ಆಲ್ಕೋಹಾಲ್ ಮಾತ್ರವಲ್ಲ, ನಿಮ್ಮ ಈ ಅಭ್ಯಾಸಗಳು ಲಿವರ್ ಡ್ಯಾಮೇಜ್ ಮಾಡಬಹುದು

Bad Habits for liver: ದೇಹದ ಎಲ್ಲಾ ಭಾಗಗಳು ತಮ್ಮದೇ ಆದ ಪ್ರಾಮುಖ್ಯತೆಯನ್ನು ಹೊಂದಿವೆ ಮತ್ತು ವಿಭಿನ್ನ ಕಾರ್ಯಗಳನ್ನು ನಿರ್ವಹಿಸುತ್ತವೆ. ನಮ್ಮ ಆರೋಗ್ಯಕ್ಕೆ ಬಹಳ ಮುಖ್ಯವಾದ ಕೆಲವು ಅಂಗಗಳಿದ್ದು ಅವುಗಳಲ್ಲಿ ಸಮಸ್ಯೆ ಉಂಟಾದಾಗ ದೇಹವು ಅನಾರೋಗ್ಯಕ್ಕೆ ಒಳಗಾಗುತ್ತದೆ. ದೇಹದ ಅಂತಹ ಒಂದು ಭಾಗವೆಂದರೆ ಯಕೃತ್ತು. ಇದನ್ನು ಸಾಮಾನ್ಯವಾಗಿ ಲಿವರ್ ಎಂದು ಕರೆಯಲಾಗುತ್ತದೆ. 

Written by - Yashaswini V | Last Updated : Jul 20, 2022, 12:37 PM IST
  • ಪ್ಯಾಕ್ ಮಾಡಿದ ಆಹಾರದ ಅತಿಯಾದ ಸೇವನೆಯು ಯಕೃತ್ತನ್ನು ಹಾನಿಗೊಳಿಸುತ್ತದೆ ಎಂದು ವೈದ್ಯರು ಹೇಳುತ್ತಾರೆ.
  • ಪ್ಯಾಕ್ ಮಾಡಿದ ಆಹಾರ ಸೇರ್ಪಡೆಗಳು, ಸಂರಕ್ಷಕಗಳು ಮತ್ತು ಸುವಾಸನೆಗಳನ್ನು ಹೆಚ್ಚು ಬಳಸಲಾಗುತ್ತದೆ.
  • ಈ ಎಲ್ಲಾ ವಸ್ತುಗಳು ಯಕೃತ್ತಿಗೆ ಹಾನಿಕಾರಕವಾಗಬಹುದು.
ಆಲ್ಕೋಹಾಲ್ ಮಾತ್ರವಲ್ಲ, ನಿಮ್ಮ ಈ ಅಭ್ಯಾಸಗಳು ಲಿವರ್ ಡ್ಯಾಮೇಜ್ ಮಾಡಬಹುದು  title=
Liver Health

ಲಿವರ್ ಆರೋಗ್ಯ:  ದೇಹದ ಪ್ರಮುಖ ಅಂಗಗಳಲ್ಲಿ ಯಕೃತ್ತು ಅಂದರೆ ಲಿವರ್ ಸಹ ಒಂದು. ಈ ಭಾಗವು ಆಹಾರವನ್ನು ಜೀರ್ಣಿಸಿಕೊಳ್ಳುವುದರ ಜೊತೆಗೆ, ಮಲ ರೂಪದಲ್ಲಿ  ವಿಷವನ್ನು ದೇಹದಿಂದ ಹೊರಹಾಕಲು ಕೆಲಸ ಮಾಡುತ್ತದೆ. ಈ ಕಾರಣದಿಂದಲೇ ಯಕೃತ್ತಿನ ಆರೋಗ್ಯದ ಬಗ್ಗೆ ಹೆಚ್ಚು ಒತ್ತು ನೀಡಲಾಗುತ್ತದೆ. ಸಾಮಾನ್ಯವಾಗಿ  ಆಲ್ಕೋಹಾಲ್ ಕುಡಿಯುವುದರಿಂದ ಲಿವರ್ ಹಾನಿಗೊಳಗಾಗುತ್ತದೆ ಎಂದು ಹೇಳುವುದನ್ನು ನೀವು ಕೇಳಿರಬಹುದು. ಆದರೆ, ನಮ್ಮ ದೈನಂದಿನ ಜೀವನದಲ್ಲಿ ನಾವು ಮಾಡುವ ಕೆಲವು ಸಣ್ಣ-ಪುಟ್ಟ ತಪ್ಪುಗಳು ಸಹ ಲಿವರ್ ಆರೋಗ್ಯಕ್ಕೆ ಹಾನಿಕಾರಕ ಎಂದು ಸಾಬೀತು ಪಡಿಸಬಹುದು ಎಂದು ನಿಮಗೆ ತಿಳಿದಿದೆಯೇ?

ಲಿವರ್ ಡ್ಯಾಮೇಜ್ ಮಾಡುವ ಈ ಅಭ್ಯಾಸಗಳಿಂದ ಇಂದಿನಿಂದಲೇ ಅಂತರ ಕಾಯ್ದುಕೊಳ್ಳಿ:
* ಅತಿಯಾದ ಧೂಮಪಾನ:

ಅನೇಕ ಜನರು ಆಲ್ಕೋಹಾಲ್ ಅನ್ನು ಯಕೃತ್ತಿಗೆ ಹಾನಿಕಾರಕವೆಂದು ಪರಿಗಣಿಸುತ್ತಾರೆ. ಹಾಗಾಗಿಯೇ ಮದ್ಯಪಾನದಿಂದ ದೂರ ಉಳಿಯುತ್ತಾರೆ. ಆದರೆ, ಬೀಡಿ ಸಿಗರೇಟ್ ಅನ್ನು ಹೆಚ್ಚು ಸೇವಿಸುತ್ತಾರೆ. ಅತಿಯಾದ ಧೂಮಪಾನವೂ ಯಕೃತ್ ಅನ್ನು ಹಾನಿಗೊಲಿಸುತ್ತದೆ. ವಾಸ್ತವವಾಗಿ, ಸಿಗರೇಟ್ ಹೊಗೆ ವಿಷಕಾರಿ ರಾಸಾಯನಿಕಗಳನ್ನು ಹೊಂದಿರುತ್ತದೆ, ಇದು ನಿಧಾನವಾಗಿ ಯಕೃತ್ತನ್ನು ತಲುಪುತ್ತದೆ ಮತ್ತು ಆಕ್ಸಿಡೇಟಿವ್ ಒತ್ತಡವನ್ನು ಉಂಟುಮಾಡುತ್ತದೆ. ಇದರ ಪರಿಣಾಮವಾಗಿ ಯಕೃತ್ತು ಸ್ವತಂತ್ರ ರಾಡಿಕಲ್ಗಳನ್ನು ಉತ್ಪಾದಿಸಲು ಪ್ರಾರಂಭಿಸುತ್ತದೆ ಮತ್ತು ಇದು ಯಕೃತ್ತಿನ ಜೀವಕೋಶಗಳನ್ನು ಹಾನಿಗೊಳಿಸುತ್ತದೆ.

* ಹೆಚ್ಚು ಸಿಹಿ ಸೇವನೆ: 
ಕೆಲವರಿಗೆ ಸಿಹಿ ತಿನಿಸುಗಳು ಎಂದರೆ ಪಂಚ ಪ್ರಾಣ. ಆದರೆ, ಆಹಾರದಲ್ಲಿ ಸಕ್ಕರೆಯ ಅತಿಯಾದ ಸೇವನೆಯು ಯಕೃತ್ತನ್ನು ಸಹ ಹಾನಿಗೊಳಿಸುತ್ತದೆ ಎಂದು ತಜ್ಞರು ಹೇಳುತ್ತಾರೆ. ಆರೋಗ್ಯಕ್ಕೆ ಹಾನಿಕಾರಕ ಎಂದು ಕೆಲವರು ಸಕ್ಕರೆಯನ್ನು ಮತ್ತು ಸಿಹಿ ತಿನಿಸುಗಳನ್ನು ತಿನ್ನುವುದನ್ನು ತಪ್ಪಿಸುತ್ತಾರೆ. ಆದರೆ, ನೆನಪಿರಲಿ ಇಷ್ಟು ಮಾತ್ರಕ್ಕೆ ನೀವು ಸಮಸ್ಯೆಯಿಂದ ದೂರ ಉಳಿಯುವುದಿಲ್ಲ. ನಿಜವಾದ ಸಮಸ್ಯೆಯೆಂದರೆ ಫ್ರಕ್ಟೋಸ್, ಇದು ಬ್ರೆಡ್, ಐಸ್ ಕ್ರೀಮ್, ಜ್ಯೂಸ್ ಮತ್ತು ಸೋಡಾದಂತಹ ಆಹಾರಗಳಲ್ಲಿ ಇರುತ್ತದೆ. ಮಾನವ ದೇಹದಲ್ಲಿನ ಹೆಚ್ಚಿನ ಜೀವಕೋಶಗಳು ಗ್ಲೂಕೋಸ್ ಅನ್ನು ಚಯಾಪಚಯಗೊಳಿಸಬಹುದಾದರೂ, ಯಕೃತ್ತಿನ ಜೀವಕೋಶಗಳು ಮಾತ್ರ ಫ್ರಕ್ಟೋಸ್ ಅನ್ನು ನಿಭಾಯಿಸಬಲ್ಲವು. ಅಂತಹ ಪರಿಸ್ಥಿತಿಯಲ್ಲಿ, ಒಬ್ಬ ವ್ಯಕ್ತಿಯು ಕಾಲಾನಂತರದಲ್ಲಿ ಹೆಚ್ಚು ಫ್ರಕ್ಟೋಸ್ ಅನ್ನು ಸೇವಿಸಿದರೆ, ಅದು ಯಕೃತ್ತನ್ನು ಹಾನಿಗೊಳಿಸುತ್ತದೆ.

ಇದನ್ನೂ ಓದಿ- ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡಲು ಈ ಬೇಳೆ ಕಾಳುಗಳನ್ನು ತಪ್ಪದೇ ಸೇವಿಸಿ

* ಪ್ಯಾಕ್ ಮಾಡಲಾದ ಆಹಾರಗಳ ಅಧಿಕ ಸೇವನೆ:
ಪ್ಯಾಕ್ ಮಾಡಿದ ಆಹಾರದ ಅತಿಯಾದ ಸೇವನೆಯು ಯಕೃತ್ತನ್ನು ಹಾನಿಗೊಳಿಸುತ್ತದೆ ಎಂದು ವೈದ್ಯರು ಹೇಳುತ್ತಾರೆ. ಪ್ಯಾಕ್ ಮಾಡಿದ ಆಹಾರ ಸೇರ್ಪಡೆಗಳು, ಸಂರಕ್ಷಕಗಳು ಮತ್ತು ಸುವಾಸನೆಗಳನ್ನು ಹೆಚ್ಚು ಬಳಸಲಾಗುತ್ತದೆ. ಈ ಎಲ್ಲಾ ವಸ್ತುಗಳು ಯಕೃತ್ತಿಗೆ ಹಾನಿಕಾರಕವಾಗಬಹುದು.

* ಅತಿಯಾದ ಔಷಧಿಗಳ ಬಳಕೆ:
ಅತಿಯಾಗಿ ಔಷಧ ಸೇವಿಸುವುದರಿಂದ ಯಕೃತ್ತು ಹಾನಿಯಾಗಬಹುದು ಎಂಬುದು ಅಧ್ಯಯನದಿಂದ ಸ್ಪಷ್ಟವಾಗಿದೆ. ಗಿಡಮೂಲಿಕೆಗಳು, ಪೂರಕಗಳು ಮತ್ತು ಔಷಧಗಳು ಸೇರಿದಂತೆ ವ್ಯಕ್ತಿಯು ಸೇವಿಸುವ ಯಾವುದನ್ನಾದರೂ ಒಡೆಯುವುದು ಯಕೃತ್ತಿನ ಕೆಲಸ, ಆದರೆ ಕೆಲವು ಇಂಗ್ಲಿಷ್ ಔಷಧಿಗಳು ತುಂಬಾ ಕಠಿಣವಾಗಿದ್ದು, ಹೆಚ್ಚು ಬಳಸುವುದರಿಂದ ಯಕೃತ್ತಿಗೆ ಹಾನಿಯಾಗಬಹುದು. ಔಷಧಿ ಸೇವಿಸಬಾರದು ಎಂದು ಇದರ ಅರ್ಥವಲ್ಲ. ಆದರೆ, ಸಣ್ಣ-ಪುಟ್ಟ ಸಮಸ್ಯೆಗಳಿಗೆ ವೈದ್ಯರ ಸಲಹೆ ಇಲ್ಲದೆ ಅತಿಯಾಗಿ ಔಷಧಿ ಸೇವಿಸುವುದನ್ನು ಕಡಿಮೆ ಮಾಡಬೇಕು.

* ಅಸುರಕ್ಷಿತ ಲೈಂಗಿಕತೆ:
ಅಸುರಕ್ಷಿತ ಲೈಂಗಿಕತೆಯು ಯಕೃತ್ತಿನ ಆರೋಗ್ಯಕ್ಕೆ ನೀವು ಯೋಚಿಸುವುದಕ್ಕಿಂತ ಹೆಚ್ಚು ಅಪಾಯಕಾರಿ. ಈ ಕಾರಣದಿಂದಾಗಿ ಒಬ್ಬ ವ್ಯಕ್ತಿಯು ಹೆಪಟೈಟಿಸ್‌ಗೆ ಒಳಗಾಗಬಹುದು ಎಂಬುದು ಅತ್ಯಂತ ಗಮನಾರ್ಹವಾದ ಅಪಾಯವಾಗಿದೆ. ಹೆಪಟೈಟಿಸ್ ಸಿ ಲೈಂಗಿಕವಾಗಿ ಹರಡುವ ಸಂಭಾವ್ಯ ಮಾರಣಾಂತಿಕ ಪಿತ್ತಜನಕಾಂಗದ ಕಾಯಿಲೆಯಾಗಿದೆ.

ಇದನ್ನೂ ಓದಿ- Joint Pain Relief: ಕೀಲು ನೋವಿನಿಂದ ತ್ವರಿತ ಪರಿಹಾರಕ್ಕಾಗಿ ಈ ಮನೆಮದ್ದುಗಳನ್ನು ಟ್ರೈ ಮಾಡಿ

* ಹೆಚ್ಚು ನೀರು ಕುಡಿಯದೆ ಇರುವುದು:
ಹೆಚ್ಚು ನೀರು ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದು, ಅದರ ಬಗ್ಗೆ ನೀವು ಹಲವಾರು ಬಾರಿ ಓದಿರಬೇಕು. ವೈದ್ಯರು ಸಾಮಾನ್ಯವಾಗಿ ದಿನಕ್ಕೆ 8 ಗ್ಲಾಸ್ ನೀರು ಕುಡಿಯುವಂತೆ ಶಿಫಾರಸು ಮಾಡುತ್ತಾರೆ. ಇದು ಸುಮಾರು 2 ಲೀಟರ್ಗಳಿಗೆ ಸಮನಾಗಿರುತ್ತದೆ. ಅದೇ ಸಮಯದಲ್ಲಿ, ನಿಮಗೆ ಬಾಯಾರಿಕೆಯಾಗದಿದ್ದರೂ, ನಡುವೆ ನೀರು ಕುಡಿಯುವುದು ಒಳ್ಳೆಯದು. ಕೆಲವರು ಬಹಳ ಕಡಿಮೆ ನೀರು ಕುಡಿಯುತ್ತಾರೆ. ಇದು ಹಲವು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಿದೆ. 

* ನಿದ್ರಾಹೀನತೆ:
ದೇಹಕ್ಕೆ ಆಹಾರದ ಜೊತೆಗೆ ನಿದ್ರೆಯೂ ಬಹಳ ಮುಖ್ಯ. ಸಾಕಷ್ಟು ನಿದ್ರೆ ಮಾಡದ ಕಾರಣ ದೇಹದಲ್ಲಿ ಅನೇಕ ರೀತಿಯ ಸಮಸ್ಯೆಗಳು ಉಂಟಾಗಲು ಪ್ರಾರಂಭಿಸುತ್ತವೆ, ಆದರೆ ನಿದ್ರಾಹೀನತೆಯು ನಿಮ್ಮ ಯಕೃತ್ತನ್ನು ಹಾನಿಗೊಳಿಸುತ್ತದೆ ಎಂದು ನಿಮಗೆ ತಿಳಿದಿದೆಯೇ. ವಾಸ್ತವವಾಗಿ, ಸಾಕಷ್ಟು ನಿದ್ರೆ ಪಡೆಯದಿರುವುದು ಯಕೃತ್ತಿನಲ್ಲಿ ಆಕ್ಸಿಡೇಟಿವ್ ಒತ್ತಡಕ್ಕೆ ಕಾರಣವಾಗಬಹುದು. ಇದಲ್ಲದೆ, ನಿದ್ರಾಹೀನತೆಯಿಂದ ಬಳಲುತ್ತಿರುವ ಜನರು ಮಧುಮೇಹ, ಬೊಜ್ಜು, ಹೃದ್ರೋಗದಂತಹ ಗಂಭೀರ ಕಾಯಿಲೆಗಳಿಗೆ ಒಳಗಾಗುತ್ತಾರೆ.

ಸೂಚನೆ:  ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ಖಂಡಿತವಾಗಿಯೂ ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News