Kids Diet: ಅಪ್ಪಿತಪ್ಪಿಯೂ ನಿಮ್ಮ ಮಕ್ಕಳಿಗೆ ಈ 5 ರೀತಿಯ ಆಹಾರಗಳನ್ನು ನೀಡಬೇಡಿ!

Health Tips: ಪಾಲಕರು ಆಗಾಗ್ಗೆ ಮಕ್ಕಳ ಒತ್ತಾಯಕ್ಕೆ ಮಣಿಯುತ್ತಾರೆ, ಆದರೆ ನೀವು ಆಹಾರ ಮತ್ತು ಪಾನೀಯದ ವಿಷಯದಲ್ಲಿ ಹೀಗೆ ಮಾಡುತ್ತಿದ್ದರೆ, ಅದು ಮಕ್ಕಳ ಆರೋಗ್ಯಕ್ಕೆ ಹಾನಿಕಾರಕವೆಂದು ಸಾಬೀತುಪಡಿಸಬಹುದು.

Written by - Puttaraj K Alur | Last Updated : Oct 22, 2023, 01:29 PM IST
  • ಮಕ್ಕಳಿಗೆ ಉತ್ತಮ ಬೆಳವಣಿಗೆಗೆ ನೀವು ಆರೋಗ್ಯಕರ ಆಹಾರ ನೀಡುವುದು ಉತ್ತಮ
  • ತಂಪು ಪಾನೀಯ, ಫಾಸ್ಟ್‍ಫುಡ್, ಸಂಸ್ಕೃರಿಸಿದ ತಿಂಡಿಗಳು & ಸಕ್ಕರೆ ಕ್ಯಾಂಡಿ ನೀಡಬೇಡಿ
  • ನೀವು ಮಕ್ಕಳನ್ನು ಎಷ್ಟೇ ಪ್ರೀತಿಸಿ ಮುದ್ದಿಸಿದರೂ ಅವರ ಹಠಕ್ಕೆ ಮಣಿಯಬೇಡಿ
Kids Diet: ಅಪ್ಪಿತಪ್ಪಿಯೂ ನಿಮ್ಮ ಮಕ್ಕಳಿಗೆ ಈ 5 ರೀತಿಯ ಆಹಾರಗಳನ್ನು ನೀಡಬೇಡಿ!  title=
ಮಕ್ಕಳಿಗೆ ಫಾಸ್ಟ್ ಫುಡ್ ನೀಡಬೇಡಿ

ನವದೆಹಲಿ: ಮಕ್ಕಳ ಆರೋಗ್ಯ ಮತ್ತು ಬೆಳವಣಿಗೆಯು ನೀವು ಯಾವ ರೀತಿಯ ಆಹಾರ ನೀಡುತ್ತಿರಿ ಎಂಬುದರ ಮೇಲೆ ಹೆಚ್ಚಿನ ಪ್ರಮಾಣದಲ್ಲಿ ಅವಲಂಬಿತವಾಗಿರುತ್ತದೆ. ಮಕ್ಕಳಿಗೆ ಆರೋಗ್ಯಕರ ಆಹಾರ ತಿನ್ನಿಸಲು ನೀವು ಎಷ್ಟೇ ಪ್ರಯತ್ನಿಸಿದರೂ, ಅವರು ಅನೇಕ ರೀತಿಯ ಜಂಕ್ ಮತ್ತು ಫಾಸ್ಟ್‍ಫುಡ್‌ಗಳನ್ನು ಇಷ್ಟಪಡುತ್ತಾರೆ. ಹೀಗಾಗಿ ನೀವು ಅವರನ್ನು ಎಷ್ಟೇ ಪ್ರೀತಿಸಿದರೂ ಅವರ ಹಠಕ್ಕೆ ಮಣಿಯಬೇಡಿ. ಇಲ್ಲದಿದ್ದರೆ ನಿಮ್ಮ ಮಕ್ಕಳ ಆರೋಗ್ಯಕ್ಕೆ ಹಾನಿಯಾಗಬಹುದು. ಚಿಕ್ಕ ಮಕ್ಕಳಿಗೆ ಯಾವ ರೀತಿಯ ಆಹಾರ ನೀಡಬಾರದು ಎಂಬುದನ್ನು ತಿಳಿದುಕೊಳ್ಳಿರಿ.

ಈ 5 ಆಹಾರಗಳನ್ನು ಮಕ್ಕಳಿಗೆ ತಿನ್ನಿಸಬೇಡಿ

1. ತಂಪು ಪಾನೀಯಗಳು: ತಂಪು ಪಾನೀಯಗಳನ್ನು ನೋಡಿದ ನಂತರ ಮಕ್ಕಳು ತುಂಬಾ ಚಡಪಡಿಸುತ್ತಾರೆ. ಆಗಾಗ್ಗೆ ಅವರು ಹಿರಿಯರನ್ನು ನೋಡಿದ ನಂತರ ಅಂತಹ ಪಾನೀಯಗಳನ್ನು ಕುಡಿಯಲು ಒತ್ತಾಯಿಸುತ್ತಾರೆ. ಇದು ಅತಿಹೆಚ್ಚು ಪ್ರಮಾಣದ ಸಕ್ಕರೆಯನ್ನು ಹೊಂದಿದ್ದು, ಇದು ತೂಕ ಹೆಚ್ಚಾಗುವಿಕ, ಕೊಲೆಸ್ಟ್ರಾಲ್ ಹೆಚ್ಚಳ, ದಂತಕ್ಷಯ ಮತ್ತು ಇತರ ಅನೇಕ ಸಮಸ್ಯೆಗಳನ್ನು ಉಂಟುಮಾಡುತ್ತದೆ.

2. ಫಾಸ್ಟ್ ಫುಡ್: ನಿಮ್ಮ ಮಕ್ಕಳಿಗೆ ತ್ವರಿತ ಆಹಾರವನ್ನು ಮಿತಿಗೊಳಿಸಿ ಅಥವಾ ಇದರ ಸೇವನೆಯನ್ನು ಸಂಪೂರ್ಣವಾಗಿ ನಿಲ್ಲಿಸಿ. ಏಕೆಂದರೆ ಇವುಗಳು ಹೆಚ್ಚಿನ ಪ್ರಮಾಣದ ಅನಾರೋಗ್ಯಕರ ಕೊಬ್ಬುಗಳು, ಸೋಡಿಯಂ ಮತ್ತು ಸಕ್ಕರೆಯನ್ನು ಹೊಂದಿರುತ್ತವೆ. ಇದು ಮಕ್ಕಳ ಆರೋಗ್ಯವನ್ನು ಹಾನಿಗೊಳಿಸುತ್ತದೆ.

ಇದನ್ನೂ ಓದಿ: Vitamin P Rich Foods: ವಿಟಮಿನ್ ‘ಪಿ’ ಭರಿತ ಆಹಾರ ಸೇವಿಸುವುದರ ಪ್ರಯೋಜನಗಳು

3. ಸಂಸ್ಕರಿಸಿದ ತಿಂಡಿಗಳು: ಚಿಪ್ಸ್, ಬಿಸ್ಕತ್ತುಗಳು ಮತ್ತು ಇತರ ರೀತಿಯ ತಿಂಡಿಗಳ ರುಚಿ ಮಕ್ಕಳನ್ನು ಹೆಚ್ಚು ಆಕರ್ಷಿಸುತ್ತದೆ. ಆದರೆ ಇವುಗಳನ್ನು ನಿಮ್ಮ ಮಕ್ಕಳಿಂದ ಆದಷ್ಟು ದೂರವಿಡಿ. ಏಕೆಂದರೆ ಇವುಗಳು ಬಹಳಷ್ಟು ಕೊಬ್ಬು, ಸೋಡಿಯಂ ಮತ್ತು ಕೃತಕ ಪದಾರ್ಥಗಳನ್ನು ಹೊಂದಿರುತ್ತವೆ. ಇವು ಮಕ್ಕಳ ಆರೋಗ್ಯಕ್ಕೆ ಒಳ್ಳೆಯದಲ್ಲ.

4. ಬಿಳಿ ಬ್ರೆಡ್: ಮಕ್ಕಳು ಬೆಳಗಿನ ಉಪಾಹಾರಕ್ಕಾಗಿ ಪ್ರತಿದಿನ ಬಳಸುವ ಬಿಳಿ ಬ್ರೆಡ್ ಅಥವಾ ಅದರಿಂದ ತಯಾರಿಸಿದ ಸ್ಯಾಂಡ್‌ವಿಚ್‌ಗಳನ್ನು ಇಷ್ಟಪಡುತ್ತಾರೆ. ಆದರೆ ಇದನ್ನು ದೀರ್ಘಕಾಲದವರೆಗೆ ತಾಜಾವಾಗಿಡಲು ಉಪ್ಪನ್ನು ಸೇರಿಸಲಾಗುತ್ತದೆ. ಹೆಚ್ಚಿನ ಸೋಡಿಯಂ ಆಹಾರವು ಮಕ್ಕಳಿಗೆ ಒಳ್ಳೆಯದಲ್ಲ. ಬದಲಿಗೆ ಧಾನ್ಯದ ಬ್ರೆಡ್ ತಿನ್ನಿಸಿರಿ.

5. ಸಕ್ಕರೆ ಕ್ಯಾಂಡಿ: ಸಿಹಿ ಮಿಠಾಯಿ ಮಕ್ಕಳ ದೌರ್ಬಲ್ಯ, ಆದರೆ ಪೋಷಕರು ಈ ಅಭ್ಯಾಸವನ್ನು ನಿಯಂತ್ರಿಸಬೇಕು. ಏಕೆಂದರೆ ಇದು ಮಕ್ಕಳಲ್ಲಿ ಸ್ಥೂಲಕಾಯತೆಯನ್ನು ಹೆಚ್ಚಿಸುತ್ತದೆ ಮತ್ತು ಅನೇಕ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಅಲ್ಲದೆ ಇದು ದಂತಕ್ಷಯಕ್ಕೆ ಕಾರಣವಾಗುತ್ತದೆ.

ಇದನ್ನೂ ಓದಿ: ಕಿಡ್ನಿ ಸ್ಟೋನ್‌ನಿಂದ ಮಧುಮೇಹದವರೆಗೆ ʼಲವಂಗದ ಎಲೆʼಯ ಅದ್ಭುತ ಪ್ರಯೋಜನಗಳು..!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News