Coronavirus: ಲಸಿಕೆ ತಯಾರಿಸಲು ಮುಂದಾದ ಭಾರತೀಯ ವಿಜ್ಞಾನಿಗಳು

Coronavirus Vaccine: ಭಾರತದಲ್ಲಿ ಲಸಿಕೆ ತಯಾರಿಕೆಗೆ ಹೆಸರುವಾಸಿಯಾಗಿರುವ ಸರ್ವೋಚ್ಛ ಸಂಸ್ಥೆ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಇಮ್ಯೂನೋಲಾಜಿ (NII) ಸಾವಾಲಾಗಿ ಪರಿಣಮಿಸಿರುವ ಈ ಪ್ರಾಜೆಕ್ಟ್ ಅನ್ನು ಪೂರ್ಣಗೊಳಿಸಲು ದೇಶದ ಟಾಪ್ 10 ವಿಜ್ಞಾನಿಗಳ ತಂಡವನ್ನು ರಚಿಸಿದೆ.

Last Updated : Mar 28, 2020, 03:04 PM IST
Coronavirus: ಲಸಿಕೆ ತಯಾರಿಸಲು ಮುಂದಾದ ಭಾರತೀಯ ವಿಜ್ಞಾನಿಗಳು title=

ವಿಶ್ವಾಧ್ಯಂತ ಅಪಾರ ಹಾನಿ ಉಂಟು ಮಾಡಿರುವ ಕೊರೊನಾ ವೈರಸ್ ಸೋಂಕಿನ ವಿರುದ್ಧ ಯುದ್ಧವನ್ನೇ ಸಾರಿರುವ ಭಾರತೀಯ ವಿಜ್ಞಾನಿಗಳು ಈ ಸೋಂಕಿಗೆ ವ್ಯಾಕ್ಸೀನ್ ತಯಾರಿಸಲು ಹಗಲು-ರಾತ್ರಿ ತೊಡಗಿದ್ದಾರೆ. ಭಾರತದಲ್ಲಿ ಲಸಿಕೆ ತಯಾರಿಕೆಗೆ ಹೆಸರುವಾಸಿಯಾಗಿರುವ ಸರ್ವೋಚ್ಛ ಸಂಸ್ಥೆ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಇಮ್ಯೂನೋಲಾಜಿ (NII) ಸವಾಲಾಗಿ ಪರಿಣಮಿಸಿರುವ ಈ ಪ್ರಾಜೆಕ್ಟ್ ಅನ್ನು ಪೂರ್ಣಗೊಳಿಸಲು ದೇಶದ ಟಾಪ್ 10 ವಿಜ್ಞಾನಿಗಳ ತಂಡವನ್ನು ರಚಿಸಿದೆ.

ಜೀವನವನ್ನು ರಕ್ಷಿಸುವ ಹಲವು ಲಸಿಕೆಗಳ ಅಭಿವೃದ್ಧಿಯಲ್ಲಿ ತನ್ನ ಕೊಡುಗೆ ನೀಡಿರುವ NII ನ ನಿರ್ದೇಶಕರಾಗಿರುವ ಡಾ. ಅಮೂಲ್ಯ ಕೆ. ಪಾಂಡಾ ಹೇಳುವ ಪ್ರಕಾರ, "ಇದು ನನ್ನ ವೃತ್ತಿಜೀವನದ ಅತ್ಯಂತ ಕಠಿಣ ಸವಾಲಾಗಿದೆ. ನಾವೆಲ್ಲರೂ ಈ ಅಪಾಯಕಾರಿ ವೈರಸ್ ನಿಂದ ಹರಡುವ ರೋಗಕ್ಕೆ ಪರಿಹಾರ ಕಂಡುಕೊಳ್ಳಲು ಹಗಲು-ರಾತ್ರಿ ಶ್ರಮಿಸುತ್ತಿದ್ದು, ಲಸಿಕೆ ತಯಾರಿಸುವ ಕಾರ್ಯ ಪ್ರಗತಿಯಲ್ಲಿದೆ ಎಂದು ಹೇಳಿದ್ದಾರೆ.

ಪಾಂಡಾ ಅವರ ತಂಡ ಈ ಮೊದಲೂ ಕೂಡ ಕ್ಯಾನ್ಸರ್ ನಂತಹ ಮಾರಕ ಕಾಯಿಲೆಗೆ ಲಸಿಕೆಯನ್ನು ಸಿದ್ಧಪಡಿಸಿದ್ದು, ಈ ಲಸಿಕೆಯ ಟ್ರಯಲ್ ಚೆನ್ನೈನಲ್ಲಿ ಅಂತಿಮ ಹಂತದಲ್ಲಿದೆ ಎಂದು ಹೇಳಿದ್ದಾರೆ. IANS ನಲ್ಲಿ ಪ್ರಕಟಗೊಂಡ ಒಂದು ವರದಿಯ ಪ್ರಕಾರ NII ಈ ಮೊದಲು ಲೆಪ್ರೋಸಿ ಹಾಗೂ TB ಕಾಯಿಲೆಗೆ ಲಸಿಕೆಯನ್ನು ಅಭಿವೃದ್ಧಿಗೊಳಿಸಿದ್ದು, ವಿಶ್ವಾದ್ಯಂತ ಇದು ಭಾರಿ ಮನ್ನಣೆಗೆ ಪಾತ್ರವಾಗಿದೆ. NIIನ ಮುಖ್ಯ ಕಚೇರಿ ನವದೆಹಲಿಯಲ್ಲಿದ್ದು, ಇದು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ಅರಿ ತನ್ನ ಕಾರ್ಯ ನಿರ್ವಹಿಸುತ್ತದೆ. ಇದು ವಿಶ್ವ ಆರೋಗ್ಯ ಸಂಸ್ಥೆ ಜೊತೆಗೂ ಕೂಡ ಕೆಲಸ ಮಾಡುತ್ತದೆ.

COVID-19ಗೆ ಲಸಿಕೆ ಅಭಿವೃದ್ಧಿಯ ಕುರಿತು ಮೊಟ್ಟಮೊದಲ ಬಾರಿಗೆ ಮಾಹಿತಿ ಬಹಿರಂಗಗೊಳಿಸಿರುವ ಪಾಂಡಾ, ಇದಕ್ಕಾಗಿ ಒಂದು ಕೋರ್ ಟೀಂ ರಚಿಸಲಾಗಿದ್ದು, ಇದರಲ್ಲಿ ವಿಭಿನ್ನ ಕ್ಷೇತ್ರದ ತಜ್ಞರು ಶಾಮೀಲಾಗಿದ್ದಾರೆ ಎಂದು ಹೇಳಿದ್ದಾರೆ. ಈ ತಂಡ ಲಸಿಕೆ ತಯಾರಿಸಲು ಒಂದು ಸುದೀರ್ಘ ಸಂಶೋಧನೆ ನಡೆಸಲಿದೆ ಎಂದಿದ್ದಾರೆ. ದೇಶ ಸೇವೆಗಾಗಿ ಸಮರ್ಪಿತವಾಗಿರುವ NIA, ಸಂಕಷ್ಟದ ಈ ಸಂದರ್ಭದಲ್ಲಿ ಲಸಿಕೆ ತಯಾರಿಸಲು ಹಗಲು-ರಾತ್ರಿ ಎನ್ನದೆ ಶ್ರಮಿಸುತ್ತಿದೆ. COVID-19 ಚಿಕಿತ್ಸೆಗಾಗಿ ಲಸಿಕೆ ಅಥವಾ ಔಷಧಿ ವಿಕಸಿತಗೊಳಿಸುವುದಾಗಲಿ ಅಥವಾ ಔಷಧಿ ರೀತಿಯ ಕ್ಲೋರೋಕ್ವಿನ್ ತಯಾರಿಸುವುದಾಗಲಿ ವಿಜ್ಞಾನಿಗಳು ಇದಕ್ಕಾಗಿ ಸಾಕಷ್ಟು ಶ್ರಮಿಸುತ್ತಿದ್ದಾರೆ.  

IIT ಚೆನ್ನೈ ಮೂಲಕ M.Tech ಹಾಗೂ IIT ದೆಹಲಿ ಮೂಲಕ ಡಾಕ್ಟರೇಟ್ ಪದವಿ ಪಡೆದಿರುವ ಪಾಂಡಾ,  ಭಾರತದಲ್ಲಿ ಈ ಮಾರಕ ವೈರಸ್ ನಿಂದ ಹಲವು ಜನರು ಗುಣಮುಖರಾಗಿದ್ದಾರೆ ಎಂದಿದ್ದು, ಅವರ ಆಂಟಿ ಬಾಡಿಗಳು ಯಾವರೀತಿ ವೈರಸ್ ಅನ್ನು ಎದುರಿಸಿವೆ ಎಂಬುದನ್ನು ನಾವು ಅಧ್ಯಯನ ನಡೆಸಲಿದ್ದೇವೆ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲ ಇದೇ ರೀತಿ  ನಾವು ವೈರಸ್ ನ ಪ್ರಕಾರದ ಕುರಿತು ಕೊಡ ಅಧ್ಯಯನ ನಡೆಸುವೆವು, ಇಟಲಿ ಅಥವಾ ಜರ್ಮನಿ ಅಥವಾ ಚೀನಾದಿಂದ ಹೊರ ಹೊಮ್ಮಿದ ಟ್ರೆಂಡ್ ಗಳು ವಿಭಿನ್ನವಾಗಿರುವ ಸಾಧ್ಯತೆ ಕೂಡ ಇದೆ. ಆದರೆ ಸದ್ಯ ಈ ಕುರಿತು ಏನನ್ನು ಹೇಳುವುದು ತುಂಬಾ ಕಠಿಣವಾಗಿದೆ ಎಂದು ಅವರು ಹೇಳಿದ್ದಾರೆ.

ಲಸಿಕೆ ಅಭಿವೃದ್ಧಿಯ ಕುರಿತು ಮಾತನಾಡಿರುವ ಪಾಂಡಾ, "ಯಾವುದೇ ಒಂದು ಲಸಿಕೆ ತಯಾರಿಸುವಾಗ ಅದನ್ನು ಒಟ್ಟು ಮೂರು ಹಂತದಲ್ಲಿ ತಯಾರಿಸಲಾಗುತ್ತದೆ. ಲಸಿಕೆ ಅಭಿವೃದ್ಧಿಗೊಂಡ ಬಳಿಕ ಮೊದಲು ಇದನ್ನು ಇಲಿಗಳ ಮೇಲೆ ಪರೀಕ್ಷೆ ನಡೆಸಲಾಗುತ್ತದೆ. ಬಳಿಕ ಅದನ್ನು ಮೊಲದ ಮೇಲೆ ಪರೀಕ್ಷಿಸಲಾಗುತ್ತದೆ ನಂತರ ಕೊನೆಯ ಹಂತದಲ್ಲಿ ಇದನ್ನು ಮನುಷ್ಯರ ಮೇಲೆ ಟೆಸ್ಟ್ ನಡೆಸಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.

ಕೊರೋನಾವೈರಸ್ ನ ವಿಚಿತ್ರ ವ್ಯವಹಾರದ ಕುರಿತು ಹೇಳುವ ಪಾಂಡಾ, "ಬಹುತೇಕ ವೈರಸ್ ಗಳ ರಚನೆ ನಿರ್ಧಿಷ್ಟವಾಗಿರುತ್ತದೆ. ಆದರೆ, ಕೊರೊನಾ ವೈರಸ್ ವಿಷಯದಲ್ಲಿ ಈ ವೈರಸ್ ತನ್ನ ಸಂರಚನೆಯನ್ನು ಪದೇ ಪದೇ ಬದಲಿಸುತ್ತಿದೆ ಎಂಬುದು ಪ್ರಾಥಮಿಕವಾಗಿ ಹೇಳಬಹುದು ಹಾಗೂ ಇಂತಹ ಪರಿಸ್ಥಿತಿಯಲ್ಲಿ ಲಸಿಕೆ ಸಿದ್ಧಪಡಿಸುವುದು ಸುಲಭದ ಕೆಲಸವಲ್ಲ ಎಂದು ಹೇಳಿದ್ದಾರೆ. ಇದು ಪೋಲಿಯೋ ಮಾದರಿಯ ವೈರಸ್ ಅಲ್ಲ ಎನ್ನುವ ಪಾಂಡಾ, ಪೋಲಿಯೋ ವೈರಸ್ ನ ಲಸಿಕೆ ಒಂದು ವರ್ಷದವರೆಗೆ ಕಾರ್ಯನಿರ್ವಹಿಸುತ್ತದೆ. ಕೊರೊನಾ ವೈರಸ್ ಗೆ ಲಸಿಕೆ ವಿಕಸಿತಗೊಳಿಸುವುದು ಒಂದು ಸವಾಲಿನ ಕೆಲಸವಾಗಿದ್ದು, ಇದಕ್ಕೆ ಸಮಯಾವಕಾಶ ಬೇಕಾಗಲಿದೆ. ಈ ಕಾರ್ಯಕ್ಕಾಗಿ ನಮಗೆ ICMR ಹಾಗೂ ಇತರೆ ಸರ್ಕಾರಿ ಸಂಸ್ಥೆಗಳ ಸಹಯೋಗ ಲಭಿಸುತ್ತಿದೆ ಎಂದು ಪಾಂಡಾ ಹೇಳಿದ್ದಾರೆ. 

Trending News