Diabetes: ಮಧುಮೇಹ ನಿಯಂತ್ರಣಕ್ಕೆ ಸೌತೆಕಾಯಿ! ಈ ರೀತಿ ಸೇವಿಸಿ

Cucumber In Diabetes: ಮಧುಮೇಹಿಗಳ ಸಂಖ್ಯೆ ನಿರಂತರವಾಗಿ ಹೆಚ್ಚುತ್ತಿದೆ. ಆದರೆ ಸೌತೆಕಾಯಿಯನ್ನು ಸೇವಿಸುವುದರಿಂದ ಮಧುಮೇಹವನ್ನು ನಿಯಂತ್ರಣದಲ್ಲಿಡಬಹುದು. 

Written by - Chetana Devarmani | Last Updated : Sep 21, 2022, 06:13 PM IST
  • ಮಧುಮೇಹಿಗಳ ಸಂಖ್ಯೆ ನಿರಂತರವಾಗಿ ಹೆಚ್ಚುತ್ತಿದೆ
  • ಮಧುಮೇಹ ನಿಯಂತ್ರಣಕ್ಕೆ ಸೌತೆಕಾಯಿ!
  • ಮಧುಮೇಹಿಗಳು ಸೌತೆಕಾಯಿಯನ್ನು ಈ ರೀತಿ ಸೇವಿಸಬೇಕು
Diabetes: ಮಧುಮೇಹ ನಿಯಂತ್ರಣಕ್ಕೆ ಸೌತೆಕಾಯಿ! ಈ ರೀತಿ ಸೇವಿಸಿ title=
ಸೌತೆಕಾಯಿ

Benefits Of Cucumber In Diabetes: ಮಧುಮೇಹ ರೋಗಿಗಳ ಸಂಖ್ಯೆ ನಿರಂತರವಾಗಿ ಹೆಚ್ಚುತ್ತಿದೆ. ಇತ್ತೀಚಿನ ದಿನಗಳಲ್ಲಿ ತಪ್ಪು ಆಹಾರ ಪದ್ಧತಿ ಮತ್ತು ಕೆಟ್ಟ ಜೀವನಶೈಲಿ ಇದಕ್ಕೆ ಮುಖ್ಯ ಕಾರಣವಾಗಿದೆ. ವಯೋವೃದ್ಧರು ಮಾತ್ರವಲ್ಲ ಇಂದಿನ ದಿನಗಳಲ್ಲಿ ಯುವಕರು ಈ ರೋಗಕ್ಕೆ ಬಲಿಯಾಗುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ರಕ್ತದಲ್ಲಿನ ಸಕ್ಕರೆ ಅಂಶವನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು ಬಹಳ ಮುಖ್ಯ. ಇದನ್ನು ಸಮಯಕ್ಕೆ ಸರಿಯಾಗಿ ನಿಯಂತ್ರಿಸದಿದ್ದರೆ, ಅದು ನಿಮ್ಮ ಆರೋಗ್ಯವನ್ನು ಹಾಳು ಮಾಡುತ್ತದೆ. ಒಂದು ವೇಳೆ ನೀವು ಮಧುಮೇಹಿಗಳಾಗಿದ್ದರೆ ನಿಮ್ಮ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಆದರೆ ಸೌತೆಕಾಯಿ ಸೇವನೆಯಿಂದ ಮಧುಮೇಹವನ್ನು ನಿಯಂತ್ರಣದಲ್ಲಿಡಬಹುದು ಎಂಬುದು ನಿಮಗೆ ತಿಳಿದಿದೆಯೇ? 

ಇದನ್ನೂ ಓದಿ : ಜೀವ ಉಳಿಸಲು ನವಜಾತ ಶಿಶುವನ್ನು 'ಫ್ರೀಜ್' ಮಾಡಿದ ವೈದ್ಯರು!

ಮಧುಮೇಹಿಗಳು ಸೌತೆಕಾಯಿಯನ್ನು ಈ ರೀತಿ ಸೇವಿಸಬೇಕು :

ಸೌತೆಕಾಯಿ ಸೂಪ್ : ಸೌತೆಕಾಯಿ ಸೂಪ್ ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆ. ಇದನ್ನು ಸೇವಿಸಲು, ಮೊದಲು ಸೌತೆಕಾಯಿಯನ್ನು ಕತ್ತರಿಸಿ, ನಂತರ 3 ಚಮಚ ನಿಂಬೆ ರಸ, ಒಂದು ಸಣ್ಣ ಈರುಳ್ಳಿ, ಬೆಳ್ಳುಳ್ಳಿ, ಕಾಲು ಚಮಚ ಆಲಿವ್ ಎಣ್ಣೆ, ಅರ್ಧ ಕಪ್ ಕೊತ್ತಂಬರಿ ಸೊಪ್ಪು, ಒಂದು ಚಮಚ ಜೀರಿಗೆ, ಉಪ್ಪು ಮತ್ತು ಮೆಣಸು ಪುಡಿ ಸೇರಿಸಿ. ಇವೆಲ್ಲವನ್ನೂ ಬ್ಲೆಂಡರ್‌ನಲ್ಲಿ ಮಿಶ್ರಣ ಮಾಡಿ, ನಂತರ ಅದನ್ನು ಒಂದು ಬಟ್ಟಲಿನಲ್ಲಿ ತೆಗೆದುಕೊಳ್ಳಿ. ಈಗ ರುಚಿಗೆ ತಕ್ಕಷ್ಟು ಮೊಸರು ಹಾಕಿ. ಇದನ್ನು ಸೇವಿಸುವುದರಿಂದ ಮಧುಮೇಹ ನಿಯಂತ್ರಣದಲ್ಲಿರುವುದಲ್ಲದೆ, ನಿಮ್ಮ ತೂಕವೂ ನಿಯಂತ್ರಣದಲ್ಲಿರುತ್ತದೆ.

ಸೌತೆಕಾಯಿ ಸಲಾಡ್ : ನಿಮಗೆ ಸೌತೆಕಾಯಿ ಸೂಪ್ ಇಷ್ಟವಿಲ್ಲದಿದ್ದರೆ, ನೀವು ಸೌತೆಕಾಯಿ ಸಲಾಡ್ ಅನ್ನು ಪ್ರತಿದಿನ ಸೇವಿಸಬಹುದು. ಇದನ್ನು ಸೇವಿಸುವುದರಿಂದ ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವು ನಿಯಂತ್ರಣದಲ್ಲಿರುತ್ತದೆ.

ಇದನ್ನೂ ಓದಿ : Home Remedies : ಮುಟ್ಟಿನ ನೋವಿಗೆ ಗರಿಕೆ ಕಷಾಯ! ಇಲ್ಲಿದೆ ಮಾಡುವ ವಿಧಾನ

ಸೌತೆಕಾಯಿ ಕೋಸಂಬರಿ : ನೀವು ಮಧುಮೇಹಿಗಳಾಗಿದ್ದರೆ, ನೀವು ಪ್ರತಿದಿನ ಸೌತೆಕಾಯಿ ಕೋಸಂಬರಿಯನ್ನು ಸೇವಿಸಬೇಕು. ಇದನ್ನು ಮಾಡಲು, ಸೌತೆಕಾಯಿಯನ್ನು ತುರಿದು ಮತ್ತು ಮೊಸರಿನಲ್ಲಿ ಬೆರೆಸಿ, ರುಚಿಗೆ ತಕ್ಕಂತೆ ಕಪ್ಪು ಉಪ್ಪು ಸೇರಿಸಿ. ಪ್ರತಿನಿತ್ಯ ಇದನ್ನು ಸೇವಿಸುವುದರಿಂದ ಮಧುಮೇಹ ನಿಯಂತ್ರಣದಲ್ಲಿದ್ದು ನಿಮ್ಮ ತೂಕವೂ ಕಡಿಮೆಯಾಗುತ್ತದೆ.

(Disclaimer: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ದಯವಿಟ್ಟು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News