. ಹೆಚ್ಚಿನವರು ಅರಿಶಿನವನ್ನು ಹಾಲಿನೊಂದಿಗೆ ಬೆರೆಸಿ ಸೇವಿಸುತ್ತಾರೆ. ಅರಿಶಿನದಲ್ಲಿ ಅಡಗಿರುವ ಉತ್ಕರ್ಷಣ ನಿರೋಧಕ ಮತ್ತು ಉರಿಯೂತದ ಗುಣಲಕ್ಷಣಗಳು ದೇಹದ ಅನೇಕ ಸಮಸ್ಯೆಗಳನ್ನು ನಿವಾರಿಸುತ್ತದೆ.
ಇದನ್ನೂ ಓದಿ-Broccoli Juice Benefits: ಬ್ರೋಕೊಲಿ ಜ್ಯೂಸ್ ಸೇವನೆಯಿಂದಾಗುವ ಈ ಲಾಭ ನಿಮಗೆ ತಿಳಿದಿದೆಯೇ?
ಸಂಧಿವಾತದಲ್ಲೂ ಇದು ಪ್ರಯೋಜನಕಾರಿಯಾಗಿದೆ
ಇದಲ್ಲದೆ, ಅರಿಶಿನ ನೀರು ಗಾಯವನ್ನು ಗುಣಪಡಿಸಲು ನಿಮಗೆ ಪ್ರಯೋಜನಕಾರಿಯಾಗಿದೆ. ಸಂಧಿವಾತದಿಂದ ಉಂಟಾಗುವ ಉರಿಯೂತ ಮತ್ತು ಕಿರಿಕಿರಿಯನ್ನು ಕಡಿಮೆ ಮಾಡಲು ಅರಿಶಿನ ನೀರು ಸಹ ಪರಿಣಾಮಕಾರಿಯಾಗಿದೆ.
ಇದನ್ನೂ ಓದಿ-Pomegranate Benefits : ಮಧುಮೇಹಿಗಳಿಗೆ ಪ್ರಯೋಜನಕಾರಿ ದಾಳಿಂಬೆ ಹಣ್ಣು!
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಅನುಸರಿಸುವ ಮುನ್ನ ವೈದ್ಯರ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.