Grapefruit For Weight Loss: ಬೇಸಿಗೆ ಕಾಲದಲ್ಲಿ ಪ್ರತಿಯೊಬ್ಬರೂ ಕೂಡ ತಮ್ಮ ಆರೋಗ್ಯದ ವಿಶೇಷ ಕಾಳಜಿವಹಿಸಬೇಕಾಗುತ್ತದೆ. ಇಲ್ಲದೆ ಹೋದರೆ ಬಿಸಿಲಿನ ಹೊಡೆತದಿಂದ ಪಾರಾಗುವುದು ಕಷ್ಟಸಾಧ್ಯ. ಬೇಸಿಗೆ ಕಾಲದಲ್ಲಿ ನಾವು ನಮ್ಮ ದೇಹವನ್ನು ಹೈಡ್ರೇಟ್ ಆಗಿರಿಸಲು ನಾವು ತರಹೇವಾರಿ ಹಣ್ಣುಗಳನ್ನು ಸೇವಿಸುತ್ತೇವೆ. ಇಂತಹುದೇ ಹಣ್ಣುಗಳಲ್ಲಿ ದ್ರಾಕ್ಷಿ ಹಣ್ಣು ಅಥವಾ ಹುಳಿಕಂಚಿ ಹಣ್ಣು ಅಥವಾ ಕಂಚಿಹಣ್ಣು ಕೂಡ ಒಂದು. ಈ ಹಣ್ಣನ್ನು ಸೇವಿಸಲು ಹಲವು ತಜ್ಞರು ಕೂಡ ಸಲಹೆ ನೀಡುತ್ತಾರೆ.
ಕಂಚಿಹಣ್ಣಿನಲ್ಲಿ ಕಂಡುಬರುವ ಪೋಷಕಾಂಶಗಳು
ಕಂಚಿಹಣ್ಣು ಅಂಟಿಆಕ್ಸಿಡೆಂಟ್ ಹಾಗೂ ಫೈಬರ್ ನಿಂದ ಸಮೃದ್ಧವಾಗಿದೆ. ಇವುಗಳನ್ನು ಹೊರತುಪಡಿಸಿ ದ್ರಾಕ್ಷಿ ಹಣ್ಣು ಕಬ್ಬಿಣ, ವಿಟಮಿನ್ ಸಿ, ಪೊಟ್ಯಾಸಿಯಂ, ಮೇಗ್ನಿಸಿಯಂ, ಪ್ರೋಟಿನ್ ಹಾಗೂ ಮಿನರಲ್ ಗಳಂತಹ ಪೋಷಕಾಂಶಗಳಿವೆ. ಇವು ನಮ್ಮ ಶರೀರಕ್ಕೆ ಹಲವು ರೀತಿಯಿಂದ ಲಾಭ ನೀಡುತ್ತವೆ.
ಗ್ರೇಪಫ್ರೂಟ್ ಸೇವನೆಯಿಂದಾಗುವ ಲಾಭಗಳು
ತೂಕ ಇಳಿಕೆ - ಶರೀರದಿಂದ ಬೊಜ್ಜು ಇಳಿಕೆ ಮಾಡುವುದು ಸುಲಭದ ಮಾತಲ್ಲ. ಇದಕ್ಕಾಗಿ ನಿಯಮಬದ್ಧ ಆಹಾರಶೈಲಿ ಹಾಗೂ ಸರಿಯಾದ ರೀತಿಯಲ್ಲಿ ವರ್ಕೌಟ್ ಮಾಡುವುದು ತುಂಬಾ ಆವಶ್ಯಕ. ಆದರೆ, ಒಂದು ವೇಳೆ ನೀವು ಕಂಚಿಹಣ್ಣನ್ನು ಸೇವಿಸಿದರೆ ತೂಕ ವೇಗವಾಗಿ ಇಳಿಕೆಯಾಗುತ್ತದೆ. ಏಕೆಂದರೆ ಈ ಹಣ್ಣಿನಲ್ಲಿ ಕ್ಯಾಲೋರಿ ಪ್ರಮಾಣ ಅತ್ಯಂತ ಕಡಿಮೆಯಾಗಿರುತ್ತದೆ.
ನಿರ್ಜಲಿಕರಣದ ಸಮಸ್ಯೆಗೆ ರಾಮಬಾಣ - ಬೇಸಿಗೆ ಕಾಲದಲ್ಲಿ ಶರೀರದಲ್ಲಿ ನೀರಿನಾಂಶದ ಕೊರತೆ ಒಂದು ಸಾಮಾನ್ಯ ಸಂಗತಿಯಾಗಿದೆ. ಇದರಿಂದ ಪಾರಾಗಲು ಗ್ರೇಪ್ ಫ್ರೂಟ್ ಸೇವಿಸುವುದು ಉತ್ತಮ. ಏಕೆಂದರೆ ಇದರಲ್ಲಿ ಶೇ.90ರಷ್ಟು ನೀರಿನಾಂಶ ಇರುತ್ತದೆ.
ಇಮ್ಯೂನಿಟಿ ಬೂಸ್ಟರ್- ಕೊರೊನಾವೈರಸ್ ಸಾಂಕ್ರಾಮಿಕದ ನಂತರ, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಾಕಷ್ಟು ಒತ್ತು ನೀಡಲಾಗುತ್ತದೆ. ವಿಟಮಿನ್ ಸಿ ಮತ್ತು ಉತ್ಕರ್ಷಣ ನಿರೋಧಕ ಗುಣಲಕ್ಷಣಗಳು ದ್ರಾಕ್ಷಿಹಣ್ಣಿನಲ್ಲಿ ಕಂಡುಬರುತ್ತವೆ, ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಅನೇಕ ರೀತಿಯ ಸೊಂಕುಗಳಿಂದ ನಿಮ್ಮನ್ನು ಪಾರು ಮಾಡುತ್ತದೆ.
ಇದನ್ನೂ ಓದಿ-Diabetes: ಸಕ್ಕರೆ ಕಾಯಿಲೆಯಿಂದ ಬಾಯಿಗೆ ಸಂಬಂಧಿಸಿದ ಈ ಸಮಸ್ಯೆಗಳು ಎದುರಾಗಬಹುದು
ಜೀರ್ಣಕ್ರಿಯೆ ಉತ್ತಮಗೊಳ್ಳುತ್ತದೆ - ಬೇಸಿಗೆ ಕಾಲದಲ್ಲಿ ಎದುರಾಗುವ ಮತ್ತೊಂದು ಸಮಸ್ಯೆ ಎಂದರೆ ಅದು ಜೀರ್ಣಕ್ರಿಯೆ ಕುಂಠಿತಗೊಳ್ಳುವುದು. ಹೀಗಾಗಿ ಜೀರ್ಣಕ್ರಿಯೆಯನ್ನು ಸುಗಮಗೊಳಿಸಲು ಗ್ರೇಪ್ ಫ್ರೂಟ್ ಸೇವನೆ ಅತ್ಯುತ್ತಮ. ಇದರ ಜೊತೆಗೆ ಅಸಿಡಿಟಿ ಹಾಗೂ ಗ್ಯಾಸ್ ನಂತಹ ಸಮಸ್ಯೆಗಳು ಕೂಡ ನಿವಾರಣೆಯಾಗುತ್ತವೆ.
ಇದನ್ನೂ ಓದಿ-Cholesterol Lowering Diet: ಈ ಡ್ರೈ ಫ್ರೂಟ್ ತಿಂದರೆ ಹೆಚ್ಚಾಗುವುದಿಲ್ಲ ಕೊಲೆಸ್ಟ್ರಾಲ್
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಅನುಸರಿಸುವ ಮುನ್ನ ವೈದ್ಯಕೀಯ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.