High Blood Sugar Symptoms: ದೇಹದಲ್ಲಿ ಕಂಡುಬರುವ ಈ ಲಕ್ಷಣಗಳು ಬ್ಲಡ್ ಶುಗರ್ ಲೆವೆಲ್ ಹೆಚ್ಚಾಗಿದೆ ಎಂದು ಸೂಚಿಸುತ್ತೆ

ಅಧಿಕ ರಕ್ತದ ಸಕ್ಕರೆಯ ಲಕ್ಷಣಗಳು: ಇತ್ತೀಚಿನ ದಿನಗಳಲ್ಲಿ ಡಯಾಬಿಟಿಸ್ ಒಂದು ಸಾಮಾನ್ಯ ಕಾಯಿಲೆ ಆಗಿದೆ. ದೇಹದಲ್ಲಿ ಕಂಡುಬರುವ ಕೆಲವು ಲಕ್ಷಣಗಳು ಬ್ಲಡ್ ಶುಗರ್ ಲೆವೆಲ್ ಹೆಚ್ಚಾಗಿದೆ ಎಂದು ಸೂಚಿಸುತ್ತದೆ. ಅಂತಹ ಲಕ್ಷಣಗಳನ್ನು ಸಾಮಾನ್ಯ ಲಕ್ಷಣ ಎಂದು ಕೆಲವರು ನಿರ್ಲಕ್ಷಿಸುತ್ತಾರೆ. ಆದರೆ, ಭವಿಷ್ಯದಲ್ಲಿ ಅವು ಭಾರೀ ತೊಂದರೆಯನ್ನು ಉಂಟುಮಾಡಬಹುದು.

Written by - Yashaswini V | Last Updated : Oct 10, 2022, 08:55 AM IST
  • ಯಾವುದೇ ಒಬ್ಬ ವ್ಯಕ್ತಿಗೆ ರಕ್ತದಲ್ಲಿನ ಸಕ್ಕರೆಯ ಮಟ್ಟವು ಹೆಚ್ಚಾದಾಗ, ತಲೆಗೆ ಸಾಕಷ್ಟು ಆಮ್ಲಜನಕ ಸಿಗುವುದಿಲ್ಲ
  • ಇದು ತಲೆನೋವು ಉಂಟುಮಾಡುತ್ತದೆ.
  • ಇದರೊಂದಿಗೆ, ಕಿರಿಕಿರಿ, ಹೆದರಿಕೆ ಮತ್ತು ಹೃದಯ ಬಡಿತ ಹೆಚ್ಚಾಗುತ್ತದೆ.
High Blood Sugar Symptoms: ದೇಹದಲ್ಲಿ ಕಂಡುಬರುವ ಈ ಲಕ್ಷಣಗಳು ಬ್ಲಡ್ ಶುಗರ್ ಲೆವೆಲ್ ಹೆಚ್ಚಾಗಿದೆ ಎಂದು ಸೂಚಿಸುತ್ತೆ title=
High Blood Sugar Symptoms

ಹೈ ಬ್ಲಡ್ ಶುಗರ್ ಲಕ್ಷಣಗಳು: ಕಳಪೆ ಜೀವನಶೈಲಿಯಿಂದಾಗಿ, ಇತ್ತೀಚಿನ ದಿನಗಳಲ್ಲಿ ಜನರಲ್ಲಿ ಹೈ ಬ್ಲಡ್ ಶುಗರ್ ಕಾಯಿಲೆಯು ಹೆಚ್ಚುತ್ತಿದೆ. ಅನೇಕ ಬಾರಿ ನಿಯಮಿತವಾಗಿ ಔಷಧಗಳನ್ನು ತೆಗೆದುಕೊಂಡ ನಂತರವೂ, ರಕ್ತದಲ್ಲಿನ ಸಕ್ಕರೆಯು ಹೆಚ್ಚಾಗುತ್ತದೆ. ಇದು ಸಂಭವಿಸಿದಾಗ, ದೇಹವು ಕೆಲವು ಸಂಕೇತಗಳನ್ನು ನೀಡಲು ಪ್ರಾರಂಭಿಸುತ್ತದೆ. ಆದರೆ, ಜನರು ಇಂತಹ ಲಕ್ಷಣಗಳನ್ನು ಸಾಮಾನ್ಯ ಲಕ್ಷಣಗಳು ಎಂದು ನಿರ್ಲಕ್ಷಿಸುತ್ತಾರೆ. ಆದರೆ, ರಕ್ತದಲ್ಲಿನ ಸಕ್ಕರೆಯು ಅಧಿಕವಾಗಿದ್ದರೆ ಆ ವ್ಯಕ್ತಿಯು ಕೋಮಾ ಸ್ಥಿತಿಯನ್ನೂ ಸಹ ತಲುಪಬಹುದು.  ಹಾಗಾಗಿಯೇ, ಈ ಚಿಹ್ನೆಗಳನ್ನು ಸಮಯಕ್ಕೆ ಗುರುತಿಸಿ ಸೂಕ್ತ ಚಿಕಿತ್ಸೆ ಪಡೆಯುವುದು ಬಹಳ ಮುಖ್ಯವಾಗಿದೆ. ಹೈ ಬ್ಲಡ್ ಶುಗರ್ ಲಕ್ಷಣಗಳು ಯಾವುವು ಎಂದು ತಿಳಿಯೋಣ...

ಬ್ಲಡ್ ಶುಗರ್ ಲೆವೆಲ್ ಹೆಚ್ಚಾದಾಗ ಈ ಲಕ್ಷಣಗಳು ಕಂಡುಬರುತ್ತವೆ:-
* ಹಠಾತ್ ತೀವ್ರ ತಲೆನೋವು:

ಯಾವುದೇ ಒಬ್ಬ ವ್ಯಕ್ತಿಗೆ ರಕ್ತದಲ್ಲಿನ ಸಕ್ಕರೆಯ ಮಟ್ಟವು ಹೆಚ್ಚಾದಾಗ, ತಲೆಗೆ ಸಾಕಷ್ಟು ಆಮ್ಲಜನಕ ಸಿಗುವುದಿಲ್ಲ, ಇದು ತಲೆನೋವಿಗೆ ಕಾರಣವಾಗಬಹುದು. ಇದರೊಂದಿಗೆ, ಕಿರಿಕಿರಿ, ಹೆದರಿಕೆ ಮತ್ತು ಹೃದಯ ಬಡಿತ ಹೆಚ್ಚಾಗುವುದು ಸಹ ಸಂಭವಿಸುತ್ತದೆ. ನಿಮಗೂ ಇಂತಹ ಅನುಭವವಾದರೆ ಆ ಸಂದರ್ಭದಲ್ಲಿ ಬಹಳ ಎಚ್ಚರಿಕೆ ವಹಿಸುವುದು ತುಂಬಾ ಅಗತ್ಯ. 

* ಮೂತ್ರದ ವಾಸನೆ: 
ಮೂತ್ರದಿಂದ ಹಠಾತ್ತನೆ ಸಿಹಿ ವಾಸನೆ ಬರಲು ಪ್ರಾರಂಭಿಸಿದಾಗ, ಅದು ನಿಮ್ಮ ರಕ್ತದಲ್ಲಿನ ಸಕ್ಕರೆಯ ಮಟ್ಟವು ಹೆಚ್ಚಾಗುತ್ತಿದೆ ಎಂಬುದರ ಸಂಕೇತವಾಗಿದೆ. ವಾಸ್ತವವಾಗಿ, ರಕ್ತದಲ್ಲಿನ ಸಕ್ಕರೆ ಅಧಿಕವಾಗಿದ್ದರೆ, ಅದು ಮೂತ್ರಪಿಂಡಗಳ ಮೂಲಕ ಹೊರಬರುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಅದರಲ್ಲಿ ಸಿಹಿ ವಾಸನೆ ಬರಲು ಪ್ರಾರಂಭಿಸುತ್ತದೆ. ಈ ರೀತಿಯ ಏನಾದರೂ ಸಂಭವಿಸಿದಲ್ಲಿ, ಇದನ್ನು ಎಂದಿಗೂ ನಿರ್ಲಕ್ಷಿಸಬೇಡಿ. ಇಂತಹ ಸಂದರ್ಭದಲ್ಲಿ ಕೂಡಲೇ ವೈದ್ಯರನ್ನು ಸಂಪರ್ಕಿಸಿ.

ಇದನ್ನೂ ಓದಿ- ಸಾವಿನಲ್ಲೂ ಸಾರ್ಥಕತೆ: ಮೆದುಳು ನಿಷ್ಕ್ರಿಯಗೊಂಡಿದ್ದ ಬಿಎಸ್ಎಫ್ ಯೋಧನ ಅಂಗಾಗ ದಾನ

* ತೀವ್ರ ಆಯಾಸ:
ಕೆಲಸ ಹೆಚ್ಚಾದಾಗ ಸುಸ್ತಾಗುವುದು ಸಹಜ. ಆದರೆ, ನೀವು ಯಾವುದೇ ಕೆಲಸ ಮಾಡದೆ ಸುಸ್ತಾಗುತ್ತಿದ್ದರೆ ಮತ್ತು ಪದೇ ಪದೇ ಇದೇ ರೀತಿ ಆಗುತ್ತಿದ್ದರೆ ಆಗ ಎಚ್ಚರದಿಂದಿರಿ. ವಾಸ್ತವವಾಗಿ, ದೇಹದಲ್ಲಿ ರಕ್ತದಲ್ಲಿನ ಸಕ್ಕರೆಯು ಹೆಚ್ಚಾದಾಗ, ಜೀವಕೋಶಗಳು ಸಾಕಷ್ಟು ಆಮ್ಲಜನಕ ಮತ್ತು ಇತರ ಪೋಷಕಾಂಶಗಳನ್ನು ಪಡೆಯುವುದಿಲ್ಲ, ಇದರಿಂದಾಗಿ ಯಾವುದೇ ಕೆಲಸ ಮಾಡದೆ ದಣಿದ ಅನುಭವವಾಗುತ್ತದೆ. 

* ಮಂದ ದೃಷ್ಟಿ: 
ಇದ್ದಕ್ಕಿದ್ದಂತೆ ನಿಮ್ಮ ದೃಷ್ಟಿ ಮಸುಕಾಗುತ್ತಿದ್ದರೆ ಅಥವಾ ಕತ್ತಲೆಯಾಗಲು ಪ್ರಾರಂಭಿಸಿದರೆ, ಅದು ನಿಮ್ಮ ಬ್ಲಡ್ ಶುಗರ್ ಹೈ ಆಗಿರುವ ಲಕ್ಷಣವಾಗಿದೆ. ಯಾವುದೇ ಕಾರಣವಿಲ್ಲದೆ ದೇಹದ ತೂಕವನ್ನು ಕಳೆದುಕೊಳ್ಳುವುದು ಕೂಡ ಅಂತಹ ಒಂದು ಲಕ್ಷಣವಾಗಿದೆ. ಈ ಚಿಹ್ನೆಗಳನ್ನು ಎಂದಿಗೂ ನಿರ್ಲಕ್ಷಿಸಬಾರದು.

ಇದನ್ನೂ ಓದಿ- High BP: ಅಧಿಕ ರಕ್ತದೊತ್ತಡಕ್ಕೆ ಆಹ್ವಾನ ನೀಡುವ ಈ 5 ಸಂಗತಿಗಳಿಂದ ಇಂದೇ ಅಂತರ ಕಾಯ್ದುಕೊಳ್ಳಿ

* ಅತಿಯಾದ ಹಸಿವು ಮತ್ತು ಬಾಯಾರಿಕೆ: 
ನಿಮ್ಮ ಹಸಿವು ಅಥವಾ ಬಾಯಾರಿಕೆ ಇದ್ದಕ್ಕಿದ್ದಂತೆ ಹೆಚ್ಚಾದರೆ, ಇದು ಅಧಿಕ ರಕ್ತದ ಸಕ್ಕರೆಯ ಸಂಕೇತವಾಗಿದೆ. ಇದಕ್ಕೆ ಕಾರಣವೆಂದರೆ ಅತಿಯಾದ ಗ್ಲೂಕೋಸ್ ದೇಹಕ್ಕೆ ಹೋಗುವುದರಿಂದ ದೇಹವು ನಿರ್ಜಲೀಕರಣಗೊಳ್ಳಲು ಪ್ರಾರಂಭಿಸುತ್ತದೆ. ಇದರಿಂದಾಗಿ ದೇಹವು ಹೆಚ್ಚು ಹಸಿವು ಮತ್ತು ಬಾಯಾರಿಕೆಯನ್ನು ಅನುಭವಿಸಲು ಪ್ರಾರಂಭಿಸುತ್ತದೆ. ಈ ರೋಗಲಕ್ಷಣಗಳಲ್ಲಿ ಯಾವುದಾದರೂ ಒಂದನ್ನು ನೀವು ಗಮನಿಸಿದರೆ, ತಕ್ಷಣವೇ  ವೈದ್ಯರನ್ನು ಸಂಪರ್ಕಿಸಿ ಸೂಕ್ತ ಚಿಕಿತ್ಸೆ ಪಡೆಯಿರಿ.

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ಖಂಡಿತವಾಗಿಯೂ ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News