ನಿತ್ಯ ಕಾಫಿ ಸೇವನೆ ಅಪಾಯಕಾರಿ ಅಲ್ಲ!

ಕಾಫಿ ಕುಡಿಯುವುದು, ವಿಶೇಷವಾಗಿ ದಿನಕ್ಕೆ 25 ಕಪ್ ವರೆಗೆ ಕಾಫಿ ಕುಡಿಯುವುದು ಆರೋಗ್ಯಕ್ಕೆ ಅಪಾಯಕಾರಿಯಲ್ಲ ಎಂದು ಸಂಶೋಧನೆಯೊಂದು ತಿಳಿಸಿದೆ.

Last Updated : Aug 16, 2019, 01:41 PM IST
ನಿತ್ಯ ಕಾಫಿ ಸೇವನೆ ಅಪಾಯಕಾರಿ ಅಲ್ಲ!  title=
File Image

ನವದೆಹಲಿ: ಕಚೇರಿಯಲ್ಲಿ ಕೆಲಸ ಮಾಡುವಾಗ ಅಥವಾ ತಡ ರಾತ್ರಿಯಲ್ಲಿ ಕೆಲಸ ಮಾಡುವ ವೇಳೆ ನಿದ್ರೆ/ಆಯಾಸ ತಪ್ಪಿಸಲು ಜನರು ಕಾಫಿ ಮತ್ತು ಚಹಾಕ್ಕೆ ವ್ಯಸನಿಯಾಗುವುದು ಸಾಮಾನ್ಯವಾಗಿ ಕಂಡುಬರುತ್ತದೆ. 

ಕಾಫಿ ಅಥವಾ ಚಹಾ ಕುಡಿದರೆ ಮೈಂಡ್ ಫ್ರೆಶ್ ಆಗುತ್ತೆ ಅನ್ನೋದು ಇನ್ನೂ ಕೆಲವರ ನಂಬಿಕೆ. ಹಲವೊಮ್ಮೆ ಆಯ್ಯೋ ನಾನು ಕಾಫಿ/ಚಹಾ ಕುಡಿದೇ ಇಲ್ಲ ಅದಕ್ಕೆ ನನ್ನ ತಲೆ ಓಡ್ತಾನೆ ಇಲ್ಲ ಎಂದೂ ಕೂಡ ಕೆಲವರು ಹೇಳುವುದನ್ನು ಸಾಮಾನ್ಯವಾಗಿ ಕೇಳಿರುತ್ತೇವೆ.  ಕಾಫಿ ಕುಡಿದ ನಂತರ ಮನಸ್ಸಿಗೆ ನೆಮ್ಮದಿ, ಕೆಲಸ ಮಾಡೋಕೆ ಒಂದು ರೀತಿಯ ಟಾನಿಕ್ ಇದ್ದ ಹಾಗೆ ಎಂದು ಕೆಲ ಜನರು ಹೇಳುತ್ತಾರೆ. 

ಕಾಫಿ ಕುಡಿಯುವ ಮೂಲಕ ಮನಸ್ಥಿತಿ ಏನೋ ಹಗುರವಾಗುತ್ತದೆ, ಆದರೆ ನಿಮ್ಮ ದೇಹದ ಸ್ಥಿತಿ ಏನು? ಪ್ರತಿದಿನ 2 ರಿಂದ 4 ಕಪ್ ಕಾಫಿ ಕುಡಿದರೆ ಅದು ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು ಎಂದು ಹಲವರು ಸಲಹೆ ನೀಡುತ್ತಾರೆ. ನಿಮಗೂ ಅದೇ ಚಿಂತೆ ಇದ್ದರೆ, ಯೋಚನೆ ಬಿಡಿ ನಿತ್ಯ ನಿಮಗೆ ಬೇಕಾದಷ್ಟು ಕಾಫಿ ಕುಡಿಯಿರಿ.

ಕಾಫಿ ಕುಡಿಯುವುದು, ವಿಶೇಷವಾಗಿ ದಿನಕ್ಕೆ 25 ಕಪ್ ವರೆಗೆ ಕಾಫಿ ಕುಡಿಯುವುದು ಆರೋಗ್ಯಕ್ಕೆ ಅಪಾಯಕಾರಿಯಲ್ಲ ಎಂದು ಸಂಶೋಧನೆಯೊಂದು ತಿಳಿಸಿದೆ.

ಅಪಧಮನಿಗಳು ನಮ್ಮ ಹೃದಯದಿಂದ ಆಮ್ಲಜನಕ ಮತ್ತು ಪೋಷಕಾಂಶಗಳನ್ನು ಹೊಂದಿರುವ ರಕ್ತವನ್ನು ನಮ್ಮ ಇಡೀ ದೇಹಕ್ಕೆ ಕೊಂಡೊಯ್ಯುತ್ತವೆ. ಒಂದು ವೇಳೆ ಅಪಧಮನಿಗಳು ಈ ಕಾರ್ಯ ಸ್ಥಗಿತಗೊಳಿಸಿದರೆ ಹೃದಯವು ಒತ್ತಡಕ್ಕೊಳಗಾಗುತ್ತದೆ ಮತ್ತು ವ್ಯಕ್ತಿಗೆ ಹೃದಯಾಘಾತ ಅಥವಾ ಪಾರ್ಶ್ವವಾಯುವಿನ ಅಪಾಯ ಎದುರಾಗುತ್ತದೆ.

8 ಸಾವಿರ ಜನರು ಅಧ್ಯಯನದಲ್ಲಿ ಭಾಗಿ:
ಯುಕೆ ಯ ಕ್ವೀನ್ ಮೇರಿ ಲಂಡನ್ ವಿಶ್ವವಿದ್ಯಾಲಯದ ಸಂಶೋಧಕರು ಈ ಅಧ್ಯಯನದಲ್ಲಿ 8,000 ಜನರನ್ನು ತೊಡಗಿಸಿಕೊಂಡಿದ್ದಾರೆ. ದಿನಕ್ಕೆ ಎಷ್ಟು ಕಾಫಿ ಸೇವಿಸುತ್ತಾರೆ ಎಂಬುದರ ಆಧಾರದ ಮೇಲೆ 8 ಸಾವಿರ ಜನರನ್ನು ಮೂರು ಭಾಗಗಳಾಗಿ ವಿಂಗಡಿಸಿ ಅಧ್ಯಯನ ನಡೆಸಲಾಗಿದೆ. ಅಧ್ಯಯನಕ್ಕಾಗಿ ಕಾಫಿ ಸೇವನೆಯನ್ನು ಮೂರು ವಿಭಾಗಗಳಾಗಿ ವಿಂಗಡಿಸಲಾಗಿದೆ. ಮೊದಲನೆಯವರು ದಿನದಲ್ಲಿ ಒಂದು ಕಪ್ ಗಿಂತ ಕಡಿಮೆ ಕಾಫಿ ಕುಡಿಯುತ್ತಾರೆ, ಎರಡನೆಯವರು ದಿನಕ್ಕೆ ಒಂದರಿಂದ ಮೂರು ಕಪ್ ಕುಡಿಯುತ್ತಾರೆ ಮತ್ತು ಮೂರನೆಯವರು ಮೂರು ಕಪ್ ಗಿಂತ ಹೆಚ್ಚಿನ ಕಾಫಿಯನ್ನು ಕುಡಿಯುತ್ತಾರೆ.

ಈ ಅಧ್ಯಯನವು ಕಾಫಿ ಕುಡಿಯುವುದರಿಂದ ಅಪಧಮನಿಗಳನ್ನು ಗಟ್ಟಿಗೊಳಿಸುತ್ತದೆ. ಕಾಫಿಯಿಂದ ಹೃದಯ ಸಂಬಂಧಿತ ಕಾಯಿಲೆಗಳು ಹೆಚ್ಚಾಗುತ್ತದೆ ಎಂದು ಹೇಳುವ ಹಿಂದಿನ ಅಧ್ಯಯನಗಳನ್ನು ನಿರಾಕರಿಸುತ್ತದೆ. ಅಪಧಮನಿಗಳ ಗಟ್ಟಿಯಾಗುವುದರೊಂದಿಗೆ ಕಾಫಿ ಕುಡಿಯುವಿಕೆಯನ್ನು ಸಂಪರ್ಕಿಸುವ ಹಿಂದಿನ ಅಧ್ಯಯನಗಳು ವಿರೋಧಾತ್ಮಕವಾಗಿವೆ ಮತ್ತು ಭಾಗವಹಿಸುವವರು ಕಡಿಮೆ ಸಂಖ್ಯೆಯಲ್ಲಿರುವುದರಿಂದ ಇದನ್ನು ಸಾರ್ವತ್ರಿಕವಾಗಿ ಅಂಗೀಕರಿಸಲಾಗುವುದಿಲ್ಲ ಎಂದು ಸಂಶೋಧಕರು ಹೇಳಿದ್ದಾರೆ.
 

Trending News