Fruits For Diabetes: ಈ 5 ಬಗೆಯ ಹಣ್ಣುಗಳನ್ನು ಮಧುಮೇಹ ರೋಗಿಗಳು ತಿನ್ನಲೇಬೇಕು

ಮಧುಮೇಹಕ್ಕೆ ಹಣ್ಣುಗಳು: ತರಕಾರಿಗಳಷ್ಟೇ ಹಣ್ಣುಗಳು ಸಹ ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿ ಆಗಿದೆ. ಆದರೆ, ಮಧುಮೇಹಿಗಳಿಗೆ ಎಲ್ಲಾ ಹಣ್ಣುಗಳನ್ನು ಸೇವಿಸುವುದು ಅಪಾಯಕಾರಿ ಎಂದು ಸಾಬೀತುಪಡಿಸಬಹುದು. ಹಾಗಾಗಿ, ಅವರು ಕೆಲವು ಹಣ್ಣುಗಳನ್ನು ಮಾತ್ರ ಸೇವಿಸಬೇಕು. ಪೌಷ್ಟಿಕ ತಜ್ಞರ ಪ್ರಕಾರ, ಮಧುಮೇಹಿಗಳು ತಮ್ಮ ನಿತ್ಯದ ಆಹಾರದಲ್ಲಿ ಈ 5 ವಿಧದ ಹಣ್ಣುಗಳನ್ನು ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಬಹುದು. 

Written by - Yashaswini V | Last Updated : Aug 8, 2022, 08:40 AM IST
  • ಪೇರಲದಲ್ಲಿ ಸೋಡಿಯಂ ಕಡಿಮೆ ಮತ್ತು ಪೊಟ್ಯಾಸಿಯಮ್ ಅಧಿಕವಾಗಿರುತ್ತದೆ
  • ಮಧುಮೇಹಿಗಳಿಗೆ ಇದು ಮುಖ್ಯವಾಗಿದೆ.
  • ಪೇರಲದಲ್ಲಿ ಕಿತ್ತಳೆಗಿಂತ ನಾಲ್ಕು ಪಟ್ಟು ಹೆಚ್ಚು ವಿಟಮಿನ್ ಸಿ ಇದೆ.
Fruits For Diabetes: ಈ 5 ಬಗೆಯ ಹಣ್ಣುಗಳನ್ನು  ಮಧುಮೇಹ ರೋಗಿಗಳು ತಿನ್ನಲೇಬೇಕು  title=
Fruits For Diabetes

ಡಯಾಬಿಟಿಸ್‌ ನಿಯಂತ್ರಣಕ್ಕೆ ಹಣ್ಣುಗಳು: ವೇಗದ ಜೀವನಶೈಲಿಯಿಂದಾಗಿ ಆರೋಗ್ಯ ಸಂಬಂಧಿತ ಸಮಸ್ಯೆಗಳನ್ನು ಉಂಟು ಮಾಡುತ್ತದೆ. ಇಂದಿನ ಯುಗದಲ್ಲಿ, ಮಧುಮೇಹವು ವಿಶ್ವದಲ್ಲಿ ಅಪಾಯಕಾರಿ ಆರೋಗ್ಯ ಸಮಸ್ಯೆಯಾಗಿದೆ. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಕೆಲವು ಮಾರ್ಗಗಳಿವೆ. ಸರಿಯಾದ ಔಷಧಿ ಮತ್ತು ಆರೋಗ್ಯ ರಕ್ಷಣೆ ಅತ್ಯಗತ್ಯವಾದರೂ, ಜೀವನಶೈಲಿಯ ಬದಲಾವಣೆಯು ಮಧುಮೇಹವನ್ನು ನಿಭಾಯಿಸಲು ಸಹಾಯ ಮಾಡುತ್ತದೆ.   ಪೌಷ್ಟಿಕ ತಜ್ಞರ ಪ್ರಕಾರ, ಮಧುಮೇಹಿಗಳು ತಮ್ಮ ನಿತ್ಯದ ಆಹಾರದಲ್ಲಿ ಈ 5 ವಿಧದ ಹಣ್ಣುಗಳನ್ನು ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಬಹುದು ಎಂದು ಹೇಳಲಾಗುತ್ತದೆ. ಅಂತಹ ಹಣ್ಣುಗಳ ಬಗ್ಗೆ ತಿಳಿಯೋಣ...

ಮಧುಮೇಹಿಗಳು ಈ 5 ಹಣ್ಣುಗಳನ್ನು ತಿನ್ನಲೇಬೇಕು: 
1. ಕಿತ್ತಳೆ:

ಸಿಟ್ರಸ್ ಹಣ್ಣು ಮಧುಮೇಹದ ವಿರುದ್ಧ ಅದ್ಭುತವಾಗಿ ಕೆಲಸ ಮಾಡುತ್ತದೆ. ಇದು ವಿಶೇಷವಾಗಿ ಕಡಿಮೆ ಗ್ಲೈಸೆಮಿಕ್ ಸೂಚಿಯನ್ನು ಹೊಂದಿದೆ, ಇದು ಮಧುಮೇಹ ರೋಗಿಗಳಿಗೆ ಪ್ರಯೋಜನಕಾರಿಯಾಗಿದೆ. ಕಿತ್ತಳೆಯಲ್ಲಿ ವಿಟಮಿನ್ ಸಿ, ಫ್ಲೇವನಾಯ್ಡ್ ಉತ್ಕರ್ಷಣ ನಿರೋಧಕಗಳು ಮತ್ತು ಫೈಬರ್ ಸಮೃದ್ಧವಾಗಿದೆ.

2. ಪೇರಳೆ ಹಣ್ಣು / ಸೀಬೆಹಣ್ಣು :
ಸಾಮಾನ್ಯವಾಗಿ ಸೀಬೆಹಣ್ಣು ಎಂದೇ ಪ್ರಸಿದ್ದವಾಗಿರುವ ಪೇರಳೆಯಲ್ಲಿ ಪೊಟ್ಯಾಸಿಯಮ್, ಕ್ಯಾಲ್ಸಿಯಂ ಮತ್ತು ಸತುವು ಸಮೃದ್ಧವಾಗಿದೆ. ಇದನ್ನು ನಾರಿನ ಹಣ್ಣು ಎಂದೂ ಕರೆಯುತ್ತಾರೆ ಮತ್ತು ಆಂಟಿ-ಆಕ್ಸಿಡೆಂಟ್‌ಗಳು ಮತ್ತು ಕ್ಯಾರೊಟಿನಾಯ್ಡ್‌ಗಳನ್ನು ಹೊಂದಿರುತ್ತದೆ. ಕಡಿಮೆ ಗ್ಲೈಸೆಮಿಕ್ ಸೂಚಿಯನ್ನು ಹೊಂದುವುದರ ಜೊತೆಗೆ, ಪೇರಲದಲ್ಲಿ ಸೋಡಿಯಂ ಕಡಿಮೆ ಮತ್ತು ಪೊಟ್ಯಾಸಿಯಮ್ ಅಧಿಕವಾಗಿರುತ್ತದೆ. ಮಧುಮೇಹಿಗಳಿಗೆ ಇದು ಮುಖ್ಯವಾಗಿದೆ. ಪೇರಲದಲ್ಲಿ ಕಿತ್ತಳೆಗಿಂತ ನಾಲ್ಕು ಪಟ್ಟು ಹೆಚ್ಚು ವಿಟಮಿನ್ ಸಿ ಇದೆ.  

ಇದನ್ನೂ ಓದಿ- ಆರೋಗ್ಯಕರ ಹೃದಯಕ್ಕಾಗಿ ನಿಮ್ಮ ಡಯಟ್ನಲ್ಲಿರಲಿ ಈ 4 ಸೂಪರ್‌ಫುಡ್‌ಗಳು

3. ಪಿಯರ್: 
ಪಿಯರ್ ಹಣ್ಣಿನಲ್ಲಿ  ವಿಟಮಿನ್ ಎ, ವಿಟಮಿನ್ ಸಿ, ವಿಟಮಿನ್ ಇ, ವಿಟಮಿನ್ ಬಿ1, ವಿಟಮಿನ್ ಬಿ2, ವಿಟಮಿನ್ ಬಿ3 ಮತ್ತು ವಿಟಮಿನ್ ಬಿ9 ಸಮೃದ್ಧವಾಗಿದೆ. ಪಿಯರ್ ಹಣ್ಣು ಗ್ಲೈಸೆಮಿಕ್ ಸೂಚಿಯನ್ನು ಹೊಂದಿದೆ, ಆದ್ದರಿಂದ ಇದು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ತ್ವರಿತವಾಗಿ ಹೆಚ್ಚಿಸಲು ಅನುಮತಿಸುವುದಿಲ್ಲ.  

4. ಹಸಿರು ಸೇಬು:
ಹಸಿರು ಸೇಬಿನಲ್ಲಿ ಸಕ್ಕರೆಯ ಪ್ರಮಾಣ ಕೆಂಪು ಸೇಬಿಗಿಂತ ಕಡಿಮೆ ಇರುತ್ತದೆ. ವಾಸ್ತವವಾಗಿ, ಕೆಂಪು ಸೇಬಿನಲ್ಲಿ ನೈಸರ್ಗಿಕ ಸಕ್ಕರೆ ಅಂಶ ಹೆಚ್ಚಾಗಿರುವುದರಿಂದ ಇದನ್ನು ಮಧುಮೇಹ ಸಮಸ್ಯೆ ಇರುವವರಿಗೆ ಪ್ರಯೋಜನಕಾರಿ ಎಂದು ಹೇಳಲಾಗುವುದಿಲ್ಲ. ಆದರೆ, ಹಸಿರು ಸೇಬನ್ನು ಮಧುಮೇಹ ರೋಗಿಗಳಿಗೆ ಸೂಪರ್‌ಫುಡ್ ಎಂದು ಪರಿಗಣಿಸಲಾಗುತ್ತದೆ. ಈ ಹಣ್ಣಿನಲ್ಲಿ ಕರಗುವ ಫೈಬರ್, ನಿಯಾಸಿನ್, ಸತು, ಕಬ್ಬಿಣ ಮತ್ತು ಇತರ ಖನಿಜಗಳು ಸಮೃದ್ಧವಾಗಿವೆ, ಇದು ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.  

ಇದನ್ನೂ ಓದಿ- Diabetic Symptoms: ನಿಮ್ಮ ಪಾದಗಳಲ್ಲಾಗುವ ಈ ಬದಲಾವಣೆ ಡಯಾಬಿಟಿಸ್‌ ಮುನ್ಸೂಚನೆ ಇರಬಹುದು

5.  ಬ್ಲ್ಯಾಕ್ ಪ್ಲಮ್/ ಜಾಮೂನ್:
ಮಧುಮೇಹಿಗಳಿಗೆ ಬ್ಲ್ಯಾಕ್ ಪ್ಲಮ್ ಅಂದರೆ ಜಾಮೂನ್ ಹಣ್ಣನ್ನು ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಇದು ವಿಟಮಿನ್ ಎ, ವಿಟಮಿನ್ ಸಿ, ವಿಟಮಿನ್ ಬಿ ಮತ್ತು ವಿಟಮಿನ್ ಡಿ ಯಂತಹ ಪೋಷಕಾಂಶಗಳಲ್ಲಿ ಸಮೃದ್ಧವಾಗಿದೆ, ಇದು ಅಧಿಕ ರಕ್ತದ ಸಕ್ಕರೆಯ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಹೇಳಲಾಗುತ್ತದೆ.

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ಖಂಡಿತವಾಗಿಯೂ ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE ಮೀಡಿಯಾ  ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News