Health Tips: ರಾತ್ರಿ ಮಲಗುವ ಮುನ್ನ ಒಂದು ಲೋಟ ಬಿಸಿನೀರು ಕುಡಿದ್ರೆ ಏನಾಗುತ್ತೆ ಗೊತ್ತಾ?

Health Benefits to Drinking Hot Water: ಮಲಬದ್ಧತೆ ಅಥವಾ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳಿದ್ದರೆ ರಾತ್ರಿ ಮಲಗುವ ಮೊದಲು ಒಂದು ಲೋಟ ಬಿಸಿ ನೀರು ಕುಡಿಯುವುದು ಉತ್ತಮ ಪರಿಹಾರವಾಗಿದೆ. ರಾತ್ರಿ ಬಿಸಿನೀರು ಕುಡಿಯುವುದರಿಂದ ಜೀರ್ಣಕ್ರಿಯೆ ಸುಧಾರಿಸುತ್ತದೆ.

Written by - Puttaraj K Alur | Last Updated : Jul 13, 2024, 02:21 PM IST
  • ರಾತ್ರಿ ಮಲಗುವ ಮುನ್ನ ಒಂದು ಲೋಟ ಬಿಸಿನೀರು ಕುಡಿದ್ರೆ ಹಲವಾರು ಪ್ರಯೋಜನಗಳಿವೆ
  • ಮಲಬದ್ಧತೆ ಅಥವಾ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳಿದ್ದರೆ ಪರಿಹಾರ ದೊರೆಯುತ್ತದೆ
  • ತೂಕ ಇಳಿಸಿಕೊಳ್ಳುವವರು ಸಹ ಮಲಗುವ ಮುನ್ನ ಒಂದು ಲೋಟ ಬಿಸಿನೀರನ್ನು ಕುಡಿಯಬೇಕು
Health Tips: ರಾತ್ರಿ ಮಲಗುವ ಮುನ್ನ ಒಂದು ಲೋಟ ಬಿಸಿನೀರು ಕುಡಿದ್ರೆ ಏನಾಗುತ್ತೆ ಗೊತ್ತಾ?  title=
ಬಿಸಿನೀರಿನ ಪ್ರಯೋಜನಗಳು

Benefits of Drinking Hot Water: ನಮ್ಮ ಸಮಗ್ರ ಆರೋಗ್ಯದಲ್ಲಿ ನೀರಿನ ಪಾತ್ರ ಬಹುಮುಖ್ಯವಾದುದು. ನಾವು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಪ್ರತಿದಿನ ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯಬೇಕು. ಹೆಚ್ಚಿನ ಜನರು ತಣ್ಣೀರನ್ನು ಕುಡಿಯುತ್ತಾರೆ. ಆದರೆ ಬಿಸಿನೀರು ಸೇವನೆಯಿಂದ ನೀವು ಹಲವಾರು ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು. ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಬಿಸಿನೀರು ಸೇವಿಸಿದ್ರೆ ಅನೇಕ ಆರೋಗ್ಯಕರ ಪ್ರಯೋಜನಗಳಿವೆ ಎಂದು ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ. 

ರಾತ್ರಿ ಮಲಗುವ ಮುನ್ನ ಒಂದೇ ಒಂದು ಲೋಟ ಬಿಸಿನೀರು ಕುಡಿಯುವುದರಿಂದ ನೀವು ಅಚ್ಚರಿಯ ಫಲಿತಾಂಶ ಪಡೆಯಬಹುದು. ಹೌದು, ರಾತ್ರಿ ಮಲಗುವ ಮುನ್ನ ಬಿಸಿನೀರು ಕುಡಿಯುವುದರಿಂದ ದೇಹದೊಳಗಿನ ಉಷ್ಣತೆ ಹೆಚ್ಚುತ್ತದೆ. ಇದರಿಂದ ರಕ್ತದ ಹರಿವು ಸುಧಾರಿಸುತ್ತದೆ. ಇದು ಬೆವರುವಿಕೆಗೆ ಕಾರಣವಾಗುತ್ತದೆ ಮತ್ತು ದೇಹದ ಒಳಗಿರುವ ಕೊಳೆಯನ್ನು ಸುಲಭವಾಗಿ ಹೊರಹಾಕಲ್ಪಡುತ್ತದೆ.

ಇದನ್ನೂ ಓದಿ: Health Tips: ಕೊತ್ತಂಬರಿ ಸೊಪ್ಪಿನ ಜ್ಯೂಸ್ ಕುಡಿದ್ರೆ ಎಲ್ಲಾ ಕಾಯಿಲೆಗಳು ಮಾಯ!

ಮಲಬದ್ಧತೆ ಅಥವಾ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳಿದ್ದರೆ ರಾತ್ರಿ ಮಲಗುವ ಮೊದಲು ಒಂದು ಲೋಟ ಬಿಸಿ ನೀರು ಕುಡಿಯುವುದು ಉತ್ತಮ ಪರಿಹಾರವಾಗಿದೆ. ರಾತ್ರಿ ಬಿಸಿನೀರು ಕುಡಿಯುವುದರಿಂದ ಜೀರ್ಣಕ್ರಿಯೆ ಸುಧಾರಿಸುತ್ತದೆ. ಮಲಬದ್ಧತೆ, ಗ್ಯಾಸ್ ಇತ್ಯಾದಿ ಸಮಸ್ಯೆಗಳು ಬರುವುದಿಲ್ಲ. ನಿಯಮಿತವಾಗಿ ಬಿಸಿನೀರು ಕುಡಿಯುತ್ತಿದ್ದರೆ ನಿಮ್ಮ ಹೊಟ್ಟೆಯು ಸಂಪೂರ್ಣವಾಗಿ ಶುದ್ಧವಾಗುತ್ತದೆ.

ತೂಕ ಇಳಿಸಿಕೊಳ್ಳುವವರು ಸಹ ಮಲಗುವ ಮುನ್ನ ಬಿಸಿನೀರನ್ನು ಕುಡಿಯಬೇಕು. ಬೆಳಗಿನ ಜಾವದ ಬದಲು ರಾತ್ರಿ ಮಲಗುವ ಮುನ್ನ ಬಿಸಿನೀರು ಕುಡಿಯುವುದರಿಂದ ತೂಕದಲ್ಲಿ ತ್ವರಿತ ಬದಲಾವಣೆ ಕಾಣಬಹುದು. ಏಕೆಂದರೆ ಇದು ನಿಮ್ಮ ಚಯಾಪಚಯವನ್ನು ಸಹ ಸುಧಾರಿಸುತ್ತದೆ. ರಾತ್ರಿ ನಿದ್ದೆ ಬಾರದೆ ಕಷ್ಟಪಡುವವರು ಸಹ ಮಲಗುವ ಮುನ್ನ ಬಿಸಿನೀರು ಕುಡಿಯಬೇಕು. ಇದು ಉತ್ತಮ ನಿದ್ರೆಯನ್ನು ಒದಗಿಸುತ್ತದೆ ಮತ್ತು ನಿದ್ರೆಯ ಗುಣಮಟ್ಟವನ್ನು ಸುಧಾರಿಸುತ್ತದೆ.

ಇದನ್ನೂ ಓದಿ: ಖಾಲಿ ಹೊಟ್ಟೆಗೆ ಈ ಎಲೆಯ ರಸ ಕುಡಿಯುವುದರಿಂದ ದಿನಪೂರ್ತಿ ಬ್ಲಡ್ ಶುಗರ್ ನಾರ್ಮಲ್ ಆಗಿರುತ್ತದೆ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News