ಮಳೆಗಾಲದಲ್ಲಿ ಉಂಟಾಗುವ ಫಂಗಲ್ ಇನ್ಫೆಕ್ಷನ್ಗೆ ಇಲ್ಲಿವೆ ಕೆಲ ಸಲಹೆಗಳು!

Monsoon Tips For Women: ಮಳೆಗಾಲದ ಸಮಯದಲ್ಲಿ ಮಹಿಳೆಯರಿಗೆ ಖಾಸಗಿ ಭಾಗದಲ್ಲಿ ತುರಿಕೆ, ಉರಿ ಸಮಸ್ಯೆ ಕಾಡುತ್ತದೆ (Health News In Kannada). ಮಹಿಳೆಯರ ಖಾಸಗಿ ಅಂಗಗಳ ಕಾಳಜಿ ವಹಿಸಲು, ಈ ಹೈಜಿನ್ ಸಲಹೆಗಳನ್ನು ಅನುಸರಿಸಿದರೆ ಉತ್ತಮ.  

Written by - Nitin Tabib | Last Updated : Jul 21, 2023, 10:31 PM IST
  • ಋತುಚಕ್ರದ ಸಮಯದಲ್ಲಿ ಸರಿಯಾದ ಸಮಯದಲ್ಲಿ ಪ್ಯಾಡ್ ಅಥವಾ ಟ್ಯಾಂಪೂನ್ಗಳನ್ನು ಬದಲಾಯಿಸದಿದ್ದರೆ,
  • ಸೋಂಕಿನ ಅಪಾಯವು ಹೆಚ್ಚಾಗುತ್ತದೆ. ಮಳೆಗಾಲದಲ್ಲಿ ಮಹಿಳೆಯರು ಸಾಮಾನ್ಯ ದಿನಗಳಿಗಿಂತ ಹೆಚ್ಚಾಗಿ
  • ಸ್ಯಾನಿಟರಿ ಪ್ಯಾಡ್ ಬದಲಾಯಿಸಬೇಕಾಗುತ್ತದೆ. ಇದೇ ವೇಳೆ, ಖಾಸಗಿ ಭಾಗವನ್ನು ಸಾಧ್ಯವಾದಷ್ಟು ಒಣಗಿಸಲು ಪ್ರಯತ್ನಿಸಿ.
ಮಳೆಗಾಲದಲ್ಲಿ ಉಂಟಾಗುವ ಫಂಗಲ್ ಇನ್ಫೆಕ್ಷನ್ಗೆ ಇಲ್ಲಿವೆ ಕೆಲ ಸಲಹೆಗಳು! title=

Health News In Kannada: ಮಳೆಗಾಲದ ಸಮಯದಲ್ಲಿ ಬ್ಯಾಕ್ಟೀರಿಯಾ, ವೈರಸ್ ಮತ್ತು ಫಂಗಲ್ ಸೋಂಕಿನ ಅಪಾಯ ಹೆಚ್ಚಾಗಿರುತ್ತದೆ. ಇದರಿಂದ ಮಹಿಳೆಯರಿಗೆ ಅಷ್ಟೇ ಅಲ್ಲ ಪುರುಷರಿಗೂ ಕೂಡ ಖಾಸಗಿ ಅಂಗಗಳಲ್ಲಿ ತುರಿಕೆ, ಉರಿ ಮುಂತಾದ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಇನ್ನೊಂದೆಡೆ, ಮಾನ್ಸೂನ್‌ನಲ್ಲಿನ ತೇವಾಂಶದ ಕಾರಣ, ಖಾಸಗಿ ಅಂಗದಲ್ಲಿ ಪಿಹೆಚ್ ಮಟ್ಟವು ಹದಗೆಡುತ್ತದೆ ಎಂದು ಹೇಳಲಾಗುತ್ತದೆ. ಇದರ ಜೊತೆಗೆ ಯುಟಿಐ, ಯೀಸ್ಟ್ ಸೋಂಕು, ದದ್ದುಗಳಂತಹ ಸಮಸ್ಯೆಗಳ ಅಪಾಯ ಕೂಡ ಹೆಚ್ಚಾಗುತ್ತದೆ. ಮಳೆಗಾಲದಲ್ಲಿ ಮಹಿಳೆಯರು ಖಾಸಗಿ ಅಂಗಗಳ ಸ್ವಚ್ಛತೆಗೆ ಯಾವ ಸಲಹೆಗಳನ್ನು ಅನುಸರಿಸಬೇಕು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ, 

ಮಹಿಳೆಯರು ಖಾಸಗಿ ಅಂಗದ ಕಾಳಜಿ ಹೇಗೆ ವಹಿಸಬೇಕು?
ವಿಭಿನ್ನ ರೀತಿಯ ಸೋಂಕಿನಿಂದ ರಕ್ಷಿಸಿಕೊಳ್ಳಲು ಮಹಿಳೆಯರು ಈ ಕೆಳಗೆ ನೀಡಲಾಗಿರುವ ಖಾಸಗಿ ಅಂಗಗಳ ಆರೋಗ್ಯ ಸಲಹೆ ಅನುಸರಿಸಬೇಕು.

ಋತುಚಕ್ರದ ಅವಧಿಯಲ್ಲಿನ ಸ್ವಚ್ಚತೆ
ಋತುಚಕ್ರದ ಸಮಯದಲ್ಲಿ ಸರಿಯಾದ ಸಮಯದಲ್ಲಿ ಪ್ಯಾಡ್ ಅಥವಾ ಟ್ಯಾಂಪೂನ್ಗಳನ್ನು ಬದಲಾಯಿಸದಿದ್ದರೆ, ಸೋಂಕಿನ ಅಪಾಯವು ಹೆಚ್ಚಾಗುತ್ತದೆ. ಮಳೆಗಾಲದಲ್ಲಿ ಮಹಿಳೆಯರು ಸಾಮಾನ್ಯ ದಿನಗಳಿಗಿಂತ ಹೆಚ್ಚಾಗಿ ಸ್ಯಾನಿಟರಿ ಪ್ಯಾಡ್ ಬದಲಾಯಿಸಬೇಕಾಗುತ್ತದೆ. ಇದೇ ವೇಳೆ, ಖಾಸಗಿ ಭಾಗವನ್ನು ಸಾಧ್ಯವಾದಷ್ಟು ಒಣಗಿಸಲು ಪ್ರಯತ್ನಿಸಿ.

ತುಂಬಾ ಟೈಟಾಗಿರುವ ಒಳ ಉಡುಪುಧಾರಣೆ ಬೇಡ
ಮಳೆಗಾಲದಲ್ಲಿ ಗಾಳಿಯಲ್ಲಿ ಹೆಚ್ಚಿನ ಪ್ರಮಾಣದ ತೇವಾಂಶ ಇರುತ್ತದೆ. ಇದರಿಂದಾಗಿ ಖಾಸಗಿ ಅಂಗದ ಪ್ರದೇಶದ ಬಳಿ ಬರುವ ಬೆವರು ಬೇಗನೆ ಒಣಗುವುದಿಲ್ಲ. ಈ ಬೆವರು ನಂತರ ದದ್ದುಗಳು, ಸೋಂಕು ಮತ್ತು ತುರಿಕೆಗೆ ಕಾರಣವಾಗುತ್ತದೆ. ಹೀಗಾಗಿ, ಮಹಿಳೆಯರು ಸಡಿಲವಾದ ಮತ್ತು ಕಾಟನ್ ನಿಂದ ತಯಾರಿಸಿದ ಒಳ ಉಡುಪುಗಳನ್ನು ಧರಿಸಬೇಕು.

ಫ್ಯೂಬಿಕ್ ಹೆಯರ್ ಶೇವಿಂಗ್ ಬೇಡ
ಫ್ಯೂಬಿಕ್ ಹೆಯರ್ ಮಹಿಳೆಯರ ಖಾಸಗಿ ಅಂಗವನ್ನು ಸೋಂಕಿನಿಂದ ಮುಕ್ತವಾಗಿಡಲು ಸಹಕರಿಸುತ್ತವೆ. ಹೀಗಾಗಿ ಅವುಗಳನ್ನು ತೆಗೆದು ಹಾಕಿದರೆ ಸೋಂಕಿನ ಅಪಾಯ ಹೆಚ್ಚಾಗುತ್ತದೆ. ಇದಲ್ಲದೆ, ತಪ್ಪಿ ಒಂದು ವೇಳೆ ಎಲ್ಲಾದರು ಗಾಯ ಉಂಟಾದರೆ, ಅದು ಮತ್ತಷ್ಟು ದೊಡ್ಡ ಸೋಂಕಿಗೆ ಕಾರಣವಾಗುತ್ತದೆ.

ಮೆನ್ಸ್ಟ್ರುವಲ್ ಕಪ್ ಒಂದು ಉತ್ತಮ ಆಯ್ಕೆಯಾಗಿದೆ
ಋತುಚಕ್ರದ ಅವಧಿಯಲ್ಲಿ ಸ್ಯಾನಿಟರಿ ಪ್ಯಾಡ್, ಟ್ಯಾಂಪೋನ್ ಅನ್ನು ಹೊರತುಪಡಿಸಿ ಮೆನ್ಸ್ಟ್ರುವಲ್ ಕಪ್ ಅನ್ನು ಕೂಡ ಬಳಸಬಹುದು. ಆರೋಗ್ಯ ತಜ್ಞರ ಪ್ರಕಾರ ಇದು ಅತಿ ಹೆಚ್ಚು ಹೈಜೆನಿಕ್ ಆಯ್ಕೆಯಾಗಿದೆ. ಇದು ಮಹಿಳೆಯರಿಗೆ ಖಾಸಗಿ ಅಂಗಗಳಲ್ಲಾಗುವ ತುರಿಕೆ, ಉರಿತ ಮತ್ತು ರಾಷಿಸ್ ಸಮಸ್ಯೆಯಿಂದ ರಕ್ಷಿಸುತ್ತದೆ.

ಇದನ್ನೂ ಓದಿ-Kiss ಮಾಡುವಾಗ ಮರೆತೂ ಕೂಡ ಈ ತಪ್ಪುಗಳನ್ನು ಮಾಡಬೇಡಿ!

ಸಾಧ್ಯವಾದಷ್ಟು ಹೆಚ್ಚು ನೀರಿನ ಸೇವನೆ ಮಾಡಿ
UTI ನಿಂದ ರಕ್ಷಿಸಿಕೊಳ್ಳಲು ಮಹಿಳೆಯರು ಸಾಧ್ಯವಾದಷ್ಟು ಹೆಚ್ಚು ನೀರನ್ನು ಸೇವಿಸಬೇಕು. ಇದರಿಂದ ಶರೀರ ಸಾಕಷ್ಟು ಹೈಡ್ರೇಟ್ ಆಗಿರುತ್ತದೆ ಹಾಗೂ ಖಾಸಗಿ ಅಂಗಗಳಲ್ಲಿ ಒಣಗುವಿಕೆಯ ಸಮಸ್ಯೆ ಕೂಡ ಇದರಿಂದ ಕಮ್ಮಿಯಾಗುತ್ತದೆ. ಯುಟಿಐ ಅಪಾಯದಿಂದ ಪಾರಾಗಲು ಮಹಿಳೆಯರು ಅಧಿಕ ನೀರನ್ನು ಸೇವಿಸುವುದು ಲಾಭಕಾರಿಯಾಗಿದೆ.

ಇದನ್ನೂ ಓದಿ-ಕೂದಲಿನ ನೈಸರ್ಗಿಕ ಬಣ್ಣ ರಕ್ಷಣೆಗೆ ಬಲು ಪ್ರಯೋಜನಕಾರಿ ಈ ತರಕಾರಿ ಸಿಪ್ಪೆಗಳು!

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಅನುಸರಿಸುವ ಮುನ್ನ ವೈದ್ಯಕೀಯ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News