Sugar Patient ಗಳಿಗೆ ವರಕ್ಕೆ ಸಮಾನ ಈ ವಿಶಿಷ್ಠ ರೀತಿಯ ವೈಟ್ ರೈಸ್!

Special Rice For Diabetics: ಸಾಮಾನ್ಯವಾಗಿ ಅನ್ನ ಸೇವಿಸದೆ ಊಟ ಪರಿಪೂರ್ಣ ಎನಿಸುವುದಿಲ್ಲ. ಅಷ್ಟೇ ಅಲ್ಲ ಅನ್ನವಿಲ್ಲದೆ ದಿನನಿತ್ಯದ ಆಹಾರವನ್ನು ಕಲ್ಪಿಸಿಕೊಳ್ಳುವುದು ಕಷ್ಟ, ಆದರೆ ಟೈಪ್ 2 ಡಯಾಬಿಟಿಸ್ ರೋಗಿಗಳಿಗೆ ಇದು ಸಕ್ಕರೆಯ ಮಟ್ಟವನ್ನು ಹೆಚ್ಚಿಸುವ ಕಾರಣ ಅದು ವಿಷಕ್ಕೆ ಸಮಾನ ಎನ್ನಲಾಗುತ್ತದೆ. ಹಾಗಾದರೆ ಅವರಿಗೆ ಯಾವುದೇ ಆಯ್ಕೆ ಇಲ್ಲವೇ? ಬನ್ನಿ ತಿಳಿದುಕೊಳ್ಳೋಣ,   

Written by - Nitin Tabib | Last Updated : Apr 28, 2023, 01:30 PM IST
  • ನೈಸರ್ಗಿಕವಾಗಿ ಬೆಳೆಸಲಾಗುವ ಅಕ್ಕಿ ಆರೋಗ್ಯಕ್ಕೆ ಅಷ್ಟು ಅಪಾಯಕಾರಿಯಲ್ಲ, ಆದರೆ ಭತ್ತದಿಂದ ಅಕ್ಕಿಯನ್ನು ಹೊರತೆಗೆಯಲು,
  • ಅದನ್ನು ರೈಸ್ ಮಿಲ್ ಗಳಿಗೆ ಕಳುಹಿಸಲಾಗುತ್ತದೆ ಮತ್ತು ನಂತರ ಅದನ್ನು ಪಾಲಿಶ್ ಮಾಡಲಾಗುತ್ತದೆ,
  • ಇದರಿಂದಾಗಿ ಅದು ಬಿಳಿ ಬಣ್ಣ ಮತ್ತು ಹೊಳಪನ್ನು ಪಡೆದುಕೊಳ್ಳುತ್ತದೆ, ಆದರೆ ಈ ಪ್ರಕ್ರಿಯೆ ನೈಸರ್ಗಿಕವಾಗಿ ಬೆಳೆದ ಅಕ್ಕಿಯ ಪೌಷ್ಟಿಕಾಂಶದ ಮೌಲ್ಯವನ್ನು ಕಡಿಮೆ ಮಾಡುತ್ತದೆ.
Sugar Patient ಗಳಿಗೆ ವರಕ್ಕೆ ಸಮಾನ ಈ ವಿಶಿಷ್ಠ ರೀತಿಯ ವೈಟ್ ರೈಸ್! title=
ಮಧುಮೆಹಿಗಳಿಗೆ ಯಾವ ಅಕ್ಕಿ ಸೇವನೆ ಸೂಕ್ತ?

Special Rice For Diabetics: ವಿಶ್ವಾದ್ಯಂತ ಸೇವಿಸುವ ಧಾನ್ಯ ಗಳಲ್ಲಿ ಅಕ್ಕಿ ಕೂಡ ಒಂದು, ಆದರೆ ಒಬ್ಬ ವ್ಯಕ್ತಿಯು ಮಧುಮೇಹದಿಂದ ಬಳಲುತ್ತಿದ್ದರೆ, ಬಿಳಿ ಅಕ್ಕಿಯನ್ನು ಸೇವಿಸದಂತೆ ವೈದ್ಯರು ಸಲಹೆ ನೀಡುತ್ತಾರೆ. ಏಕೆಂದರೆ ಇದು ಪಿಷ್ಟ ಮತ್ತು ಕಾರ್ಬೋಹೈಡ್ರೇಟ್‌ಗಳಲ್ಲಿ ಸಮೃದ್ಧವಾಗಿರುತ್ತದೆ, ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸುತ್ತದೆ. ಬಿಳಿ ಅಕ್ಕಿಯ ಗ್ಲೈಸೆಮಿಕ್ ಇಂಡೆಕ್ಸ್ ಕೂಡ ಅಧಿಕವಾಗಿದ್ದು, ಇದು ಮಧುಮೇಹ ರೋಗಿಗಳಿಗೆ ಒಳ್ಳೆಯದಲ್ಲ ಎನ್ನಲಾಗುತ್ತದೆ. ಟೈಪ್ 2 ಡಯಾಬಿಟಿಸ್ ರೋಗಿಗಳು ಕಡಿಮೆ ಅನ್ನವನ್ನು ತಿನ್ನಲು ಇದು ಒಂದು ಕಾರಣವಾಗಿದೆ, ಆದರೆ ಈ ರೋಗಿಗಳಿಗೆ ಯಾವುದೇ ಆಯ್ಕೆ ಇಲ್ಲ ಎಂಬುದು ಇದರ ಅರ್ಥವಲ್ಲ, 

ಬಿಳಿ ಅಕ್ಕಿಯ ಅನಾನುಕೂಲಗಳು?
ನೈಸರ್ಗಿಕವಾಗಿ ಬೆಳೆಸಲಾಗುವ ಅಕ್ಕಿ ಆರೋಗ್ಯಕ್ಕೆ ಅಷ್ಟು ಅಪಾಯಕಾರಿಯಲ್ಲ, ಆದರೆ ಭತ್ತದಿಂದ ಅಕ್ಕಿಯನ್ನು ಹೊರತೆಗೆಯಲು, ಅದನ್ನು ರೈಸ್ ಮಿಲ್ ಗಳಿಗೆ ಕಳುಹಿಸಲಾಗುತ್ತದೆ ಮತ್ತು ನಂತರ ಅದನ್ನು ಪಾಲಿಶ್ ಮಾಡಲಾಗುತ್ತದೆ, ಇದರಿಂದಾಗಿ ಅದು ಬಿಳಿ ಬಣ್ಣ ಮತ್ತು ಹೊಳಪನ್ನು ಪಡೆದುಕೊಳ್ಳುತ್ತದೆ, ಆದರೆ ಈ ಪ್ರಕ್ರಿಯೆ ನೈಸರ್ಗಿಕವಾಗಿ ಬೆಳೆದ ಅಕ್ಕಿಯ ಪೌಷ್ಟಿಕಾಂಶದ ಮೌಲ್ಯವನ್ನು ಕಡಿಮೆ ಮಾಡುತ್ತದೆ. ವಿಟಮಿನ್ ಬಿ ಇದರಿಂದ ಹೊರಬರಲು ಪ್ರಾರಂಭಿಸುತ್ತದೆ ಮತ್ತು ಅದರ ಗ್ಲೈಸೆಮಿಕ್ ಇಂಡೆಕ್ಸ್ ಕೂಡ ಹೆಚ್ಚಾಗುತ್ತದೆ. ಈ ಕಾರಣದಿಂದಾಗಿ, ಗ್ಲೂಕೋಸ್ ಮಟ್ಟವು ಹೆಚ್ಚಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಕಲಬೆರಕೆ ಅಕ್ಕಿ ಕೂಡ ಮಾರುಕಟ್ಟೆಗೆ ಬಂದಿದ್ದು, ಅವು ಆರೋಗ್ಯಕ್ಕೆ ಇನ್ನಷ್ಟು ಮಾರಕವಾಗಿವೆ.

ಮಧುಮೇಹ ಇರುವವರು ಯಾವ ಅಕ್ಕಿಯನ್ನು ತಿನ್ನಬೇಕು?
ಟೈಪ್-2 ಡಯಾಬಿಟಿಸ್ ರೋಗಿಗಳು ಬಿಳಿ ಅಕ್ಕಿಯನ್ನು ತಿನ್ನಲು ಸಾಧ್ಯವಿಲ್ಲ, ಅಥವಾ ಬಿಳಿ ಅಕ್ಕಿಯಿಂದ ತಯಾರಿಸಲಾಗುವ ಅನ್ನವನ್ನು ಸೇವಿಸದಿರಲು ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ. ಆದರೆ ಅವರಿಗೆ ಬ್ರೌನ್ ರೈಸ್ ರೂಪದಲ್ಲಿ ಉತ್ತಮ ಆಯ್ಕೆ ಇದೆ. ಬ್ರೌನ್ ರೈಸ್ ಅನ್ನು ಆರೋಗ್ಯಕ್ಕೆ ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ ಏಕೆಂದರೆ ಇದು ಹೆಚ್ಚು ಪೋಷಕಾಂಶಗಳು, ಹೆಚ್ಚು ಫೈಬರ್, ಹೆಚ್ಚು ವಿಟಮಿನ್ಗಳು ಮತ್ತು ಕಡಿಮೆ ಗ್ಲೈಸೆಮಿಕ್ ಇಂಡೆಕ್ಸ್ ಸ್ಕೋರ್ ಅನ್ನು ಹೊಂದಿರುತ್ತದೆ.

ಇದನ್ನೂ ಓದಿ-Health Tips: ಹಲವು ದೊಡ್ಡ ಕಾಯಿಲೆಗಳ ಅಪಾಯ ತಗ್ಗಿಸುತ್ತದೆ ಕೆಫೆನ್, ನಿತ್ಯ ಎಷ್ಟು ಸೇವಿಸಬೇಕು?

ಯಾವ ಅಕ್ಕಿ ಕಡಿಮೆ GI ಸ್ಕೋರ್ ಹೊಂದಿದೆ?
ಬಿಳಿ ಅಕ್ಕಿಯ ಗ್ಲೈಸೆಮಿಕ್ ಇಂಡೆಕ್ಸ್ ಸ್ಕೋರ್ 70 ರ ಸಮೀಪದಲ್ಲಿದೆ, ಅಂದರೆ ಟೈಪ್ 2 ಡಯಾಬಿಟಿಸ್ ರೋಗಿಗಳಿಗೆ ಇದು ಅಪಾಯಕಾರಿ ಡೀಲ್ ಆಗಿದೆ, ಬಾಸ್ಮತಿ ಅಕ್ಕಿಯು ಸುಮಾರು 56 ರಿಂದ 69 ರ GI ಸ್ಕೋರ್ ಅನ್ನು ಹೊಂದಿದೆ, ಅಂದರೆ ಇದು ಬಿಳಿ ಅಕ್ಕಿಯಷ್ಟೆ ಹೆಚ್ಚಾಗಿದೆ. ಮತ್ತೊಂದೆಡೆ, ಬ್ರೌನ್ ರೈಸ್ ಕುರಿತು ಹೇಳುವುದಾದರೆ, ಅದರ ಜಿಐ ಸ್ಕೋರ್ 50 ರ ಸಮೀಪದಲ್ಲಿದೆ, ಆದ್ದರಿಂದ ಹೆಚ್ಚಿನ ಆರೋಗ್ಯ ತಜ್ಞರು ಇದನ್ನು ತಿನ್ನಲು ಶಿಫಾರಸು ಮಾಡುತ್ತಾರೆ.

ಇದನ್ನೂ ಓದಿ-High Cholesterol ನಿಂದ ಪಾರಾಗಬೇಕೆ? ತಕ್ಷಣ ಈ ಸಂಗತಿಗಳಿಂದ ಅಂತರ ಕಾಯ್ದುಕೊಳ್ಳಿ!

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News