Broccoli Juice Benefits: ಬ್ರೋಕೊಲಿ ಜ್ಯೂಸ್ ಸೇವನೆಯಿಂದಾಗುವ ಈ ಲಾಭ ನಿಮಗೆ ತಿಳಿದಿದೆಯೇ?

Broccoli Juice Benefits: ಇಂದೇ ನಿಮ್ಮ ಡಯಟ್ ನಲ್ಲಿ ಬ್ರೋಕೊಲಿ ಜ್ಯೂಸ್ ಶಾಮೀಲುಗೊಳಿಸಿ. ಏಕೆಂದರೆ ಇದರಲ್ಲಿ ಒಂದಲ್ಲ ಹಲವು ಆರೋಗ್ಯಕರ ಲಾಭಗಳಿವೆ. ಇದು ಕೇವಲ ಮೆದುಳನ್ನು ಮಾತ್ರ ತೀಕ್ಷ್ಣಗೊಳಿಸುವುದಲ್ಲದೆ, ದೇಹದಲ್ಲಿ ಕೆಂಪು ರಕ್ತಕಣಗಳ ಸಂಖ್ಯೆಯನ್ನು ಕೂಡ ಹೆಚ್ಚಿಸುತ್ತದೆ.   

Written by - Nitin Tabib | Last Updated : Jun 25, 2022, 02:18 PM IST
  • ಬ್ರೊಕೋಲಿ ಜ್ಯೂಸ್ ಒಂದಲ್ಲ ಹಲವು ಮಹತ್ವದ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ,
  • ಬ್ರೋಕೊಲಿ ಜ್ಯೂಸ್ ಮೆದುಳನ್ನು ಚುರುಕುಗೊಳಿಸುವಲ್ಲಿ ತುಂಬಾ ಉಪಯುಕ್ತವಾಗಿದೆ.
  • ಬಿಪಿ, ಕೊಲೆಸ್ಟ್ರಾಲ್, ಸಕ್ಕರೆ ಕಾಯಿಲೆ ಇರುವವರಿಗೂ ಕೂಡ ಲಾಭಕಾರಿ
Broccoli Juice Benefits: ಬ್ರೋಕೊಲಿ ಜ್ಯೂಸ್ ಸೇವನೆಯಿಂದಾಗುವ ಈ ಲಾಭ ನಿಮಗೆ ತಿಳಿದಿದೆಯೇ? title=
Broccoli Juice Benefits

Broccoli Juice Benefits: ಬ್ರೊಕೋಲಿ ಜ್ಯೂಸ್ ಒಂದಲ್ಲ ಹಲವು ಮಹತ್ವದ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ, ಬ್ರೋಕೊಲಿ  ಜ್ಯೂಸ್ ಮೆದುಳನ್ನು ಚುರುಕುಗೊಳಿಸುವಲ್ಲಿ ತುಂಬಾ ಉಪಯುಕ್ತವಾಗಿದೆ ಎಂದು ಹೇಳಲಾಗುತ್ತದೆ. ಅಷ್ಟೇ ಅಲ್ಲ, ದೇಹದಲ್ಲಿನ ಕೆಂಪು ಕಣಗಳನ್ನು ಹೆಚ್ಚಿಸುವಲ್ಲಿ ಈ ಜ್ಯೂಸ್ ತುಂಬಾ ಪರಿಣಾಮಕಾರಿ ಎಂದು ಪರಿಗಣಿಸಲಾಗಿದೆ. ನೀವೂ ಕೂಡ ಬ್ರೋಕೊಲಿ ಜ್ಯೂಸ್ ಇದುವರೆಗೆ ಟ್ರೈ ಮಾಡಿಲ್ಲ ಎಂದಾದಲ್ಲಿ, ಇಂದಿನಿಂದಲೇ ಸೇವಿಸಲು ಪ್ರಾರಂಭಿಸಿ. ಇದು ಒಂದಲ್ಲ ಹಲವು ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ಕೊಲೆಸ್ಟ್ರಾಲ್ ಮತ್ತು ಮಧುಮೇಹವನ್ನು ನಿಯಂತ್ರಿಸುವಲ್ಲಿ ಈ ಜ್ಯೂಸ್ ಸೇವನೆ ತುಂಬಾ ಪ್ರಯೋಜನಕಾರಿಗಾಗಿದೆ. ಹಾಗಾದರೆ ಬನ್ನಿ ಇದರ ಹೊರತಾಗಿ ಬ್ರೋಕೊಲಿ ಜ್ಯೂಸ್ ಸೇವನೆಯ ಇತರ ಪ್ರಯೋಜನಗಳೇನು ಎಂಬುದನ್ನು ತಿಳಿದುಕೊಳ್ಳೋಣ.

ಬ್ರೊಕೊಲಿ ಜ್ಯೂಸ್‌ನಿಂದ ಹಲವು ಪ್ರಯೋಜನಗಳಿವೆ
ಬ್ರೋಕೊಲಿ ಪ್ರೋಟೀನ್, ಉತ್ಕರ್ಷಣ ನಿರೋಧಕಗಳು, ಕ್ಯಾಲ್ಸಿಯಂ, ಕಬ್ಬಿಣ ಮತ್ತು ವಿಟಮಿನ್ ಎ ನಿಂದ ಸಮೃದ್ಧವಾಗಿದೆ. ಇದಲ್ಲದೆ, ಫೈಬರ್ ಮತ್ತು ವಿಟಮಿನ್-ಸಿ ಇದರಲ್ಲಿ ಹೇರಳ ಪ್ರಮಾಣದಲ್ಲಿ ಕಂಡುಬರುತ್ತವೆ, ಇದು ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿಯಾಗಿದೆ. ಹಾಗಾದರೆ ಬ್ರೊಕೋಲಿ ಜ್ಯೂಸ್‌ನ ಪ್ರಯೋಜನಗಳೇನು ತಿಳಿದುಕೊಳ್ಳೋಣ ಬನ್ನಿ.

ಕೊಲೆಸ್ಟ್ರಾಲ್ ನಿಯಂತ್ರಣದಲ್ಲಿರುತ್ತದೆ
ಬ್ರೊಕೊಲಿ ಜ್ಯೂಸ್ ಕರಗುವ ಫೈಬರ್ ಅನ್ನು ಹೊಂದಿರುತ್ತದೆ, ಇದು ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ನಮ್ಮ ದೇಹದಲ್ಲಿ ಒಟ್ಟು ಎರಡು ರೀತಿಯ ಕೊಲೆಸ್ಟ್ರಾಲ್ ಗಳಿರುತ್ತವೆ. ಮೊದಲನೆಯದಾಗಿ ಒಳ್ಳೆಯ ಕೊಲೆಸ್ಟ್ರಾಲ್ ಮತ್ತು ಎರಡನೆಯದು ಕೆಟ್ಟ ಕೊಲೆಸ್ಟ್ರಾಲ್. ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಇದ್ದರೆ ಹೃದಯಾಘಾತ ಮತ್ತು ಪಾರ್ಶ್ವವಾಯು ಅಪಾಯ ಹೆಚ್ಚಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ಕೆಟ್ಟ ಕೊಲೆಸ್ಟ್ರಾಲ್ ನಿಯಂತ್ರಿಸುವುದು ತುಂಬಾ ಮುಖ್ಯ.

ಬಿಪಿ ನಿಯಂತ್ರಣದಲ್ಲಿದೆ
ಬ್ರೊಕೊಲಿ ಜ್ಯೂಸ್ ಅಧಿಕ ಬಿಪಿ ಮತ್ತು ಹೃದ್ರೋಗಿಗಳಿಗೂ ತುಂಬಾ ಪ್ರಯೋಜನಕಾರಿ. ಈ ಜ್ಯೂಸ್ ನಿಂದ ಬಿಪಿ ನಿಯಂತ್ರಣದಲ್ಲಿರುವುದರ ಜೊತೆಗೆ ಹೃದ್ರೋಗದ ಅಪಾಯವೂ ಕಡಿಮೆಯಾಗುತ್ತದೆ.

ರಕ್ತದ ಸಕ್ಕರೆ ನಿಯಂತ್ರಣದಲ್ಲಿರುತ್ತದೆ
ಬ್ರೊಕೊಲಿ ಜ್ಯೂಸ್ ಆಂಟಿಆಕ್ಸಿಡೆಂಟ್ ಮತ್ತು ಫೈಬರ್ ನಿಂದ ಸಮೃದ್ಧವಾಗಿದೆ, ಅವುಗಳ ಸಹಾಯದಿಂದ ಇದು ಮಧುಮೇಹವನ್ನು ನಿಯಂತ್ರಿಸಲು ಲಾಭಕಾರಿಯಾಗಿದೆ. ಇದರ ಸೇವನೆಯು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಕಡಿಮೆ ಮಾಡುತ್ತದೆ. ಇದು ಇನ್ಸುಲಿನ್ ಮಟ್ಟವನ್ನು ಸಮತೋಲನದಲ್ಲಿಡಲು ಸಹ ಸಹಕಾರಿಯಾಗಿದೆ. ಇದರ ಸೇವನೆಯಿಂದ ಟೈಪ್ 2 ಮಧುಮೇಹವನ್ನು ಕಡಿಮೆ ಮಾಡಬಹುದು. 

ಇದನ್ನೂ ಓದಿ-Asvattha Tree Health Benefits-ಅಶ್ವತ್ಥ ಮರ ಜೀವನ ರಕ್ಷಕ ಸಂಜೀವನಿಯಾಗಿದೆ ಎಂಬುದು ನಿಮಗೆ ಗೊತ್ತೇ?

ಮೂಳೆಗಳ ಬಲವರ್ಧನೆ
ಬ್ರೊಕೊಲಿ ಜ್ಯೂಸ್ ಮೂಳೆಗಳ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಇದು ಕ್ಯಾಲ್ಸಿಯಂ ಮತ್ತು ವಿಟಮಿನ್-ಕೆ ನಿಂದ ಸಮೃದ್ಧವಾಗಿದೆ, ಇವು ಮೂಳೆಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ.

ಇದನ್ನೂ ಓದಿ-ಈ ಆಹಾರ ಸೇವನೆ ಮೂಲಕ ನೀಗಿಸಬಹುದು ವಿಟಮಿನ್ ಡಿ ಕೊರತೆ

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಅನುಸರಿಸುವ ಮುನ್ನ ವೈದ್ಯರ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News