Hair and Care: ಬಿಳಿ ಕೂದಲ ಸಮಸ್ಯೆಯೇ? ಇಲ್ಲಿದೆ ಪರಿಹಾರ!

ಸಮಯಕ್ಕೆ ಮುಂಚಿತವಾಗಿ ನಿಮ್ಮ ಕೂದಲು ಏಕೆ ಬಿಳಿಯಾಗಿರುತ್ತದೆ ಮತ್ತು ಅದನ್ನು ತಪ್ಪಿಸುವ ಮಾರ್ಗ ಯಾವುದು ಎಂದು ಇಂದು ನಾವು ನಿಮಗೆ ಹೇಳಲಿದ್ದೇವೆ.  

Last Updated : Nov 3, 2019, 04:27 PM IST
Hair and Care: ಬಿಳಿ ಕೂದಲ ಸಮಸ್ಯೆಯೇ? ಇಲ್ಲಿದೆ ಪರಿಹಾರ! title=

ಇಂದಿನ ದಿನಗಳಲ್ಲಿ ಬಿಳಿ ಕೂದಲಿನ ಸಮಸ್ಯೆ ಸಾಮಾನ್ಯವಾಗಿದೆ. ವಯಸ್ಸಾದವರಿಗೆ ಮಾತ್ರವಲ್ಲ, ಮಕ್ಕಳಿಗೂ ಕೂಡ ಸಮಯಕ್ಕೆ ಮುಂಚಿತವಾಗಿ ಬಿಳಿ ಕೂದಲು ಬೆಳೆಯುತ್ತಿವೆ. ಬಿಳಿ ಕೂದಲು ಬರಲು ಹೆಚ್ಚಿದ ಒತ್ತಡ ಮತ್ತು ಮಾಲಿನ್ಯವೂ ಒಂದು ಕಾರಣವಾಗಿದೆ. ಸಮಯಕ್ಕೆ ಮುಂಚಿತವಾಗಿ ನಿಮ್ಮ ಕೂದಲು ಏಕೆ ಬಿಳಿಯಾಗಿರುತ್ತದೆ ಮತ್ತು ಅದನ್ನು ತಪ್ಪಿಸುವ ಮಾರ್ಗ ಯಾವುದು ಎಂದು ಇಂದು ನಾವು ನಿಮಗೆ ಹೇಳಲಿದ್ದೇವೆ.

ಆನುವಂಶಿಕ ಸಮಸ್ಯೆ:
ಆನುವಂಶಿಕ ಕಾರಣಗಳಿಂದ ಕೂದಲು ಬಿಳಿಯಾಗುವುದು ಮತ್ತು ಹೆಚ್ಚಾಗಿ ಕೂದಲುದುರುವ ಸಮಸ್ಯೆ ಸಹ ಅನೇಕ ಬಾರಿ ಕಂಡುಬರುತ್ತದೆ. ಇದನ್ನು ತೊಡೆದುಹಾಕಲು, ನಿಮ್ಮ ಕೂದಲಿನ ಬಗ್ಗೆ ನೀವು ವಿಶೇಷ ಕಾಳಜಿ ವಹಿಸಬೇಕು. ಅದಕ್ಕಾಗಿ ವೈದ್ಯರನ್ನು ಸಂಪರ್ಕಿಸಿ ಸಲಹೆ ಪಡೆಯುವುದು ಉತ್ತಮ. ನಿಮ್ಮ ಕೂದಲುದರಲು ಹಾಗೂ ಬೇಗ ಬಿಳಿ ಕೂದಲು ಬರಲು ನಿಮ್ಮ ಅನುವಂಶಿಕತೆ ಕೂಡ ಕಾರಣವಿರಬಹುದು.

ಅತಿಯಾದ ಶಾಂಪೂ ಬಳಕೆ:
ಟಿವಿಯಲ್ಲಿ ಅಥವಾ ಎಲ್ಲಿಯಾದರೂ ಜಾಹೀರಾತುಗಳನ್ನು ನೋಡಿ, ನೀವು ಯಾವುದೇ ಶಾಂಪೂವನ್ನು ಮಾರುಕಟ್ಟೆಯಿಂದ ತರುತ್ತೀರಿ. ಆದರೆ ಶಾಂಪೂಗಳಲ್ಲಿ ಅನೇಕ ರೀತಿಯ ರಾಸಾಯನಿಕಗಳು ಇರುತ್ತವೆ ಎಂದು ನೀವು ತಿಳಿದಿರಬೇಕು. ಇದು ಕೂದಲಿಗೆ ತುಂಬಾ ಹಾನಿಕಾರಕವಾಗಿದೆ. ಇದು ನಿಮ್ಮ ಕೂದಲಿಗೆ ಗಮನಾರ್ಹ ಹಾನಿಯನ್ನುಂಟುಮಾಡುತ್ತದೆ. ನಿಮ್ಮ ಕೂದಲು ಸಮಯಕ್ಕೆ ಮುಂಚಿತವಾಗಿ ಬಿಳಿಯಾಗಲು ಪ್ರಾರಂಭಿಸುತ್ತದೆ. ಇದನ್ನು ತಪ್ಪಿಸಲು ಪರಿಹಾರವೆಂದರೆ ನೀವು ಕೂದಲಿಗೆ ರಾಸಾಯನಿಕ ಉತ್ಪನ್ನಗಳನ್ನು ಬಳಸದೇ ಇರುವುದು.

ಕೂದಲಿನಲ್ಲಿ ರಾಸಾಯನಿಕಗಳ ಬಳಕೆ ಮತ್ತು ಎಣ್ಣೆಯಿಂದ ದೂರ:
ಇತ್ತೀಚಿನ ದಿನಗಳಲಿ ಜನರು ತಮ್ಮ ಕೂದಲಿಗೆ ರಾಸಯಂಕ ಉತ್ಪನ್ನಗಳನ್ನು ಹೆಚ್ಚಾಗಿ ಬಳಸುತ್ತಾರೆ. ಅದು ಶಾಂಪೂ ಆಗಿರಬಹುದು, ಹೇರ್ ಕಲರಿಂಗ್ ಆಗಿರಬಹುದು. ಇನ್ನೊಂದೆಡೆ ಕೂದಲ ಹಾರೈಕೆಗೆ ಅಗತ್ಯವಾಗಿ ಬೇಕಾದ ಎಣ್ಣೆ ಹಚ್ಚದಿರುವುದು. ತೈಲಗಳು ಕೂದಲಿಗೆ ಸಾಕಷ್ಟು ಪ್ರಯೋಜನಕಾರಿ. ರಾಸಾಯನಿಕ ಪದಾರ್ಥಗಳು ನಿಮ್ಮ ಕೂದಲನ್ನು ಹಾನಿ ಮಾಡುವ ಅನೇಕ ರಾಸಾಯನಿಕಗಳನ್ನು ಒಳಗೊಂಡಿರುತ್ತವೆ. ನಿಮ್ಮ ಕೂದಲನ್ನು ದೃಢವಾಗಿ ಮತ್ತು ಆಕರ್ಷಕವಾಗಿ ಮಾಡುವಲ್ಲಿ ತೈಲವು ಪ್ರಮುಖ ಪಾತ್ರ ವಹಿಸುತ್ತದೆ. ನೀವು ಹಗಲಿನಲ್ಲಿ ಅಥವಾ ಪ್ರಯಾಣ ಮಾಡುವಾಗ ಕೂದಲಿಗೆ ಎಣ್ಣೆಯನ್ನು ಬಳಸದಿದ್ದರೆ, ಯಾವುದೇ ತೊಂದರೆಯಿಲ್ಲ. ಆದರೆ ದಿನಕ್ಕೆ ಒಮ್ಮೆ (ರಾತ್ರಿ ಮಲಗುವ ಸಮಯದಲ್ಲಿ) ನಿಮ್ಮ ಕೂದಲಿಗೆ ಎಣ್ಣೆಯನ್ನು ಹಚ್ಚಿ ಎಂಬುದನ್ನು ನೆನಪಿನಲ್ಲಿಡಿ. ಅಲ್ಲದೆ, ನಿಮ್ಮ ಕೂದಲನ್ನು ವಾರಕ್ಕೊಮ್ಮೆ ಎಣ್ಣೆಯಿಂದ ಮಸಾಜ್ ಮಾಡಿ.

ಕೂದಲಿಗೆ ಜೀವಸತ್ವಗಳನ್ನು ನೀಡಿ;
ನಿಮ್ಮ ಕೂದಲಿನ ಕ್ಷೀಣತೆ ಮತ್ತು ಬಿಳಿಮಾಡುವಲ್ಲಿ ವಿಟಮಿನ್ ಪ್ರಮುಖ ಪಾತ್ರ ವಹಿಸುತ್ತದೆ. ವಿಟಮಿನ್ ಕೂದಲಿಗೆ ಮಾತ್ರವಲ್ಲ ದೇಹಕ್ಕೂ ಬಹಳ ಮುಖ್ಯ. ನಿಮ್ಮ ಕೂದಲನ್ನು ದೃಢವಾಗಿ ಮತ್ತು ಸುಂದರವಾಗಿಡಲು ನೀವು ಬಯಸಿದರೆ ನಿಮಗೆ ವಿಟಮಿನ್ ಬಿ, ವಿಟಮಿನ್ ಡಿ ಮತ್ತು ವಿಟಮಿನ್ ಇ ಅಗತ್ಯವಿರುತ್ತದೆ ಎಂದು ಕೆಲವು ಸಂಶೋಧನೆಗಳು ಕಂಡುಹಿಡಿದಿದೆ. ದೇಹದಲ್ಲಿನ ಈ ಜೀವಸತ್ವಗಳಿಂದಾಗಿ, ನಿಮ್ಮ ಕೂದಲು ಸಾಕಷ್ಟು ಸುಂದರವಾಗಿ ಮತ್ತು ಆಕರ್ಷಕವಾಗಿ ಉಳಿದಿದೆ.

ನಿದ್ರೆಯ ಕೊರತೆ:
ಒತ್ತಡದಿಂದಾಗಿ ಅಥವಾ ಅನೇಕ ಸಮಸ್ಯೆಗಳಿಂದಾಗಿ ಸರಿಯಾದ ನಿದ್ರೆ ಪಡೆಯಲು ಸಾಧ್ಯವಾಗುವುದಿಲ್ಲ. ಈ ಕಾರಣದಿಂದಾಗಿ, ನಿಮ್ಮ ಕೂದಲು ಉದುರಲು ಪ್ರಾರಂಭಿಸುತ್ತದೆ. ನಿಮ್ಮ ಕೂದಲನ್ನು ದೀರ್ಘಕಾಲದವರೆಗೆ ಸುಂದರವಾಗಿ ಮತ್ತು ಆಕರ್ಷಕವಾಗಿಡಲು ಬಯಸಿದರೆ, ನಿಮ್ಮ ನಿದ್ರೆಯ ಬಗ್ಗೆ ನೀವು ಗಮನ ಹರಿಸಬೇಕು. ನಿಮ್ಮ ದೇಹಕ್ಕೆ ಕನಿಷ್ಠ 7 ಗಂಟೆಗಳ ನಿದ್ರೆ ಅಗತ್ಯ. ಇಲ್ಲದಿದ್ದರೆ ನಿಮ್ಮ ಕೂದಲು ಉದುರುವುದರ ಜೊತೆಗೆ ಬೇಗನೆ ಬಿಳಿಯಾಗಲು ಪ್ರಾರಂಭವಾಗುತ್ತದೆ.

ಹೆಚ್ಚುತ್ತಿರುವ ಒತ್ತಡ:
ಇಂದಿನ ಲೈಫ್ ಸ್ಟೈಲ್, ಒತ್ತಡ ಭರಿತ ಜೀವನ ಕೂದಲು ಬಿಳಿಯಾಗಲು ಒಂದು ಪ್ರಮುಖ ಕಾರಣ. ನಿಮ್ಮ ದೈನಂದಿನ ಜೀವನದಲ್ಲಿ ಹೆಚ್ಚುತ್ತಿರುವ ಒತ್ತಡದಿಂದಾಗಿ ನೀವು ಆಗಾಗ್ಗೆ ಅಸಮಾಧಾನಗೊಳ್ಳುತ್ತೀರಿ. ಈ ಕಾರಣದಿಂದಾಗಿ ಇದು ನಿಮ್ಮ ಮೆದುಳಿನ ಕೋಶಗಳನ್ನು ಹಾಳು ಮಾಡುತ್ತದೆ. ಸಮಯದ ಮೊದಲು ಜನರ ಕೂದಲು ಬಿಳಿ ಬಣ್ಣಕ್ಕೆ ತಿರುಗಲು ಇದು ಕಾರಣವಾಗಿದೆ. ಇದನ್ನು ತಪ್ಪಿಸುವ ಏಕೈಕ ಮಾರ್ಗವೆಂದರೆ ಜೀವನದಲ್ಲಿ ಸಂತೋಷವಾಗಿರಲು ಪ್ರಯತ್ನಿಸುವುದು ಮತ್ತು ಸಾಧ್ಯವಾದಷ್ಟು ಉದ್ವೇಗಕ್ಕೆ ಒಳಗಾಗದಿರುವುದು.

ಮಾದಕ ವ್ಯಸನ:
ಸಂಶೋಧನೆಯ ಪ್ರಕಾರ, ಮಾದಕ ವ್ಯಸನಿಗಳಿಗೆ ಅಂದರೆ, ಆಲ್ಕೋಹಾಲ್ ಮತ್ತು ಸಿಗರೇಟ್ ಅಭ್ಯಾಸ ಇರುವವರಿಗೆ ಚಿಕ್ಕ ವಯಸ್ಸಿನಲ್ಲೇ ಕೂದಲು ಬಿಲಿಯಾಗುತ್ತದೆ. ನೀವು ಇದನ್ನು ತಪ್ಪಿಸಲು ಬಯಸಿದರೆ, ನೀವು ಮಾದಕವಸ್ತುಗಳಿಂದ ದೂರವಿರಬೇಕು.
 

Trending News