Coronavirus New Double Mutant Wave In India: ಭಾರತದಲ್ಲಿ ಡಬಲ್ ರೂಪಾಂತರಿ ಕೊರೊನಾ ಅಲೆ, ಎಷ್ಟು ಅಪಾಯಕಾರಿ?

Coronavirus New Double Mutant Wave In India - ಪೆಬ್ರುವರಿ 2021ಹೋಲಿಕೆಯಲ್ಲಿ ಮಾರ್ಚ್ 2021 ಸೋಂಕಿತರ ಸಂಖ್ಯೆ ಐದು ಪಟ್ಟು ಹೆಚ್ಚಾಗಿರುವುದೇ ಈ ಡಬಲ್ ರೂಪಾಂತರಿ ಕೊರೊನಾ ವೈರಸ್ ನ ಅಪಾಯಕ್ಕೆ ಹಿಡಿದ ಕನ್ನಡಿ ಎಂದು ತಜ್ಞರು ಹೇಳಿದ್ದಾರೆ.

Written by - Nitin Tabib | Last Updated : Mar 25, 2021, 11:24 AM IST
  • ಕಳೆದ 5 ದಿನಗಳಲ್ಲಿ ದೈನಂದಿನ ಕೊರೊನಾ ಪ್ರಕರಣಗಳ ಸಂಖ್ಯೆ 40 ಸಾವಿರಕ್ಕೂ ಅಧಿಕ.
  • ದೈನಂದಿನ ಪ್ರಕರಣಗಳ ಜೊತೆಗೆ ಸಾವಿನ ಪ್ರಮಾಣದಲ್ಲಿ ಕೂಡ ಹೆಚ್ಚಳ.
  • ಫೆಬ್ರುವರಿ 2021ರ ಹೋಲಿಕೆಯಲ್ಲಿ ಮಾರ್ಚ್ 2021ರಲ್ಲಿ ಪ್ರಕರಣಗಳ ಸಂಖ್ಯೆ ಐದು ಪಟ್ಟು ಹೆಚ್ಚಾಗಿದೆ.
Coronavirus New Double Mutant Wave In India: ಭಾರತದಲ್ಲಿ ಡಬಲ್ ರೂಪಾಂತರಿ ಕೊರೊನಾ ಅಲೆ, ಎಷ್ಟು ಅಪಾಯಕಾರಿ? title=
Coronavirus New Double Mutant Wave In India (File Photo)

ನವದೆಹಲಿ:  Coronavirus New Double Mutant Wave In India - ಮಹಾರಾಷ್ಟ್ರ ಸೇರಿದಂತೆ ದೇಶದ ಇತರೆ ರಾಜ್ಯಗಳಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆಯಲ್ಲಿ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತಿದ್ದು, ಕೇಂದ್ರ ಸರ್ಕಾರ ಇದನ್ನು ಕೊರೊನಾ ವೈರಸ್ ನ ಎರಡನೇ ಅಲೆಯ ಆರಂಭ ಎಂದು ಹೇಳಿದೆ. ಫೆಬ್ರುವರಿ ಹಾಗೂ ಮಾರ್ಚ್ ನಲ್ಲಿ ಕೊವಿಡ್ 19 ದೈನಂದಿನ ಪ್ರಕರಣಗಳು ಹಾಗೂ ಸಾವಿನ ಸಂಖ್ಯೆಗಳಲ್ಲಿ ನಿರಂತರ ಏರಿಕೆಯನ್ನು ಗಮನಿಸಲಾಗುತ್ತಿದೆ ಹಾಗೂ ಇದೀಗ ಈ ಸಂಖ್ಯೆಗಳು ಭಯ ಹುಟ್ಟಿಸಲಾರಂಭಿಸಿವೆ. ಕಳೆದ ಐದು ದಿನಗಳಿಂದ ನಿತ್ಯ 40 ಸಾವಿರಕ್ಕೂ ಅಧಿಕ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಕೊರೊನಾ ವೈರಸ್ ನ ಈ ಎರಡನೇ ಅಲೆ ಎಷ್ಟೊಂದು ಅಪಾಯಕಾರಿಯಾಗಿದೆ ಎಂದರೆ, ಫೆಬ್ರುವರಿ 2021 ರ ಹೋಲಿಕೆಯಲ್ಲಿ ಮಾರ್ಚ್ 2021 ರಲ್ಲಿ ಪ್ರಕರಣಗಳ ಸಂಖ್ಯೆ ಐದು ಪಟ್ಟು ಹೆಚ್ಚಾಗಿದೆ. 

ಮೇ 2020 ರ ಬಳಿಕ ದೈನಂದಿನ ಪ್ರಕರಣಗಳ ಸಂಖ್ಯೆಯಲ್ಲಿ ವೇಗದ ವೃದ್ಧಿ
ಹಿಂದೂಸ್ತಾನ್ ಟೈಮ್ಸ್ ನಲ್ಲಿ ಪ್ರಕಟಗೊಂಡ ವರದಿಯ ಪ್ರಕಾರ ಭಾರತದಲ್ಲಿ ಕೊರೊನಾ ವೈರಸ್ ನ ದೈನಂದಿನ ಪ್ರಕರಣಗಳ ವೇಗ ಮೇ 2020 ರಲ್ಲಿ ಅತಿ ಹೆಚ್ಚಾಗಿತ್ತು. ಕಳೆದ ಒಂದು ವಾರದಲ್ಲಿ ಭಾರತದಲ್ಲಿ ಪ್ರತಿ ದಿನ ಸರಾಸರಿ 42162 ಹೊಸ ಪ್ರಕರಣಗಳು ಬೆಳಕಿಗೆ ಬಂದಿವೆ. ನವೆಂಬರ್ 28, 2029 ರ ಬಳಿಕದ ಅತಿ ಹೆಚ್ಚಿನ ಸಾಪ್ತಾಹಿಕ ಸಂಖ್ಯೆ ಇದಾಗಿದೆ. ಕಳೆದ ವಾರ ಈ ಸಂಖ್ಯೆ 25735 ರಷ್ಟಿತ್ತು. ಕಳೆದ ವಾರದ ಹೋಲಿಕೆಯಲ್ಲಿ ಈ ವಾರ ಪ್ರತಿ ತಿನ ಶೇ.7.7ರಷ್ಟು ಹೆಚ್ಚು ಹೊಸ ಪ್ರಕರಣಗಳನ್ನು ಗಮನಿಸಲಾಗಿದೆ. ಭಾರತದಲ್ಲಿ ಕೊವಿಡ್ 19 ನ ದೈನಂದಿನ ಪ್ರಕರಣಗಳು ಕೇವಲ 11 ದಿನಗಳಲ್ಲಿ 20 ಸಾವಿರದಿಂದ 42 ಸಾವಿರಕ್ಕೆ ತಲುಪಿವೆ. ಮೊದಲ ಅಲೆಯ ಅವಧಿಯಲ್ಲಿ ಜುಲೈ 3 ಹಾಗೂ ಜುಲೈ 24 ರ ನಡುವೆ ಈ ವೇಗ ಗಮನಿಸಲಾಗಿತ್ತು.

ಕೊರೊನಾದಿಂದ ಆಗುತ್ತಿರುವ ಸಾವಿನ ಸಂಖ್ಯೆಯಲ್ಲಿ ಏರಿಕೆ
ದೇಶದಲ್ಲಿ ದೈನಂದಿನ ಕೊರೊನಾವೈರಸ್ ಪ್ರಕರಣಗಳ ಹೊರತಾಗಿ, ಸಾವಿನ ಸಂಖ್ಯೆಯೂ ಹೆಚ್ಚಾಗಿದೆ ಮತ್ತು ಕಳೆದ ವಾರದಲ್ಲಿ ಪ್ರತಿದಿನ ಸರಾಸರಿ 199 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಒಂದು ವಾರದ ಹಿಂದೆ, ಪ್ರತಿದಿನ ಸರಾಸರಿ 140 ಜನರು ಪ್ರಾಣ ಕಳೆದುಕೊಂಡಿದ್ದು ಮತ್ತು ಇದು ಸರಾಸರಿ ಶೇ. 5.1 ರಷ್ಟು ಹೆಚ್ಚಾಗಿದೆ. ಇದು 22 ಜೂನ್ 2020 ರ ನಂತರದ ಅತಿ ಹೆಚ್ಚು ಸಾವಿನ ಸಂಖ್ಯೆಯಲ್ಲಿನ ಬೆಳವಣಿಗೆಯಾಗಿದೆ.

ಅಮೇರಿಕಾ, ಬ್ರೆಜಿಲ್ ಅನ್ನು ಕೂಡ ಭಾರತ ಹಿಂದಿಕ್ಕುವ ಸಾಧ್ಯತೆ
ಪ್ರಸ್ತುತ, ಭಾರತದಲ್ಲಿ ಕರೋನಾ ವೈರಸ್ ಪ್ರಕರಣಗಳು ಹೆಚ್ಚಾಗುತ್ತಿವೆ, ಇದನ್ನು ಇಲ್ಲಿಗೆ ನಿಲ್ಲಿಸದಿದ್ದರೆ, ಭಾರತದ ದರವು ಮಾರ್ಚ್ 27 ರ ವೇಳೆಗೆ ಯುಎಸ್ ಮತ್ತು ಏಪ್ರಿಲ್ 2 ರ ವೇಳೆಗೆ ಬ್ರೆಜಿಲ್ ಅನ್ನು ಹಿಂದಿಕ್ಕುವ ಸಾಧ್ಯತೆ ಇದೆ ಎಂದು ವರ್ತಿಸಲಾಗುತ್ತಿದೆ. ಪ್ರಸ್ತುತ ಬ್ರೆಜಿಲ್ ಕೋವಿಡ್‌ನ ವಿಶ್ವದ ಅತಿದೊಡ್ಡ ಹಾಟ್‌ಸ್ಪಾಟ್ ಆಗಿದ್ದು, ಪ್ರತಿದಿನ ಸರಾಸರಿ 75570 ಹೊಸ ಪ್ರಕರಣಗಳು ಅಲ್ಲಿ ಕಂಡುಬರುತ್ತಿವೆ. ಕಳೆದ ವಾರ ಯುಎಸ್ನಲ್ಲಿ ಪ್ರತಿದಿನ ಸರಾಸರಿ 54141 ಹೊಸ  ಕೋವಿಡ್ -19 ಪ್ರಕರಣಗಳು ವರದಿಯಾಗಿದೆ.

ಇದನ್ನೂ ಓದಿ-Covid-19 Vaccine: Covishield Vaccineನ ಎರಡು ಪ್ರಮಾಣಗಳ ನಡುವಿನ ಅಂತರ ಕೇಂದ್ರ ಸರ್ಕಾರ 8 ವಾರಕ್ಕೆ ಹೆಚ್ಚಿಸಿದ್ಯಾಕೆ ಗೊತ್ತಾ?

ಕಳೆದ 24 ಗಂಟೆಗಳಲ್ಲಿ 53 476 ಹೊಸ ಪ್ರಕರಣಗಳು ಪತ್ತೆ
ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಗುರುವಾರ ಬಿಡುಗಡೆಗೊಳಿಸಿರುವ ಅಂಕಿ ಅಂಶಗಳ ಪ್ರಕಾರ, ಕಳೆದ 24 ಗಂಟೆಗಳಲ್ಲಿ 53476 ಹೊಸ ಕರೋನಾ ವೈರಸ್ ಪ್ರಕರಣಗಳು ವರದಿಯಾಗಿವೆ, ಆದರೆ ಈ ಅವಧಿಯಲ್ಲಿ 251 ಜನರು ಸಾವನ್ನಪ್ಪಿದ್ದಾರೆ. ಇದರ ನಂತರ, ದೇಶದಲ್ಲಿ ಒಟ್ಟು ಸೋಂಕಿತ ಕೋವಿಡ್ -19 ಸಂಖ್ಯೆ 1 ಕೋಟಿ 17 ಲಕ್ಷ 87 ಸಾವಿರ 534 ಕ್ಕೆ ತಲುಪಿದೆ ಮತ್ತು ಸಾವಿನ ಸಂಖ್ಯೆ 1 ಲಕ್ಷ 60 ಸಾವಿರ 692 ಕ್ಕೆ ತಲುಪಿದೆ. ಕಳೆದ 24 ಗಂಟೆಗಳಲ್ಲಿ, 26,490 ಜನರನ್ನು ಗುಣಪಡಿಸಲಾಗಿದ್ದು, ಒಟ್ಟು ಗುಣಮುಖರಾದವರ ಸಂಖ್ಯೆ 1 ಕೋಟಿ 12 ಲಕ್ಷ 31 ಸಾವಿರ 650 ಕ್ಕೆ ತಲುಪಿದೆ.

ಇದನ್ನೂ ಓದಿ-Big Relief! ಕೊರೊನಾ ಎರಡನೇ ಅಲೆಯ ನಡುವೆ 'ಆರೋಗ್ಯ ಸಂಜೀವನಿ' ವಿಮೆಯ ಹೆಲ್ತ್ ಕವರ್ 10 ಲಕ್ಷ ರೂ.ಗಳಿಗೆ ಹೆಚ್ಚಳ

ಎರಡನೇ ಅಲೆಯಲ್ಲಿ ಜನರ ಸಾವನ್ನಪ್ಪುವ ದರ ಕಡಿಮೆಯಾಗಿದೆಯೇ?
ಮಂಗಳವಾರ ರಾತ್ರಿಯವರೆಗೆ ದೇಶಾದ್ಯಂತ ಇರುವ 1 ಕೋಟಿ 15 ಲಕ್ಷ 54 ಸಾವಿರ 894 ಕರೋನಾ ಸೋಂಕಿತ ಜನರಲ್ಲಿ ಒಟ್ಟು 1 ಲಕ್ಷ 59 ​​ಸಾವಿರ 615 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಕರೋನಾ ವೈರಸ್‌ನಿಂದ ಉಂಟಾಗುವ ಸಾವಿನ ಪ್ರಮಾಣ ಭಾರತದಲ್ಲಿ ಶೇಕಡಾ 1.4 ರಷ್ಟಿದೆ. ಅಕ್ಟೋಬರ್ 2020 ರಿಂದ ಈ ದರ ಹಾಗೇ ಉಳಿದಿದೆ. ಆದಾಗ್ಯೂ, ಸೋಂಕು ಪ್ರಾರಂಭದ ನಂತರ, ಇದು ಸ್ಥಿರವಾಗಿ ಸುಧಾರಿಸಿದೆ. ಕಳೆದ ವರ್ಷ ಜೂನ್ ಅಂತ್ಯದ ವೇಳೆಗೆ, ಸಾವಿನ ಪ್ರಮಾಣವು ಶೇಕಡಾ 3 ರಷ್ಟಿತ್ತು, ಇದನ್ನು ಸೆಪ್ಟೆಂಬರ್‌ನಲ್ಲಿ ಶೇ. 1.6 ಇಳಿಕೆಯಾಗಿತ್ತು. ಕಳೆದ ಆರು ತಿಂಗಳಲ್ಲಿ ಕರೋನಾದ ಸಾವಿನ ಪ್ರಮಾಣ ಶೇಕಡಾ 1.1 ರಷ್ಟಿದೆ.

ಇದನ್ನೂ ಓದಿ-Guvava Leaves Tea: ಪೇರಳೆ ಹಣ್ಣಿನ ಎಳೆಗಳ ಈ ಪೇಯ ಬೊಜ್ಜು ನಿವಾರಕ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News