Benefits of Olive Oil: ಆಲಿವ್‌ ಎಣ್ಣೆಯ ಅದ್ಭುತ ಆರೋಗ್ಯ ಪ್ರಯೋಜನಗಳ ಬಗ್ಗೆ ತಿಳಿಯಿರಿ

Benefits of Olive Oil: ನಿಯಮಿತವಾಗಿ ಆಲಿವ್ ಎಣ್ಣೆ ಸೇವಿಸುವುದರಿಂದ ನೀವು ಹಲವಾರು ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು. ಇದು ಮಧುಮೇಹಿಗಳಿಗೆ ಕೂಡ ಉತ್ತಮ. ಆಲಿವ್ ಆಯಿಲ್ ಸೇವನೆಯು ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡಲು ಸಹಕಾರಿಯಾಗಿದೆ.

Written by - Puttaraj K Alur | Last Updated : Jul 15, 2024, 11:25 PM IST
  • ಚರ್ಮದ ಕಾಯಿಲೆಗಳಾದ ಕಜ್ಜಿ ತುರಿಕೆ, ಬಿಳುಪು ರೋಗಕ್ಕೆ ಆಲಿವ್ ಎಣ್ಣೆ ಉಪಯುಕ್ತ
  • ಆಲಿವ್ ಆಯಿಲ್ ಮಸಾಜ್ ಮಾಡಲು ಬಳಸುವುದರಿಂದ ಮೂಳೆಗಳಿಗೆ ಬಲ ನೀಡುತ್ತದೆ
  • ಆಲಿವ್ ಆಯಿಲ್ ಸೇವನೆಯು ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡಲು ಸಹಕಾರಿ
Benefits of Olive Oil: ಆಲಿವ್‌ ಎಣ್ಣೆಯ ಅದ್ಭುತ ಆರೋಗ್ಯ ಪ್ರಯೋಜನಗಳ ಬಗ್ಗೆ ತಿಳಿಯಿರಿ title=
ಆಲಿವ್‌ ಎಣ್ಣೆಯ ಪ್ರಯೋಜನಗಳು

Benefits of Olive Oil: ನಿಯಮಿತವಾಗಿ ಆಲಿವ್ ಎಣ್ಣೆ ಸೇವಿಸುವುದರಿಂದ ನೀವು ಹಲವಾರು ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು. ಆಲಿವ್‌ ಎಣ್ಣೆಯು ಉತ್ಕರ್ಷಣ ನಿರೋಧಕ ಗುಣದಿಂದ ಅಧಿಕ ರಕ್ತದೊತ್ತಡವನ್ನು ನಿರ್ವಹಿಸಲು ಸಹಾಯ ಮಾಡುತ್ತದೆ. ಆಲಿವ್ ಎಣ್ಣೆಯು ನೈಟ್ರಿಕ್ ಆಕ್ಸೈಡ್ ಅನ್ನು ರಕ್ತದಲ್ಲಿ ಹೆಚ್ಚು ಲಭ್ಯವಾಗುವಂತೆ ಮಾಡುವ ಮೂಲಕ ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ. ನೈಟ್ರಿಕ್ ಆಕ್ಸೈಡ್ ಕಿರಿದಾದ ರಕ್ತನಾಳಗಳನ್ನು ಸಡಿಲಗೊಳಿಸುತ್ತದೆ ಮತ್ತು ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ. 

ಪ್ರಾಚೀನ ಕಾಲದಲ್ಲಿ ಯುರೋಪ್ ಹಾಗೂ ಅರಬ್ ಸೈನಿಕರಿಗೆ ರೊಟ್ಟಿಯ ಜೊತೆ ಆಲಿವ್ ಎಣ್ಣೆ ಹಾಗೂ ಜೇನುತುಪ್ಪ ನೀಡುತ್ತಿದ್ದರು. ದೇಹಕ್ಕೆ ಬಲ ನೀಡುವ ಆಲಿವ್ ಎಣ್ಣೆಯಲ್ಲಿ ಅತ್ಯಧಿಕ ವಿಟಮಿನ್ ಇ, ಐರನ್, ಕಾಪರ್ ಮತ್ತು ಕ್ಯಾಲ್ಸಿಯಂ ಸಮೃದ್ಧವಾಗಿದೆ. ಆಲಿವ್‌ ಎಣ್ಣೆಯ ಮತ್ತಷ್ಟು ಆರೋಗ್ಯ ಪ್ರಯೋಜನಗಳ ಬಗ್ಗೆ ತಿಳಿಯಿರಿ.

ಇದನ್ನೂ ಓದಿ: ತುಳಸಿಯ ಈ ಆರೋಗ್ಯ ಪ್ರಯೋಜನಗಳ ಬಗ್ಗೆ ನಿಜಕ್ಕೂ ಆಶ್ಚರ್ಯಪಡ್ತೀರಾ!

  • ಚಿಕ್ಕ ಮಕ್ಕಳಿಗೆ ಮಾಲಿಶ್ ಮಾಡಲು ಆಲಿವ್ ಎಣ್ಣೆ ಬಳಸುವುದರಿಂದ ಮೂಳೆಗಳಿಗೆ ಬಲ ನೀಡುತ್ತದೆ ಹಾಗೂ ಚರ್ಮ ಕಾಂತಿಯನ್ನು ಪಡೆಯುತ್ತದೆ.
  • ಕಠಿಣವಾದ ಚರ್ಮದ ಕಾಯಿಲೆಗಳಾದ ಕಜ್ಜಿ ತುರಿಕೆ, ಬಿಳುಪು ರೋಗ ಇತ್ಯಾದಿಗಳಿಗೆ ಆಲಿವ್ ಎಣ್ಣೆ ಉಪಯುಕ್ತವಾಗಿದೆ.
  • ಆಲಿವ್ ಆಯಿಲ್ ಮಸಾಜ್ ಮಾಡಲು ಬಳಸುವುದರಿಂದ ಮೂಳೆಗಳಿಗೆ ಬಲ ನೀಡುತ್ತದೆ ಹಾಗೂ ಚರ್ಮಕ್ಕೆ ಕಾಂತಿಯನ್ನು ನೀಡುತ್ತದೆ.
  • ಆಲಿವ್‌ ಎಣ್ಣೆಯನ್ನು ತಲೆಗೆ ಹಚ್ಚುವುದರಿಂದ ತಲೆ ತಂಪಾಗಿರುತ್ತದೆ ಹಾಗೂ ಕೂದಲು ಬೆಳವಣಿಗೆಗೆ ಸಹಾಯ ಮಾಡುತ್ತದೆ
  • ಆಲಿವ್ ಆಯಿಲ್ ಉಗುರು ಬೆಚ್ಚಗಿನ ನೀರಿನಲ್ಲಿ ೫ ML ನಷ್ಟು ಸೇರಿಸಿ ಸೇವಿಸಬಹುದಾಗಿದೆ. ಇದು ಮಧುಮೇಹಿಗಳಿಗೆ ಕೂಡ ಉತ್ತಮ.
  • ಆಲಿವ್ ಆಯಿಲ್ ಸೇವನೆಯು ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡಲು ಸಹಕಾರಿಯಾಗಿದೆ.
  • ಮಹಿಳೆಯರು ಮುಖ ಹಾಗೂ ಮೈ ಕಾಂತಿಗೆ ಆಲಿವ್ ಆಯಿಲ್ ಬಳಸಬಹುದು. ಇದರಿಂದ ಮುಖದ ಮೇಲಿನ ಮೊಡವೆ, ಕಪ್ಪು ಕಲೆ ನಿವಾರಣೆಯಾಗುತ್ತದೆ.

ಇದನ್ನೂ ಓದಿ: ಈ ಹಣ್ಣುಗಳು ಬ್ಲಡ್ ಶುಗರ್ ಅನ್ನು ನಾರ್ಮಲ್ ಆಗಲು ಇಡುವುದೇ ಇಲ್ಲ !ಮಧುಮೇಹಿಗಳು ತಿನ್ನುವ ಮುನ್ನ ಎಚ್ಚರ

ಆಲಿವ್ ಪುಷ್ಪಗಳ ರಸವು ಹೃದಯ ಮೆದುಳು ನರಗಳಿಗೆ ನವ ಚೈತನ್ಯ ನೀಡುತ್ತದೆ ಎಂದು ಹೇಳಲಾಗುತ್ತದೆ. ಆಲಿವ್ ಆಯಿಲ್ ಕಾಸ್ಮೆಟಿಕ್, ಸೌಂದರ್ಯವರ್ಧಕ ಕ್ರೀಮ್‌ಗಳ ತಯಾರಿಕೆಯಲ್ಲಿ ಬಳಸುತ್ತಾರೆ. ಬೆಲೆಯಲ್ಲಿ ದುಬಾರಿಯಾದರೂ ವಿಶೇಷ ಔಷಧೀಯ ಗುಣಗಳನ್ನು ಹೊಂದಿರುವ ಈ ಆಲಿವ್ ಆಯಿಲ್ ಔಷಧದ ಹಾಗೆ ಬಳಸಬಹುದು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News