Periods : ಮಹಿಳೆಯರೇ ಗಮನಿಸಿ : ಮುಟ್ಟಿನ ಸಮಯದಲ್ಲಿ ಈ 5 ಆಹಾರಗಳನ್ನ ಸೇವಿಸಬೇಡಿ!

ಕೆಲವೊಮ್ಮೆ ಈ ನೋವು ತೊಡೆಗಳು, ಕಾಲುಗಳು ಮತ್ತು ಸೊಂಟದಲ್ಲಿ ಕೂಡ ಕಂಡು ಬರುತ್ತದೆ. ಆರೋಗ್ಯ ತಜ್ಞರ ಪ್ರಕಾರ, ಹೊಟ್ಟೆ ನೋವಿನ ಸಮಸ್ಯೆ ಸಾಮಾನ್ಯವಾಗಿ ಗರ್ಭಾಶಯದ ಸಂಕೋಚನ ಮತ್ತು ಗರ್ಭಾಶಯದಲ್ಲಿ ರಕ್ತದ ಕೊರತೆಯಿಂದ ಉಂಟಾಗುತ್ತದೆ.

Written by - Channabasava A Kashinakunti | Last Updated : Aug 5, 2021, 10:20 PM IST
  • ಮುಟ್ಟಿನ ಸಮಯದಲ್ಲಿ ಮಹಿಳೆಯರು ತುಂಬಾ ನೋವು ಅನುಭವಿಸುತ್ತಾರೆ
  • ಪಿರಿಯಡ್ಸ್ ಸಮಯದಲ್ಲಿ ಹೆಚ್ಚು ಚಹಾ ಮತ್ತು ಕಾಫಿ ಸೇವಿಸುತ್ತಾರೆ
  • ಪಿರಿಯಡ್ಸ್ ಸಮಯದಲ್ಲಿ, ಜಂಕ್ ಫುಡ್ ಅಥವಾ ಪ್ಯಾಕೆಟ್ ಆಹಾರದಿಂದ ದೂರವಿರಬೇಕು
Periods : ಮಹಿಳೆಯರೇ ಗಮನಿಸಿ : ಮುಟ್ಟಿನ ಸಮಯದಲ್ಲಿ ಈ 5 ಆಹಾರಗಳನ್ನ ಸೇವಿಸಬೇಡಿ! title=

ಮುಟ್ಟಿನ ಸಮಯದಲ್ಲಿ ಮಹಿಳೆಯರು ತುಂಬಾ ನೋವು ಅನುಭವಿಸುತ್ತಾರೆ, ಏಕೆಂದರೆ ಈ ಸಮಯದಲ್ಲಿ ಅಸಹನೀಯ ನೋವು ಮತ್ತು ಸೆಳೆತಗಳು ಹೊಟ್ಟೆಯ ಕೆಳಭಾಗದಲ್ಲಿ ಕಂಡುಬರುತ್ತದೆ. ಕೆಲವೊಮ್ಮೆ ಈ ನೋವು ತೊಡೆಗಳು, ಕಾಲುಗಳು ಮತ್ತು ಸೊಂಟದಲ್ಲಿ ಕೂಡ ಕಂಡು ಬರುತ್ತದೆ. ಆರೋಗ್ಯ ತಜ್ಞರ ಪ್ರಕಾರ, ಹೊಟ್ಟೆ ನೋವಿನ ಸಮಸ್ಯೆ ಸಾಮಾನ್ಯವಾಗಿ ಗರ್ಭಾಶಯದ ಸಂಕೋಚನ ಮತ್ತು ಗರ್ಭಾಶಯದಲ್ಲಿ ರಕ್ತದ ಕೊರತೆಯಿಂದ ಉಂಟಾಗುತ್ತದೆ.

ಕೆಫೀನ್ ನೋವನ್ನು ಹೆಚ್ಚಿಸುತ್ತದೆ :

ಮಹಿಳೆಗೆ ಸಾಕಷ್ಟು ವಿಟಮಿನ್ ಬಿ 6, ಕ್ಯಾಲ್ಸಿಯಂ ಮತ್ತು ಮೆಗ್ನೀಸಿಯಮ್ ಸಿಗದಿದ್ದಾಗ ತೀವ್ರವಾದ ನೋವು(Pain) ಹೆಚ್ಚಾಗುತ್ತದೆ. ಅಲ್ಲದೆ ಒತ್ತಡ ಜೀವನ ಶೈಲಿ, ವ್ಯಾಯಾಮದ ಕೊರತೆ ಮತ್ತು ಅತಿಯಾದ ಕೆಫೀನ್ ಇರುತ್ತದೆ. ಅಂತಹ ಕೆಲವು ವಿಷಯಗಳ ಬಗ್ಗೆ ಇಂದು ನಾವು ನಿಮಗೆ ಮಾಹಿತಿ ನೀಡುತ್ತಿದ್ದೇವೆ, ಈ ಆಹಾರಗಳನ್ನು ಪಿರಿಯಡ್ಸ್ ಸಮಯದಲ್ಲಿ ಸೇವಿಸಬಾರದು. ಏಕೆಂದರೆ ಈ ವಸ್ತುಗಳು ನಿಮ್ಮ ನೋವನ್ನು ಹೆಚ್ಚಿಸುತ್ತವೆ.

ಇದನ್ನೂ ಓದಿ : Yoga for Diabetes : ಮಧುಮೇಹ ರೋಗಿಗಳಿಗೆ 5 ಯೋಗಾಸನಗಳು : ಪ್ರತಿ ಆಸನವು ಸಕ್ಕರೆ ಕಡಿಮೆ ಮಾಡುವ ಶಕ್ತಿ ಹೊಂದಿದೆ!

ಪಿರಿಯಡ್ಸ್ ಸಮಯದಲ್ಲಿ ಈ ಆಹಾರಗಳನ್ನ ಸೇವಿಸಬೇಡಿ :

1. ಹೆಚ್ಚು ಚಹಾ ಮತ್ತು ಕಾಫಿ ಸೇವಿಸಬೇಡಿ

ಆಹಾರ ತಜ್ಞೆ ಡಾ.ರಂಜನಾ ಸಿಂಗ್ ಪ್ರಕಾರ, ಕೆಲವರು ಪಿರಿಯಡ್ಸ್ ಸಮಯದಲ್ಲಿ ಹೆಚ್ಚು ಚಹಾ ಮತ್ತು ಕಾಫಿ(Tea and Coffee) ಸೇವಿಸುತ್ತಾರೆ. ಇದರಲ್ಲಿರುವ ಕೆಫೀನ್ ನಿಮ್ಮ ನೋವನ್ನು ಹೆಚ್ಚಿಸಲು ಕೆಲಸ ಮಾಡುತ್ತದೆ. ಇದರಿಂದಾಗಿ ಹೊಟ್ಟೆಯಲ್ಲಿ ಹೆಚ್ಚು ಗ್ಯಾಸ್ ಶೇಖರಣೆ ಆಗುತ್ತದೆ. ಇದರಿಂದಾಗಿ ನಿಮ್ಮ ನೋವು ಹೆಚ್ಚಾಗಬಹುದು. ಆದ್ದರಿಂದ ಈ ಮಧ್ಯೆ ಚಹಾ ಮತ್ತು ಕಾಫಿಯಿಂದ ದೂರವಿರುವುದು ಒಳ್ಳೆಯದು.

2. ಮದ್ಯ ಅಥವಾ ಮಾದಕ ವಸ್ತುಗಳಿಂದ ದೂರವಿರಿ

ಪಿರಿಯಡ್ಸ್ ಸಮಯದಲ್ಲಿ ಆಲ್ಕೋಹಾಲ್(Alcohol) ಅಥವಾ ಔಷಧಗಳ ಬಳಕೆಯು ಹೊಟ್ಟೆಯ ಕೆಳಭಾಗದಲ್ಲಿ ಊತವನ್ನು ಹೆಚ್ಚಿಸುತ್ತದೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಈ ಕಾರಣದಿಂದಾಗಿ, ನಿಮ್ಮ ನೋವು ಕೂಡ ಹೆಚ್ಚಾಗುತ್ತದೆ. ಆದ್ದರಿಂದ, ಈ ಸಮಯದಲ್ಲಿ ಆಲ್ಕೋಹಾಲ್ ಸೇವಿಸಬೇಡಿ. ನೀವು ಹಣ್ಣಿನ ರಸವನ್ನು ಸೇವಿಸಬಹುದು ಬಹಳ ಉತ್ತಮ.

ಇದನ್ನೂ ಓದಿ : ಖಾಲಿ ಹೊಟ್ಟೆಗೆ ಈ ಹಣ್ಣುಗಳನ್ನು ತಿಂದರೆ ಎದುರಾಗಲಿದೆ ಈ ಸಮಸ್ಯೆ

3. ತಣ್ಣನೆಯ ಆಹಾರ/ ಪಾನೀಯಗಳನ್ನು ಸೇವಿಸಬೇಡಿ 

ಮುಟ್ಟಿನ ಸಮಯ(Periods Time)ದಲ್ಲಿ ಮೊಸರು, ಮಜ್ಜಿಗೆ, ತಂಪು ಪಾನೀಯಗಳು  ಹೀಗೆ ಮುಂತಾದ ತಣ್ಣನೆಯ ಆಹಾರಗಳನ್ನ ಸೇವಿಸಬೇಡಿ . ಇದು ಹೊಟ್ಟೆಯಲ್ಲಿ ಊತವನ್ನು ಹೆಚ್ಚಿಸುತ್ತದೆ ಮತ್ತು ನೋವನ್ನು ಹೆಚ್ಚಿಸುತ್ತದೆ. ಇದರ ಹೊರತಾಗಿ, ಉಪ್ಪಿನಕಾಯಿ, ನಿಂಬೆ ಮತ್ತು ಇತರ ಹುಳಿ ಪದಾರ್ಥಗಳನ್ನು ಸಹ ಸೇವಿಸಬೇಡಿ.

4. ಜಂಕ್ ಫುಡ್ ಅಥವಾ ಪ್ಯಾಕೆಟ್ ಆಹಾರದಿಂದ ದೂರವಿರಿ

ಪಿರಿಯಡ್ಸ್ ಸಮಯದಲ್ಲಿ, ಜಂಕ್ ಫುಡ್(Junk Food) ಅಥವಾ ಪ್ಯಾಕೆಟ್ ಆಹಾರದಿಂದ ದೂರವಿರಬೇಕು. ಈ ಸಮಯದಲ್ಲಿ ದೇಹದಿಂದ ರಕ್ತ ಹೊರಹೋಗುತ್ತದೆ, ಆದ್ದರಿಂದ ದೇಹಕ್ಕೆ ಪೋಷಕಾಂಶಗಳು ಬೇಕಾಗುತ್ತವೆ. ಹಾಗಾಗಿ ಈ ಮಧ್ಯೆ, ಸುಲಭವಾಗಿ ಜೀರ್ಣವಾಗುವಂತಹ ಆರೋಗ್ಯಕರ ಮತ್ತು ಮೆದುವಾದ ಆಹಾರವನ್ನು ಸೇವಿಸಿ.

ಇದನ್ನೂ ಓದಿ : ಮಳೆಗಾಲದಲ್ಲಿ ಯಾವುದೇ ಕಾರಣಕ್ಕೂ ತಿನ್ನಲು ಹೋಗಬೇಡಿ ಈ ಆಹಾರಗಳನ್ನು , ಲಾಭಕ್ಕಿಂತ ನಷ್ಟವೇ ಹೆಚ್ಚು

5. ಚಾಕೊಲೇಟ್ ಅನ್ನು ಹೆಚ್ಚು ಸೇವಿಸಬೇಡಿ

ಚಾಕೊಲೇಟ್(Chocolate) ತಿನ್ನುವುದರಿಂದ ನಿಮ್ಮ ಸೆಳೆತವೂ ಹೆಚ್ಚಾಗುತ್ತದೆ, ಏಕೆಂದರೆ ಕೆಫೀನ್ ಚಾಕೊಲೇಟ್ ನಲ್ಲೂ ಕಂಡುಬರುತ್ತದೆ. ಕೆಫೀನ್ ಸ್ನಾಯುಗಳು ಸಂಕುಚಿತಗೊಳ್ಳಲು ಕಾರಣವಾಗುತ್ತದೆ, ಇದರಿಂದಾಗಿ ಹೊಟ್ಟೆ ನೋವಿನ ಸಮಸ್ಯೆ ಹೆಚ್ಚಾಗುತ್ತದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News