ಯಶ್ ನಟನೆಯ ಟಾಕ್ಸಿಕ್ ಸಿನಿಮಾ ಶೂಟಿಂಗ್ ವಿಡಿಯೋ, ಫೋಟೋ ಇಂಟರ್‌ನೆಟ್‌ನಲ್ಲಿ ವೈರಲ್! ಲೀಕ್‌ ಮಾಡಿದ್ಯಾರು?

Toxic Movie Yash Look: ಯಶ್ ತಮ್ಮ ಮುಂಬರುವ ಚಿತ್ರ ಟಾಕ್ಸಿಕ್‌ನ ಸೆಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಟಾಕ್ಸಿಕ್‌ ಸಿನಿಮಾ ಸೆಟ್ ಫೋಟೋ ಮತ್ತು ಯಶ್‌ ಇರುವ ವಿಡಿಯೋಗಳು ವೈರಲ್‌ ಆಗುತ್ತಿವೆ

Written by - Chetana Devarmani | Last Updated : Mar 23, 2024, 10:56 AM IST
    • ಯಶ್ ನಟನೆಯ ಟಾಕ್ಸಿಕ್ ಸಿನಿಮಾ
    • ಟಾಕ್ಸಿಕ್ ಸಿನಿಮಾ ಶೂಟಿಂಗ್ ವಿಡಿಯೋ ಲೀಕ್‌
    • ಟಾಕ್ಸಿಕ್ ಸಿನಿಮಾ ಶೂಟಿಂಗ್ ಸೆಟ್
ಯಶ್ ನಟನೆಯ ಟಾಕ್ಸಿಕ್ ಸಿನಿಮಾ ಶೂಟಿಂಗ್ ವಿಡಿಯೋ, ಫೋಟೋ ಇಂಟರ್‌ನೆಟ್‌ನಲ್ಲಿ ವೈರಲ್! ಲೀಕ್‌ ಮಾಡಿದ್ಯಾರು?  title=

Toxic movie shooting set video: ಸ್ಯಾಂಡಲ್‌ವುಡ್‌ ರಾಕಿಂಗ್‌ ಸ್ಟಾರ್ ಯಶ್‌ ಅಭಿನಯದ ಟಾಕ್ಸಿಕ್‌ ಸಿನಿಮಾ ಮೇಲೆ ಸಿನಿ ಪ್ರಿಯರು ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡು ಕಾಯುತ್ತಿದ್ದಾರೆ. ಗೀತು ಮೋಹನ್‌ದಾಸ್ ನಿರ್ದೇಶನದ ಯಶ್‌ ಅಭಿನಯದ ಟಾಕ್ಸಿಕ್‌ ಸಿನಿಮಾ‌ ಚಿತ್ರೀಕರಣ ಶುರುವಾಗಿದೆ. ಯಶ್ ತಮ್ಮ ಮುಂಬರುವ ಚಿತ್ರ ಟಾಕ್ಸಿಕ್‌ನ ಸೆಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಟಾಕ್ಸಿಕ್‌ ಸಿನಿಮಾ ಸೆಟ್ ಫೋಟೋ ಮತ್ತು ಯಶ್‌ ಇರುವ ವಿಡಿಯೋಗಳು ವೈರಲ್‌ ಆಗುತ್ತಿವೆ.

ಕೆಜಿಎಫ್ ಚಾಪ್ಟರ್‌ 1 ಮತ್ತು ಕೆಜಿಎಫ್ ಚಾಪ್ಟರ್‌ 2 ಚಿತ್ರಗಳಲ್ಲಿ ರಾಕಿ ಭಾಯ್ ಪಾತ್ರದ ಮೂಲಕ ಒಯಾನ್‌ ಇಂಡಿಯಾ ಸ್ಟಾರ್‌ ಆಗಿರುವ ಯಶ್, ಪ್ರಸ್ತುತ ಟಾಕ್ಸಿಕ್ ಚಿತ್ರದ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ನಿರ್ದೇಶಕಿ ಗೀತು ಮೋಹನ್‌ದಾಸ್ ಈ ಚಿತ್ರಕ್ಕೆ ಆಕ್ಷನ್‌ ಕಟ್‌ ಹೇಳುತ್ತಿದ್ದಾರೆ. ಟಾಕ್ಸಿಕ್ ಚಿತ್ರವು ಭಾರತೀಯ ಚಿತ್ರರಂಗದ ಹಲವಾರು ದೊಡ್ಡ ಸ್ಟಾರ್‌ ನಟ - ನಟಿಯರ ತಾರಾಗಣವನ್ನು ಒಳಗೊಂಡಿರುತ್ತದೆ ಎಂದು ವರದಿಯಾಗಿದೆ. ಟಾಕ್ಸಿಕ್‌ ಮೇಲೆ ಜನರ ನಿರೀಕ್ಷೆ ಹೆಚ್ಚಾಗುತ್ತಿದ್ದಂತೆ ಸೆಟ್ ನಲ್ಲಿ ಯಶ್‌ ಇರುವ ಫೋಟೋ ಮತ್ತು ವಿಡಿಯೋಗಳು ಸಹ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿವೆ.  

ಇದನ್ನೂ ಓದಿ: IPL 2024 Anchor ಶೆಫಾಲಿ ಬಗ್ಗಾ ಯಾರು ಗೊತ್ತೇ! ಆಂಕರಿಂಗ್‌ಗಾಗಿ ಟೀಕೆಗೊಳಗಾದ ಈಕೆಯ ಸಂಭಾವನೆ ಕೇಳಿದ್ರೆ ಶಾಕ್‌ ಆಗುತ್ತೆ! 

ವೈರಲ್ ಫೋಟೋಗಳಲ್ಲಿ, ಯಶ್ ಅವರು ಮರೂನ್ ಟೀ ಶರ್ಟ್‌ ಮತ್ತು ಕಪ್ಪು ಪ್ಯಾಂಟ್‌ ಧರಿಸಿರುವುದನ್ನು ಕಾಣಬಹುದು. ಅದರ ಜೊತೆಗೆ ಯಶ್ ಸನ್‌ಗ್ಲಾಸ್‌‌ ಕೂಡ ಹಾಕಿದ್ದಾರೆ. ಒರಟಾದ ಗಡ್ಡದ ಜೊತೆ ಮಾಸ್‌ ಲುಕ್‌ ನಲ್ಲಿ ಕಾಣಿಸಿಕೊಂಡಿದ್ದಾರೆ. ಯಶ್‌ ಅವರು ನಿರ್ದೇಶಕರ ಜೊತೆಯಲ್ಲಿ ಇದ್ದಾರೆ. ಒಬ್ಬರಿಗೊಬ್ಬರು ಯಾವುದೋ ವಿಚಾರದ ಬಗ್ಗೆ ಗಂಭೀರ ಸಂಭಾಷಣೆಯಲ್ಲಿ ತೊಡಗಿರುವಂತೆ ತೋರುತ್ತಿದೆ. 

 

 

ಯಶ್ ಅವರ ಟಾಕ್ಸಿಕ್ ಚಿತ್ರದ ಶೀರ್ಷಿಕೆಯನ್ನು ಡಿಸೆಂಬರ್ 8 ರಂದು ಬಹಿರಂಗಪಡಿಸಲಾಯಿತು. ಗೀತು ಮೋಹನ್ ದಾಸ್ ಮಲಯಾಳಂ ಚಿತ್ರರಂಗದ ಪ್ರಸಿದ್ಧ ಹೆಸರು. ವರದಿಗಳ ಪ್ರಕಾರ, ಬಾಲಿವುಡ್ ತಾರೆ ಕರೀನಾ ಕಪೂರ್ ಮತ್ತು ಶ್ರುತಿ ಹಾಸನ್ ಕೂಡ ಟಾಕ್ಸಿಕ್‌ ಚಿತ್ರದಲ್ಲಿರಲಿದ್ದಾರೆ ಎನ್ನಲಾಗಿದೆ. ಆದರೆ, ಅಧಿಕೃತ ಘೋಷಣೆಗೆ ಕಾಯಲಾಗುತ್ತಿದೆ.

ಕರೀನಾ ಕಪೂರ್‌ ಗೂಗ್ಲಿ ಸ್ಟಾರ್ ಜೊತೆ ನಟಿಸುವ ಸಾಧ್ಯತೆಯಿದೆ, ಇದು ಅವರ ಚೊಚ್ಚಲ ಕನ್ನಡ ಸಿನಿಮಾ ಆಗಲಿದೆ. ಟಾಕ್ಸಿಕ್ ಕಥೆಯು ಗೋವಾದ ಡ್ರಗ್ ಕಾರ್ಟೆಲ್ ಅನ್ನು ಆಧರಿಸಿದೆ ಎಂದು ವರದಿಯಾಗಿದೆ. ಈ ಚಿತ್ರವನ್ನು ಕೆವಿಎನ್ ಪ್ರೊಡಕ್ಷನ್ ಮತ್ತು ನಾಯಕ ನಟ ಯಶ್ ನಿರ್ಮಿಸುತ್ತಿದ್ದಾರೆ. ಯಶ್ ಅವರ ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ತಯಾರಾಗುತ್ತಿರುವ ಮೊದಲ ಸಿನಿಮಾ ಇದಾಗಲಿದೆ. ಟಾಕ್ಸಿಕ್ ಏಪ್ರಿಲ್ 2025 ರಲ್ಲಿ ರಿಲೀಸ್‌ ಆಗಬಹುದು ಎನ್ನಲಾಗಿದೆ. ಯಶ್ ಟಾಕ್ಸಿಕ್ ಜೊತೆಗೆ ನಿತೇಶ್ ತಿವಾರಿ ಅವರ ರಾಮಾಯಣ ಸಿನಿಮಾದಲ್ಲಿ ಸಹ ರಾವಣನ ಪಾತ್ರವನ್ನು ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತದೆ. 

ಇದನ್ನೂ ಓದಿ: 'ನನಗೆ ನಿಮ್ಮ ಪತಿಯನ್ನು ಕೊಡ್ತೀರಾ..? ಗಂಡನನ್ನೇ ಕೇಳಿದ ಆಕೆಗೆ ನಟಿ ಜ್ಯೋತಿಕಾ ಏನಂದ್ರು ಗೊತ್ತೆ..! 

Trending News