ಹಲ್ಲುಗಳ ಹಳದಿ ಕಲೆಯನ್ನು ತೊಲಗಿಸಲು ಈ ಹಣ್ಣು ತಿನ್ನಿ ಸಾಕು..!

Teeth whitening fruits : ಹಲ್ಲುಗಳ ಹಳದಿ ಕಲೆಗಳಿಂದ ಅನೇಕ ಜನರು ತೊಂದರೆಗೊಳಗಾಗುತ್ತಾರೆ. ಕೆಲವು ಹಣ್ಣುಗಳು ನಿಮ್ಮ ಹಲ್ಲುಗಳನ್ನು ಸ್ವಚ್ಛಗೊಳಿಸಲು ಸಹಾಯ ಮಾಡುತ್ತದೆ. 

Written by - Chetana Devarmani | Last Updated : Dec 16, 2023, 12:22 PM IST
  • ಹಳದಿ ಹಲ್ಲುಗಳಿಗೆ ಮನೆಮದ್ದು
  • ಹಳದಿ ಹಲ್ಲುಗಳನ್ನು ಬಿಳಿಯಾಗಿಸುವುದು ಹೇಗೆ?
  • ಹಲ್ಲುಗಳ ಹಳದಿ ಕಲೆಯನ್ನು ತೊಲಗಿಸುವ ವಿಧಾನ
ಹಲ್ಲುಗಳ ಹಳದಿ ಕಲೆಯನ್ನು ತೊಲಗಿಸಲು ಈ ಹಣ್ಣು ತಿನ್ನಿ ಸಾಕು..!  title=
Teeth whitening

Teeth whitening fruits : ಹಲ್ಲುಗಳ ಹಳದಿ ಕಲೆಗಳಿಂದ ಅನೇಕ ಜನರು ತೊಂದರೆಗೊಳಗಾಗುತ್ತಾರೆ. ಇದಕ್ಕಾಗಿ ಜನರು ವಿವಿಧ ರೀತಿಯ ಟೂತ್‌ ಪೇಸ್ಟ್‌ಗಳು ಮತ್ತು ಬ್ರಷ್‌ಗಳನ್ನು ಬದಲಾಯಿಸುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ ಕೆಲವು ಹಣ್ಣುಗಳು ನಿಮ್ಮ ಹಲ್ಲುಗಳನ್ನು ಸ್ವಚ್ಛಗೊಳಿಸಲು ಸಹಾಯ ಮಾಡುತ್ತದೆ. ಇದು ನಿಮಗೆ ಆಶ್ಚರ್ಯವಾಗಬಹುದು. ಆದರೆ ಹಣ್ಣುಗಳು ನಿಮ್ಮ ಹಲ್ಲುಗಳನ್ನು ಸ್ವಚ್ಛಗೊಳಿಸುವ ಕೆಲವು ಸಕ್ರಿಯ ಸಂಯುಕ್ತಗಳನ್ನು ಹೊಂದಿರುತ್ತವೆ.  

ಹಲ್ಲಿನ ಹಳದಿ ಕಲೆ ನಿವಾರಿಸಲು ಈ ಹಣ್ಣು ತಿನ್ನಿ:

ಕಲ್ಲಂಗಡಿ 

ಕಲ್ಲಂಗಡಿ ಹೆಚ್ಚು ಮ್ಯಾಲಿಕ್ ಆಸಿಡ್‌ನ್ನು ಹೊಂದಿರುತ್ತದೆ. ಮ್ಯಾಲಿಕ್ ಆಸಿಡ್‌ ನಿಮ್ಮ ಹಲ್ಲುಗಳನ್ನು ಸ್ವಚ್ಛಗೊಳಿಸುತ್ತದೆ. ಅಲ್ಲದೇ ಲಾಲಾರಸದ ಉತ್ಪಾದನೆಯನ್ನು ಉತ್ತೇಜಿಸುವಲ್ಲಿ ಪಾತ್ರವನ್ನು ವಹಿಸುತ್ತದೆ. ಇದು ಹಲ್ಲುಗಳ ಮೇಲ್ಮೈಯಿಂದ ಹಳದಿ ಬಣ್ಣವನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಕಲ್ಲಂಗಡಿಯ ನಾರಿನ ರಚನೆಯು ನಿಮ್ಮ ಹಲ್ಲುಗಳನ್ನು ಸ್ಕ್ರಬ್ ಮಾಡುತ್ತದೆ. ಇದು ನಿಮ್ಮ ಹಲ್ಲುಗಳ ಹೊಳಪನ್ನು ಹೆಚ್ಚಿಸುತ್ತಿದೆ.

ಇದನ್ನೂ ಓದಿ: ಬೆಳಗೆದ್ದು ಬೆಚ್ಚಗಿನ ನೀರನ್ನು ಕುಡಿದರೆ ಈ ಎಲ್ಲಾ ಸಮಸ್ಯೆಗಳು ದೂರವಾಗುತ್ತವೆ 

ಸೇಬು ಹಣ್ಣು

ಸೇಬು ಸಿಟ್ರಿಕ್ ಮತ್ತು ಮಾಲಿಕ್ ಆಸಿಡ್‌ ಎರಡರಲ್ಲೂ ಸಮೃದ್ಧವಾಗಿದೆ. ಅಲ್ಲದೆ, ಇದನ್ನು ತಿಂದಾಗ ಅದರ ರಸವು ಹಲ್ಲುಗಳಿಗೆ ಹತ್ತುತ್ತದೆ. ಅದರ ಮೇಲೆ ಸಂಗ್ರಹವಾಗಿರುವ ಹಳದಿ ಪದಾರ್ಥವು ಸ್ಕ್ರಬ್ ಆಗಲು ಪ್ರಾರಂಭಿಸುತ್ತದೆ. ಇದರಿಂದಾಗಿ ಹಲ್ಲಿನ ಹಳದಿ ಕಲೆ ನಿವಾರಣೆಯಾಗುತ್ತದೆ. ಸೇಬು ಹಣ್ಣನ್ನು ನಿರಂತರವಾಗಿ ತಿನ್ನುವುದು ಅಥವಾ ಸೇಬಿನ ಸಿಪ್ಪೆಯಿಂದ ಹಲ್ಲುಗಳ ಮೇಲೆ ಉಜ್ಜುವುದು ಹಳದಿ ಬಣ್ಣವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಸ್ಟ್ರಾಬೆರಿ 

ಸ್ಟ್ರಾಬೆರಿ ಇದು ಸಿಟ್ರಿಕ್ ಆಸಿಡ್ ಕಾರಣದಿಂದಾಗಿ ಹುಳಿಯನ್ನು ಹೊಂದಿರುತ್ತದೆ. ‌ಇದೊಂದು ಬ್ಲೀಚಿಂಗ್ ಏಜೆಂಟ್ ನಂತೆ ಕಾರ್ಯನಿರ್ವಹಿಸುತ್ತದೆ. ಹಲ್ಲುಗಳ ಮೇಲಿನ ಕಲೆಗಳನ್ನು ತೊಲಗಿಸಲು ಸಹಾಯ ಮಾಡುತ್ತದೆ.

ಅನಾನಸ್

ನಿಮ್ಮ ಹಲ್ಲುಗಳು ಪೆಲ್ಲಿಕಲ್ ಪದರದಿಂದ ಮುಚ್ಚಲ್ಪಟ್ಟಿವೆ. ನಿಮ್ಮ ಪೆಲ್ಲಿಕಲ್ ಪದರವು ನಿಮ್ಮ ಹಲ್ಲುಗಳನ್ನು ರಕ್ಷಿಸುತ್ತದೆ. ಆದರೆ ಇದು ಆಹಾರದ ಬಣ್ಣವನ್ನು ಹೀರಿಕೊಳ್ಳುತ್ತದೆ. ಇದರಿಂದ ಹಲ್ಲುಗಳು ಹಳದಿಯಾಗಲು ಕಾರಣವಾಗುತ್ತದೆ. ಅನಾನಸ್‌ನಲ್ಲಿರುವ ಬ್ರೋಮೆಲೈನ್ ಎಂಬ ಪ್ರೋಟಿಯೋಲೈಟಿಕ್ ಕಿಣ್ವವು ಪೆಲ್ಲಿಕಲ್ ಪದರವನ್ನು ಸ್ವಚ್ಛಗೊಳಿಸುತ್ತದೆ. ಹಲ್ಲುಗಳ ಹೊಳಪನ್ನು ಹೆಚ್ಚಿಸುತ್ತದೆ.  

ಇದನ್ನೂ ಓದಿ: ಪ್ರತಿದಿನ ಒಂದು ಲೋಟ ಟೊಮೆಟೊ ಜ್ಯೂಸ್ ಕುಡಿಯುವುದರಿಂದ ಏನು ಪ್ರಯೋಜನ? 

ಸೂಚನೆ: ಈ ಲೇಖನದಲ್ಲಿ ಉಲ್ಲೇಖಿಸಲಾದ ವಿಧಾನ ಅನುಸರಿಸುವ ಮುನ್ನ ವೈದ್ಯರನ್ನು ಅಥವಾ ಸಂಬಂಧಿತ ತಜ್ಞರನ್ನು ಸಂಪರ್ಕಿಸಿ. ಇದನ್ನು ಜೀ ಕನ್ನಡ ನ್ಯೂಸ್‌ ಖಚಿತಪಡಿಸುವುದಿಲ್ಲ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News