ಚಾಮರಾಜನಗರದ ಗಡಿ ಗ್ರಾಮಗಳಲ್ಲಿ ಕೊರೊನಾ ಹೈ ಅಲರ್ಟ್!!

ಚಾಮರಾಜನಗರ: ಕೇರಳದಲ್ಲಿ ರೂಪಾಂತರಿ ಕೊರೊನಾ ಆರ್ಭಟ ಹಿನ್ನೆಲೆ ಗುಂಡ್ಲುಪೇಟೆ ತಾಲೂಕಿನ ಗಡಿಗ್ರಾಮಗಳಲ್ಲಿ ಆರೋಗ್ಯ ಇಲಾಖೆ ಹೈ ಅಲರ್ಟ್ ಆಗಿದೆ.

Written by - Yashaswini V | Last Updated : Dec 20, 2023, 06:30 PM IST
  • ಕೇರಳದಲ್ಲಿ ರೂಪಾಂತರಿ ಕೊರೊನಾ ಆರ್ಭಟ.
  • ಆರೋಗ್ಯ ಇಲಾಖೆ ಸಿಬ್ಬಂದಿ ತೆರಳಿ ಮನೆ-ಮನೆ ಸರ್ವೇ ನಡೆಸಿ ಕೊರೊನಾ ಬಗ್ಗೆ ಜಾಗೃತಿ ಮೂಡಿಸಿದ್ದಾರೆ.
  • ಕರ್ನಾಟಕ ಮತ್ತು ಕೇರಳ ಗಡಿಭಾಗವಾದ ಮೂಲೆಹೊಳೆ ಚೆಕ್ ಪೋಸ್ಟ್ ನಲ್ಲಿ ಇಂದಿನಿಂದ ವಾಹನ ತಪಾಸಣೆ .
ಚಾಮರಾಜನಗರದ ಗಡಿ ಗ್ರಾಮಗಳಲ್ಲಿ ಕೊರೊನಾ ಹೈ ಅಲರ್ಟ್!! title=

ಚಾಮರಾಜನಗರ: ಕೇರಳದಲ್ಲಿ ರೂಪಾಂತರಿ ಕೊರೊನಾ ಆರ್ಭಟ ಹಿನ್ನೆಲೆ ಗುಂಡ್ಲುಪೇಟೆ ತಾಲೂಕಿನ ಗಡಿಗ್ರಾಮಗಳಲ್ಲಿ ಆರೋಗ್ಯ ಇಲಾಖೆ ಹೈ ಅಲರ್ಟ್ ಆಗಿದೆ. ಕೇರಳ ಗಡಿ ಹೊಂದಿಕೊಂಡಂತಿರುವ ಗುಂಡ್ಲುಪೇಟೆ ತಾಲೂಕಿನ ಮದ್ದೂರು ಕಾಲೋನಿ, ಕಗ್ಗಳದಹುಂಡಿ ಗ್ರಾಮಗಳಿಗೆ ಇಂದು ಆರೋಗ್ಯ ಇಲಾಖೆ ಸಿಬ್ಬಂದಿ ತೆರಳಿ ಮನೆ-ಮನೆ ಸರ್ವೇ ನಡೆಸಿ ಕೊರೊನಾ ಬಗ್ಗೆ ಜಾಗೃತಿ ಮೂಡಿಸಿದ್ದಾರೆ.

ನೆಗಡಿ, ಕೆಮ್ಮು, ಜ್ವರದಿಂದ ಬಳಲುವರಿಗೆ ಕೋವಿಡ್ ಟೆಸ್ಟ್ ಮಾಡಲಾಗುತ್ತಿದ್ದು ಕೇರಳದಿಂದ ಬಂದವರಿಗೆ ಸ್ವಯಂ ಕ್ವಾರಂಟೈನ್ ಆಗಲು ಸೂಚನೆ ಕೊಡಲಾಗುತ್ತಿದೆ. ಶಬರಿಮಲೆಯಿಂದ ಯಾರಾದರೂ ಹಿಂತಿರುಗಿದ್ದಾರ ಎಂಬುದರ ಬಗ್ಗೆಯೂ ಆರೋಗ್ಯ ಮಾಹಿತಿ ಕಲೆ ಹಾಕುತ್ತಿದ್ದು ಕೊರೊನಾ ಸಂಬಂಧ ಕಟ್ಟೆಚ್ಚರ ವಹಿಸಲಾಗಿದೆ.

ಇದನ್ನೂ ಓದಿ: ಪ್ರತಿದಿನ ಮದ್ಯ ಸೇವಿಸುತ್ತೀರಾ..? ಹಾಗಿದ್ರೆ ಈ ಹಣ್ಣು ತಿನ್ನಿ ʼಲಿವರ್‌ ಡ್ಯಾಮೇಜ್‌ʼ ಆಗಲ್ಲ.!

ಚೆಕ್ ಪೋಸ್ಟ್ ನಲ್ಲಿ ಹದ್ದಿನ ಕಣ್ಣು

ಕರ್ನಾಟಕ ಮತ್ತು ಕೇರಳ ಗಡಿಭಾಗವಾದ ಮೂಲೆಹೊಳೆ ಚೆಕ್ ಪೋಸ್ಟ್ ನಲ್ಲಿ ಇಂದಿನಿಂದ ವಾಹನ ತಪಾಸಣೆ ಕೈಗೊಂಡಿದ್ದು ಜ್ವರ, ಶೀತದಿಂದ ಬಳಲುವ ಕೇರಳದವರನ್ನು ವಾಪಾಸ್ ಕಳುಹಿಸಲಾಗುತ್ತಿದೆ.

ಶಬರಿಮಲೆಯಿಂದ ಹಿಂತಿರುಗುವ ಕನ್ನಡಿಗರ ಮೇಲೆ ನಿಗಾ ಇಡಲಾಗುತ್ತಿದ್ದು ಅವರ ಸಂಪೂರ್ಣ ವಿವರ ತೆಗೆದುಕೊಂಡು ಜ್ವರ ತಪಾಸಣೆ ಹಾಗೂ ಕೆಲವರಿಗೆ ಜ್ವರ ತಪಾಸಣೆ ಮಾಡಲಾಗುತ್ತಿದೆ.

ಇದನ್ನೂ ಓದಿ: Cloves Benefits: ಪುರುಷರ ಆರೋಗ್ಯಕ್ಕೆ ವರದಾನ ಲವಂಗ

ಒಟ್ಟಿನಲ್ಲಿ ರೂಪಾಂತರಿ ಕೊರೊನಾ ಭೀತಿ ಗಡಿಜಿಲ್ಲೆಯನ್ನು ಆವರಿಸಿದ್ದು ಆರೋಗ್ಯ ಇಲಾಖೆ ತೀವ್ರ ಕಟ್ಟೆಚ್ಚರ ವಹಿಸಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News