ನವದೆಹಲಿ: Benefits Of Eating Sprouts - ಮೊಳಕೆ ಕಾಳು (Sprouts) ತಿನ್ನುವುದು ತುಂಬಾ ಪ್ರಯೋಜನಕಾರಿ ಎಂಬುದು ಎಲ್ಲರಿಗೂ ತಿಳಿದ ವಿಷಯ. ವೈದ್ಯರು-ಡಯಟಿಶಿಯನ್ಗಳು ಕೂಡ ಮೊಳಕೆ ಕಾಳುಗಳನ್ನು ತಿನ್ನಲು ಸಲಹೆ ನೀಡುತ್ತಾರೆ. ಅಷ್ಟೇ ಯಾಕೆ ಮೊಳಕೆ ಕಾಲುಗಳು ನಿಮ್ಮ ದೈನಂದಿನ ಆಹಾರದ ಭಾಗವಾಗುವುದು ಇನ್ನೂ ಉತ್ತಮ. ನೀವು ಅದರಲ್ಲಿ ವಿವಿಧ ಧಾನ್ಯಗಳನ್ನು ಬಳಸಿದರೂ ಸಹ. ಹೇಗಾದರೂ, ವಿವಿಧ ಬಗೆಯ ಮೊಳಕೆಕಾಳುಗಳ ಸೇವನೆಯು ದೇಹದಲ್ಲಿನ ಎಲ್ಲಾ ರೀತಿಯ ಪೋಷಕಾಂಶಗಳ ಕೊರತೆಯನ್ನು ನೀಗಿಸುತ್ತದೆ.
ಈ ರೀತಿ ಮೊಳಕೆಕಾಳುಗಳು ಹಾನಿ ತಲುಪಿಸುತ್ತವೆ
ಮೊಳಕೆಕಾಳುಗಳು ಪ್ರೋಟೀನ್ ಮತ್ತು ಫೈಬರ್ನ ಸಮೃದ್ಧ ಮೂಲಗಳಾಗಿವೆ. ಆದರೆ ಕೆಲವೊಮ್ಮೆ ಮೊಳಕೆ ಕಾಳುಗಳನ್ನು (Benefits Of Eating Sprouts) ತಿನ್ನುವುದು ಹಾನಿಯನ್ನುಂಟುಮಾಡುತ್ತದೆ. ಇದರ ಹಿಂದಿನ ಕಾರಣವೆಂದರೆ ಮೊಳಕೆಯೊಡೆದ ಕಾಳುಗಳನ್ನು ತಿನ್ನುವ ತಪ್ಪು ವಿಧಾನ. ಕೆಲವರು ಮೊಳಕೆಕಾಳುಗಳನ್ನು ಹಸಿಯಾಗಿಯೇ ತಿನ್ನುತ್ತಾರೆ. ಈ ಕಾರಣದಿಂದಾಗಿ, ಅವರು ಹೊಟ್ಟೆ ನೋವು, ಸೆಳೆತ ಮತ್ತು ಲೂಸ್ ಮೋಶನ್ ಸಮಸ್ಯೆಗಳನ್ನು ಎದುರಿಸುತ್ತಾರೆ. ಏಕೆಂದರೆ ಹಾನಿಕಾರಕ ಬ್ಯಾಕ್ಟೀರಿಯಾಗಳು ಕಚ್ಚಾ ಮೊಳಕೆಕಾಳುಗಳಲ್ಲಿ ಇರುತ್ತವೆ ಮತ್ತು ಅವು ನಮ್ಮ ಜೀರ್ಣಾಂಗ ವ್ಯವಸ್ಥೆಯನ್ನು (Stomach Problems) ಹಾನಿಗೊಳಿಸುತ್ತದೆ (Loss Of Eating Sprouts).
ಇದು ಸರಿಯಾದ ಮಾರ್ಗವಾಗಿದೆ
ಮೊಳಕೆ ಕಾಳುಗಳನ್ನು ಸೇವಿಸುವುದರಿಂದಾಗುವ ಪ್ರಯೋಜನಗಳನ್ನು ಪಡೆಯಲು ಮತ್ತು ಸಮಸ್ಯೆಗಳನ್ನು ತಪ್ಪಿಸಲು ಮೊಳಕೆ ಕಾಳುಗಳನ್ನು ತಿನ್ನುವ ಸರಿಯಾದ ವಿಧಾನ ತಿಳಿದುಕೊಳ್ಳುವುದು ಬಹಳ ಮುಖ್ಯ. ಇದಕ್ಕೆ ಮೊದಲ ನಿಯಮವೆಂದರೆ ಮೊಳಕೆಕಾಳುಗಳನ್ನು ಯಾವಾಗಲೂ ಬೇಯಿಸಿ ತಿನ್ನಬೇಕು. ಇಲ್ಲಿ ನೀವು ಅವುಗಳನ್ನು ದೀರ್ಘಕಾಲದವರೆಗೆ ಬೇಯಿಸುವುದು ಅನಿವಾರ್ಯವಲ್ಲ, ಆದರೆ ಅದನ್ನು ಕುಕ್ಕರ್ ಅಥವಾ ಕಡಾಯಿಯಲ್ಲಿ ಸ್ವಲ್ಪ ಸಮಯದವರೆಗೆ ಬೇಯಿಸಿದರೆ ಬ್ಯಾಕ್ಟೀರಿಯಾಗಳು ಹೊರಹಾಕಲ್ಪಡುತ್ತವೆ. ಇದಕ್ಕಾಗಿ ಒಂದು ಬಾಣಲೆಯಲ್ಲಿ ಕಾಲು ಚಮಚ ಎಣ್ಣೆಯನ್ನು ಹಾಕಿ ಬಿಸಿ ಮಾಡಿ ನಂತರ ಅದರಲ್ಲಿ ಮೊಳಕೆಕಾಳುಗಳನ್ನು ಬೇಯಿಸಿ. ನಿಮ್ಮ ಆಯ್ಕೆಗೆ ಅನುಗುಣವಾಗಿ ನೀವು ಕೆಲವು ಮಸಾಲೆಗಳು, ಈರುಳ್ಳಿ, ಮೆಣಸಿನಕಾಯಿಗಳು ಇತ್ಯಾದಿಗಳನ್ನು ಸಹ ಅದರಲ್ಲಿ ಸೇರಿಸಬಹುದು.
ಇದನ್ನೂ ಓದಿ-ಚಳಿಗಾಲದಲ್ಲಿ ನಿಮ್ಮ ಕೈ ಕಾಲುಗಳು ತಣ್ಣಗಾಗುತ್ತವೆಯೇ?: ಈ ರೋಗವಿರಬಹುದು ನಿರ್ಲಕ್ಷಿಸಬೇಡಿ!
ಮತ್ತೊಂದೆಡೆ, ಕುಕ್ಕರ್ನಲ್ಲಿ ನೀರು ಮತ್ತು ಉಪ್ಪನ್ನು ಬೆರೆಸಿ, ಮೊಳಕೆ ಕಾಳುಗಳನ್ನು ಒಂದು ಸೀಟಿ ಬರುವವರೆಗೆ ಬೇಯಿಸಿ ನಂತರ ನಿಮ್ಮ ಆಯ್ಕೆಗೆ ಅನುಗುಣವಾಗಿ ಸಲಾಡ್, ನಿಂಬೆ ಇತ್ಯಾದಿಗಳನ್ನು ಸೇರಿಸಿ ತಿನ್ನಿರಿ. ಮೊಳಕೆಕಾಲುಗಳಲ್ಲಿ ನಿಂಬೆಯ ಬದಲಿಗೆ ಕಿತ್ತಳೆ ರಸವನ್ನು ಬಳಸಿದರೆ ಅದು ಅದ್ಭುತವಾದ ಟೇಸ್ಟ್ ನೀಡುತ್ತದೆ.
ಇದನ್ನೂ ಓದಿ-SARS-CoV-2 ಪ್ರಸರಣ ಕಡಿಮೆ ಮಾಡುವ chewing gum ಅಭಿವೃದ್ಧಿಪಡಿಸಿದ್ದಾರಂತೆ ಸಂಶೋಧಕರು!?
(Disclaimer: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಈ ಮಾಹಿತಿಯನ್ನು ಅನುಸರಿಸುವ ಮೊದಲು ನುರಿತ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ. ಏಕೆಂದರೆ ಝೀ ಹಿಂದುಸ್ತಾನ್ ಕನ್ನಡ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)
ಇದನ್ನೂ ಓದಿ-Black Tea For Grey Hairs: ಕೆಲವೇ ದಿನಗಳಲ್ಲಿ ನಿಮ್ಮ ಬಿಳಿ ಕೂದಲ ಸಮಸ್ಯೆಗೆ ಪರಿಹಾರ ನೀಡುತ್ತೆ ಬ್ಲಾಕ್ ಟೀ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.