Empty Stomach Clove Eating Benefits: ಸಾಮಾನ್ಯವಾಗಿ ಲವಂಗ ನಮ್ಮ ಮನೆಯಲ್ಲಿ ಬಳಕೆಯಾಗುವ ಮಸಾಲೆ ಪದಾರ್ಥಗಳಲ್ಲಿ ಒಂದು. ಇದು ನೋಡಲು ತುಂಬಾ ಚಿಕ್ಕದಾಗಿದ್ದರೂ ಕೂಡ ಅದ್ಭುತ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ, ಲವಂಗವು ನೋಡಲು ಚಿಕ್ಕದಾಗಿದ್ದರೂ ಕೂಡ ದೊಡ್ಡ ದೊಡ್ಡ ಪದಾರ್ಥಗಳಲ್ಲಿ ಕಂಡುಬರದ ಹಲವಾರು ಗುಣಗಳು ಇದರಲ್ಲಿವೆ. ಇದು ಜೀವಸತ್ವಗಳು, ಫೈಬರ್, ಪ್ರೋಟೀನ್, ಕಬ್ಬಿಣ, ಕ್ಯಾಲ್ಸಿಯಂ, ಪೊಟ್ಯಾಸಿಯಮ್, ರಂಜಕ, ಮ್ಯಾಂಗನೀಸ್, ಕಾರ್ಬೋಹೈಡ್ರೇಟ್ ಮತ್ತು ಉತ್ಕರ್ಷಣ ನಿರೋಧಕಗಳ ಆಗರವಾಗಿದೆ. ನೀವು ಖಾಲಿ ಹೊಟ್ಟೆಯಲ್ಲಿ ಲವಂಗವನ್ನು ಸೇವಿಸಿದರೆ, ನಿಮ್ಮ ದೇಹವು ಅದರಿಂದ ಅನೇಕ ಪ್ರಯೋಜನಗಳನ್ನು ಪಡೆಯುತ್ತದೆ ಎಂದು ಅನೇಕ ಸಂಶೋಧನೆಗಳಲ್ಲಿ ತಿಳಿದು ಬಂದಿದೆ. ಲವಂಗದ ರುಚಿ ಖಂಡಿತವಾಗಿಯೂ ಕಾರವಾಗಿರುತ್ತದೆ, ಆದರೆ, ಇದರ ಗುಣಲಕ್ಷಣಗಳು ಒಮ್ಮೆ ನೀವು ತಿಳಿದುಕೊಂಡರೆ, ನೀವು ಖಂಡಿತವಾಗಿ ಅದನ್ನು ಚಾಚುತಪ್ಪದೆ ತಿನ್ನುವಿರಿ.
ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಲವಂಗ ತಿಂದರೆ ಏನು ಲಾಭ ಗೊತ್ತಾ?
ರೋಗನಿರೋಧಕ ಶಕ್ತಿ ಹೆಚ್ಚುತ್ತದೆ
ಕರೋನವೈರಸ್ ಸಾಂಕ್ರಾಮಿಕದಿಂದ, ಹೆಚ್ಚಿನ ಜನರು ತಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಹೆಚ್ಚು ಗಮನ ನೀಡುತ್ತಿದ್ದಾರೆ. ಬದಲಾಗುತ್ತಿರುವ ಹವಾಮಾನ, ಮಳೆಗಾಲ, ಚಳಿಗಾಲದಲ್ಲಿ ಶೀತ, ಕೆಮ್ಮು, ನೆಗಡಿಯಿಂದ ನೀವೂ ಕೂಡ ದೂರವಿರಲು ಬಯಸುತ್ತಿದ್ದರೆ, ನೀವು ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ಲವಂಗವನ್ನು ಜಗಿಯುವ ಅಭ್ಯಾಸವನ್ನು ಮಾಡಿಕೊಳ್ಳಬೇಕು. ಇದು ನಿಮ್ಮ ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
ಯಕೃತ್ತಿನ ರಕ್ಷಣೆ
ಯಕೃತ್ತು ನಮ್ಮ ದೇಹದ ಪ್ರಮುಖ ಅಂಗವಾಗಿದೆ. ಏಕೆಂದರೆ ಅದು ಸರಿಯಾಗಿ ಕಾರ್ಯನಿರ್ವಹಿಸಿದರೆ ನಮ್ಮ ದೇಹವು ಉತ್ತಮವಾಗಿರುತ್ತದೆ. ಹೀಗಾಗಿ ನೀವು ಈ ಅಂಗದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಲವಂಗವನ್ನು ತಿನ್ನುವುದರಿಂದ, ನಿಮ್ಮ ಯಕೃತ್ತು ಸಂಪೂರ್ಣವಾಗಿ ಆರೋಗ್ಯಕರವಾಗಿರುತ್ತದೆ.
ಕೆಟ್ಟ ಉಸಿರಿನಿಂದ ಮುಕ್ತಿ
ಲವಂಗವನ್ನು ಬಾಯಿಯ ದುರ್ವಾಸನೆ ಹೋಗಲಾಡಿಸಲು ಕೂಡ ಬಳಸಬಹುದು. ಇದು ಒಂದು ರೀತಿಯಲ್ಲಿ ಮೌತ್ ಫ್ರೆಶ್ನರ್ ಆಗಿ ಕಾರ್ಯನಿರ್ವಹಿಸುತ್ತದೆ. ಹಲವು ಬಾರಿ ಬಾಯಿಯನ್ನು ಸರಿಯಾಗಿ ಶುಚಿಗೊಳಿಸದಿದ್ದರೆ, ಬಾಯಿ ದುರ್ವಾಸನೆ ಬರಲು ಪ್ರಾರಂಭಿಸುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ಲವಂಗವನ್ನು ಬಳಸುವುದರಿಂದ ಈ ಎಲ್ಲಾ ಸಮಸ್ಯೆಗಳನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ. ಲವಂಗದಲ್ಲಿ ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಕಂಡುಬರುತ್ತವೆ. ನೀವು ಪ್ರತಿದಿನ ಬೆಳಗ್ಗೆ ಲವಂಗವನ್ನು ಅಗಿಯುತ್ತಿದ್ದರೆ, ಬಾಯಿಯ ಸೂಕ್ಷ್ಮಾಣುಗಳು ಸಾಯುತ್ತವೆ ಮತ್ತು ನೀವು ತಾಜಾ ಉಸಿರನ್ನು ಅನುಭವಿಸಬಹುದು.
ಇದನ್ನೂ ಓದಿ-Heart ಅಷ್ಟೇ ಅಲ್ಲ ಮೆದುಳಿಗೂ ಕೂಡ ಹಾನಿ ತಲುಪಿಸುತ್ತದೆ ಹೈ ಕೊಲೆಸ್ಟ್ರಾಲ್
ಹಲ್ಲುನೋವು
ಹಠಾತ್ ಹಲ್ಲುನೋವು ಕಾಣಿಸಿಕೊಂಡರೆ, ಲವಂಗವನ್ನು ನೀವು ನೋವು ನಿವಾರಕವಾಗಿ ಬಳಸಬಹುದು. ಹಲ್ಲಿನ ನೋವು ಇರುವ ಜಾಗದಲ್ಲಿ ಲವಂಗದ ತುಂಡನ್ನು ಒತ್ತಿ. ಇದರಿಂದ ನೋವು ಕಡಿಮೆಯಾಗುತ್ತದೆ. ಏಕೆಂದರೆ ಲವಂಗವು ಬ್ಯಾಕ್ಟೀರಿಯಾವನ್ನು ಸುಲಭವಾಗಿ ಕೊಲ್ಲುತ್ತದೆ. ಇದರಿಂದ ಕೆಲವೇ ಗಂಟೆಗಳಲ್ಲಿ ನೋವು ನಿವಾರಣೆಯಾಗುತ್ತದೆ.
ಇದನ್ನೂ ಓದಿ-Bad Habits: ಸಮಯ ಇರುವಾಗಲೇ ನಿಮ್ಮೀ ಬೆಳಗಿನ ಕೆಟ್ಟ ಅಭ್ಯಾಸಗಳನ್ನು ಸುಧಾರಿಸಿಕೊಳ್ಳಿ.. ಇಲ್ದಿದ್ರೆ?
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಅನುಸರಿಸುವ ಮುನ್ನ ವೈದ್ಯಕೀಯ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.