ಸೌತ್‌ ನಟಿ ಕೀರ್ತಿಸುರೇಶ್ ಮದುವೆ ಯಾವಾಗ, ಎಲ್ಲಿ? ಅಧಿಕೃತವಾಗಿ ಮಾಹಿತಿ ನೀಡಿದ ನಟಿ!!

Actress Keerthy Suresh Marriage: ಮಹಾನಟಿ ಕೀರ್ತಿ ಸುರೇಶ್ ಶೀಘ್ರದಲ್ಲೇ ವಿವಾಹವಾಗಲಿದ್ದಾರೆ ಎಂದು ಹೇಳಲಾಗುತ್ತಿದೆ... ಹಲವು ವರ್ಷಗಳಿಂದ ವದಂತಿಯಾಗಿದ್ದ ಈ ವಿಚಾರವನ್ನು ಕೀರ್ತಿ ಖಚಿತಪಡಿಸಿದ್ದಾರೆ. ಮದುವೆ ಯಾವಾಗ? ಎಲ್ಲಿ? ಎಂದು ಅದೀಕೃತವಾಗಿ ಮಾಹಿತಿ ನೀಡಿದ್ದಾರೆ..    

Written by - Savita M B | Last Updated : Dec 2, 2024, 11:00 AM IST
  • ಕೀರ್ತಿ ಸುರೇಶ್ ನಟಿ ಮೇನಕಾ ಮತ್ತು ನಿರ್ಮಾಪಕ ಸುರೇಶ್ ಅವರ ಕಿರಿಯ ಮಗಳು
  • ಈ ಸಿನಿಮಾ ಕೀರ್ತಿ ಸುರೇಶ್‌ಗೆ ಒಳ್ಳೆಯ ಮನ್ನಣೆ ತಂದುಕೊಟ್ಟಿತು.
ಸೌತ್‌ ನಟಿ ಕೀರ್ತಿಸುರೇಶ್ ಮದುವೆ ಯಾವಾಗ, ಎಲ್ಲಿ? ಅಧಿಕೃತವಾಗಿ ಮಾಹಿತಿ ನೀಡಿದ ನಟಿ!!  title=

Actress Keerthy Suresh: ಕೀರ್ತಿ ಸುರೇಶ್ ನಟಿ ಮೇನಕಾ ಮತ್ತು ನಿರ್ಮಾಪಕ ಸುರೇಶ್ ಅವರ ಕಿರಿಯ ಮಗಳು.. ಚಿಕ್ಕವರಿದ್ದಾಗಲೇ ಅವರು ತಮ್ಮ ತಂದೆ ನಿರ್ಮಿಸಿದ ಮಲಯಾಳಂ ಚಿತ್ರಗಳಲ್ಲಿ ಬಾಲನಟಿಯಾಗಿ ನಟಿಸಿದ್ದಾರೆ. ಆ ನಂತರ 2013ರಲ್ಲಿ ಮೋಹನ್ ಲಾಲ್ ಅಭಿನಯದ ‘ಗೀತಾಂಜಲಿ’ ಚಿತ್ರದ ಮೂಲಕ ಬೆಳ್ಳಿತೆರೆಗೆ ನಾಯಕಿಯಾಗಿ ಪರಿಚಯವಾದರು. ಈ ಚಿತ್ರವನ್ನು ಖ್ಯಾತ ನಿರ್ದೇಶಕ ಪ್ರಿಯದರ್ಶನ್ ನಿರ್ದೇಶಿಸಿದ್ದಾರೆ. ಈ ಸಿನಿಮಾ ಕೀರ್ತಿ ಸುರೇಶ್‌ಗೆ ಒಳ್ಳೆಯ ಮನ್ನಣೆ ತಂದುಕೊಟ್ಟಿತು.

ಇದರ ನಂತರ, ಅವರು ಎಎಲ್ ವಿಜಯ್ ನಿರ್ದೇಶನದ ವಿಕ್ರಮ್ ಪ್ರಭು ಅವರೊಂದಿಗೆ 'ಇಧು ಎನ್ನ ಮಾಯಂ' ಚಿತ್ರದ ಮೂಲಕ ತಮಿಳಿಗೆ ಪಾದಾರ್ಪಣೆ ಮಾಡಿದರು. ಕಾಲಿವುಡ್ ನ ಮೊದಲ ಸಿನಿಮಾ ಯಶಸ್ಸು ಕಾಣದಿದ್ದರೂ ಒಳ್ಳೆ ಆಫರ್ ಗಳು ನಟಿಗೆ ಸಿಕ್ಕಿವೆ. ಶಿವ ಕಾರ್ತಿಕೇಯನ್ ಜೊತೆಗಿನ `ರಜನಿ ಮುರುಗನ್' ಮತ್ತು ``ರೆಮೋ' ಸಿನಿಮಾಗಳು ಯಶಸ್ವಿಯಾದವು.

ಇದನ್ನೂ ಓದಿ-Shreerastu Shubhamastu Serial: ಶ್ರೀರಸ್ತು ಶುಭಮಸ್ತು ಸಿರೀಯಲ್ ನಟ ಮಾಧವ್ ಅವರ ಪತ್ನಿ ಯಾರು ಗೊತ್ತೇ? ಅವರೂ ಕೂಡ ಫೇಮಸ್‌ ಸೆಲೆಬ್ರಿಟಿ!

ಅದೇ ರೀತಿ ಅವರ ಅನೇಕ ಚಿತ್ರಗಳು ಫ್ಲಾಪ್ ಆಗಿದ್ದರೂ ಕೀರ್ತಿ ಸುರೇಶ್ ಕ್ರೇಜ್ ಕಡಿಮೆಯಾಗಿಲ್ಲ. ತೆಲುಗಿನಲ್ಲಿ ``ನೇನು ಶೈಲಜಾ ಸಿನಿಮಾದ ಮೂಲಕ ಹಿಟ್ ಪಡೆದು ಎಲ್ಲರ ಗಮನ ಸೆಳೆದರು. ನಂತರ ``ಮಹಾನಟಿ' ಚಿತ್ರ ಆಕೆಯನ್ನು ಇಡೀ ದಕ್ಷಿಣ ಇಂಡಸ್ಟ್ರಿಗೆ ಪರಿಚಯಿಸಿತು. ಈ ಚಿತ್ರಕ್ಕಾಗಿ ಅವರು ಅತ್ಯುತ್ತಮ ನಟಿ ರಾಷ್ಟ್ರ ಪ್ರಶಸ್ತಿಯನ್ನು ಸಹ ಪಡೆದರು.  

ತೆಲುಗಿನಲ್ಲಿ ತಯಾರಾದ `ನೆನು ಲೋಕಲ್’ ಹಿಟ್ ಆದರೆ `ಅಜ್ಞಾತವಾಸಿ’, ``ರಂಗ್ ದೇ’, ‘ಮಿಸ್ ಇಂಡಿಯಾ’, ಮತ್ತು ‘ಗುಡ್ ಲಕ್ ಸಖಿ’ ಫ್ಲಾಪ್ ಆಗಿದ್ದವು. ನಾನಿ ಅಭಿನಯದ `ದಸರಾ' ದೊಡ್ಡ ಹಿಟ್ ಆಗಿತ್ತು. ಇದಲ್ಲದೇ ನಟಿ ಕೀರ್ತಿ ಸುರೇಶ್ ಕಲ್ಕಿ 2898 AD ಚಿತ್ರಕ್ಕೆ ಬುಜ್ಜಿ ಪಾತ್ರಕ್ಕೆ ಧ್ವನಿ ನೀಡಿದ್ದಾರೆ. ಈಗ ಆಕೆಗೆ ತೆಲುಗಿನಲ್ಲಿ ಯಾವುದೇ ಸಿನಿಮಾಗಳಿಲ್ಲ. 

ಇದನ್ನೂ ಓದಿ-ಕೊನೆಯುಸಿರೆಳೆದ ಖ್ಯಾತ ಸೀರಿಯಲ್ ನಟಿ ಶೋಭಿತಾ ಶಿವಣ್ಣ ಅವರ ಪತಿ ಯಾರು ಗೊತ್ತಾ..?

ಇತ್ತೀಚೆಗಷ್ಟೇ ಕೀರ್ತಿ ಸುರೇಶ್‌ ನಟನೆಯ ‘ರಘು ತಾತಾ’ ಸಿನಿಮಾ ತೆರೆಕಂಡಿತ್ತು. ಪ್ರಸ್ತುತ ಅವರು ನಟಿಸಿದ 'ಬೇಬಿ ಜಾನ್' ಹಿಂದಿಯಲ್ಲಿ ಮುಂದಿನ ತಿಂಗಳು 25 ರಂದು ಬಿಡುಗಡೆಯಾಗಲಿದೆ. ಇದೇ ವೇಳೆ 32 ವರ್ಷದ ವಯಸ್ಸಿನ ನಟಿ ಕೀರ್ತಿ ಸುರೇಶ್‌ ಅವರು ಶೀಘ್ರದಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎನ್ನಲಾಗುತ್ತಿದೆ.. 

ಕೀರ್ತಿ ಸುರೇಶ್ ಡಿಸೆಂಬರ್ 11 ರಂದು ತಮ್ಮ ಬಹುಕಾಲದ ಗೆಳೆಯ ಆಂಟೋನಿ ಅವರನ್ನು ವರಿಸಲಿದ್ದಾರೆ. ಈ ಬಗ್ಗೆ ಈಗಾಗಲೇ ವರದಿಗಳು ಬಂದಿದ್ದರೂ ಕೀರ್ತಿ ಸುರೇಶ್ ಅವರಿಂದ ಯಾವುದೇ ಅಧಿಕೃತ ಹೇಳಿಕೆ ನೀಡಿರಲಿಲ್ಲ.. ಇತ್ತೀಚೆಗಷ್ಟೇ ತಿರುಪತಿ ವೆಂಕಟೇಶ್ವರ ಸ್ವಾಮಿಯ ದರ್ಶನ ಪಡೆದ ಕೀರ್ತಿ ಸುರೇಶ್ ತಮ್ಮ ಮದುವೆ ಮುಂದಿನ ತಿಂಗಳು 11 ರಂದು ಗೋವಾದಲ್ಲಿ ಅವರ ಮದುವೆ ನಡೆಯಲಿದೆ ಎಂದು ಹೇಳಿದ್ದಾರೆ.  

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News