ಡಯಾಬಿಟಿಸ್ ರೋಗಿಗಳಿಗೆ ತುಂಬಾ ಪ್ರಯೋಜನಕಾರಿ ಅರಿಶಿನ

Turmeric Benefits For Diabetes Patients:  ಭಾರತೀಯ ಖಾದ್ಯಗಳಲ್ಲಿ ಹೆಚ್ಚಾಗಿ ಬಳಸುವ ಮಸಾಲೆ ಪದಾರ್ಥಗಳಲ್ಲಿ ಅರಿಶಿನವೂ ಒಂದು. ಆಯುರ್ವೇದ ಗುಣಗಳಿಂದ ಸಮೃದ್ಧವಾಗಿರುವ ಅರಿಶಿನವು ಮಧುಮೇಹಿಗಳಿಗೆ ವರದಾನಕ್ಕಿಂತ ಕಡಿಮೆ ಇಲ್ಲ ಎಂದು ಹೇಳಲಾಗುತ್ತದೆ. ಡಯಾಬಿಟಿಸ್ ರೋಗಿಗಳು ಅರಿಶಿನವನ್ನು ಬಳಸುವುದರಿಂದ ಬ್ಲಡ್ ಶುಗರ್ ಅನ್ನು ನಿಯಂತ್ರಿಸಬಹುದು ಎಂದು ಹೇಳಲಾಗುತ್ತದೆ. 

Written by - Yashaswini V | Last Updated : Sep 22, 2022, 08:24 AM IST
  • ಅರಿಶಿನವನ್ನು ದಿನನಿತ್ಯದ ಆಹಾರದಲ್ಲಿ ಸೇರಿಸುವುದರಿಂದ ಸಾಕಷ್ಟು ಪ್ರಯೋಜನಗಳಿವೆ.
  • ಅದರಲ್ಲೂ ಮಧುಮೇಹಿಗಳು ತಮ್ಮ ಅರಿಶಿನವನ್ನು ಬಳಸುವುದರಿಂದ ಬ್ಲಡ್ ಶುಗರ್ ಲೆವೆಲ್ ಅನ್ನು ಸುಲಭವಾಗಿ ನಿಯಂತ್ರಿಸಬಹುದು
  • ಮಧುಮೇಹಿಗಳು ಏಕೆ ಅರಿಶಿನವನ್ನು ಬಳಸಬೇಕು? ಇದನ್ನು ಯಾವ ರೀತಿ ಬಳಸುವುದರಿಂದ ಡಯಾಬಿಟಿಸ್ ರೋಗಿಗಳಿಗೆ ಹೆಚ್ಚು ಪ್ರಯೋಜನಕಾರಿ ಎಂದು ತಿಳಿಯೋಣ...
ಡಯಾಬಿಟಿಸ್ ರೋಗಿಗಳಿಗೆ ತುಂಬಾ ಪ್ರಯೋಜನಕಾರಿ ಅರಿಶಿನ  title=
Turmeric For Diabetes

ಡಯಾಬಿಟಿಸ್ ರೋಗಿಗಳಿಗೆ ಅರಿಶಿನ: ಉತ್ತಮ ಆರೋಗ್ಯಕ್ಕಾಗಿ ನಮ್ಮ ಆಹಾರದ ಬಗ್ಗೆ ಕಾಳಜಿ ವಹಿಸುವುದು ಬಹಳ ಮುಖ್ಯ. ಅದರಲ್ಲೂ ಮಧುಮೇಹ ರೋಗಿಗಳು ತಮ್ಮ ಆಹಾರದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಮಧುಮೇಹ ರೋಗಿಗಳು ಆಹಾರದ ವಿಷಯದಲ್ಲಿ ಸ್ವಲ್ಪ ನಿರ್ಲಕ್ಷ್ಯವಹಿಸಿದರೂ ಅವರ ಬ್ಲಡ್ ಶುಗರ್ ಲೆವೆಲ್ ಹದಗೆಡಬಹುದು. ಕೆಲವೊಮ್ಮೆ ಇದು ಮಾರಣಾಂತಿಕವಾಗಿಯೂ ಪರಿಣಮಿಸಬಹುದು. ಮಧುಮೇಹ ರೋಗಿಗಳಿಗೆ ಅನೇಕ ಮಸಾಲೆ ಪದಾರ್ಥಗಳು ಪ್ರಯೋಜನಕಾರಿ ಎಂದು ನೀವು ಕೇಳಿರಬಹುದು. ಈ ಮಸಾಲೆಗಳಲ್ಲಿ ಒಂದು ಅರಿಶಿನ. ಆಯುರ್ವೇದದ ಪ್ರಕಾರ, ಇದು ಬಹಳಷ್ಟು ಔಷಧೀಯ ಗುಣಗಳನ್ನು ಹೊಂದಿದೆ, ಇದು ದೇಹದ ಒಳಭಾಗ ಮತ್ತು ಹೊರ ಭಾಗ (ಚರ್ಮ) ಎರಡಕ್ಕೂ ಪ್ರಯೋಜನಕಾರಿಯಾಗಿದೆ. ಅರಿಶಿನವನ್ನು ದಿನನಿತ್ಯದ ಆಹಾರದಲ್ಲಿ ಸೇರಿಸುವುದರಿಂದ ಸಾಕಷ್ಟು ಪ್ರಯೋಜನಗಳಿವೆ. ಅದರಲ್ಲೂ ಮಧುಮೇಹಿಗಳು ತಮ್ಮ ಅರಿಶಿನವನ್ನು ಬಳಸುವುದರಿಂದ ಬ್ಲಡ್ ಶುಗರ್ ಲೆವೆಲ್ ಅನ್ನು ಸುಲಭವಾಗಿ ನಿಯಂತ್ರಿಸಬಹುದು ಎಂದು ಹೇಳಲಾಗುತ್ತದೆ. ಹಾಗಿದ್ದರೆ, ಮಧುಮೇಹಿಗಳು ಏಕೆ ಅರಿಶಿನವನ್ನು ಬಳಸಬೇಕು? ಇದನ್ನು ಯಾವ ರೀತಿ ಬಳಸುವುದರಿಂದ ಡಯಾಬಿಟಿಸ್ ರೋಗಿಗಳಿಗೆ ಹೆಚ್ಚು ಪ್ರಯೋಜನಕಾರಿ ಎಂದು ತಿಳಿಯೋಣ...

ಮಧುಮೇಹದಲ್ಲಿ ಅರಿಶಿನ ಏಕೆ ಪ್ರಯೋಜನಕಾರಿ?
ಮಧುಮೇಹಿಗಳಿಗೆ ಅರಿಶಿನ ವರದಾನವಿದ್ದಂತೆ. ಆದರೆ, ಮಧುಮೇಹ ರೋಗಿಗಳು ಅರಿಶಿನವನ್ನು ನಿಯಮಿತವಾಗಿ ಸೇವಿಸಿದರಷ್ಟೇ ಅದರ ಸಂಪೂರ್ಣ ಲಾಭ ಪಡೆಯಲು ಸಾಧ್ಯವಾಗುತ್ತದೆ.  ಏಕೆಂದರೆ ಇದು ಕರ್ಕ್ಯುಮಿನ್‌ನಲ್ಲಿ ಸಮೃದ್ಧವಾಗಿದೆ, ಜೊತೆಗೆ ಈ ಮಸಾಲೆಯು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುವ ಸಾಮರ್ಥ್ಯವನ್ನು ಹೊಂದಿದೆ. 

ಇದನ್ನೂ ಓದಿ- ಉತ್ತಮ ಆರೋಗ್ಯಕ್ಕಾಗಿ ನಿಮ್ಮ ಡಯಟ್ನಲ್ಲಿ ಈ ಆಹಾರಗಳನ್ನು ಇಂದೇ ತೆಗೆಯಿರಿ

ಡಯಾಬಿಟಿಸ್ ರೋಗಿಗಳು ಅರಿಶಿನವನ್ನು ಹಲವು ವಿಧಗಳಲ್ಲಿ ಬಳಸಬಹುದು. ಯಾವ ಇತರ ಆಹಾರ ಪದಾರ್ಥಗಳೊಂದಿಗೆ ಅರಿಶಿನ ಬಳಕೆ ಡಯಾಬಿಟಿಸ್ ರೋಗಿಗಳಿಗೆ ಪ್ರಯೋಜನಕಾರಿ ಎಂದು ತಿಳಿಯೋಣ...
1. ಅರಿಶಿನ ಮತ್ತು ಆಮ್ಲಾ: 
ಅರಿಶಿನ ಮತ್ತು ಆಮ್ಲಾ ಎರಡನ್ನೂ ಮಧುಮೇಹ ರೋಗಿಗಳಿಗೆ ಔಷಧಿಗಳೆಂದು ಪರಿಗಣಿಸಲಾಗುತ್ತದೆ, ಆಮ್ಲಾವು ಬಹಳಷ್ಟು ವಿಟಮಿನ್ ಸಿ ಅನ್ನು ಹೊಂದಿರುತ್ತದೆ, ಅದು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಇದಲ್ಲದೆ, ಆಮ್ಲಾದಲ್ಲಿರುವ ಕ್ರೋಮಿಯಂ ಕಾರ್ಬೋಹೈಡ್ರೇಟ್‌ಗಳನ್ನು ಜೀರ್ಣಿಸಿಕೊಳ್ಳಲು ಸಹಾಯ ಮಾಡುತ್ತದೆ. ನೀರಿಗೆ ಆಮ್ಲಾ ಪುಡಿ ಮತ್ತು ಅರಿಶಿನ ಪುಡಿಯನ್ನು ಬೆರೆಸಿ ಕುಡಿದರೆ ಕಡಿಮೆ ಗ್ಲೂಕೋಸ್ ಮಟ್ಟವು ನಿಯಂತ್ರಣದಲ್ಲಿರುತ್ತದೆ.

2. ಕರಿಮೆಣಸಿನೊಂದಿಗೆ ಅರಿಶಿನ:
ಅರಿಶಿನ ಮತ್ತು ಕರಿಮೆಣಸಿನ ಸಂಯೋಜನೆಯು ಮಧುಮೇಹ ರೋಗಿಗಳಿಗೆ ರಾಮಬಾಣವಿದ್ದಂತೆ. ಏಕೆಂದರೆ ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಈ ಎರಡು ಮಸಾಲೆಗಳನ್ನು ಬಿಸಿ ಹಾಲಿನೊಂದಿಗೆ ಬೆರೆಸಿ ಕುಡಿಯಬಹುದು. ಕರಿಮೆಣಸಿನಲ್ಲಿ ಪೈಪರಿನ್ ಎಂಬ ಅಂಶವಿದ್ದು, ಇದು ರಕ್ತನಾಳಗಳನ್ನು ಆರೋಗ್ಯವಾಗಿರಿಸುತ್ತದೆ.

ಇದನ್ನೂ ಓದಿ- ಕೇವಲ 2 ರೂಪಾಯಿ ಕರ್ಪೂರ ನಿಮ್ಮ ಅದೃಷ್ಟವನ್ನೇ ಬದಲಾಯಿಸಬಹುದು

3. ಅರಿಶಿನ ಮತ್ತು ದಾಲ್ಚಿನ್ನಿ:
ಅರಿಶಿನ ಮತ್ತು ದಾಲ್ಚಿನ್ನಿ ಪುಡಿಯನ್ನು ತೆಗೆದುಕೊಂಡು ಅದನ್ನು ಹಾಲಿನೊಂದಿಗೆ ಬೆರೆಸಿ ಬಿಸಿ ಮಾಡಿದ ನಂತರ ಕುಡಿಯಿರಿ. ಬೆಳಗಿನ ಉಪಾಹಾರದ ಸಮಯದಲ್ಲಿ ಇದನ್ನು ಕುಡಿಯಲು ಆರೋಗ್ಯ ತಜ್ಞರು ಶಿಫಾರಸು ಮಾಡುತ್ತಾರೆ. ದಾಲ್ಚಿನ್ನಿಯೊಂದಿಗೆ ಅರಿಶಿನ ಬೆರೆಸಿದ ಹಾಲು ಸೇವನೆಯಿಂದ ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ನಿಯಂತ್ರಿಸುವುದು ಸುಲಭ. ದಾಲ್ಚಿನ್ನಿಯಲ್ಲಿ ಉರಿಯೂತ ನಿವಾರಕ ಮತ್ತು ಉತ್ಕರ್ಷಣ ನಿರೋಧಕ ಗುಣಲಕ್ಷಣಗಳು ಕಂಡುಬರುತ್ತವೆ, ಇದು ಮಧುಮೇಹ ರೋಗಿಗಳಿಗೆ ತುಂಬಾ ಪ್ರಯೋಜನಕಾರಿಯಾಗಿದೆ.

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ದಯವಿಟ್ಟು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News