ಹಲವು ಆರೊಗ್ಯ  ಸಮಸ್ಯೆಗಳಿಗೆ ನುಗ್ಗೆ ಸೊಪ್ಪು ದಿವ್ಯೌಷಧ

ನುಗ್ಗೆ ಮರವು ವಿಟಮಿನ್ ಮಾತ್ರೆಗಳಿಗಿಂತಲೂ ಹೆಚ್ಚಿನ ಪೋಷಕಾಂಶಗಳನ್ನು ಹೊಂದಿರುತ್ತದೆ.

Written by - Zee Kannada News Desk | Last Updated : Jan 25, 2023, 10:41 AM IST
  • ಅನೇಕ ರೋಗಗಳನ್ನು ತೊಡೆದುಹಾಕುವ ಸಾಮರ್ಥ್ಯವನ್ನು ಹೊಂದಿದೆ.
  • A ಜೀವಸತ್ವ ಹೊಂದಿರುವ ಕ್ಯಾರೆಟಿಗಿಂತಲೂ 4 ರಷ್ಟು ಜೀವಸತ್ವ ಈ ನುಗ್ಗೆ ಸೊಪ್ಪಿನಲ್ಲಿರುತ್ತದೆ.
  • ಮನುಷ್ಯನ ದೇಹದ ದೈನಂದಿನ ವಿಟಮಿನ್ ಅವಶ್ಯಕತೆಗೆ ಪೂರಕವಾಗಿದೆ.
ಹಲವು ಆರೊಗ್ಯ  ಸಮಸ್ಯೆಗಳಿಗೆ ನುಗ್ಗೆ ಸೊಪ್ಪು ದಿವ್ಯೌಷಧ title=

ನುಗ್ಗೆ ಮರದ ಎಲೆಗಳನ್ನು ನಮ್ಮ ಭಾರತದಲ್ಲಿ ಪ್ರಾಚೀನ ಕಾಲದಿಂದಲೂ ಆಯುರ್ವೇದ ಔಷಧಿಗಳಿಗೆ ಸಂಬಂಧಿಸಿದಂತೆ ಉಪಯೋಗಿಸಲಾಗುತ್ತಿತ್ತು.ನುಗ್ಗೆ ಸೊಪ್ಪಿನಲ್ಲಿ ಶೇಖಡಾ 4 ರಷ್ಟು ವಿಟಮಿನ್ ' ಎ ' ಅಂಶ ಹೆಚ್ಚಾಗಿದೆ ಎಂದು ಸಂಶೋಧಿಸಲಾಗಿದೆ. 100 ಗ್ರಾಂ ಮೋರಿಂಗ ಎಲೆಗಳಲ್ಲಿ ಸುಮಾರು 7564 ಐ ಯು ಯೂನಿಟ್ ಗಳಷ್ಟು ವಿಟಮಿನ್ ' ಎ ' ಅಂಶ ಇದ್ದು, ಇದು ಮನುಷ್ಯನ ದೇಹದ ದೈನಂದಿನ ವಿಟಮಿನ್ ಅವಶ್ಯಕತೆಗೆ ಪೂರಕವಾಗಿದೆ.ನುಗ್ಗೆ ಮರವು ವಿಟಮಿನ್ ಮಾತ್ರೆಗಳಿಗಿಂತಲೂ ಹೆಚ್ಚಿನ ಪೋಷಕಾಂಶಗಳನ್ನು ಹೊಂದಿರುತ್ತದೆ. ಈ ನುಗ್ಗೆ ಸೊಪ್ಪಿನಲ್ಲಿ ಅಧಿಕವಾಗಿ ಸಿ ಜೀವಸತ್ವವಿರುತ್ತದೆ. ಉದಾಹರಣೆಗೆ ನಾವು ವಿಟಮಿನ್ “C” ಯ ಸಲುವಾಗಿ ಬಳಸುವ ನಿಂಬೆ, ಕಿತ್ತಳೆ ಹಣ್ಣುಗಳಿಗಿಂತಲೂ 7 ರಷ್ಟು ಅಧಿಕವಾದ ವಿಟಮಿನ್ ಇದರಲ್ಲಿ ದೊರಕುತ್ತದೆ. A ಜೀವಸತ್ವ ಹೊಂದಿರುವ ಕ್ಯಾರೆಟಿಗಿಂತಲೂ 4 ರಷ್ಟು ಜೀವಸತ್ವ ಈ ನುಗ್ಗೆ ಸೊಪ್ಪಿನಲ್ಲಿರುತ್ತದೆ.

ನುಗ್ಗೆ ಸೊಪ್ಪಿನ ಔಷಧಿ ಉಪಯೋಗಗಳು:

 ಕ್ಯಾನ್ಸರ್ ಕಾಯಿಲೆಯ ನಿವಾರಣೆ:
 ನುಗ್ಗೆ ಸೊಪ್ಪಿನಲ್ಲಿ ಯಥೇಚ್ಛವಾದ ಆಂಟಿ - ಆಕ್ಸಿಡೆಂಟ್ ಗಳು, ವಿಟಮಿನ್ ' ಸಿ ', ಜಿಂಕ್ ಮತ್ತು ಇತರ ಸಕ್ರಿಯ ವಸ್ತುಗಳಿಂದ ಕ್ಯಾನ್ಸರ್ ಕಾಯಿಲೆಗೆ ಕಾರಣವಾಗುವಂತಹ ಫ್ರೀ ರ್ಯಾಡಿಕಲ್ ಗಳನ್ನು ಹೋಗಲಾಡಿಸಲು ಸಹಕಾರಿಯಾಗುತ್ತದೆ. 

ಕಣ್ಣಿನ ಉತ್ತಮ  ದೃಷ್ಟಿಗೆ ಸಹಕಾರಿ:
ನುಗ್ಗೆ ಸೊಪ್ಪಿನಲ್ಲಿ ವಿಟಮಿನ್‌ ವಿಟಮಿನ್ ' ಎ ' ಮತ್ತು ಬೀಟಾ - ಕ್ಯಾರೋಟಿನ್ ಅಂಶವಿರುವುದರಿಂದ ನಿರಂತರವಾಗಿ  ಸೊಪ್ಪಿನ್ನು ಸೇವಿಸುವುದರಿಂದ ಉತ್ತಮ ದೃಷ್ಟಿಯನ್ನು  ಹೊಂದಬಹುದು.

ಇದನ್ನೂ ಓದಿ:  ಈರುಳ್ಳಿ ಸಿಪ್ಪೆ ಎಸೆಯಬೇಡಿ, ಟೀ ಮಾಡಿ.. ಈ ಕಾಯಿಲೆ ಬುಡಸಮೇತ ಮಾಯವಾಗುತ್ತೆ

 ಸಕ್ಕರೆ ಕಾಯಿಲೆ ಗುಣಪಡಿಸಲು ಸಹಾಯಕವಾಗಿದೆ:
 ನುಗ್ಗೆಸೊಪ್ಪಿನ ಸಾರದಲ್ಲಿ ಆಂಟಿ ಡಯಾಬಿಟಿಕ್ ಮತ್ತು ಆಂಟಿ - ಆಕ್ಸಿಡೆಂಟ್ ವಸ್ತುಗಳಿದ್ದು, ಇದು ಮಧುಮೇಹಿ ರೋಗಿಗಳಿಗೆ ಮಧುಮೇಹದ ವಿರುದ್ಧವಾಗಿ ಉತ್ತಮ ಆರೋಗ್ಯ ಫಲಗಳನ್ನು ಕೊಡುತ್ತದೆ. 

ಲೋ ಬಿಪಿ ಉಳ್ಳವರಿಗೆ :
ಅಧಿಕ ರಕ್ತದ ಒತ್ತಡಕ್ಕೆ ನುಗ್ಗೆ ಸೊಪ್ಪು ಎಲ್ಲಾ ರೀತಿಯಿಂದಲೂ ಸಹಕಾರಿ. ಏಕೆಂದರೆ ಇದರಲ್ಲಿ ಅಧಿಕವಾದ ಪೊಟ್ಯಾಶಿಯಂ ಅಂಶ ಇದೆ. ಸಹಜವಾಗಿಯೇ ಪೊಟ್ಯಾಶಿಯಂ ಅಂಶ ರಕ್ತದ ಒತ್ತಡವನ್ನು ಕಡಿಮೆ ಮಾಡುತ್ತದೆ .

ದೇಹದ ತೂಕ ಇಳಿಕೆ:
ನುಗ್ಗೆ ಸೊಪ್ಪಿನಲ್ಲಿ ಐಸೋಥಿಯೋಸಿಯಾನೇಟ್ ಎಂಬ ಸಕ್ರಿಯ ವಸ್ತುವಿದ್ದು, ಇದು ನಿಮ್ಮ ದೇಹ ಪ್ರತಿದಿನ ಕೊಬ್ಬಿನಂಶ ಅಥವಾ ಕೊಲೆಸ್ಟ್ರಾಲ್ ಅಂಶವನ್ನು ತಗ್ಗಿಸುತ್ತದೆ. 

 

ಮೊಡವೆ  ನಿವಾರಣೆ :
ನುಗ್ಗೆ ಸೊಪ್ಪಿಗೆ ಸ್ವಲ್ಪ ನಿಂಬೆ ರಸ ಸೇರಿಸಿ, ನುಣುಪಾಗಿ ಅರೆದು, ಮೊಡವೆಗಳಿಗೆ ಹಚ್ಚಿ, ಸ್ವಲ್ಪ ಸಮಯದ ನಂತರ ತಣ್ಣೀರಿನಲ್ಲಿ ಮುಖ ತೊಳೆಯುವುದರಿಂದ ಮೊಡವೆಗಳ ನಿವಾರಣೆಯಾಗುತ್ತದೆ.

ಇದನ್ನೂ ಓದಿ:ಲೈಂಗಿಕ ಆರೋಗ್ಯ ವೃದ್ದಿಗೆ ಅಡುಗೆ ಮನೆಯಲ್ಲಿದೆ ಆರು ನೈಸರ್ಗಿಕ ಮದ್ದುಗಳು

ಬಾಣಂತಿಯರಲ್ಲಿ ಎದೆ ಹಾಲನ್ನು ಹೆಚ್ಚಿಸಲು ಸಹಕಾರಿ:
ನುಗ್ಗೆ ಸೊಪ್ಪಿನಲ್ಲಿರುವ  ಅಧಿಕ ಪೋಷಕಾಂಶವು ತಾಯಿಯಲ್ಲಿ ಹಾಲಿನ ಪ್ರಮಾಣವನ್ನು ಹೆಚ್ಚಿಸುತ್ತದೆ. ಹಾಗು ಗರ್ಭಿಣಿಯರ ಆರೋಗ್ಯಕ್ಕೂ ಸಹಕಾರಿಯಾಗಿರುವುದರ ಜೊತೆಗೆ ಹುಟ್ಟುವ ಮಗುವಿನ ಅರೋಗ್ಯ ಕೂಡ ಚೆನ್ನಾಗಿರುತ್ತದೆ.

ಅಜೀರ್ಣ ಸಮಸ್ಯೆ ನಿವಾರಣೆ:
 ನುಗ್ಗೆ ಸೊಪ್ಪು ಮಲಬದ್ಧತೆ, ಉಬ್ಬರಿಕೆ, ಅನಿಲ, ಜಠರದ ಉರಿತ ಮತ್ತು ಅಲ್ಸರೇಟಿವ್ ಕೊಲೈಟಿಸ್ ಸಮಸ್ಯೆ ಇರುವವರು , ತಮ್ಮ ಆಹಾರದಲ್ಲಿ  ನುಗ್ಗೆ ಸೊಪ್ಪನ್ನು ಸೇವಿಸುವುದರಿಂದ ಪ್ರಯೋಜನವಾಗುತ್ತದೆ.

ಸೂಚನೆ: (ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಜ್ಞಾನವನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ಪಡೆಯಿರಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News