Good News: Corona ಚಿಕಿತ್ಸೆಗಾಗಿ DRDO ಔಷಧಿ 2-DG ತುರ್ತು ಬಳಕೆಗೆ DGCI ಅನುಮತಿ

Coronavirus In India: ಈ ಔಷಧಿಯ ಕ್ಲಿನಿಕಲ್ ಟ್ರಯಲ್ ಗಳನ್ನು ನಂಬುವುದಾದರೆ, ಈ ಔಷಧಿ ಆಸ್ಪತ್ರೆಗಳಲ್ಲಿ ಕೊರೊನಾ ವಿರುದ್ಧ ಹೋರಾಡುತ್ತಿರುವ ರೋಗಿಗಳಿಗೆ ಬೇಗನೆ ಚೇತರಿಸಿಕೊಳ್ಳಲು ಸಹಾಯ ಮಾಡುತ್ತದೆ. ಇದರ ಜೊತೆಗೆ ಇದು ರೋಗಿಗಳಲ್ಲಿ ಆಕ್ಸಿಜನ್ ಕೊರತೆಯನ್ನು ಕೂಡ ಸಾಕಷ್ಟು ಪ್ರಮಾಣದಲ್ಲಿ ನೀಗಿಸುತ್ತದೆ ಎನ್ನಲಾಗಿದೆ.

Written by - Nitin Tabib | Last Updated : May 8, 2021, 06:16 PM IST
  • ಕೊರೊನಾ ವೈರಸ್ ಚಿಕಿತ್ಸೆಗೆ ಬಂತು ಮತ್ತೊಂದು ಔಷಧಿ.
  • ರೆಡ್ಡಿಸ್ ಲ್ಯಾಬ್ ಜೊತೆ ಸೇರಿ DRDO ವಿಜ್ಞಾನಿಗಳು ಈ ಔಷಧಿಯನ್ನು ಅಭಿವೃದ್ದಿಪಡಿಸಿದೆ.
  • ಪ್ರಸ್ತುತ ಈ ಔಷಧಿಗೆ DCGI ಕೊವಿಡ್-19 ಚಿಕಿತ್ಸೆಯ ತುರುತು ಬಳಕೆಗೆ ಅನುಮೋದನೆ ನೀಡಿದೆ.
Good News: Corona ಚಿಕಿತ್ಸೆಗಾಗಿ DRDO ಔಷಧಿ 2-DG ತುರ್ತು ಬಳಕೆಗೆ DGCI ಅನುಮತಿ title=
Covid-19 Medicine (Courtesy: DRDO Video Grab)

ನವದೆಹಲಿ:  Covid-19 Medicine - ಕೊರೊನಾ (Coronavirus) ಪ್ರಕೋಪದ ವಿದುದ್ಧ ಹೋರಾಡಲು ಮತ್ತೊಂದು ಔಷಧಿಗೆ DCGI ಅನುಮತಿ ನೀಡಿದೆ. DRDOನ ಒಂದು ಪ್ರಯೋಗಶಾಲೆಯಾಗಿರುವ ಇನ್ಸ್ಟಿಟ್ಯೂಟ್ ಆಫ್ ನ್ಯೂಕ್ಲಿಯರ್ ಮೆಡಿಸಿನ್ ಅಂಡ್ ಅಲೈಡ್ ಸೈನ್ಸಸ್, ಡಾ. ರೆಡ್ಡಿಸ್ ಲ್ಯಾಬ್ ಜೊತೆಗೆ ಸೇರಿ ಕೊರೊನಾ ಕಾಯಿಲೆಗೆ ಒರಲ್ ಮೆಡಿಸಿನ್ ಅನ್ನು ಅಭಿವೃದ್ಧಿಪಡಿಸಿದೆ. DCGA '2-deoxy-D-glucose (2-DG)' ಹೆಸರಿನ ಈ ಔಷಧಿಗೆ ಭಾರತದಲ್ಲಿ ತುರ್ತು ಬಳಕೆಗ ಅನುಮತಿ ನೀಡಿದೆ. ಈ ಔಷಧಿಯ ಕ್ಲಿನಿಕಲ್ ಪ್ರಯೋಗಳ ಕುರಿತು ಹೇಳುವುದಾದರೆ, ಆಸ್ಪತ್ರೆಗಳಲ್ಲಿ ಚಿಕಿತ್ಸೆಗಾಗಿ ಭರ್ತಿಯಾದ ಕೊರೊನಾ ರೋಗಿಗಳಿಗೆ ಶೀಘ್ರವೇ ಗುಣಮುಖರಾಗಲು ಈ ಔಷಧಿ ಸಯಾಯ ಮಾಡುತ್ತದೆ. ಇದಲ್ಲದೆ ಇದು ರೋಗಿಗಳಲ್ಲಿ ಆಕ್ಸಿಜನ್ (Medical Oxygen Supply) ಅವಶ್ಯಕತೆಯನ್ನೂ ಕೂಡ ಪೂರೈಸುತ್ತದೆ.

ಈ ಔಷಧಿಯನ್ನು ಬಳಕೆ ಮಾಡಿದ ರೋಗಿಗಳ RT-PCR ವರದಿ ಋಣಾತ್ಮಕ ಹೊರಬಂದಿದೆ. ಹೀಗಿರುವಾಗ ಮಹಾಮಾರಿಯ ಪ್ರಕೊಪದಿಂದ ಬಳಲುತ್ತಿರುವ ಭಾರತದಲ್ಲಿ ಜನರಿಗೆ ಈ ಔಷಧಿ ತುಂಬಾ ಲಾಭಕಾರಿ ಸಾಬೀತಾಗುವ ಸಾಧ್ಯತೆ ಇದೆ.

ಇದನ್ನೂ ಓದಿ- Good News: ಭಾರತೀಯ ಮಾರುಕಟ್ಟೆಯಲ್ಲಿ ತನ್ನ Covid-19 Drug ಬಿಡುಗಡೆಗೊಳಿಸಿದ Bajaj Health Care

ಏಪ್ರಿಲ್ 2020 ರಲ್ಲಿ ಕೊವಿಡ್-19 ನ ಈ ಔಷಧಿಯ ಪ್ರಯೋಗ ಆರಂಭಿಸಲಾಗಿತ್ತು. ಇದರ ಆರಂಭಿಕ ಫಲಿತಾಂಶಗಳು ತುಂಬಾ ಸಕಾರಾತ್ಮಕವಾಗಿದ್ದವು. ಬಳಿಕ ಮೇ 2020ರಲ್ಲಿ ಇದರ ಕ್ಲಿನಿಕಲ್ ಟ್ರಯಲ್ ಆರಂಭಗೊಂಡಿತು ಮತ್ತು ಅಕ್ಟೋಬರ್ 2020 ರಲ್ಲಿ ಈ ಟ್ರಯಲ್ ಪೂರ್ಣಗೊಂಡಿದೆ. ಮೂರನೇ ಹಂತದ ಕ್ಲಿನಿಕಲ್ ಟ್ರಯಲ್ ನಲ್ಲಿ ಜನರಿಗೆ ಈ ಔಷಧಿಯ ಡೋಸ್ ನೀಡಲಾಗಿತ್ತು ಮತ್ತು ಅದೂ ಕೂಡ ಉತ್ತಮ ಫಲಿತಾಂಶಗಳನ್ನೇ ನೀಡಿದೆ. ಈ ಕುರಿತು ಹೇಳಿಕೆ ನೀಡಿರುವ DRDO ವಿಜ್ಞಾನಿಗಳು ಈ ಔಷಧಿಯನ್ನು ಶೀಘ್ರದಲ್ಲಿಯೇ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುವುದು ಎಂದು ಹೇಳಿದ್ದಾರೆ. 

ಇದನ್ನೂ ಓದಿ- Medicine For Covid-19 Treatment: ಕೊರೊನಾ ಚಿಕಿತ್ಸೆಗಾಗಿ Natco Pharma ಕಂಪನಿಯ Baricitinib ಮಾತ್ರೆಯ ತುರ್ತು ಬಳಕೆಗೆ ಅನುಮತಿ

ಬಜಾಜ್ ಉತ್ಪಾದಿಸಿತ್ತು ಈ ಔಷಧಿ
ಇದಕ್ಕೂ ಮೊದಲು ಔಷಧ ತಯಾರಕ ಕಂಪನಿಯಾಗಿರುವ ಬಜಾಜ್ ಹೆಲ್ತ್ ಕೇರ್ ಲಿಮಿಟೆಡ್, ಕೊವಿಡ್ 19 (Covid-19) ಚಿಕಿತ್ಸೆಗೆ ಬಳಸಲಾಗುವ ಫ್ಯಾವಿಪಿರಾವಿರ್ ಔಷಧಿಯ ಜೆನರಿಕ್ ಔಷಧಿಯಾಗಿರುವ ಫ್ಯಾವಿಜಾಜ್ ಉತ್ಪಾದಿಸಿರುವುದಾಗಿ ಹೇಳಿಕೊಂಡಿದೆ. ಈ ಔಷಧಿಗೂ ಕೂಡ DCGI ತುರ್ತು ಬಳಕೆಯ ಅನುಮೋದನೆ ದೊರೆತಿದ್ದು, ಶೀಘ್ರದಲ್ಲಿಯೇ ಅದೂ ಕೂಡ ಮಾರುಕಟ್ಟೆಗೆ ಬರುವ ನಿರೀಕ್ಷೆ ಇದೆ.

ಇದನ್ನೂ ಓದಿ- Corona: Paracetamol ಸೇರಿದಂತೆ ಈ ಅತ್ಯಾವಶ್ಯಕ ಔಷಧಿಗಳ ಬೆಲೆ ಏರಿಕೆ ಸಾಧ್ಯತೆ, ಕಾರಣ ಇಲ್ಲಿದೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News