Egg Eating Benefits: ದಿನಕ್ಕೆ ಎಷ್ಟು ಮೊಟ್ಟೆ ತಿಂದರೆ ಕೊಲೆಸ್ಟ್ರಾಲ್ ಹೆಚ್ಚಾಗುವುದಿಲ್ಲ?

How Many Eggs Should I Eat In A Day: ಮೊಟ್ಟೆಗೂ ಕೊಲೆಸ್ಟ್ರಾಲ್‌ಗೂ ಏನು ಸಂಬಂಧ, ದಿನದಲ್ಲಿ ಹೆಚ್ಚು ಮೊಟ್ಟೆ ತಿನ್ನುವುದರಿಂದ ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚುತ್ತದೆಯೇ, ಅಂತಹ ಕೆಲವು ಪ್ರಶ್ನೆಗಳು ನಿಮ್ಮ ಮನಸ್ಸಿನಲ್ಲಿಯೂ ಇವೆಯೇ? ಇವೆಲ್ಲದಕ್ಕೂ ಉತ್ತರ ಇಲ್ಲಿದೆ.

Written by - Yashaswini V | Last Updated : May 26, 2022, 11:31 AM IST
  • ಆರೋಗ್ಯ ತಜ್ಞರ ಪ್ರಕಾರ ಇಡೀ ಮೊಟ್ಟೆಯಲ್ಲಿ ಕೋಳಿಮಾಂಸದಷ್ಟೇ ಪೋಷಕಾಂಶಗಳಿವೆ.
  • ಇದು ಉತ್ತಮ ಕೊಲೆಸ್ಟ್ರಾಲ್ ಅನ್ನು ಹೊಂದಿದೆ
  • ಉತ್ತಮ ಕೊಲೆಸ್ಟ್ರಾಲ್ ಅನ್ನು ದೇಹದ ಕಾರ್ಯಚಟುವಟಿಕೆಗೆ ಉತ್ತಮವೆಂದು ಪರಿಗಣಿಸಲಾಗುತ್ತದೆ
Egg Eating Benefits: ದಿನಕ್ಕೆ ಎಷ್ಟು ಮೊಟ್ಟೆ ತಿಂದರೆ ಕೊಲೆಸ್ಟ್ರಾಲ್ ಹೆಚ್ಚಾಗುವುದಿಲ್ಲ?   title=
Egg Eating Benefits

ದಿನಕ್ಕೆ ಎಷ್ಟು ಮೊಟ್ಟೆಗಳನ್ನು ತಿನ್ನಬೇಕು: ಮೊಟ್ಟೆಯನ್ನು ಆರೋಗ್ಯಕರ ಆಹಾರ ಎಂದು ಪರಿಗಣಿಸಲಾಗಿದೆ. ಹಾಗಾಗಿಯೇ,  ಪ್ರತಿ ದಿನ ಮೊಟ್ಟೆ ಸೇವಿಸುವಂತೆ ಸಲಹೆ ನೀಡಲಾಗುತ್ತದೆ. ಆದರೆ, ಹೆಚ್ಚು ಮೊಟ್ಟೆ ಸೇವನೆಯು ರಕ್ತನಾಳಗಳಲ್ಲಿ ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸುತ್ತದೆ ಎಂದು ಹಲವರು ನಂಬುತ್ತಾರೆ. ಈ ಕಾರಣದಿಂದಾಗಿ ಕೆಲವರು ಸೂಪರ್ ಫುಡ್ ಎನ್ನಲಾಗುವ ಮೊಟ್ಟೆ ಸೇವನೆಯನ್ನು ತ್ಯಜಿಸಲು ಪ್ರಾರಂಭಿಸುತ್ತಾರೆ. ಆದರೆ, ಇದು ತಪ್ಪು ಕಲ್ಪನೆ. ಮೊಟ್ಟೆಗಳು ಆರೋಗ್ಯಕ್ಕೆ ಉತ್ತಮ ಎಂದು ಪರಿಗಣಿಸಲಾಗಿರುವ ಹಲವು ಅಂಶಗಳನ್ನು  ಒಳಗೊಂಡಿದೆ. ಹಾಗಾಗಿ, ಇದನ್ನು ನಮ್ಮ ಡಯಟ್ನಲ್ಲಿ ಸೇರಿಸುವುದು ಉತ್ತಮ. ಆದರೆ, ಮೊಟ್ಟೆಯಲ್ಲಿ ಯಾವ ಅಂಶಗಳಿವೆ? ಒಂದು ದಿನದಲ್ಲಿ ಎಷ್ಟು ಮೊಟ್ಟೆಗಳನ್ನು ತಿನ್ನುವುದು ಆರೋಗ್ಯಕರ ಎಂಬುದನ್ನು ತಿಳಿಯುವುದು ಸಹ ಅತ್ಯಗತ್ಯ.

ಮೊಟ್ಟೆಯಲ್ಲಿ ಒಳ್ಳೆಯ ಕೊಲೆಸ್ಟ್ರಾಲ್ ಇರುತ್ತದೆ:
ಉತ್ತಮ ಕೊಲೆಸ್ಟ್ರಾಲ್ ಅನ್ನು ದೇಹದ ಕಾರ್ಯಚಟುವಟಿಕೆಗೆ ಉತ್ತಮವೆಂದು ಪರಿಗಣಿಸಲಾಗುತ್ತದೆ, ಇದು ಮೊಟ್ಟೆಗಳಲ್ಲಿ ಉತ್ತಮ ಪ್ರಮಾಣದಲ್ಲಿ ಕಂಡುಬರುತ್ತದೆ. ಆದರೆ ಮತ್ತೊಂದೆಡೆ, ಕೆಟ್ಟ ಕೊಲೆಸ್ಟ್ರಾಲ್ ಅಂದರೆ ಎಲ್‌ಡಿಎಲ್‌ನ ಅತಿಯಾದ ಸೇವನೆಯಿಂದ, ರಕ್ತನಾಳಗಳಲ್ಲಿ ಕೊಬ್ಬು ಸಂಗ್ರಹವಾಗಲು ಪ್ರಾರಂಭಿಸುತ್ತದೆ, ಇದರಿಂದಾಗಿ ಅಧಿಕ ಬಿಪಿ, ಮಧುಮೇಹ ಮತ್ತು ಹೃದಯಾಘಾತದ ಅಪಾಯವು ಉದ್ಭವಿಸುತ್ತದೆ.

ಮೊಟ್ಟೆ ಆರೋಗ್ಯಕ್ಕೆ ಪ್ರಯೋಜನಕಾರಿ:
ಆರೋಗ್ಯ ತಜ್ಞರ ಪ್ರಕಾರ ಇಡೀ ಮೊಟ್ಟೆಯಲ್ಲಿ ಕೋಳಿಮಾಂಸದಷ್ಟೇ ಪೋಷಕಾಂಶಗಳಿವೆ. ಇದು ಉತ್ತಮ ಕೊಲೆಸ್ಟ್ರಾಲ್ ಅನ್ನು ಹೊಂದಿದ್ದು, ಇದು ಜೀವಕೋಶ ಪೊರೆ, ಈಸ್ಟ್ರೊಜೆನ್, ಕಾರ್ಟಿಸೋಲ್ ಮತ್ತು ಟೆಸ್ಟೋಸ್ಟೆರಾನ್ ನಂತಹ ಅಗತ್ಯ ಹಾರ್ಮೋನುಗಳ ಉತ್ಪಾದನೆಗೆ ಸಹಾಯ ಮಾಡುತ್ತದೆ. ದೇಹದಲ್ಲಿ ಇರುವ ಯಕೃತ್ತು ನೈಸರ್ಗಿಕವಾಗಿ ಕೊಲೆಸ್ಟ್ರಾಲ್ ಅನ್ನು ಉತ್ಪಾದಿಸುತ್ತದೆ, ಆದರೆ ನಾವು ಹೆಚ್ಚಿನ ಕೊಲೆಸ್ಟ್ರಾಲ್ ಆಹಾರವನ್ನು ತೆಗೆದುಕೊಂಡಾಗ, ಅದು ದೇಹದಲ್ಲಿ ಕೊಲೆಸ್ಟ್ರಾಲ್ ಪ್ರಮಾಣವನ್ನು ನಿಧಾನಗೊಳಿಸುತ್ತದೆ ಅಥವಾ ಕಡಿಮೆ ಮಾಡುತ್ತದೆ.

ಇದನ್ನೂ ಓದಿ- Weight Loss Mistakes: ಪ್ರತಿದಿನ 5000 ಹೆಜ್ಜೆ ನಡೆದರೂ ತೂಕ ಕಡಿಮೆಯಾಗುತ್ತಿಲ್ಲವೇ? ನೀವೂ ಈ ತಪ್ಪು ಮಾಡುತ್ತೀದ್ದೀರಾ!

ಮೊಟ್ಟೆ ಮತ್ತು ಕೊಲೆಸ್ಟ್ರಾಲ್ ಸಂಬಂಧ:
ಹಳದಿ ಲೋಳೆ ಎಂದು ಕರೆಯಲ್ಪಡುವ ಮೊಟ್ಟೆಯ ಹಳದಿ ಭಾಗವು ಸುಮಾರು 186 ಮಿಗ್ರಾಂ ಕೊಲೆಸ್ಟ್ರಾಲ್ ಅನ್ನು ಹೊಂದಿರುತ್ತದೆ. ಇದು ಸೂಚಿಸಲಾದ ದೈನಂದಿನ ಸೇವನೆಯ ಸುಮಾರು 60 ಪ್ರತಿಶತಕ್ಕಿಂತ ಸ್ವಲ್ಪ ಹೆಚ್ಚು, ಆದರೆ ಮೊಟ್ಟೆಯ ಬಿಳಿಯಲ್ಲಿ ಪ್ರೋಟೀನ್ ಪ್ರಮಾಣವು ಅಧಿಕವಾಗಿರುತ್ತದೆ.

ದಿನಕ್ಕೆ ಎಷ್ಟು ಮೊಟ್ಟೆಗಳನ್ನು ತಿನ್ನಬೇಕು?
ಆರೋಗ್ಯ ತಜ್ಞರನ್ನು ನಂಬುವುದಾದರೆ, ದಿನಕ್ಕೆ ಒಂದು ಮೊಟ್ಟೆಯನ್ನು ತಿಂದರೆ ಸಾಕು, ನೀವು ಮೊಟ್ಟೆಗಳನ್ನು ಅಧಿಕ ಪ್ರಮಾಣದಲ್ಲಿ ಸೇವಿಸುತ್ತಿದ್ದರೆ, ಅದು ಪ್ರತಿಯೊಬ್ಬರ ಮೇಲೆ ವಿಭಿನ್ನ ರೀತಿಯಲ್ಲಿ ಪರಿಣಾಮ ಬೀರುತ್ತದೆ. ಮೊಟ್ಟೆ ತಿನ್ನುವುದರಿಂದ ಕೆಟ್ಟ ಕೊಲೆಸ್ಟ್ರಾಲ್ ಮೇಲೆ ಹೆಚ್ಚು ಪರಿಣಾಮ ಬೀರದಿದ್ದರೂ, ಯಾವುದೇ ಆಹಾರವಾದರೂ ಹಿತ-ಮಿತವಾಗಿದ್ದರೆ ಆರೋಗ್ಯಕರ ಎಂಬುದನ್ನು ನೆನಪಿನಲ್ಲಿಡಿ. ಮೊಟ್ಟೆಯ ರುಚಿ ಬಿಸಿಯಾಗಿರುವುದರಿಂದ ಇದನ್ನು ಅತಿಯಾಗಿ ತಿನ್ನುವುದರಿಂದ ಇತರ ಕೆಲವು ತೊಂದರೆಗಳು ಉಂಟಾಗಬಹುದು.

ಇದನ್ನೂ ಓದಿ- Cholesterol Control Drink: ಈ ಡ್ರಿಂಕ್ಸ್ ಸಹಾಯದಿಂದ ಕೊಲೆಸ್ಟ್ರಾಲ್ ನಿಯಂತ್ರಿಸಬಹುದು

ಈ ಜನರು ಹೆಚ್ಚು ಮೊಟ್ಟೆಗಳನ್ನು ತಿನ್ನಬಹುದು:
ಹೆಚ್ಚು ದೈಹಿಕ ಚಟುವಟಿಕೆಗಳನ್ನು ಮಾಡುವವರು ದಿನಕ್ಕೆ 2 ರಿಂದ 3 ಮೊಟ್ಟೆಗಳನ್ನು ತಿನ್ನಬಹುದು. ಹೆಚ್ಚು ಮೊಟ್ಟೆಗಳನ್ನು ತಿನ್ನುವುದರಿಂದ ಹೃದ್ರೋಗ ಉಂಟಾಗುತ್ತದೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ. ಟೈಪ್ 2 ಡಯಾಬಿಟಿಸ್ ರೋಗಿಗಳು ಪ್ರತಿದಿನ ಸರಾಸರಿ ಒಂದು ಮೊಟ್ಟೆಯನ್ನು ಸೇವಿಸಿದರೆ, ಅವರ ರಕ್ತದಲ್ಲಿನ ಸಕ್ಕರೆ ಮಟ್ಟದಲ್ಲಿ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಹೇಳಲಾಗುತ್ತದೆ.

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ಖಂಡಿತವಾಗಿಯೂ ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News