Health Tips: ನೀವು ಮೈಗ್ರೇನ್ ನಿಂದ ಬಳಲುತ್ತಿದ್ದರೆ ಕೂಡಲೇ ಈ ಆಹಾರ ಸೇವಿಸುವುದನ್ನು ನಿಲ್ಲಿಸಿ

ನೀವು ಮೈಗ್ರೇನ್ ಸಮಸ್ಯೆಯಿಂದ ದೀರ್ಘಕಾಲದವರೆಗೆ ತೊಂದರೆಗೊಳಗಾಗಿದ್ದರೆ ನೀವು  ಕೆಲವು ಆಹಾರ ಸೇವಿಸುವುದನ್ನು ಕೂಡಲೇ ತಪ್ಪಿಸಬೇಕು.

Written by - Puttaraj K Alur | Last Updated : Sep 27, 2021, 03:06 PM IST
  • ಇಂದು ಬಹುತೇಕ ಜನರು ಮೈಗ್ರೇನ್ ಸಮಸ್ಯೆಯಿಂದ ಬಳಲುತ್ತಿರುತ್ತಾರೆ
  • ಮೈಗ್ರೇನ್ ಸಮಸ್ಯೆಯಿಂದ ಪಾರಾಗಲು ಆರೋಗ್ಯಯುತ ಆಹಾರ ಸೇವಿಸುವುದನ್ನು ರೂಢಿಸಿಕೊಳ್ಳಬೇಕು
  • ಚಾಕೊಲೇಟ್, ಕೆಫೀನ್, ಮದ್ಯಪಾನ, ಸಂರಕ್ಷಿತ ಮಾಂಸ ಸೇವನೆ ಮೈಗ್ರೇನ್ ಸಮಸ್ಯೆಗೆ ಕಾರಣ
Health Tips: ನೀವು ಮೈಗ್ರೇನ್ ನಿಂದ ಬಳಲುತ್ತಿದ್ದರೆ ಕೂಡಲೇ ಈ ಆಹಾರ ಸೇವಿಸುವುದನ್ನು ನಿಲ್ಲಿಸಿ title=
ಮೈಗ್ರೇನ್ ಸಮಸ್ಯೆಯಿಂದ ಪಾರಾಗಲು ಏನು ಮಾಡಬೇಕು? (Photo Courtesy:@Zee News)

ನವದೆಹಲಿ: ಇಂದು ಬಹುತೇಕರು ಮೈಗ್ರೇನ್ ಸಮಸ್ಯೆ(Migraine Attack)ಯಿಂದ ಬಳಲುತ್ತಿರುತ್ತಾರೆ. ಇದಕ್ಕೆ ಕಾರಣವಾಗುವ ಅನೇಕ ವಿಷಯಗಳಿವೆ. ತಲೆಯಲ್ಲಿ ತೀವ್ರವಾದ ನೋವು(Headaches), ಅನೇಕ ಬಾರಿ ವಾಕರಿಕೆ, ತಲೆಸುತ್ತು, ಧ್ವನಿ ಮತ್ತು ಬೆಳಕಿಗೆ ಸೂಕ್ಷ್ಮತೆಯ ಸಮಸ್ಯೆಗಳಿರುತ್ತವೆ. ನರವಿಜ್ಞಾನಿ ವಿಕಾಸ್ ಶರ್ಮಾರ ಪ್ರಕಾರ, ನೀವು ಮೈಗ್ರೇನ್ ಸಮಸ್ಯೆಯಿಂದ ದೀರ್ಘಕಾಲದವರೆಗೆ ತೊಂದರೆಗೊಳಗಾಗಿದ್ದರೆ ನೀವು ಈ ಆಹಾರ ಸೇವಿಸುವುದನ್ನು ಕೂಡಲೇ ತಪ್ಪಿಸಬೇಕು. ಇಲ್ಲದಿದ್ದರೆ ಇದು ನಿಮಗೆ ತೊಂದರೆಯನ್ನುಂಟು ಮಾಡುತ್ತದೆ.  

ಚಾಕೊಲೇಟ್ ನಿಂದ ದೂರವಿರಿ

ಡಾ.ಶರ್ಮಾ ಪ್ರಕಾರ, ಮೈಗ್ರೇನ್ ದಾಳಿ(Migraine Attack)ಯನ್ನು ತಪ್ಪಿಸಲು, ಚಾಕೊಲೇಟ್ ನಿಂದ ಆದಷ್ಟು ದೂರವಿರಬೇಕು. ಅಮೇರಿಕನ್ ಮೈಗ್ರೇನ್ ಫೌಂಡೇಶನ್ ಅಧ್ಯಯನದ ಪ್ರಕಾರ, ಶೇ.22ರಷ್ಟು ಜನರಲ್ಲಿ ಮೈಗ್ರೇನ್ ಸಮಸ್ಯೆ ಕಾಣಿಸಲು ಚಾಕೊಲೇಟ್ ಸೇವಿಸುವುದೇ ಕಾರಣವೆಂದು ತಿಳಿದುಬಂದಿದೆ.

ಮಿತವಾಗಿ ಕೆಫೀನ್ ತೆಗೆದುಕೊಳ್ಳಿ

ಅತಿಯಾದ ಪ್ರಮಾಣದ ಕೆಫೀನ್(Caffeine) ಸೇವನೆ ಮೈಗ್ರೇನ್ ಅಪಾಯವನ್ನು ಹೆಚ್ಚಿಸುತ್ತದೆ. ಚಾಕೊಲೇಟ್, ಕಾಫಿ ಮತ್ತು ಚಹಾದಲ್ಲಿ ಕೆಫೀನ್ ಅಂಶ ಅಧಿಕವಾಗಿರುತ್ತದೆ. ಆದರೆ ಆಹಾರದಲ್ಲಿ ಕಡಿಮೆ ಪ್ರಮಾಣದ ಕೆಫೀನ್ ಸೇವಿಸುವುದರಿಂದ ಯಾವುದೇ ಅಪಾಯವಿಲ್ಲ.

ಇದನ್ನೂ ಓದಿ: Unhealthy Foods For Liver : ಆರೋಗ್ಯಕರ ಲಿವರ್ ಗಾಗಿ ಈ ಆಹಾರ ವಸ್ತುಗಳಿಂದ ದೂರವಿರಿ

ಮದ್ಯಪಾನ ತಪ್ಪಿಸಿ

ಅಧ್ಯಯನದ ಪ್ರಕಾರ, ಶೇ.35ರಷ್ಟು ಜನರಲ್ಲಿ ಮೈಗ್ರೇನ್ ಕಾಣಿಸಲು ಪ್ರಮುಖ ಕಾರಣ ಅತಿಯಾಗಿ ಆಲ್ಕೋಹಾಲ್(Alcohol) ಸೇವಿಸುವುದಂತೆ. ಮೈಗ್ರೇನ್ ಸಮಸ್ಯೆಯಿಂದ  ಬಳಲುತ್ತಿರುವ ಜನರು ಮದ್ಯಪಾನ ಮಾಡಬಾರದು.

ಕೃತಕ ಸಕ್ಕರೆ ತಿನ್ನಬೇಡಿ

ಹೆಚ್ಚಿನ ಸಂಸ್ಕರಿಸಿದ ಆಹಾರಗಳಲ್ಲಿ ಕೃತಕ ಸಕ್ಕರೆ ಆಸ್ಪರ್ಟೇಮ್ ಇರುತ್ತದೆ. ಆಸ್ಪರ್ಟೇಮ್ ಮೈಗ್ರೇನ್ ಸಮಸ್ಯೆಗಳನ್ನು ಉಂಟುಮಾಡಬಹುದು.

ಮೋನೊಸೋಡಿಯಂ ಗ್ಲುಟಮೇಟ್ ನಿಂದ ದೂರವಿರಿ

ಮೋನೊಸೋಡಿಯಂ ಗ್ಲುಟಮೇಟ್(Monosodium glutamate) ಒಂದು ವಿಧದ ಸೋಡಿಯಂ ಉಪ್ಪು. ಇದರಲ್ಲಿ ಗ್ಲುಟಮಿಕ್ ಆಮ್ಲವಿದೆ. ಆಹಾರದ ರುಚಿ ಹೆಚ್ಚಿಸಲು ಮೋನೊಸೋಡಿಯಂ ಗ್ಲುಟಮೇಟ್ ಅನ್ನು ಬಳಸಲಾಗುತ್ತದೆ. ಇದರ ಅತಿಯಾದ ಸೇವನೆಯು ನಿಮಗೆ ಮೈಗ್ರೇನ್ ಸಮಸ್ಯೆಯನ್ನು ತಂದೊಡ್ಡುತ್ತದೆ.   

ಇದನ್ನೂ ಓದಿ: Benefits of Bottle Gourd: ನಿಮ್ಮ ಡಯಟ್ನಲ್ಲಿ ಸೋರೆಕಾಯಿ ಸೇರಿಸಿ, ಈ ಸಮಸ್ಯೆಗಳಿಂದ ಪರಿಹಾರ ಪಡೆಯಿರಿ

ಸಂರಕ್ಷಿತ ಮಾಂಸವನ್ನು ಸೇವಿಸಬೇಡಿ

ಬಣ್ಣ ಮತ್ತು ರುಚಿಯನ್ನು ಕಾಪಾಡಲು ಹ್ಯಾಮ್ ಬರ್ಗರ್, ಹಾಟ್ ಡಾಗ್ ಮತ್ತು ಸಾಸೇಜ್ ಗಳಿಗೆ ನೈಟ್ರೇಟ್ ಅನ್ನು ಸೇರಿಸಲಾಗುತ್ತದೆ. ರಕ್ತದೊಂದಿಗೆ ಸಂಪರ್ಕದಲ್ಲಿರುವಾಗ ನೈಟ್ರೇಟ್ ನೈಟ್ರಿಕ್ ಆಕ್ಸೈಡ್ ಅನ್ನು ರೂಪಿಸುತ್ತದೆ. ಇದು ರಕ್ತನಾಳಗಳನ್ನು ಹಾನಿಗೊಳಿಸುತ್ತದೆ.

ಹಳೆಯ ಚೀಸ್ ತಿನ್ನುವುದನ್ನು ತಪ್ಪಿಸಿ

ಟೈರಮೈನ್ ಅಂಶವು ಹಳೆಯ ಚೀಸ್‌ನಲ್ಲಿ ಕಂಡುಬರುತ್ತದೆ. ಇದರಿಂದಾಗಿ ಮೈಗ್ರೇನ್ ಉಂಟಾಗಬಹುದು. ದೀರ್ಘಕಾಲೀನ ಬಳಕೆಗಾಗಿ ಚೀಸ್ ಅನ್ನು ಒಂದು ನಿರ್ದಿಷ್ಟ ತಾಪಮಾನದಲ್ಲಿ ಇರಿಸಲಾಗುತ್ತದೆ. ಅಂತಹ ವಸ್ತುವನ್ನು ಹಳೆಯ ಚೀಸ್ ಎಂದು ಕರೆಯಲಾಗುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News