Health Tips: ಸದಾ ಯಂಗ್ ಹಾಗೂ ಹೆಲ್ದಿಯಾಗಿರಲು ಯಾವ ವಯಸ್ಸಿಯಲ್ಲಿ ಏನು ಸೇವನೆ ಮಾಡಬೇಕು?

Anti Ageing Foods: ಜೀವನದ ಯಾವ ಹಂತದಲ್ಲಿ ಏನನ್ನು ಸೇವಿಸಬೇಕು ಎಂಬುದು ಪ್ರತಿಯೊಬ್ಬರಿಗೂ ತಿಳಿದಿರಲೇ ಬೇಕು.  ಟೆಕ್ಸಾಸ್ ವಿಶ್ವವಿದ್ಯಾಲಯದ ತಜ್ಞರ ಪ್ರಕಾರ, ನೀವು ಬುದ್ಧಿಮಾಂದ್ಯತೆಯನ್ನು ತಪ್ಪಿಸಲು ಬಯಸುತ್ತಿದ್ದರೆ ನೀವು 40-60 ವರ್ಷ ವಯಸ್ಸಿನಲ್ಲಿ ಎಣ್ಣೆಯುಕ್ತ ಮೀನುಗಳ ಸೇವನೆ ಮಾಡಬೇಕು.  

Written by - Nitin Tabib | Last Updated : Nov 25, 2022, 06:25 PM IST
  • ಜೀವನದ ಪ್ರತಿಯೊಂದು ಹಂತದ ಕಾಯಿಲೆಗಳು ಮತ್ತು ತೊಂದರೆಗಳಿಂದ ದೂರವಿರಲು ಪ್ರತಿಯೊಬ್ಬರೂ ಬಯಸುತ್ತಾರೆ.
  • ಇದಕ್ಕಾಗಿ, ತಜ್ಞರು ಸಮತೋಲಿತ ಆಹಾರ, ಉತ್ತಮ ಜೀವನಶೈಲಿ ಮತ್ತು ವ್ಯಾಯಾಮವನ್ನು ಶಿಫಾರಸು ಮಾಡುತ್ತಾರೆ.
Health Tips: ಸದಾ ಯಂಗ್ ಹಾಗೂ ಹೆಲ್ದಿಯಾಗಿರಲು ಯಾವ ವಯಸ್ಸಿಯಲ್ಲಿ ಏನು ಸೇವನೆ ಮಾಡಬೇಕು? title=
Anti Aging Tips

What to Eat in Which Age: ಯಂಗ್ ಮತ್ತು ಆರೋಗ್ಯದಿಂದ ಕೂಡಿರುವುದು ಯಾರಿಗೆ ತಾನೇ ಇಷ್ಟವಾಗುವುದಿಲ್ಲ ಹೇಳಿ. ಜೀವನದ ಪ್ರತಿಯೊಂದು ಹಂತದ ಕಾಯಿಲೆಗಳು ಮತ್ತು ತೊಂದರೆಗಳಿಂದ ದೂರವಿರಲು ಪ್ರತಿಯೊಬ್ಬರೂ ಬಯಸುತ್ತಾರೆ. ಇದಕ್ಕಾಗಿ, ತಜ್ಞರು ಸಮತೋಲಿತ ಆಹಾರ, ಉತ್ತಮ ಜೀವನಶೈಲಿ ಮತ್ತು ವ್ಯಾಯಾಮವನ್ನು ಶಿಫಾರಸು ಮಾಡುತ್ತಾರೆ. ಆದರೆ ಮೊದಲು ನೀವು ಜೀವನದ ಯಾವ ಹಂತದಲ್ಲಿ ಏನನ್ನು ಸೇವಿಸಬೇಕು ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಟೆಕ್ಸಾಸ್ ವಿಶ್ವವಿದ್ಯಾಲಯದ ತಜ್ಞರ ಪ್ರಕಾರ, ನೀವು ಬುದ್ಧಿಮಾಂದ್ಯತೆಯನ್ನು ತಪ್ಪಿಸಲು  ಬಯಸುತ್ತಿದ್ದರೆ, ನೀವು 40-60 ವರ್ಷ ವಯಸ್ಸಿನಲ್ಲಿ ಎಣ್ಣೆಯುಕ್ತ ಮೀನುಗಳನ್ನು ಸೇವಿಸಬೇಕು ಎನ್ನಲಾಗಿದೆ.

ಯಾವ ವಯಸ್ಸಿನಲ್ಲಿ ಏನನ್ನು ಸೇವಿಸಬೇಕು?
ನೀವು 20 ವರ್ಷದವರಾಗಿದ್ದಾಗ ಏನು ಸೇವಿಸಬೇಕು

ಈ ವಯಸ್ಸಿನಲ್ಲಿ ನಿಮಗೆ ಸಾಕಷ್ಟು ಶಕ್ತಿ ಬೇಕು. ಆದ್ದರಿಂದ, ನೀವು ಆಹಾರದಲ್ಲಿ ಕಬ್ಬಿಣಯುಕ್ತ ಆಹಾರಗಳನ್ನು ಸೇರಿಸಬೇಕು. ಇತ್ತೀಚಿನ ದಿನಗಳಲ್ಲಿ ಯುವಕರಲ್ಲಿ ಕಬ್ಬಿಣದ ಕೊರತೆ ಹೆಚ್ಚಾಗಿ ಕಂಡು ಬರುತ್ತಿದೆ. ಇದರಿಂದಾಗಿ ಆಯಾಸ, ಒತ್ತಡ, ಏಕಾಗ್ರತೆಯಲ್ಲಿ ತೊಂದರೆ ಮುಂತಾದ ಸಮಸ್ಯೆಗಳು ಗೋಚರಿಸುತ್ತವೆ. ಇದಕ್ಕಾಗಿ, ನೀವು ಮೊಟ್ಟೆ, ಉಪಹಾರ ಧಾನ್ಯಗಳು, ಮೀನು, ಮ್ಯಾಕೆರೆಲ್ ಮೀನು, ಬೇಯಿಸಿದ ಬೀನ್ಸ್, ಒಣ ವಾಲ್ನಟ್ಸ್ ಮತ್ತು ಬಟಾಣಿಗಳನ್ನು ಸೇವಿಸಬೇಕು. ಇದಲ್ಲದೇ ವಾರದಲ್ಲಿ ಮೂರು ಬಾರಿ ಮೊಸರು ಸೇವಿಸಿ ಮತ್ತು ಡ್ರೈ ಫ್ರೂಟ್ಸ್ ತಿನ್ನುವುದರಿಂದ ರೋಗನಿರೋಧಕ ಶಕ್ತಿಯೂ ಕೂಡ ಹೆಚ್ಚುತ್ತದೆ.

30 ನೇ ವಯಸ್ಸಿನಲ್ಲಿ ಏನು ಸೇವಿಸಬೇಕು?
ಜೀವನದ ಈ ಹಂತದಲ್ಲಿ, ಹೆಚ್ಚುತ್ತಿರುವ ವಯಸ್ಸಿನ ಪರಿಣಾಮವು ಗೋಚರಿಸಲು ಆರಂಭಿಸುತ್ತದೆ. ಹೀಗಾಗಿ ಬಾದಾಮಿಯನ್ನು ವಾರಕ್ಕೆ ಮೂರು ಬಾರಿ ಸೇವಿಸಬೇಕು. ಇದಲ್ಲದೆ, ನಟ್ಸ್, ಬೀಜಗಳು, ಧಾನ್ಯಗಳು, ಆವಕಾಡೊ ಮತ್ತು ಪಾಲಕವನ್ನು ಸೇವಿಸಿ, ಇವು ನಿಮಗೆ ವಿಟಮಿನ್ ಇ ನೀಡುತ್ತವೆ. ಇದಲ್ಲದೆ, ನೀವು ವಾರಕ್ಕೊಮ್ಮೆ ಕೆಫೀನ್ ಹೊಂದಿರುವ ಚಹಾ ಅಥವಾ ಕಾಫಿ ಕುಡಿಯುವುದನ್ನು ತಪ್ಪಿಸಿ. ನೀವು ಗಿಡಮೂಲಿಕೆ ಚಹಾ ಅಥವಾ ಯಾವುದೇ ಆರೋಗ್ಯಕರ ಪರ್ಯಾಯವನ್ನು ಆಯ್ಕೆ ಮಾಡಬಹುದು.

40 ನೇ ವಯಸ್ಸಿನಲ್ಲಿ ಏನನ್ನು ಸೇವಿಸಬೇಕು?
ಈ ವಯಸ್ಸಿನಲ್ಲಿ, ನೀವು ನಿಧಾನವಾಗಿ ಬಿಡುಗಡೆಯಾಗುವ ಕಾರ್ಬೋಹೈಡ್ರೇಟ್ಗಳನ್ನು ಸೇವಿಸಬೇಕು. ಈ ಕಾರ್ಬೋಹೈಡ್ರೇಟ್, ಫೈಬರ್ ಮತ್ತು ಪಿಷ್ಟ ತರಕಾರಿಗಳು ಹಾಗೂ ವಿವಿಧ ಹಣ್ಣುಗಳಲ್ಲಿ ಕಂಡುಬರುತ್ತದೆ. ಇವು ಜೀರ್ಣವಾಗಲು ಸಹ ಬಹಳ ಸಮಯ ತೆಗೆದುಕೊಳ್ಳುತ್ತದೆ. ಇವು ದೀರ್ಘ ಕಾಲದವರೆಗೆ ನಿಮಗೆ ಹೊಟ್ಟೆ ತುಂಬಿದ ಅನುಭವ ನೀಡುತ್ತವೆ. ಇವು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಸಹ ನಿಯಂತ್ರಣದಲ್ಲಿಡುತ್ತವೆ.

50 ನೇ ವಯಸ್ಸಿನಲ್ಲಿ ಏನು ಸೇವಿಸಬೇಕು?
ಈ ವಯಸ್ಸಿನಲ್ಲಿ ಸ್ವಯಂ ಕಾಳಜಿ ತುಂಬಾ ಅಗತ್ಯ. ಆದ್ದರಿಂದ, ವಯಸ್ಸಿನ ಪರಿಣಾಮವನ್ನು ತಡೆಗಟ್ಟಲು, ಕ್ಯಾರೆಟ್, ಕೆಂಪು ಮೆಣಸಿನಕಾಯಿಗಳು, ಪಾಲಕ ಮತ್ತು ಕೋಸುಗಡ್ಡೆಗಳನ್ನು ತಿನ್ನಬೇಕು. ಇದಲ್ಲದೆ, ಬೆರಿಹಣ್ಣುಗಳನ್ನು ತಿನ್ನಿರಿ. ಸಾಲ್ಮನ್ ಮೀನು, ಸಾರ್ಡೀನ್‌ಗಳ ಮೂಲಕ ನೀವು ಹೃದಯ ಕಾಯಿಲೆಗಳು ಮತ್ತು ರಕ್ತದೊತ್ತಡವನ್ನು ನಿಯಂತ್ರಿಸಬಹುದು.

60 ನೇ ವಯಸ್ಸಿನಲ್ಲಿ ಏನು ಸೇವಿಸಬೇಕು?
ಜೀವನದ ಈ ಹಂತದಲ್ಲಿ, ನೀವು ಪ್ರತಿದಿನ ಪ್ರೋಟೀನ್ ಭರಿತ ಆಹಾರವನ್ನು ಸೇವಿಸಬೇಕು. ಮಾಂಸ-ಮೀನು, ನಟ್ಸ್, ಬೀಜಗಳಲ್ಲಿ ಉತ್ತಮ ಪ್ರಮಾಣದ ಪ್ರೋಟೀನ್ ಗಳಿರುತ್ತವೆ. ಇದು ನಿಮ್ಮ ಸ್ನಾಯುಗಳನ್ನು ಸಹ ಆರೋಗ್ಯಕರವಾಗಿರಿಸುತ್ತದೆ.

ಇದನ್ನೂ ಓದಿ-ರಕ್ತದ ಸಕ್ಕರೆ ನಿಯಂತ್ರಿಸಲು ಸಹಾಯ ಮಾಡುತ್ತದೆ ಅಡುಗೆ ಮನೆಯ ಈ ಮಸಾಲೆಗಳು

70 ನೇ ವಯಸ್ಸಿನಲ್ಲಿ ಏನು ಸೇವಿಸಬೇಕು?
ಮೂಳೆಗಳಲ್ಲಿ ಕ್ಯಾಲ್ಸಿಯಂ ಕೊರತೆಯ ಅಭಾವ ಎದುರಾಗಿರುತ್ತದೆ, ಆದ್ದರಿಂದ ವಿಟಮಿನ್ ಡಿ ಹೊಂದಿರುವ ವಸ್ತುಗಳನ್ನು ಸೇವಿಸಿ. ತೆಂಗಿನ ನೀರು, ಹಣ್ಣು ಮತ್ತು ತರಕಾರಿ ರಸಗಳು ಹಾಗೂ ಸಾಕಷ್ಟು ನೀರು ಕುಡಿಯುವುದು ಸಹ ಈ ಹಂತದಲ್ಲಿ ಪ್ರಯೋಜನಕಾರಿಯಾಗಿದೆ. ಈ ವಸ್ತುಗಳ ಕೊರತೆಯಿದ್ದರೆ, ಆಯಾಸ, ಗೊಂದಲ ಮತ್ತು ಒತ್ತಡದ ಸಮಸ್ಯೆ ಹೆಚ್ಚಾಗುತ್ತವೆ. ಇದರ ಹೊರತಾಗಿ ಪೋಷಕಾಂಶಗಳಿರುವ ದ್ರವ ಆಹಾರವನ್ನು ಸೇವಿಸಬೇಕು.

ಇದನ್ನೂ ಓದಿ-Blue Tea: ನೀವು ನೀಲಿ ಚಹಾ ಎಂದಾದರೂ ಸೇವಿಸಿದ್ದೀರಾ? ಸ್ವಾದ-ಆರೋಗ್ಯ ಎರಡಕ್ಕೂ ಬೆಸ್ಟ್

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಅನುಸರಿಸುವ ಮುನ್ನ ವೈದ್ಯಕೀಯ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News