Hair Care Tips: ನಿಮ್ಮ ಕೂದಲು ಬೇಗ ಉದ್ದವಾಗಬೇಕೆ? ಇದನ್ನು ಬಳಸಿ, ಕೆಲವೇ ದಿನಗಳಲ್ಲಿ ನೀವು ಪ್ರಯೋಜನ ನೋಡುತ್ತೀರಿ

Hair Care Tips: ಇದನ್ನು ಕೂದಲಿಗೆ ಸರಿಯಾಗಿ ಹಚ್ಚುವ ಮೂಲಕ ಶೀಘ್ರವೇ ನಿಮ್ಮ ಕೂದಲು ಬೆಳೆಯಲು ಪ್ರಾರಂಭಿಸುತ್ತದೆ.

Written by - Yashaswini V | Last Updated : May 18, 2021, 03:53 PM IST
  • ಕೂದಲು ಉದ್ದವಾಗಿ ಬೆಳೆಯಲು ಪ್ರೋಟೀನ್ ಬಹಳ ಮುಖ್ಯ
  • ದ್ವಿದಳ ಧಾನ್ಯಗಳು ಪ್ರೋಟೀನ್‌ನ ಅತ್ಯುತ್ತಮ ಮೂಲ ಎಂದು ಎಲ್ಲರಿಗೂ ತಿಳಿದಿದೆ
  • ನೀವು ಯಾವ ಬೇಳೆಯನ್ನು ಬಳಸುವುದರಿಂದ ಸಮೃದ್ಧವಾದ ಕೂದಲು ನಿಮ್ಮದಾಗಲಿದೆ ಎಂದು ತಿಳಿಯಿರಿ
Hair Care Tips: ನಿಮ್ಮ ಕೂದಲು ಬೇಗ ಉದ್ದವಾಗಬೇಕೆ? ಇದನ್ನು ಬಳಸಿ, ಕೆಲವೇ ದಿನಗಳಲ್ಲಿ ನೀವು ಪ್ರಯೋಜನ ನೋಡುತ್ತೀರಿ title=
Long Hair

ಬೆಂಗಳೂರು: ಉದ್ದವಾದ ಕೂದಲು ಪಡೆಯುವುದು ಪ್ರತಿಯೊಬ್ಬ ಹುಡುಗಿಯ ಕನಸು ಎಂಬುದರಲ್ಲಿ ಅನುಮಾನವಿಲ್ಲ. ಕೂದಲು ಉದ್ದವಾಗಿ ಬೆಳೆಯಲು ಪ್ರೋಟೀನ್ ಬಹಳ ಮುಖ್ಯ. ದ್ವಿದಳ ಧಾನ್ಯಗಳು ಪ್ರೋಟೀನ್‌ನ ಅತ್ಯುತ್ತಮ ಮೂಲ ಎಂದು ಎಲ್ಲರಿಗೂ ತಿಳಿದಿದೆ. ಅಂತಹ ಪರಿಸ್ಥಿತಿಯಲ್ಲಿ, ಇಂದು ನಾವು ನಿಮಗೆ ಯಾವ ಬೇಳೆಯನ್ನು ಬಳಸುವ ಮೂಲಕ ನೀವು ಉದ್ದವಾದ ಕೂದಲನ್ನು ಪಡೆಯಬಹುದು ಎಂಬುದನ್ನು ತಿಳಿಸುತ್ತೇವೆ. ಈ ಬೇಳೆಯನ್ನು ಕೂದಲಿಗೆ ಸರಿಯಾಗಿ ಹಚ್ಚುವ ಮೂಲಕ ಶೀಘ್ರವೇ ನಿಮಗೆ ಉತ್ತಮ ಫಲಿತಾಂಶ ಲಭ್ಯವಾಗುತ್ತದೆ.

ನಾವಿಂದು ಹೆಸರು ಬೇಳೆ ಬಗ್ಗೆ ತಿಳಿಸಲಿದ್ದೇವೆ. ಇದನ್ನು ಹಲವೆಡೆ ಹೆಸರು ಕಾಳು ಎಂದು ಕೂಡ ಕರೆಯುತ್ತಾರೆ. ಹೆಸರು ಬೇಳೆಯಲ್ಲಿ  ಪ್ರೋಟೀನ್ ಜೊತೆಗೆ ಉತ್ಕರ್ಷಣ ನಿರೋಧಕಗಳು, ಮ್ಯಾಂಗನೀಸ್, ಮೆಗ್ನೀಸಿಯಮ್, ತಾಮ್ರ, ಪೊಟ್ಯಾಸಿಯಮ್ ಮತ್ತು ವಿಟಮಿನ್ ಬಿ ಸಮೃದ್ಧವಾಗಿದೆ. 

ಇದನ್ನೂ ಓದಿ- ಪುರುಷರ ಹೇರ್ ಫಾಲ್ ಸಮಸ್ಯೆಗೆ ಇಲ್ಲಿದೆ ಪರಿಹಾರ!

ಹೆಸರು ಬೇಳೆ/ಕಾಳು ಕೂದಲಿನ ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರವನ್ನು ನೀಡುತ್ತದೆ:
- ಕೂದಲು ಉದುರುವಿಕೆ (Hair Fall)
- ತೆಳ್ಳನೆಯ ಕೂದಲು
- ಒಣ ಕೂದಲು (ಡ್ರೈ ಹೇರ್)
- ಕೂದಲನ್ನು ಒಡೆಯುವಿಕೆ (ಸ್ಪ್ಲಿಟ್ ಹೇರ್)
- ತಲೆಹೊಟ್ಟು

ಹೆಸರು ಕಾಳನ್ನು ಯಾವ ರೀತಿ ಸೇವಿಸಬೇಕು?
ಹೆಸರು ಬೇಳೆ/ಕಾಳನ್ನು (Moong Dal) ಅನ್ನು ವಾರಕ್ಕೆ 5 ರಿಂದ 6 ಬಾರಿ ತಿನ್ನಬಹುದು. ನೀವು ದಾಲ್  ಇಷ್ಟಪಡದಿದ್ದರೆ, ನೀವು ಅದರ ಚಾಟ್, ಟಿಕ್ಕಿಸ್ ಅಥವಾ ಮೊಳಕೆ ಕಾಳಿನ ರೂಪದಲ್ಲೂ ಸಹ ತಿನ್ನಬಹುದು. ಬೇಸಿಗೆಯಲ್ಲಿ ನೀವು ರಾತ್ರಿಯಲ್ಲಿ ಹಸರು ಕಾಳು ತಿನ್ನಬಹುದು. ಆದರೆ ಚಳಿಗಾಲದಲ್ಲಿ ನೀವು ಅದನ್ನು ಹಗಲಿನ ವೇಳೆಯಲ್ಲಿ ತಿನ್ನಬೇಕು. 

ಇದನ್ನೂ ಓದಿ- Hair Care Tips: ವಾರಕ್ಕೆ ಎರಡು ಬಾರಿ ಈ ಪ್ಯಾಕ್ ಹಾಕಿ ದಟ್ಟವಾದ ಕೂದಲು ನಿಮ್ಮದಾಗಿಸಿ

ಕೂದಲುಗಾಗಿ ಹೆಸರು ಕಾಳಿನ ಹೇರ್ ಪ್ಯಾಕ್:
ಹೆಸರು ಕಾಳಿನ ಪ್ಯಾಕ್ ತಯಾರಿಸಲು ಮೊದಲು ಅದನ್ನು ಕುಕ್ಕರ್ ನಲ್ಲಿ 2 ರಿಂದ 3 ಸೀಟಿಗಳನ್ನು ಕೂಗಿಸಿ. ಬಳಿಕ ಅದಕ್ಕೆ ಮೊಸರು, ಜೇನುತುಪ್ಪ, ನಿಂಬೆ ಮತ್ತು 1 ಟೀಸ್ಪೂನ್ ತೆಂಗಿನ ಎಣ್ಣೆ ಬೆರೆಸಿ ಪೇಸ್ಟ್ ತಯಾರಿಸಿ. ಈಗ ಪೇಸ್ಟ್ ಅನ್ನು ನಿಮ್ಮ ಕೂದಲಿಗೆ ಹಚ್ಚಿ, ಈ ಪೇಸ್ಟ್‌ ಅನ್ನು 30 ರಿಂದ 40 ನಿಮಿಷಗಳ ಕಾಲ ಡ್ರೈ ಆಗಲು ಬಿಡಿ. ಬಳಿಕ ಶಾಂಪು ಹಾಕಿ ಬೆಚ್ಚಗಿನ ನೀರಿನಿಂದ ಕೂದಲನ್ನು ತೊಳೆಯಿರಿ. ಹೀಗೆ ಮಾಡುವುದರಿಂದ ನಿಮ್ಮ ಕೂದಲು ಬೇಗ ಬೆಳೆಯುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News