/kannada/photo-gallery/shukra-gochar-laxmi-narayana-yoga-bless-this-zodiac-signs-with-huge-wealth-and-success-221344 Laxmi Narayana Yoga: ಈ ರಾಶಿಯವರಿಗೆ ಭಾಗ್ಯೋದಯ, ಸಿಗಲಿದೆ ಅಪಾರ ಕೀರ್ತಿ ಯಶಸ್ಸು Laxmi Narayana Yoga: ಈ ರಾಶಿಯವರಿಗೆ ಭಾಗ್ಯೋದಯ, ಸಿಗಲಿದೆ ಅಪಾರ ಕೀರ್ತಿ ಯಶಸ್ಸು 221344

ಬೆಂಗಳೂರು: ಖಿನ್ನತೆಯು ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುವ ಮತ್ತು ನಿಮ್ಮ ಸಾಮಾನ್ಯ ದಿನನಿತ್ಯದ ಜೀವನದಲ್ಲಿ ಹಸ್ತಕ್ಷೇಪ ಮಾಡುವ ಸ್ಥಿತಿಯಾಗಿದೆ. ಇದನ್ನು ಸುಲಭವಾಗಿ ಗುಣಪಡಿಸಬಹುದು. ಆದರೆ ಸಾಮಾನ್ಯವಾಗಿ ಜನರು ಆ ಬಗ್ಗೆ ಸರಿಯಾಗಿ ಗಮನ ಹರಿಸದೆ ಅದರಿಂದ ಬಳಲುತ್ತಾರೆ. ಇಂದು, ನಮ್ಮ ಆರೋಗ್ಯ ಸಲಹೆಗಳು ನಿಮಗೆ ಜವಾಬ್ದಾರಿಯನ್ನು ತೆಗೆದುಕೊಳ್ಳಲು ಮತ್ತು ಈ ಸ್ಥಿತಿಯನ್ನು ಸರಿಯಾದ ರೀತಿಯಲ್ಲಿ ಎದುರಿಸಲು ಸಹಾಯ ಮಾಡುತ್ತದೆ. ಖಿನ್ನತೆಯನ್ನು ಹೋಗಲಾಡಿಸಲು ಔಷಧಿ ಮತ್ತು ಸಮಾಲೋಚನೆ ಅಗತ್ಯ. ಆದರೆ ಇದಕ್ಕೂ ಮೊದಲು ನಿಮಗಿರುವ ಸಮಸ್ಯೆಯನ್ನು ಸೂಕ್ತವಾಗಿ ನೀವು ಗುರುತಿಸಬೇಕು.

ಹೆಚ್ಚಿನ ಸಮಯ, ಜನರು ಸಾಮಾಜಿಕ ಅಪಹಾಸ್ಯದ ಭಯದಿಂದ ವೈದ್ಯರನ್ನು ಸಂಪರ್ಕಿಸಲು ಬಯಸುವುದಿಲ್ಲ. ದುರದೃಷ್ಟವಶಾತ್, ಇದು ಇತರ ತೊಡಕುಗಳಿಗೆ ಕಾರಣವಾಗುತ್ತದೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ವಿಶ್ವಾದ್ಯಂತ ಆತ್ಮಹತ್ಯೆಗೆ ಖಿನ್ನತೆಯೇ ಪ್ರಮುಖ ಕಾರಣವಾಗಿದೆ. 

ಇಂದಿನ ನಮ್ಮ ಆರೋಗ್ಯ ಸಲಹೆಗಳನ್ನು ಅನುಸರಿಸಿ ಮತ್ತು ಖಿನ್ನತೆಗೆ ಒಳಗಾಗಿರುವವರನ್ನು ಸರಿಯಾದ ರೀತಿಯಲ್ಲಿ ನಿಭಾಯಿಸಿ. ಆದರೆ ನಿಮ್ಮ ಸ್ಥಿತಿಯು ತೀವ್ರವಾಗಿದ್ದರೆ, ನಿಮ್ಮ ಸ್ಥಿತಿಯನ್ನು ನೀವೇ ನಿವಾರಿಸಿಕೊಳ್ಳಲು ಪ್ರಯತ್ನಿಸುವುದರ ಜೊತೆಗೆ ನೀವು ವೈದ್ಯರನ್ನು ಸಹ ಸಂಪರ್ಕಿಸಬೇಕು.

ಸಕಾರಾತ್ಮಕವಾಗಿರುವುದು:
ನೀವು ಖಿನ್ನತೆಗೆ ಒಳಗಾದಾಗ ಯಾವುದರ ಬಗ್ಗೆಯೂ ಸಕಾರಾತ್ಮಕ ಭಾವನೆ ಅನುಭವಿಸುವುದು ಕಷ್ಟ. ಆದರೆ ನೀವು ಪ್ರಯತ್ನಿಸಬೇಕು ಮತ್ತು ವಸ್ತುಗಳ ಉತ್ತಮ ಭಾಗವನ್ನು ನೋಡಬೇಕು. ಸಕಾರಾತ್ಮಕ ಮತ್ತು ಸಂತೋಷವಾಗಿರಲು ನಿಮ್ಮ ಉತ್ತಮ ಪ್ರಯತ್ನಗಳನ್ನು ಮಾಡಿ. ನೀವು ಹೊಂದಿರುವ ಎಲ್ಲಾ ಸಕಾರಾತ್ಮಕ ಗುಣಗಳನ್ನು ನೀವೇ ನೆನಪಿಸಿಕೊಳ್ಳಿ. ಜೀವನದ ಪ್ರಕಾಶಮಾನವಾದ ಭಾಗವನ್ನು ನೋಡಿ. ಇದು ನಿಮ್ಮ ಖಿನ್ನತೆಯನ್ನು ನಿವಾರಿಸಲು ಸಹಾಯ ಮಾಡುತ್ತದೆ.

ನಿಮಗೆ ಅಗತ್ಯವಿರುವಾಗ ಸಹಾಯಕ್ಕಾಗಿ ಕೇಳಿ:
ನಿಮ್ಮ ಖಿನ್ನತೆಯ ಬಗ್ಗೆ ಪೂರ್ವಭಾವಿಯಾಗಿರಿ. ನೀವು ಈ ಸ್ಥಿತಿಯನ್ನು ಹೊಂದಿದ್ದೀರಿ ಎಂದು ನೀವು ಅನುಮಾನಿಸಿದರೆ, ಅದನ್ನು ಓದಿ ಮತ್ತು ಅದರ ಬಗ್ಗೆ ಜನರೊಂದಿಗೆ ಮಾತನಾಡಿ. ಯಾರಾದರೂ ಯಾವುದೇ ಸಲಹೆಗಳನ್ನು ನೀಡಿದರೂ ಅದನ್ನು ಪೂರ್ಣ ಪ್ರಮಾಣದಲ್ಲಿ ಅಳವಡಿಸಿಕೊಳ್ಳಲು ಸಾಧ್ಯವಾಗದಿದ್ದರೂ, ನಿರ್ಲಕ್ಷಿಸಬೇಡಿ. ಅಗತ್ಯವಿದ್ದರೆ ವೈದ್ಯಕೀಯ ಸಹಾಯವನ್ನು ಪಡೆಯಿರಿ. ಖಿನ್ನತೆಯು ನಿಮ್ಮ ಸಾಮರ್ಥ್ಯಗಳನ್ನು ಪ್ರತಿಬಿಂಬಿಸುವುದಿಲ್ಲ. ಯಾರಾದರೂ ಇದರಿಂದ ಬಳಲುತ್ತಿದ್ದರೆ, ಸಾಮಾಜಿಕ ಕಳಂಕದ ಭಯವು ಸಹಾಯವನ್ನು ಪಡೆಯುವುದನ್ನು ತಡೆಯಲು ಬಿಡಬೇಡಿ.

ಏಕಾಂಗಿಯಾಗಿ ಇರದಿರಲು ಪ್ರಯತ್ನಿಸಿ:
ನೀವು ಹೆಚ್ಚು ಜನರನ್ನು ಭೇಟಿಯಾಗುವುದರಿಂದ ಅದು ನಿಮಗೆ ಉತ್ತಮವಾಗಿರುತ್ತದೆ. ನೀವು ಏಕಾಂಗಿಯಾಗಿ ಇದ್ದರೆ, ಅದು ನಿಮ್ಮ ಖಿನ್ನತೆಯನ್ನು ಉಲ್ಬಣಗೊಳಿಸುತ್ತದೆ. ಆದ್ದರಿಂದ, ಸಾಮಾಜಿಕವಾಗಿರಲು ಪ್ರಯತ್ನಿಸಿ ಮತ್ತು ಹೆಚ್ಚಾಗಿ ಹೊರಬನ್ನಿ. ಇದು ಸಾಕಷ್ಟು ಮಟ್ಟಿಗೆ ಸಹಾಯ ಮಾಡುತ್ತದೆ.

ಚಟುವಟಿಕೆಗಳೊಂದಿಗೆ ನಿಮ್ಮ ಜೀವನವನ್ನು ತುಂಬಿರಿ:
ಕಾರ್ಯನಿರತವಾಗುವುದರ ಮೂಲಕ, ನೀವು ಎಲ್ಲಾ ನಕಾರಾತ್ಮಕ ಭಾವನೆಗಳನ್ನು ಬದಿಗಿರಿಸಲು ಸಾಧ್ಯವಾಗುತ್ತದೆ. ಸಾಧ್ಯವಾದಷ್ಟು ಯಾವುದಾದರೊಂದು ಚಟುವಟಿಕೆಯಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಳ್ಳಿ.  ಒಂದು ಕಾರಣಕ್ಕಾಗಿ ಸ್ವಯಂಸೇವಕರಾಗಲು ಪ್ರಯತ್ನಿಸಿ ಅಥವಾ ನಿಮ್ಮ ಪ್ರದೇಶದ ಬಡ ಮಕ್ಕಳಿಗೆ ಕಲಿಸಿ. ನಕಾರಾತ್ಮಕವಾಗಿ ಇರುವುದನ್ನು ತಪ್ಪಿಸಲು ಇರುವ ಒಂದೇ ಮಾರ್ಗವೆಂದರೆ ನಿಮ್ಮನ್ನು ನೀವು ಬ್ಯುಸಿಯಾಗಿ ಇರಿಸಿಕೊಳ್ಳುವುದು.

Section: 
English Title: 
Fight with depression in the right way
News Source: 
Home Title: 

ಖಿನ್ನತೆಯ ವಿರುದ್ಧ ಸರಿಯಾದ ರೀತಿಯಲ್ಲಿ ಹೋರಾಡಿ...

ಖಿನ್ನತೆಯ ವಿರುದ್ಧ ಸರಿಯಾದ ರೀತಿಯಲ್ಲಿ ಹೋರಾಡಿ...
Caption: 
Representational Image
Author No use : 
Yashaswini V
Yes
Is Blog?: 
No
Tags: 
Facebook Instant Article: 
Yes
Mobile Title: 
ಖಿನ್ನತೆಯ ವಿರುದ್ಧ ಸರಿಯಾದ ರೀತಿಯಲ್ಲಿ ಹೋರಾಡಿ...
Publish Later: 
No
Publish At: 
Saturday, January 25, 2020 - 12:39
Created By: 
Yashaswini V
Updated By: 
Yashaswini V
Published By: 
Yashaswini V