ಸಾಮಾನ್ಯವಾಗಿ ಜನರಿಗೆ ತಾವು ಕೂತಲ್ಲೇ ಆಗಾಗ್ಗೆ ತಮ್ಮ ಕಿವಿ, ಕಣ್ಣು, ಮೂಗು ಮೊದಲಾದ ಅಂಗಗಳನ್ನು ಮುಟ್ಟಿಕೊಳ್ಳೋದು ಒಂದು ಅಭ್ಯಾಸವಾಗಿಬಿಟ್ಟಿರುತ್ತದೆ. ಆದರೆ ದೇಹದ ಈ 6 ಅಂಗಗಳನ್ನು ಯಾವಾಗಲೂ ಸ್ಪರ್ಶಿಸಬಾರದು ಎಂಬುದರ ಬಗ್ಗೆ ನಿಮಗೆ ಅರಿವಿದೆಯೇ? ನಿಜ ಹೇಳಬೇಕೆಂದರೆ, ಆ ಅಂಗಗಳನ್ನು ಆಗಾಗ್ಗೆ ಮುಟ್ಟಿಕೊಳ್ಳುವುದರಿಂದ ಅನಾರೋಗ್ಯಕ್ಕೆ ಕಾರಣವಾಗುತ್ತದೆ. ಅಷ್ಟೇ ಅಲ್ಲ, ಇದರಿಂದ ಸೋಂಕು ಹರಡುವ ಸಾಧ್ಯತೆಯೂ ಹೆಚ್ಚು. ನಿಮಗೆ ಈ ಅಂಶಗಳ ಬಗ್ಗೆ ಮಾಹಿತಿ ಇಲ್ಲ ಎಂದಾದರೆ ಈ ಲೇಖನವನ್ನು ತಪ್ಪದೇ ಓದಿ...
ಗೊಹಮತ್ ನರ್ಸಿಂಗ್ ಹೋಂನ ನ್ಯೂಟ್ರಿಷನಿಸ್ಟ್ ಅಲಕಾ ಗೊಹಮತ್ ಅವರು, ಸೋಂಕುಗಳು ತಗುಲುವುದರಿಂದ ದೂರವಿರಲು ಈ ಕೆಳಗಿನ ಅಂಶಗಳನ್ನು ಅರಿಯುವುದು ಬಹಳ ಮುಖ್ಯ ಎಂದಿದ್ದಾರೆ. ಹಾಗಿದ್ದರೆ ಬನ್ನಿ, ದೇಹದ ಆ 6 ಪ್ರಮುಖ ಅಂಗಗಳು ಯಾವುವು ಮತ್ತು ಅವುಗಳನ್ನು ಆಗಾಗ್ಗೆ ಸ್ಪರ್ಶಿಸುವುದರಿಂದ ಆಗುವ ದುಷ್ಪರಿಣಾಮಗಳೇನು ಎಂಬುದನ್ನು ತಿಳಿಯೋಣ.
ಕಣ್ಣುಗಳನ್ನು ಉಜ್ಜಬೇಡಿ
ನಾವು ನಮ್ಮ ಕಣ್ಣುಗಳನ್ನು ಆಗಾಗ್ಗೆ ಉಜ್ಜಿಕೊಳ್ಳುತ್ತೇವೆ. ನೋವಾದಾಗಲೋ ಅಥವಾ ಇನ್ಯಾವುದೋ ಸಂದರ್ಭದಲ್ಲಿ ಕಣ್ಣುಗಳನ್ನು ಉಜ್ಜುತ್ತೇವೆ. ಕಣ್ಣು ಬಹಳ ಸೂಕ್ಷ್ಮವಾದ ಅಂಗವಾದ್ದರಿಂದ ಸೋಂಕು ಬೇಗ ಹರಡುತ್ತದೆ. ಒಂದು ವೇಳೆ ನೀವು ಈ ಅಂಗದ ಬಗ್ಗೆ ಕಾಳಜಿ ತೆಗೆದುಕೊಳ್ಳದೆ ಪದೇ ಪದೇ ಮುಟ್ಟಿಕೊಳ್ಳುತ್ತಿದ್ದರೆ ನಿಮ್ಮ ಬೆರಳುಗಳು ಮತ್ತು ಉಗುರುಗಳಲ್ಲಿನ ಕೊಳೆ ಕಣ್ಣುಗಳಿಗೆ ಸೇರಿ ಸುಲಭವಾಗಿ ಸೋಂಕು ಹರಡುತ್ತದೆ. ಇದರಿಂದ ಕಣ್ಣಿನಲ್ಲಿ ತುರಿಕೆ ಕಾಣಿಸಿಕೊಂಡು ದೊಡ್ಡ ಸಮಸ್ಯೆಯಾಗಿ ಪರಿಣಮಿಸುತ್ತದೆ.
ಮುಖವನ್ನು ಪದೇ ಪದೇ ಮುಟ್ಟಿಕೊಳ್ಳಬೇಡಿ
ಪ್ರತಿನಿತ್ಯ ಬೆಳಿಗ್ಗೆ ಎದ್ದ ತಕ್ಷಣ, ಸ್ನಾನ ಮಾಡುವಾಗ ಎಲ್ಲರೂ ಮುಖವನ್ನು ತೊಳೆಯುತ್ತಾರೆ. ಆದರೆ ಕೆಲವರು ತಮ್ಮ ಮುಖ ಎಣ್ಣೆ ತ್ವಚೆಯಿಂದ ಕೂಡಿದೆ ಎಂಬ ಕಾರಣಕ್ಕೆ ಪದೇ ಪದೇ ತಮ್ಮ ಕೈಗಳಿಂದ ಒರೆಸಿಕೊಳ್ಳುತ್ತಾರೆ. ಹೀಗೆ ಮಾಡುವುದರಿಂದ ಮುಖದ ಮೇಲೆ ಮೊಡವೆಗಳಿದ್ದರೆ ಅದು ಮತ್ತಷ್ಟು ಹರಡುತ್ತದೆ. ಮೊಡವೆಯಲ್ಲಿನ ಸೋಂಕು ಮುಖದ ಇತರ ಭಾಗಗಳಿಗೂ ಹರಡಿ ಸೌಂದರ್ಯವನ್ನು ಮತ್ತಷ್ಟು ಹಾಳುಮಾಡುತ್ತದೆ. ಹಾಗಾಗಿ ಎಚ್ಚರಿಕೆಯಿಂದಿರುವುದು ಅಗತ್ಯ.
ಕಿವಿ ಒಳಗೆ ಬೆರಳು ಹಾಕಬೇಡಿ
ಸಾಮಾನ್ಯವಾಗಿ ಜನರು ತಮ್ಮ ಬೆರಳುಗಳಿಂದ ಕಿವಿಗಳನ್ನು ಸ್ವಚ್ಛಗೊಳಿಸಲು ಪ್ರಯತ್ನಿಸುತ್ತಾರೆ. ಮತ್ತೆ ಕೆಲವರು ತಮ್ಮ ಬೈಕ್ ಕೀ ಅಥವಾ ಹೇರ್ಪಿನ್ ಮತ್ತಿತರ ವಸ್ತುಗಳಿಂದ ಕಿವಿ ಸ್ವಚ್ಛಗೊಳಿಸಲು ಪ್ರಯತ್ನಿಸುತ್ತಾರೆ. ಆದರೆ, ಇದು ತುಂಬಾ ಅಪಾಯಕಾರಿ. ಹೀಗೆ ಮಾಡುವಾಗ ಕಿವಿಯೊಳಗೆ ಸ್ವಲ್ಪ ನೋವಾದರೂ ಸಾಕು, ಗಾಯವಾಗಿ ನೋವು ಅನುಭವಿಸಬೇಕಾಗುತ್ತದೆ. ಕಿವಿ ತುಂಬಾ ಸೂಕ್ಷ್ಮ ಅಂಗವಾದ್ದರಿಂದ ಬಹಳ ಜಾಗರೂಕತೆಯಿಂದ ಇರುವುದು ಮುಖ್ಯ.
ಮೂಗಿನೊಳಗೆ ಬೆರಳು ಹಾಕಬೇಡಿ
ಕಣ್ಣುಗಳನ್ನು ಸ್ವಚ್ಛಗೊಳಿಸಲು ಬೆರಳುಗಳನ್ನು ಬಳಸುವಂತೆ, ಮೂಗಿಗೂ ಆಗಾಗ ಬೆರಳು ಹಾಕುವ ಅಭ್ಯಾಸವನ್ನು ಸಾಕಷ್ಟು ಜನ ಹೊಂದಿರುತ್ತಾರೆ. ಮೂಗಿನೊಳಗಿನ ಕೊಳೆ ತೆಗೆಯಲು ಬೆರಳು ಹಾಕಿ ತಿರುವುತ್ತಾರೆ. ಹೀಗೆ ಮಾಡುವಾಗ ಕೈಬೆರಳಿನ ಉಗುರಿನಲ್ಲಿಸುವ ಕೊಳೆ ಮೂಗನ್ನು ಸೇರಿ ಬೇಗ ಸೋಂಕು ಹರಡುವ ಸಾಧ್ಯತೆ ಇದೆ. ಹಾಗಾಗಿ ಮೂಗನ್ನು ಶುಚಿಗೊಳಿಸಲು ಸ್ಯಾನಿಟೈಜ್ ಟಿಶ್ಯೂ ಬಳಸಿ. ಇದನ್ನು ಬಳಸುವುದರಿಂದ ಸೋಂಕುಗಳಿಂದ ದೂರವಿರಬಹುದು.
ಗುದ(Anal)ವನ್ನು ಮುಟ್ಟಿಕೊಳ್ಳಬೇಡಿ
ಮಲ ವಿಸರ್ಜನೆ ಮಾಡುವ ಗುದ ಭಾಗವು ದೇಹದ ಸೂಕ್ಷ್ಮ ಭಾಗಗಳಲ್ಲಿ ಒಂದಾಗಿದ್ದು, ಈ ಭಾಗವನ್ನು ಪದೇ ಪದೇ ಮುಟ್ಟಿಕೊಳ್ಳುವುದರಿಂದ ಕೆಲವು ರೋಗಗಳಿಗೆ ಆಹ್ವಾನ ನೀಡಿದಂತಾಗುತ್ತದೆ. ಏಕೆಂದರೆ ಗುದದಲ್ಲಿ ಬ್ಯಾಕ್ಟೀರಿಯಾ ಪ್ರಮಾಣ ಹೆಚ್ಚಾಗಿರುತ್ತದೆ. ಇದನ್ನು ಮುಟ್ಟುವುದರಿಂದ ಈ ಭಾಗದಲ್ಲಿನ ಬ್ಯಾಕ್ಟೀರಿಯಾಗಳು ಕೈಗೆ ಅಂಟಿಕೊಳ್ಳುತ್ತವೆ. ಹೀಗೆ ಬ್ಯಾಕ್ಟೀರಿಯಾಯುಕ್ತ ಕೈಗಲಿಂಡಾ ದೇಹದ ಇತರ ಅಂಗಗಳನ್ನು ಸ್ಪರ್ಶಿಸುವುದರಿಂದ ಸೋಂಕು ಹರಡುವ ಅಪಾಯ ಹೆಚ್ಚಾಗುತ್ತದೆ.
ಉಗುರಿನ ಒಳ ಭಾಗ
ಉಗುರು ಬೆಳೆಸುವುದು ಇತ್ತೀಚೆಗೆ ಫ್ಯಾಶನ್ ಆಗಿಬಿಟ್ಟಿದೆ. ಅಲ್ಲದೆ, ಉಗುರಿನ ಒಳಭಾಗದಲ್ಲಿ ಸಿಕ್ಕಿಹಾಕಿಕೊಳ್ಳುವ ಕೊಳಕನ್ನು ಶುಚಿಗೊಳಿಸಲು ಕೆಲವರು ನೈಲ್ ಕಟರ್ ಬಳಸುತ್ತಾರೆ. ಆದರೆ ಇದು ಅಪಾಯಕಾರಿ. ಇದರಿಂದ ಶಿಲೀಂಧ್ರಗಳ ಸೋಂಕು ಉಂಟಾಗುವ ಸಾಧ್ಯತೆ ಹೆಚ್ಚು. ಹಾಗಾಗಿ ಆಗಾಗ್ಗೆ ಉಗುರುಗಳನ್ನು ಕತ್ತರಿಸಿ ಶುಚಿಯಾಗಿಟ್ಟುಕೊಳ್ಳಿ.
ಬಾಯಿಗೆ ಪದೇ ಪದೆ ಕೈ ಹಾಕಬೇಡಿ
ಈ ರೀತಿಯ ಅಭ್ಯಾಸ ಸಾಮಾನ್ಯವಾಗಿ ಕಡಿಮೆ ಜನರಲ್ಲಿರುತ್ತದೆ. ಆದರೂ, ಬಾಯಿಗೆ ಪದೇ ಪದೇ ಬೆರಳು ಹಾಕುವುದು, ಮುಟ್ಟಿಕೊಳ್ಳುವುದು ಸಾಕಷ್ಟು ರೋಗಗಳಿಗೆ ಆಹ್ವಾನ ನೀಡಿದಂತೆ. ನೀವು ನಿಮ್ಮ ಕೈಗಳನ್ನು ಚೆನ್ನಾಗಿ ತೊಳೆದಿದ್ದರೂ ಸಹ, ನಿಮ್ಮ ಕೈಯಲ್ಲಿರುವ ಬ್ಯಾಕ್ಟೀರಿಯ ಚರ್ಮಕ್ಕೆ ಅಂಟಿಕೊಂಡಿರುತ್ತದೆ. ಹೀಗಾಗಿ ನೀವು ಬಾಯಿಗೆ ಪದೇ ಪದೇ ಬೆರಳು ಹಾಕುವುದು ಅಥವಾ ಮುಟ್ಟಿಕೊಳ್ಳುವುದನ್ನು ಮಾಡುತ್ತಿದ್ದರೆ ಎಲ್ಲಾ ಬ್ಯಾಕ್ಟೀರಿಯಾಗಳು ಬಾಯಿಯೊಳಗೆ ಹೋಗಿ ಬೇಗ ಆರೋಗ್ಯ ಹದಗೆಡುತ್ತದೆ.