ಬೆಳಗ್ಗೆ ಎದ್ದ ತಕ್ಷಣ ಈ ನೀರನ್ನು ಕುಡಿದರೆ ಅಂದುಕೊಂಡಿದಕ್ಕಿಂತ ವೇಗವಾಗಿ ಕರಗುತ್ತೆ ಸೊಂಟದ ಬೊಜ್ಜು!

Honey and Lemon Water for weight Loss: ಬೆಳಗ್ಗೆ ಎದ್ದ ತಕ್ಷಣ ಈ ಎಲ್ಲಾ ಕೆಲಸಗಳನ್ನು ಮಾಡಬೇಕೆಂಬುದು ಮಾತ್ರ ಇಲ್ಲಿನ ಕಂಡೀಷನ್. ಹೀಗೆ ಮಾಡಿದರೆ ತ್ವರಿತವಾಗಿ ತೂಕ ಇಳಿಕೆಯಾಗೋದು ಮಾತ್ರವಲ್ಲ, ಫಿಟ್ ಆಂಡ್ ಫೈನ್ ಆಗಿರುತ್ತೀರಿ.  

Written by - Bhavishya Shetty | Last Updated : Nov 2, 2023, 09:55 PM IST
    • ಸುಲಭವಾಗಿ ತೂಕ ಇಳಿಕೆ ಹೇಗೆ ಮಾಡಬಹುದು?
    • ಬೆಳಗ್ಗೆ ಎದ್ದ ತಕ್ಷಣ ಈ ಎಲ್ಲಾ ಕೆಲಸಗಳನ್ನು ಮಾಡಿದರೆ ಬೆಸ್ಟ್
    • ಬೆಳಗ್ಗೆ ಬೇಗ ಏಳುವುದರಿಂದ ಅನೇಕ ರೋಗಗಳಿಂದ ದೊರೆಯುತ್ತದೆ ಮುಕ್ತಿ
ಬೆಳಗ್ಗೆ ಎದ್ದ ತಕ್ಷಣ ಈ ನೀರನ್ನು ಕುಡಿದರೆ ಅಂದುಕೊಂಡಿದಕ್ಕಿಂತ ವೇಗವಾಗಿ ಕರಗುತ್ತೆ ಸೊಂಟದ ಬೊಜ್ಜು! title=
Weight loss Tips

Honey and Lemon Water: ಅನೇಕ ಜನರನ್ನು ನಾವೆಲ್ಲರೂ ನೋಡಿರಬಹುದು. ತೂಕ ಇಳಿಕೆಗೆ ನಾನಾ ಕಸರತ್ತುಗಳನ್ನು ಮಾಡುತ್ತಿರುತ್ತಾರೆ, ಆದರೆ ಅವೆಲ್ಲದರಿಂದ ಪರಿಣಾಮ ಮಾತ್ರ ಶೂನ್ಯವಾಗಿರುತ್ತದೆ. ಹೀಗಿರುವಾಗ ಸುಲಭವಾಗಿ ತೂಕ ಇಳಿಕೆ ಹೇಗೆ ಮಾಡಬಹುದು ಎಂದು ನಾವು ನಿಮಗೆ ತಿಳಿಸಿಕೊಡಲಿದ್ದೇವೆ.

ಈ ಸಲಹೆಗಳನ್ನು ಪಾಲಿಸಿದರೆ ಸಾಕು ಗಂಟೆಗಟ್ಟಲೆ ವ್ಯಾಯಾಮ ಮಾಡಬೇಕು, ಡಯಟ್ ಮಾಡಬೇಕು, ಜಿಮ್’ನಲ್ಲಿ ಬೆವರಿಳಿಸಬೇಕು ಎಂಬ ಚಿಂತೆ ಇರಲ್ಲ.

ಇದನ್ನೂ ಓದಿ: ಚಳಿಗಾಲದಲ್ಲಿ ತಪ್ಪದೇ ಪ್ರತಿದಿನ ಆಮ್ಲಾವನ್ನು ಸೇವಿಸುವುದರಿಂದಾಗುವ ಪ್ರಯೋಜನವೇನು ಗೊತ್ತೇ?

ಬೆಳಗ್ಗೆ ಎದ್ದ ತಕ್ಷಣ ಈ ಎಲ್ಲಾ ಕೆಲಸಗಳನ್ನು ಮಾಡಬೇಕೆಂಬುದು ಮಾತ್ರ ಇಲ್ಲಿನ ಕಂಡೀಷನ್. ಹೀಗೆ ಮಾಡಿದರೆ ತ್ವರಿತವಾಗಿ ತೂಕ ಇಳಿಕೆಯಾಗೋದು ಮಾತ್ರವಲ್ಲ, ಫಿಟ್ ಆಂಡ್ ಫೈನ್ ಆಗಿರುತ್ತೀರಿ.  

ಬೇಗ ಏಳುವ ಅಭ್ಯಾಸ:

ತೂಕ ಇಳಿಕೆ ಮಾಡಬೇಕೆಂದುಕೊಳ್ಳುವವರು ಬೆಳಿಗ್ಗೆ ಬೇಗನೆ ಏಳಲು ಪ್ರಯತ್ನಿಸಬೇಕು. ಆಯುರ್ವೇದದ ಪ್ರಕಾರ ಬೆಳಗ್ಗೆ ಬೇಗ ಏಳುವುದರಿಂದ ಅನೇಕ ರೋಗಗಳಿಂದ ಮುಕ್ತಿ ದೊರೆಯುತ್ತದೆ. ಜೊತೆಗೆ ಬೊಜ್ಜು ಕೂಡ ದೂರವಾಗುತ್ತದೆ.

ಉಗುರು ಬೆಚ್ಚನೆಯ ನೀರನ್ನು ಕುಡಿಯಿರಿ:

ಬೆಳಿಗ್ಗೆ ಎದ್ದ ತಕ್ಷಣ ನೀವು ಮಾಡಬೇಕಾದ ಮೊದಲ ಕೆಲಸವೆಂದರೆ ಉಗುರು ಬೆಚ್ಚಗಿನ ನೀರನ್ನು ಕುಡಿಯುವುದು. ಇದಕ್ಕೆ ಜೇನು ತುಪ್ಪ ಮತ್ತು ನಿಂಬೆರಸವನ್ನು ಬೆರೆಸಿ ಕುಡಿದರೆ ಎಲ್ಲದಕ್ಕಿಂತ ವೇಗವಾಗಿ ತೂಕ ಇಳಿಸಬಹುದು.

ಎಷ್ಟು ನೀರು ಕುಡಿಯಬೇಕು?

ಆಹಾರ ತಜ್ಞರ ಪ್ರಕಾರ, ಬೆಳಿಗ್ಗೆ 500 ಮಿಲಿ ನೀರನ್ನು ಕುಡಿಯುವುದು ಚಯಾಪಚಯವನ್ನು 30% ರಷ್ಟು ಹೆಚ್ಚಿಸುತ್ತದೆ. ಹೀಗಾಗಿ ನೀವು ಬೆಳಿಗ್ಗೆ 500 ಮಿಲಿ ಅಥವಾ ಒಂದರಿಂದ ಎರಡು ಗ್ಲಾಸ್ ನೀರನ್ನು ಕುಡಿದರೆ ಉತ್ತಮ.

ಏರೋಬಿಕ್ಸ್:

ತೂಕ ಇಳಿಸಲೆಂದು ಅನೇಕರು ಜಿಮ್‌’ನಲ್ಲಿ ವೇಟ್‌ಲಿಫ್ಟಿಂಗ್ ಮಾಡುತ್ತಾರೆ. ಆದರೆ ಅದರ ಬದಲು ಏರೋಬಿಕ್ಸ್, ಬ್ರಿಸ್ಕ್ ವಾಕ್, ಸೈಕ್ಲಿಂಗ್, ಈಜು ಮುಂತಾದ ಸರಳ ವ್ಯಾಯಾಮಗಳನ್ನು ಮಾಡಿದರೆ ತೂಕವು ವೇಗವಾಗಿ ಕಡಿಮೆಯಾಗಲು ಪ್ರಾರಂಭಿಸುತ್ತದೆ.

ಪೌಷ್ಟಿಕ ಉಪಹಾರ:

ತೂಕ ಇಳಿಸಿಕೊಳ್ಳಬೇಕೆಂದು ಇಚ್ಛಿಸುವ ಜನರು ಬೆಳಗಿನ ಉಪಾಹಾರದಲ್ಲಿ ಪೌಷ್ಟಿಕಾಂಶ-ಭರಿತ ಆಹಾರಗಳನ್ನು ಮಾತ್ರ ಸೇವಿಸಬೇಕು. ಅದರಲ್ಲಿ ಪ್ರೋಟೀನ್, ಫೈಬರ್, ಜ್ಯೂಸ್, ಹಣ್ಣುಗಳು, ಓಟ್ಸ್ ಇತ್ಯಾದಿಗಳನ್ನು ಕೂಡ ಸೇರಿಸಿಕೊಳ್ಳಬಹುದು.

ಇದನ್ನೂ ಓದಿ:  ವಿಶ್ವಕಪ್’ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದು ಜಹೀರ್ ಖಾನ್ ರೆಕಾರ್ಡ್ ಬ್ರೇಕ್ ಮಾಡಿದ ಮೊಹಮ್ಮದ್ ಶಮಿ

(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇವುಗಳನ್ನು ಅನುಸರಿಸುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. Zee ಮಾಧ್ಯಮವು ಈ ಮಾಹಿತಿಯನ್ನು ಅನುಮೋದಿಸುವುದಿಲ್ಲ)

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News