Cucumber Benefits : ಹೊಟ್ಟೆಯ ಕೊಬ್ಬು ಕರಗಿಸಲು 'ಸೌತೆಕಾಯಿ' : ಇದನ್ನು ಸೇವಿಸುವ ಸರಿಯಾದ ಮಾರ್ಗಗಳು ಇಲ್ಲಿವೆ

ನೀವು ಹಣ್ಣು, ತರಕಾರಿ ಮತ್ತು ಪಾನೀಯಗಳನ್ನು ಸಮತೋಲಿತ ಆಹಾರದಲ್ಲಿ ಸೇರಿಸಿ ಸೇವಿಸಬೇಕು. ಸೌತೆಕಾಯಿ ನೀರು ಸಹ ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

Written by - Channabasava A Kashinakunti | Last Updated : Aug 11, 2021, 11:34 PM IST
  • ಹೊಟ್ಟೆಯ ಕೊಬ್ಬನ್ನು ಕರಗಿಸಲು ಮಾರುಕಟ್ಟೆಯಲ್ಲಿ ಅನೇಕ ರೀತಿಯ ಔಷಧಿಗಳು ಸಿಗುತ್ತವೆ
  • ಸೌತೆಕಾಯಿ ನೀರು ಸಹ ತೂಕವನ್ನು ಕಡಿಮೆ ಮಾಡಲು ಸಹಾಯ
  • ಸೌತೆಕಾಯಿಯಲ್ಲಿ ಕಡಿಮೆ ಕ್ಯಾಲೋರಿಗಳಿವೆ ಮತ್ತು ಕರಗುವ ನಾರು ಅಧಿಕವಾಗಿದ್ದು
Cucumber Benefits : ಹೊಟ್ಟೆಯ ಕೊಬ್ಬು ಕರಗಿಸಲು 'ಸೌತೆಕಾಯಿ' : ಇದನ್ನು ಸೇವಿಸುವ ಸರಿಯಾದ ಮಾರ್ಗಗಳು ಇಲ್ಲಿವೆ title=

ಹೊಟ್ಟೆಯ ಕೊಬ್ಬನ್ನು ಕರಗಿಸಲು ಮಾರುಕಟ್ಟೆಯಲ್ಲಿ ಅನೇಕ ರೀತಿಯ ಔಷಧಿಗಳು ಗಿಡಮೂಲಿಕೆಗಳು ಸಿಗುತ್ತವೆ. ಆದರೆ, ಅವುಗಳು ಎಷ್ಟು ಪರಿಣಾಮಕಾರಿ ಎಂದು ಯಾರೂ ಹೇಳಿಕೊಳ್ಳಲಾಗುವುದಿಲ್ಲ. ಆದ್ದರಿಂದ, ತೂಕ ಇಳಿಸಿಕೊಳ್ಳಲು, ನೀವು ವ್ಯಾಯಾಮದ ಜೊತೆಗೆ ಆರೋಗ್ಯಕರ ಆಹಾರ ಸೇವಿಸುವುದು ತುಂಬಾ ಉತ್ತಮ. ಅದ್ರಲ್ಲೂ ಸ್ಥೂಲಕಾಯವನ್ನು ತೊಡೆದುಹಾಕಲು, ನೀವು ಹಣ್ಣು, ತರಕಾರಿ ಮತ್ತು ಪಾನೀಯಗಳನ್ನು ಸಮತೋಲಿತ ಆಹಾರದಲ್ಲಿ ಸೇರಿಸಿ ಸೇವಿಸಬೇಕು. ಸೌತೆಕಾಯಿ ನೀರು ಸಹ ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಆಹಾರ ತಜ್ಞೆ ಡಾ.ರಂಜನಾ ಸಿಂಗ್ ಪ್ರಕಾರ, ಸೌತೆಕಾಯಿ(Cucumber)ಯ ಈ ಮಾಂತ್ರಿಕ ನೀರು ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡುವುದರ ಜೊತೆಗೆ ಕ್ಯಾಲೊರಿಗಳನ್ನು ಕಡಿಮೆ ಮಾಡುತ್ತದೆ. ಸೌತೆಕಾಯಿ ನೀರನ್ನು ನಿಯಮಿತವಾಗಿ ಸೇವಿಸುವುದರಿಂದ ಹೊಟ್ಟೆಯ ಕೊಬ್ಬು ವೇಗವಾಗಿ ಸುಡುತ್ತದೆ. ಇದು ಡಿಟಾಕ್ಸ್ ಪಾನೀಯವಾಗಿದ್ದು, ಇದು ದೇಹದಿಂದ ವಿಷವನ್ನು ಹೊರಹಾಕುತ್ತದೆ ಮತ್ತು ನಿರ್ಜಲೀಕರಣವನ್ನು ತಡೆಯುತ್ತದೆ. ಸೌತೆಕಾಯಿ ನೀರನ್ನು ಕುಡಿಯುವುದರ ಜೊತೆಗೆ ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು, ವರ್ಕೌಟ್‌ಗಳನ್ನು ಸಹ ಮಾಡಬೇಕು.

ಇದನ್ನೂ ಓದಿ : ಈ ಸಮಸ್ಯೆಗಳಿಗೆ ರಾಮಬಾಣ ಕರಿಜೀರಿಗೆ , ಹೀಗೆ ಉಪಯೋಗಿಸಿ ನೋಡಿ

ಸೌತೆಕಾಯಿ ನೀರಿಗೆ ಬೇಕಾದ ಪದಾರ್ಥಗಳು

- 1 ಸೌತೆಕಾಯಿ
- 1 ಗ್ಲಾಸ್ ನೀರು
- 1 ನಿಂಬೆ ಹಣ್ಣು(Lemon)
- ರುಚಿಗೆ ತಕ್ಕಂತೆ ಕಪ್ಪು ಉಪ್ಪು

ಸೌತೆಕಾಯಿ ನೀರನ್ನು ತಯಾರಿಸುವುದು ಹೇಗೆ

1. ಮೊದಲು ಸೌತೆಕಾಯಿಯನ್ನು ಸಾಮಾನ್ಯ ನೀರಿನಿಂದ ತೊಳೆಯಿರಿ.
2. ಈಗ ಅದನ್ನು ಸಿಪ್ಪೆ ತೆಗೆದು ತೆಳುವಾದ ಹೋಳುಗಳಾಗಿ ಕತ್ತರಿಸಿ.
3. ಚೂರುಗಳನ್ನು ಜಾರ್ ಅಥವಾ ಗಾಜಿನ ಬಾಟಲಿ ನೀರಿನಲ್ಲಿ ಹಾಕಿ.
4. ಸೌತೆಕಾಯಿ ನೀರಿಗೆ(Cucumber Water) ನೀವು ಕೆಲವು ನಿಂಬೆ ರಸ ಕೂಡ ಸೇರಿಸಬಹುದು.
5. ನಿಂಬೆ ಮತ್ತು ಸೌತೆಕಾಯಿ ನೀರನ್ನು ರೆಫ್ರಿಜರೇಟರ್‌ನಲ್ಲಿ ರಾತ್ರಿಯಿಡೀ ಮ್ಯಾರಿನೇಟ್ ಮಾಡಲು ಬಿಡಿ.
ಅದನ್ನು ಸರ್ವಿಂಗ್ ಗ್ಲಾಸ್‌ನಲ್ಲಿ ಹಾಕಿ ಸೇವಿಸಿ.

ಇದನ್ನೂ ಓದಿ : Food for Body Part: ದೇಹದ ಪ್ರತಿಯೊಂದು ಭಾಗಕ್ಕೂ ಅಗತ್ಯ ವಿಭಿನ್ನ ಆಹಾರ

ಸೌತೆಕಾಯಿ ನೀರಿನ ಇತರ ಪ್ರಯೋಜನಗಳು

1. ಸೌತೆಕಾಯಿಯಲ್ಲಿ ಕಡಿಮೆ ಕ್ಯಾಲೋರಿಗಳಿವೆ ಮತ್ತು ಕರಗುವ ನಾರು ಅಧಿಕವಾಗಿದ್ದು ಇದು ದೇಹವನ್ನು ಹೈಡ್ರೇಟ್ ಆಗಿರಿಸುತ್ತದೆ ಮತ್ತು ತ್ವರಿತ ತೂಕ ಇಳಿಕೆಗೆ(Weight Lose) ಸಹಾಯ ಮಾಡುತ್ತದೆ.

2. ಸೌತೆಕಾಯಿಯನ್ನು ತಿನ್ನುವುದರಿಂದ ಜೀರ್ಣಾಂಗ ವ್ಯವಸ್ಥೆಯು ಬಲಗೊಳ್ಳುತ್ತದೆ ಮತ್ತು ಯಕೃತ್ತನ್ನು ಆರೋಗ್ಯವಾಗಿರಿಸುತ್ತದೆ. ಸೌತೆಕಾಯಿಯನ್ನು ತಿನ್ನುವುದರಿಂದ ಹಸಿವು ಕಡಿಮೆಯಾಗುತ್ತದೆ.

3. ಸೌತೆಕಾಯಿ ನೀರಿನಲ್ಲಿ ಅನೇಕ ವಿಟಮಿನ್‌ಗಳು, ಖನಿಜಗಳು ಮತ್ತು ಎಲೆಕ್ಟ್ರೋಲೈಟ್‌ಗಳು ಹೇರಳವಾಗಿದ್ದು ಸುಲಭವಾಗಿ ಹೀರಲ್ಪಡುತ್ತವೆ. ಇದು ಬೇಸಿಗೆಯ ದಿನಗಳಲ್ಲಿ ದೇಹದಲ್ಲಿ ನೀರಿನ ಸಮತೋಲನವನ್ನು ನಿರ್ವಹಿಸುತ್ತದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News