Drinking Water: ಅಧಿಕ ನೀರು ಕುಡಿಯುವುದು ಆರೋಗ್ಯಕ್ಕೆ ಹಾನಿ..!

ಕೆಲವು ಅಧ್ಯಯನ ಹಾಗೂ ಸಂಶೋಧನೆಗಳು ಹೇಳುವ ಪ್ರಕಾರ ಅವಶ್ಯಕತೆಗಿಂತಲೂ ಹೆಚ್ಚು ನೀರು ಕುಡಿಯಬಾರದು.

Last Updated : Mar 21, 2021, 06:45 PM IST
  • ಉತ್ತಮ ಆರೋಗ್ಯಕ್ಕೆ ನಮ್ಮ ದೇಹದಲ್ಲಿ ಸಮತೋಲಿತ ನೀರಿನಂಶ ಇರಬೇಕು.
  • ಕೆಲವು ಅಧ್ಯಯನ ಹಾಗೂ ಸಂಶೋಧನೆಗಳು ಹೇಳುವ ಪ್ರಕಾರ ಅವಶ್ಯಕತೆಗಿಂತಲೂ ಹೆಚ್ಚು ನೀರು ಕುಡಿಯಬಾರದು.
  • ಸೂಕ್ತ ನೀರಿನ ಪ್ರಮಾಣ ಎಷ್ಟಿರ ಬೇಕು?
Drinking Water: ಅಧಿಕ ನೀರು ಕುಡಿಯುವುದು ಆರೋಗ್ಯಕ್ಕೆ ಹಾನಿ..! title=

ಉತ್ತಮ ಆರೋಗ್ಯಕ್ಕೆ ನಮ್ಮ ದೇಹದಲ್ಲಿ ಸಮತೋಲಿತ ನೀರಿನಂಶ ಇರಬೇಕು. ಹಾಗೊಮ್ಮೆ ನಿರ್ಜಲೀಕರಣ ಉಂಟಾದರೆ ಸಾಕಷ್ಟು ಆರೋಗ್ಯ ಸಮಸ್ಯೆ ಉಂಟಾಗುವುದು. ಹಾಗಾಗಿ ಸಾಕಷ್ಟು ನೀರನ್ನು ಕುಡಿಯಲು ಸಲಹೆ ನೀಡಲಾಗುವುದು. ಕೆಲವು ಅಧ್ಯಯನ ಹಾಗೂ ಸಂಶೋಧನೆಗಳು ಹೇಳುವ ಪ್ರಕಾರ ಅವಶ್ಯಕತೆಗಿಂತಲೂ ಹೆಚ್ಚು ನೀರು ಕುಡಿಯಬಾರದು. ಹಾಗಾದರೆ ಅತಿಯಾಗಿ ನೀರನ್ನು ಕುಡಿದರೆ ಯಾವ ಆರೋಗ್ಯ ಸಮಸ್ಯೆ ಉಂಟಾಗುವುದು? ಎನ್ನುವುದನ್ನು ಪರಿಶೀಲಿಸಿ.

ಅಧಿಕ ಜಲಸಂಚಯನ ಎಂದರೇನು? ಹೆಚ್ಚುವರಿ ನೀರನ್ನು ಕುಡಿಯುವುದರಿಂದ ನೀರಿನಲ್ಲಿ ಮಾದಕತೆ ಉಂಟಾಗುತ್ತದೆ. ಮಿತಿ ಮೀರಿ ನೀರಿನಂಶ ದೇಹದಲ್ಲಿ ಹೆಚ್ಚಾಗಾದ ದೇಹದಲ್ಲಿ ಉಪ್ಪು(Salt) ಮತ್ತು ವಿದ್ಯುತ್‍ಚ್ಛೇನಗಳ ಪ್ರಮಾಣದಲ್ಲಿ ವ್ಯತ್ಯಾಸ ಉಂಟಾಗುವುದು. ದೇಹದಲ್ಲಿ ನಿರ್ದಿಷ್ಟ ಪ್ರಮಾಣಕ್ಕಿಂತ ಕಡಿಮೆ ಸೋಡಿಯಂ ಪ್ರಮಾಣ ಉಂಟಾದರೆ ಆರೋಗ್ಯದಲ್ಲಿ ಸಮಸ್ಯೆ ಉಂಟಾಗುವುದು. ಸೋಡಿಯಂ ನಿಗಧಿತ ಪ್ರಮಾಣದಲ್ಲಿ ಇಲ್ಲದೆ ಹೋದರೆ "ಹೈಪೋನಾಟ್ರೀಮಿಯಾ" ಸಮಸ್ಯೆ ಉಂಟಾಗುವುದು. ಹೆಚ್ಚುವರಿ ನೀರಿನಂಶವು ಅಧಿಕ ರಕ್ತ ಸಂಚಲನವನ್ನು ಉಂಟುಮಾಡುವುದು. ಅದು ಹೃದಯದ ಆರೋಗ್ಯಕ್ಕೆ ತೊಂದರೆ ಉಂಟುಮಾಡುವುದು.

Health Tips : ಹಸಿ ಪನೀರ್ ತಿನ್ನಲೇಬೇಕು ಈ ಕಾರಣಗಳಿಗಾಗಿ

ಉಂಟಾಗುವ ತೊಂದರೆಗಳು: ಅಧಿಕ ನೀರನ್ನು ಕುಡಿಯುವುದರಿಂದ(Drinking Water) ದಿಗ್ಭ್ರಮೆ, ವಾಕರಿಕೆ ಮತ್ತು ತಲೆನೋವಿನ ಸಮಸ್ಯೆ ಉಂಟಾಗುವುದು. ಜೊತೆಗೆ ವಿದ್ಯುತ್‍ಚ್ಛೇದನಗಳು ದುರ್ಬಲಗೊಂಡರೆ ದೇಹದಲ್ಲಿ ಸೋಡಿಯಂ ಪ್ರಮಾಣ ಕಡಿಮೆ ಆಗಿ ದೌರ್ಬಲ್ಯ, ಸೆಳೆತ, ರೋಗಗಳು ಕಾಣಿಸಿಕೊಳ್ಳುವುದು, ಸುಪ್ತಾವಸ್ಥೆಗೆ ತಲುಪುವುದು ಹಾಗೂ ಅಧಿಕ ತೂಕಕ್ಕೂ ಕಾರಣವಾಗುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ.

Onion Peel: ಈರುಳ್ಳಿ ಸಿಪ್ಪೆಯ ಪ್ರಯೋಜನಗಳನ್ನು ತಿಳಿದರೆ ನೀವು ಖಂಡಿತಾ ಅದನ್ನು ಎಸೆಯುವುದಿಲ್ಲ

ಪ್ರತಿಯೊಂದು ಪದ್ಧತಿ ಹಾಗೂ ಆಹಾರ ಕ್ರಮವನ್ನು ಕ್ರಮಬದ್ಧವಾಗಿ ನಡೆಸಿದಾಗ ಆರೋಗ್ಯ(Health)ವು ಉತ್ತಮವಾಗಿರುತ್ತದೆ. ಮಿತಿ ಮೀರಿದಾಗ ಎಲ್ಲವೂ ಋಣಾತ್ಮಕ ಪ್ರಭಾವ ಬೀರುತ್ತವೆ. ಪ್ರತಿ ದಿನ 7-8 ಗ್ಲಾಸ್ ನೀರನ್ನು ಕುಡಿಯಬೇಕು. ಬೇಸಿಗೆ ಅಥವಾ ಹೆಚ್ಚು ಆಯಾಸಕ್ಕೆ ಒಳಗಾದಾಗ ಹತ್ತು ಗ್ಲಾಸ್ ಅಷ್ಟು ನೀರನ್ನು ಕುಡಿಯಬಹುದು.

ನಿಮ್ಮ ದೇಹದ ಪ್ರಕಾರ ಹಾಗೂ ಎಷ್ಟು ನೀರು ಅಗತ್ಯ ವಿದೆ? ಎನ್ನುವುದನ್ನು ವೈದ್ಯರ ಸಲಹೆ ಪಡೆದು ತಿಳಿದುಕೊಳ್ಳಬೇಕು. ನಂತರ ಆ ಪ್ರಮಾಣದ ನೀರನ್ನು ಕುಡಿಯಲು ಪ್ರಯತ್ನಿಸಿ. ಅದು ನಿಮ್ಮ ಉತ್ತಮ ರೋಗ್ಯಕ್ಕೆ ಉತ್ತಮ ಪೋಷಣೆ ನೀಡುವುದು.

Big Relief! ಕೊರೊನಾ ಎರಡನೇ ಅಲೆಯ ನಡುವೆ 'ಆರೋಗ್ಯ ಸಂಜೀವನಿ' ವಿಮೆಯ ಹೆಲ್ತ್ ಕವರ್ 10 ಲಕ್ಷ ರೂ.ಗಳಿಗೆ ಹೆಚ್ಚಳ

ನೀವು ನಿತ್ಯವೂ ಎಷ್ಟು ಆಹಾರ(Food)ವನ್ನು ಸ್ವೀಕರಿಸುತ್ತೀರಿ? ಎಷ್ಟು ನೀರನ್ನು ಕುಡಿಯುತ್ತೀರಿ? ಎನ್ನುವುದನ್ನು ಪರಿಶೀಲಿಸಬೇಕು. ಬಾಯಾರಿಕೆ ಆಗದೆ ಇದ್ದರೂ ಹೆಚ್ಚು ನೀರನ್ನು ಕುಡಿಯುತ್ತೀರಾ? ಅಥವಾ ಅತೀ ಕಡಿಮೆ ಪ್ರಮಾಣದ ನೀರನ್ನು ಕುಡಿಯುತ್ತೀರಾ? ಎನ್ನುವುದನ್ನು ಪರಿಶೀಲಿಸಿಕೊಳ್ಳಬೇಕು. ದಿನಕ್ಕೆ ಅಗತ್ಯವಾದಷ್ಟು ಸೂಕ್ತ ಪ್ರಮಾಣದ ನೀರನ್ನು ಕುಡಿಯುತ್ತೀರಾ? ಇಲ್ಲವೇ ನಿಗದಿತ ಪ್ರಮಾಣಕ್ಕೂ ಹೆಚ್ಚು ನೀರನ್ನು ಕುಡಿಯುವಿರಾ? ಎನ್ನುವ ಸೂಕ್ತ ಪರಿಶೀಲನೆ ನಡೆಸಬೇಕು. ಆಗ ಒಂದು ಸೂಕ್ತ ನಿರ್ಧಾರ ಕೈಗೊಳ್ಳಲು ಸಹಾಯ ಆಗುವುದು.

ಸೊಳ್ಳೆ ಕಾಟ ತಪ್ಪಿಸಲು ಮನೆ ಸುತ್ತ ಈ ಗಿಡಗಳಿರಲಿ

ಸೂಕ್ತ ನೀರಿನ ಪ್ರಮಾಣ ಎಷ್ಟಿರ ಬೇಕು? ಅದನ್ನು ಎಷ್ಟು ಸಮಯಕ್ಕೊಮ್ಮೆ ಕುಡಿಯಬೇಕು? ನಿಮ್ಮ ದೇಹ(Body)ದ ಪ್ರಕೃತಿ ಹೇಗೆ? ದೇಹಕ್ಕೆ ಎಷ್ಟು ಪ್ರಮಾಣದ ನೀರು ಅಗತ್ಯವಿದೆ? ಎನ್ನುವುದನ್ನು ಸರಿಯಾಗಿ ಪರಿಶೀಲಿಸಬೇಕು. ಅವುಗಳನ್ನು ಸರಿ ಪಡಿಸಲು ಒಂದು ಸೂಕ್ತ ವೇಳಾಪಟ್ಟಿಯನ್ನು ಮಾಡಿ. ಅದಕ್ಕೆ ಅನುಗುಣವಾಗಿ ನೀರನ್ನು ಕುಡಿಯಿರಿ.

World sleeping day : ಇಲ್ಲಿದೆ ಸುಖ ನಿದ್ರೆಗೆ ಸಿಂಪಲ್ 12 ಸೂತ್ರ..! ಕ್ಷಣದಲ್ಲಿ ನಿದ್ರಾದೇವಿಯೇ ಶರಣು.!

ಕಡಿಮೆ ನೀರನ್ನು ಕುಡಿಯುವವರಾಗಿದ್ದರೆ ಅಥವಾ ಹೆಚ್ಚು ನೀರನ್ನು ಕುಡಿಯುವವರಾಗಿದ್ದರೆ ನಿಮಗೆ ಒಂದು ವೇಳಾ ಪಟ್ಟಿಯಿಂದ ಸಮ ಪ್ರಮಾಣದ ನೀರನ್ನು ಕುಡಿಯುವಿರಿ. ಆಗ ಆರೋಗ್ಯ ಸಮಸ್ಯೆಗಳನ್ನು ಸುಲಭವಾಗಿ ನಿಯಂತ್ರಣದಲ್ಲಿ ಇಡಬಹುದು. ಆರೋಗ್ಯವು ಉತ್ತಮವಾಗಿರುತ್ತದೆ.

ಈ ಕಾರಣಗಳಿಂದಾಗಿ ಚಹಾ, ಗ್ರೀನ್ ಟೀ ಅಥವಾ ಜ್ಯೂಸ್ ಜೊತೆ ಔಷಧಿ ಸೇವನೆ ಬೇಡ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News