ನವದೆಹಲಿ: ನೀವು ಮಧುಮೇಹಿಗಳಾಗಿದ್ದರೆ ಮತ್ತು ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಣದಲ್ಲಿರದಿದ್ದರೆ, ಪ್ರತಿದಿನ ಈ ಒಂದು ಪದಾರ್ಥ ಸೇವಿಸಬೇಕು. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡುತ್ತದೆ. ಮಧುಮೇಹಕ್ಕೆ ಪ್ರಯೋಜನಕಾರಿಯಾಗಿರುವ ಈ ವಸ್ತು ನಿಮ್ಮ ಅಡುಗೆಮನೆಯಲ್ಲಿಯೇ ಇರುತ್ತದೆ. ಈ ವಸ್ತು ಬೇರೆ ಯಾವುದೂ ಅಲ್ಲ ಮೆಂತ್ಯ.
ಹೌದು, ಮೆಂತ್ಯ ಬೀಜಗಳು ಫೈಬರ್ ಮತ್ತು ಜೀರ್ಣಕ್ರಿಯೆಯನ್ನು ನಿಧಾನಗೊಳಿಸುವ ರಾಸಾಯನಿಕಗಳನ್ನು ಹೊಂದಿರುತ್ತವೆ. ಈ ಕಾರಣದಿಂದಾಗಿ ದೇಹವು ಸಕ್ಕರೆ ಮತ್ತು ಕಾರ್ಬೋಹೈಡ್ರೇಟ್‌ಗಳ ಹೀರಿಕೊಳ್ಳುವಿಕೆಯನ್ನು ಕಡಿಮೆ ಮಾಡಲು ಸಾಧ್ಯವಾಗುತ್ತದೆ. ಮೆಂತ್ಯವನ್ನು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ.
ಇದನ್ನೂ ಓದಿ: Cholesterol: ನಿತ್ಯ ಬೆಳಗ್ಗೆ ಹಳಸಿದ ಬಾಯಿ ನೆನೆಹಾಕಿದ ಈ 5 ಪದಾರ್ಥಗಳನ್ನು ಸೇವಿಸಿ ಕೊಬ್ಬು ಕರಗಿಸಿ
ಮಧುಮೇಹ ರೋಗಿಗಳಿಗೆ ಮೆಂತ್ಯ ಪ್ರಯೋಜನಕಾರಿ
ನ್ಯಾಷನಲ್ ಲೈಬ್ರರಿ ಆಫ್ ಮೆಡಿಸಿನ್‌ನಲ್ಲಿ ಪ್ರಕಟವಾದ ವರದಿಯ ಪ್ರಕಾರ, ಮಧುಮೇಹದ ಚಿಕಿತ್ಸೆಗಾಗಿ ಮೆಂತ್ಯವನ್ನು ಪರೀಕ್ಷಿಸಲಾಗಿದೆ. ಈ ಸಂಶೋಧನೆಯಲ್ಲಿ ಮೆಂತ್ಯ ರೊಟ್ಟಿಯನ್ನು ಬಳಸಲಾಗಿದೆ. ಮಧುಮೇಹ ರೋಗಿಗಳಿಗೆ ಮೆಂತ್ಯ ಹೇಗೆ ಪ್ರಯೋಜನಕಾರಿ ಎಂಬುದರ ಮಾಹಿತಿಯನ್ನು ಈ ಅಧ್ಯಯನವು ಬಹಿರಂಗಪಡಿಸಿದೆ.
ಸಂಶೋಧನೆಯಲ್ಲಿ ಈ ವಿಷಯ ಹೊರಬಿದ್ದಿದೆ
ಸಂಶೋಧನೆಯ ಸಮಯದಲ್ಲಿ ಕೆಲವು ಮಧುಮೇಹ ರೋಗಿಗಳಿಗೆ 2 ತುಂಡು ಮೆಂತ್ಯ ರೊಟ್ಟಿಯನ್ನು ನೀಡಲಾಗಿತ್ತು. ಇದರಲ್ಲಿ 5 ಗ್ರಾಂ ಮೆಂತ್ಯವನ್ನು ನೀಡಲಾಗಿತ್ತು. ನಂತರ ಈ ಜನರ ರಕ್ತದಲ್ಲಿನ ಸಕ್ಕರೆ ಮಟ್ಟ ಮತ್ತು ಇನ್ಸುಲಿನ್ ಅನ್ನು ನಿರಂತರವಾಗಿ 4 ಗಂಟೆಗಳ ಕಾಲ ಪರೀಕ್ಷಿಸಲಾಯಿತು. ಇದಲ್ಲದೇ ಇವರೆಲ್ಲರ ಮತ್ತೊಂದು ಪರೀಕ್ಷೆಯೂ ನಡೆಸಲಾಗಿತ್ತು. ಈ ಪರೀಕ್ಷೆಯಲ್ಲಿ ಸಕ್ಕರೆ ರೋಗಿಗಳಿಗೆ 1 ವಾರ ಸಾಮಾನ್ಯ ರೊಟ್ಟಿ ಮತ್ತು 1 ವಾರ ಮೆಂತ್ಯ ರೊಟ್ಟಿಯನ್ನು ನೀಡಲಾಗಿತ್ತು. ಮೆಂತ್ಯ ರೊಟ್ಟಿ ಸೇವನೆಯಿಂದ ದೇಹದಲ್ಲಿ ಕಾರ್ಬೋಹೈಡ್ರೇಟ್‌ಗಳ ಹೀರಿಕೊಳ್ಳುವಿಕೆ ಕಡಿಮೆ ಮಾಡುತ್ತದೆ ಎಂದು ಸಂಶೋಧನೆಯು ಕಂಡುಕೊಂಡಿದೆ.
ಇದನ್ನೂ ಓದಿ: Hair Care Tips - ತಲೆಹೊಟ್ಟು ಸಮಸ್ಯೆಯಿಂದ ನೀವೂ ತೊಂದರೆಗೊಳಗಾಗಿದ್ದೀರಾ? ಈ ಉಪಾಯ ಅನುಸರಿಸಿ ನೋಡಿ
ಮೆಂತ್ಯದ ನೀರು ಸಹ ಪ್ರಯೋಜನಕಾರಿ
ಮತ್ತೊಂದು ಸಂಶೋಧನೆಯ ಪ್ರಕಾರ 10 ಗ್ರಾಂ ಮೆಂತ್ಯವನ್ನು ಬಿಸಿ ನೀರಿನಲ್ಲಿ ನೆನೆಸಿ ಕುಡಿದರೆ ಟೈಪ್ 2 ಮಧುಮೇಹವನ್ನು ನಿಯಂತ್ರಿಸಬಹುದು. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ ಎಮದು ಹೇಳಲಾಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.