Senna Tora Leaves Benefits : ಮಳೆಗಾಲದಲ್ಲಿ ಶೀತ, ಜ್ವರದಿಂದ ರಕ್ಷಿಸಿಕೊಳ್ಳಲು ಬಳಸಿ ತಗತೆ ಸೊಪ್ಪು!

ತಗತೆ ಸೊಪ್ಪನ್ನು ಆಹಾರದಲ್ಲಿ ಬಳಕೆ ಮಾಡುವುದರಿಂದ ರಕ್ತ ಶುದ್ಧಿಯಾಗುತ್ತದೆ.

Last Updated : Jun 23, 2021, 01:28 PM IST
  • ಜಗಟೆ ಸೊಪ್ಪು, ತೊಗಟೆ ಸೊಪ್ಪು, ಕನ್ನಡದಲ್ಲಿ ತಗತೆ ಸೊಪ್ಪ
  • ಮಲೆನಾಡಿನ ಕಡೆ ಮಳೆಗಾಲದಲ್ಲಿ ಇದರ ತಿನಿಸುಗಳನ್ನು ಮಾಡುತ್ತಾರೆ
  • ಪತ್ರೋಡೆ, ವಡೆ, ದೋಸೆ, ತಂಬುಳಿ, ಸಾಂಬಾರ್ ಇವುಗಳನ್ನು ಹೆಚ್ಚಾಗಿ ಮಾಡುತ್ತಾರೆ
Senna Tora Leaves Benefits : ಮಳೆಗಾಲದಲ್ಲಿ ಶೀತ, ಜ್ವರದಿಂದ ರಕ್ಷಿಸಿಕೊಳ್ಳಲು ಬಳಸಿ ತಗತೆ ಸೊಪ್ಪು! title=

ಭಾರತದ ಕೆಲವು ಭಾಗಗಳಲ್ಲಿ ಕಂಡುಬರುವ ಈ ಸೊಪ್ಪನ್ನು ಹಲವು ಹೆಸರುಗಳಿಂದ ಕರೆಯುತ್ತಾರೆ. ಜಗಟೆ ಸೊಪ್ಪು, ತೊಗಟೆ ಸೊಪ್ಪು, ಕನ್ನಡದಲ್ಲಿ ತಗತೆ ಸೊಪ್ಪ. ಇಂಗ್ಲಿಷ್ ನಲ್ಲಿ ಕ್ಯಾಸಿಯೋ ತೋರವೆಂದು ಕರೆಯುತ್ತಾರೆ.

ಮಲೆನಾಡಿನ ಕಡೆ ಮಳೆಗಾಲ(Rainy Season)ದಲ್ಲಿ ಇದರ ತಿನಿಸುಗಳನ್ನು ಮಾಡುತ್ತಾರೆ. ಇದು ಹೆಚ್ಚಾಗಿ ಹಳ್ಳಿಗಳ ಕಡೆ ಗುಡ್ಡಗಳಲ್ಲಿ ಅಲ್ಲದೆ ತೋಟ ಬದಿಗಳಲ್ಲಿ ಅಲ್ಲಲ್ಲಿ ಬೆಳೆಯುತ್ತದೆ. ಇದರ ಎಲೆ ಚಿಕ್ಕದಾಗಿದ್ದು ನೋಡಲು ಕರಿಬೇವಿನ ಸೊಪ್ಪಿನ ಹಾಗೆ ಇರುತ್ತದೆ. ಇದು ಗಿಡವಾಗಿರುತ್ತದೆ. ಮರವಾಗಿ ಬೆಳೆಯೋದಿಲ್ಲ. ಇದರ ಹೂವು ಹಳದಿಬಣ್ಣ ದಿಂದ ಇದ್ದು ಚಿಕ್ಕದಾಗಿರುತ್ತದೆ. ಇದರ ಬೀಜವು ಕಂದುಬಣ್ಣದಿಂದ ಇದೆ. ಇದು ಹೆಚ್ಚಾಗಿ ಮಳೆಗಾಲದಲ್ಲಿ ಆಗುವ ಗಿಡ. ಆರೋಗ್ಯಕ್ಕೆ ಇದು ಬಹಳ ಒಳ್ಳೆಯ ಸೊಪ್ಪು. ಅಲ್ಲದೆ ಇದರಲ್ಲಿ ಔಷಧಿಯ ಗುಣಗಳನ್ನು ಹೊಂದಿದ್ದು ಆಯುರ್ವೇಧ ದಲ್ಲಿ ಬಳಕೆಯಲ್ಲಿದೆ.

ಇದನ್ನೂ ಓದಿ : ವರ್ಷ ೫೦ ದಾಟಿದರೆ ಖಂಡಿತಾ ನಿಮ್ಮ ಆಹಾರ ಕ್ರಮ ಬದಲಾಯಿಸಿ

ಈ ತಗತೆ ಸೊಪ್ಪಿ(Senna tora leaves)ನಿಂದ ಅನೇಕ ತಿಂಡಿಗಳನ್ನು ಮಾಡುತ್ತಾರೆ. ಪತ್ರೋಡೆ, ವಡೆ, ದೋಸೆ, ತಂಬುಳಿ, ಸಾಂಬಾರ್ ಇವುಗಳನ್ನು ಹೆಚ್ಚಾಗಿ ಮಾಡುತ್ತಾರೆ. ಇದನ್ನು ಮಳೆಗಾಲದಲ್ಲಿ ಮಾಡುತ್ತಾರೆ ಕಾರಣ ಮಳೆಗಾಲದಲ್ಲಿ ಶೀತ, ನೆಗಡಿ, ಜ್ವರ ಬರದಂತೆ ನಮ್ಮನ್ನು ರಕ್ಷಿಸಲು ಇಂತಹ ಸೊಪ್ಪಿನ ಬಳಕೆ ಹಿಂದಿನ ಕಾಲದಿಂದಲೂ ಮಾಡುತ್ತಿದ್ದರು. ಅಲ್ಲದೆ ಆ ಕಾಲದಲ್ಲಿ ಸುತ್ತ ಮುತ್ತ ಸುಲಭದಲ್ಲಿ ಸಿಗುವ ಸೊಪ್ಪು ಇದಾಗಿತ್ತು.

ಇದನ್ನೂ ಓದಿ : ಮಳೆಗಾಲದಲ್ಲಿ ತಿನ್ನಲೇ ಬೇಕು ಈ ಎರಡು ಚಟ್ನಿ..! ರುಚಿಗೂ ಹೌದು, ಇಮ್ಯೂನಿಟಿಗೂ ಹೌದು..!

ಇದರ ಆರೋಗ್ಯಕರ ಉಪಯೋಗಗಳು ಇಲ್ಲಿವೆ :

- ತಗತೆ ಸೊಪ್ಪು ಇದನ್ನು ಚರ್ಮದ ರೋಗ(Skin Diseases)ಗಳಾದ ಉಗುರು ಸುತ್ತು, ತುರಿಕೆ, ಗಾಯ ಈ ಜಾಗಗಳಿಗೆ ಸೊಪ್ಪನ್ನು ಅರೆದು ಹಚ್ಚಿದರೆ ಒಳ್ಳೆಯದು. ಅಲ್ಲದೆ ಆಹಾರದಲ್ಲಿ ಬಳಸಿದರೆ ಇನ್ನೂ ಒಳ್ಳೆಯದು.

ಇದನ್ನೂ ಓದಿ : Food Avoid With Egg: ಮೊಟ್ಟೆ ಜೊತೆಗೆ ಈ ಆಹಾರಗಳನ್ನು ಎಂದಿಗೂ ಸೇವಿಸಬೇಡಿ

- ಆಯುರ್ವೇದ(Ayurveda)ದ ಪ್ರಕಾರ ತಗತೆ ಸೊಪ್ಪುದೇಹದಲ್ಲಿನ ವಾತ ಮತ್ತು ಕಫ ದೋಷ ವನ್ನು ತೆಗೆದು ಹಾಕುತ್ತದೆ.

- ತಗತೆ ಸೊಪ್ಪನ್ನು ಆಹಾರ(Food)ದಲ್ಲಿ ಬಳಕೆ ಮಾಡುವುದರಿಂದ ರಕ್ತ ಶುದ್ಧಿಯಾಗುತ್ತದೆ.

ಇದನ್ನೂ ಓದಿ : Right Way To Take Shower: ಬೆಳಿಗ್ಗೆ ಹೊತ್ತು ದಣಿದಂತೆ ಭಾಸವಾಗುತ್ತಿದೆಯೇ, ಸ್ನಾನ ಮಾಡುವಾಗ ನೀವೂ ಕೂಡ ಈ ತಪ್ಪನ್ನು ಮೂಡುತ್ತೀರಾ?

- ತಗತೆ ಸೊಪ್ಪನ್ನು ನೀರಲ್ಲಿ ಕುದಿಸಿ ಕುಡಿಸಿದರೆ ಬಂದ ಜ್ವರ(Fever) ವಾಸಿಯಾಗುತ್ತದೆ. ಅಲ್ಲದೆ ಎಲೆಯ ರಸವನ್ನು - ಕೆಮ್ಮು ಇದ್ದಾಗ ಕುಡಿದರೆ ಕೂಡಲೇ ಕೆಮ್ಮು ಕಡಿಮೆಯಾಗುತ್ತದೆ.

- ಬ್ಯಾಕ್ಟೀರಿಯಾದಿಂದ ಚರ್ಮದಲ್ಲಾದ ಸೋಂಕಿ(Virus)ಗೆ ತಗತೆ ಎಲೆಯನ್ನು ಅರೆದು ಹಚ್ಚಿದರೆ ಉತ್ತಮ ಪರಿಣಾಮ ನೀಡುತ್ತದೆ.

ಇದನ್ನೂ ಓದಿ : ದಣಿದ ದೇಹಕ್ಕೆ ಸಾಕಷ್ಟು ಶಕ್ತಿ ನೀಡುತ್ತದೆ ಮೊಸರು ಬಜ್ಜಿ

- ತಗತೆ ಸೊಪ್ಪನ್ನು ಸೌಂದರ್ಯವರ್ಧಕ ಗಳಲ್ಲಿ ಉಪಯೋಗಿಸುತ್ತಾರೆ.

- ತಗತೆ ಸೊಪ್ಪಿನ ಬಳಕೆಯಿಂದ ಮೂಲವ್ಯಾದಿಯು ಕಡಿಮೆಯಾಗುತ್ತದೆ. ಅಜೀರ್ಣವಾಗಿದ್ದರೆ ಅಥವಾ - ಹಸಿವಾಗದಿದ್ದರೆ ತಗತೆ ಸೊಪ್ಪಿನ ಬಳಕೆಯಿಂದ ಉತ್ತಮ ಪರಿಣಾಮ ಬೀರುತ್ತದೆ.

- ಋತುಚಕ್ರದಲ್ಲಿ ಸಮಸ್ಯೆಗಳಾಗಿದ್ದಲ್ಲಿ ತಗತೆ ಗಿಡವನ್ನು ನೀರಲ್ಲಿ ಕುದಿಸಿ ಶೋಧಿಸಿ ಕುಡಿದರೆ ಒಳ್ಳೆಯ ಫಲಿತಾಂಶ ಸಿಗುತ್ತದೆ.

ಇದನ್ನೂ ಓದಿ : Curd Hair Pack: ಕೂದಲು ಉದುರುವಿಕೆ, ಬಿಳಿ ಕೂದಲ ಸಮಸ್ಯೆಗೆ ಬಳಸಿ ಈ ವಿಶೇಷ ಹೇರ್ ಪ್ಯಾಕ್

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News