Health Tips : ತಾಮ್ರದ ಪಾತ್ರೆಯಲ್ಲಿ ಕುಡಿಯಬೇಡಿ ಈ 4 ಪಾನೀಯಗಳನ್ನ, ಅದು ತಕ್ಷಣವೇ ವಿಷವಾಗುತ್ತದೆ!

ವಿಜ್ಞಾನಿಗಳು ತಾಮ್ರದ ಪಾತ್ರೆಯಲ್ಲಿ ಕುಡಿಯುವ ನೀರನ್ನು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಿದ್ದಾರೆ. ಆದರೆ ತಾಮ್ರದ ಪಾತ್ರೆಯಲ್ಲಿ ಇರಿಸಲಾದ ಕೆಲವು ಪಾನೀಯಗಳನ್ನು ಸೇವಿಸುವುದು ನಿಮಗೆ ತುಂಬಾ ಹಾನಿಕಾರಕ ಎಂಬುವುದು ಗೊತ್ತಾ ನಿಮಗೆ? ಹೌದು, ಇಂದು ನಾವು ನಿಮಗೆ ಆ ಪಾನೀಯಗಳ ಬಗ್ಗೆ ಹೇಳಲಿದ್ದೇವೆ, ನೀವು ಅವುಗಳನ್ನ ತಾಮ್ರದ ಪಾತ್ರೆಯಲ್ಲಿ ಹಾಕಿ ಕುಡಿದರೆ ನೀವು ಖಂಡಿತ ಆರೋಗ್ಯ ಸಮಸ್ಯೆ ಎದುರಿಸಬೇಕಾಗುತ್ತದೆ.

Written by - Channabasava A Kashinakunti | Last Updated : Oct 1, 2021, 12:59 PM IST
  • ತಾಮ್ರದ ಪಾತ್ರೆಯಲ್ಲಿ ನೀರು ಕುಡಿಯುವುದರಿಂದ ಹಲವು ಪ್ರಯೋಜನಗಳಿವೆ
  • ಆದರೆ ತಾಮ್ರದ ಪಾತ್ರೆಯಲ್ಲಿ ಹುಳಿ ಪಾನೀಯಗಳನ್ನು ಸೇವಿಸುವುದು ಹಾನಿಕಾರಕ
  • ತಾಮ್ರದ ಪಾತ್ರೆಯಲ್ಲಿ ಹಾಲು ಕುಡಿಯುವುದರಿಂದ ಆರೋಗ್ಯಕ್ಕೆ ಹಾನಿ
Health Tips : ತಾಮ್ರದ ಪಾತ್ರೆಯಲ್ಲಿ ಕುಡಿಯಬೇಡಿ ಈ 4 ಪಾನೀಯಗಳನ್ನ, ಅದು ತಕ್ಷಣವೇ ವಿಷವಾಗುತ್ತದೆ! title=

ನವದೆಹಲಿ : ಭಾರತದಲ್ಲಿ ತಾಮ್ರದ ಪಾತ್ರೆಗಳಲ್ಲಿ ಆಹಾರ ತಿನ್ನುವುದು ಮತ್ತು ಕುಡಿಯುವ ಸಂಪ್ರದಾಯ ಶತಮಾನಗಳಿಂದಲೂ ಇದೆ. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ತಾಮ್ರದ ಪಾತ್ರೆಯಲ್ಲಿ ಇರಿಸಿದ ನೀರನ್ನು ಕುಡಿಯುವುದು ತುಂಬಾ ಪ್ರಯೋಜನಕಾರಿ ಹೇಳಲಾಗುತ್ತಿದೆ. ವಿಜ್ಞಾನಿಗಳು ತಾಮ್ರದ ಪಾತ್ರೆಯಲ್ಲಿ ಕುಡಿಯುವ ನೀರನ್ನು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಿದ್ದಾರೆ. ಆದರೆ ತಾಮ್ರದ ಪಾತ್ರೆಯಲ್ಲಿ ಇರಿಸಲಾದ ಕೆಲವು ಪಾನೀಯಗಳನ್ನು ಸೇವಿಸುವುದು ನಿಮಗೆ ತುಂಬಾ ಹಾನಿಕಾರಕ ಎಂಬುವುದು ಗೊತ್ತಾ ನಿಮಗೆ? ಹೌದು, ಇಂದು ನಾವು ನಿಮಗೆ ಆ ಪಾನೀಯಗಳ ಬಗ್ಗೆ ಹೇಳಲಿದ್ದೇವೆ, ನೀವು ಅವುಗಳನ್ನ ತಾಮ್ರದ ಪಾತ್ರೆಯಲ್ಲಿ ಹಾಕಿ ಕುಡಿದರೆ ನೀವು ಖಂಡಿತ ಆರೋಗ್ಯ ಸಮಸ್ಯೆ ಎದುರಿಸಬೇಕಾಗುತ್ತದೆ.

ಹಾಲು : ತಾಮ್ರದ ಪಾತ್ರೆ(Copper Vessel)ಯಲ್ಲಿ ಹಾಲು ಕುಡಿಯಬಾರದು. ತಾಮ್ರದ ಪಾತ್ರೆಯಲ್ಲಿ ಇರಿಸಿದ ಹಾಲು ವಿಷಕಾರಿಯಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ನೀವು ಈ ಹಾಲನ್ನು ಸೇವಿಸಿದರೆ, ನಿಮ್ಮ ಆಹಾರ ವಿಷವಾಗಬಹುದು.

ಇದನ್ನೂ ಓದಿ : Ajwain Benefits : ನೀವು ಸ್ಥೂಲಕಾಯದಿಂದ ಬಳಲುತ್ತಿದ್ದೀರಾ? ಅಜ್ವಾನ್ ಈ ರೀತಿ ಸೇವಿಸಿ, ನಿಮ್ಮ ತೂಕ ವೇಗವಾಗಿ ಕಡಿಮೆಯಾಗುತ್ತೆ!

ಮಜ್ಜಿಗೆ : ಮಜ್ಜಿಗೆ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಆದರೆ ನೀವು ತಾಮ್ರದ ಪಾತ್ರೆಯಲ್ಲಿ ಮಜ್ಜಿಗೆ(Butter Milk)ಯನ್ನು ಸೇವಿಸಿದರೆ, ಅದು ನಿಮ್ಮ ಆರೋಗ್ಯಕ್ಕೆ ಪ್ರಯೋಜನಕಾರಿಯಾಗುವ ಬದಲು ಹಾನಿ ಉಂಟು ಮಾಡಬಹುದು. ಮಜ್ಜಿಗೆಯಲ್ಲಿ ಹಲವು ರೀತಿಯ ಗುಣಗಳು ಇರುತ್ತವೆ ಅದು ತಾಮ್ರದೊಂದಿಗೆ ಪ್ರತಿಕ್ರಿಯಿಸಬಹುದು.

ಹುಳಿ ರಸಗಳ ಸೇವನೆ : ತಾಮ್ರದ ಪಾತ್ರೆಯಲ್ಲಿ ಜ್ಯೂಸ್, ಉಪ್ಪಿನಕಾಯಿ ಇತ್ಯಾದಿ ಹುಳಿ ಪದಾರ್ಥಗಳನ್ನು ಹಾಕಿ ತಿನ್ನುವುದು ನಿಮ್ಮ ಆರೋಗ್ಯ(Health)ದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಈ ಎಲ್ಲಾ ಹುಳಿ ಪದಾರ್ಥಗಳನ್ನ ತಾಮ್ರದ ಪಾತ್ರೆಗಳೊಂದಿಗೆ ಪ್ರತಿಕ್ರಿಯಿಸುತ್ತವೆ. ತಾಮ್ರದ ಪಾತ್ರೆಗಳಲ್ಲಿ ಹುಳಿ ಪದಾರ್ಥಗಳನ್ನು ತಿನ್ನುವುದು ವಾಂತಿಯಂತಹ ಸಮಸ್ಯೆಗಳಿಗೆ ಕಾರಣವಾಗಬಹುದು.

ಇದನ್ನೂ ಓದಿ : Food For Men's Health: ಪುರುಷರಿಗೆ ಬಹಳ ಪ್ರಯೋಜನಕಾರಿ ಈ 3 ಆಹಾರ

ನಿಂಬೆ ನೀರು : ನಿಂಬೆ ಪಾನಕ ಆರೋಗ್ಯಕ್ಕೆ ರಾಮಬಾಣ. ಆದರೆ ತಾಮ್ರದ ಪಾತ್ರೆಯಲ್ಲಿ ನಿಂಬೆ ನೀರನ್ನು(Lemon Water) ಕುಡಿಯುವುದು ಆರೋಗ್ಯಕ್ಕೆ ತುಂಬಾ ಹಾನಿಕಾರಕವಾಗಿದೆ. ನಿಂಬೆಹಣ್ಣಿನಲ್ಲಿ ಆಮ್ಲವಿದ್ದು ಅದು ಆರೋಗ್ಯದ ಮೇಲೆ ತಾಮ್ರದೊಂದಿಗೆ ಪ್ರತಿಕ್ರಿಯಿಸುತ್ತದೆ. ನೀವು ತಾಮ್ರದ ಲೋಟದಲ್ಲಿ ನಿಂಬೆರಸವನ್ನು ಸೇವಿಸಿದರೆ, ನಿಮಗೆ ಗ್ಯಾಸ್, ಹೊಟ್ಟೆ ನೋವು, ವಾಂತಿ ಇತ್ಯಾದಿ ಸಮಸ್ಯೆಗಳು ಎದುರಾಗುತ್ತವೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News