ರಾಹುಲ್ ಗಾಂಧಿ ಕಣ್ಸನ್ನೆಗೆ ಪ್ರಿಯಾ ವಾರಿಯರ್ ಹೇಳಿದ್ದೇನು ಗೊತ್ತೇ?

    

Last Updated : Jul 21, 2018, 11:52 AM IST
ರಾಹುಲ್ ಗಾಂಧಿ ಕಣ್ಸನ್ನೆಗೆ ಪ್ರಿಯಾ ವಾರಿಯರ್ ಹೇಳಿದ್ದೇನು ಗೊತ್ತೇ?  title=

ನವದಹೆಲಿ: ತಮ್ಮ ಕಣ್ಸನ್ನೆಯಿಂದಲೇ ಖ್ಯಾತಿಗೆ ಬಂದ ಪ್ರಿಯಾ ವಾರಿಯರ್ ಈಗ ದೇಶದ ಪ್ರಮುಖ ಸೆಲೆಬ್ರಿಟಿ ಎನ್ನುವಷ್ಟರ ಮಟ್ಟಿಗೆ ಅವರು ಜನಪ್ರೀಯರಾಗಿದ್ದಾರೆ. ಈಗ ಇಂತಹ ಕಣ್ಸನ್ನೆ ಕ್ಲಬ್ ಗೆ ಇನ್ನೊಬ್ಬ ವ್ಯಕ್ತಿ ಸೇರ್ಪಡೆಯಾಗಿದ್ದಾರೆ.ಅವರು ಮತ್ತೆ ಬೇರೆ ಯಾರು ಅಲ್ಲ ರಾಹುಲ್ ಗಾಂಧಿ.

ಹೌದು, ರಾಹುಲ್ ಗಾಂಧಿ ಶುಕ್ರವಾರದಂದು ತಮ್ಮ ಭಾಷಣ ಮುಗಿದ ನಂತರ ತಮ್ಮ ಆಸನದಲ್ಲಿ ಕುಳಿತುಕೊಳ್ಳುವ ಸಂದರ್ಭದಲ್ಲಿ ಕಣ್ಸನ್ನೆ ಮಾಡಿದ್ದು ಈಗ ಸೋಶಿಯಲ್ ಮಿಡಿಯಾದಲ್ಲಿ ಸಾಕಷ್ಟು ಸುದ್ದಿ ಮಾಡಿದೆ.ಈಗ ಇದಕ್ಕೆ ಕಣ್ಸನ್ನೆ ಸುಂದರಿ ಪ್ರಿಯಾ ವಾರಿಯರ್ ಪ್ರತಿಕ್ರಯಿಸಿದ್ದು ಹಾಗಾಗ್ರೆ ಅವರು ಏನು ಹೇಳಿದ್ದಾರೆ ನೀವೇ ಓದಿ." ನಾನು ಕಾಲೇಜ್ ನಿಂದ ಹಿಂದಿರುಗಿದ ನಂತರ ಸಂಸತ್ತಿನಲ್ಲಿ ರಾಹುಲ್ ಗಾಂಧಿಯವರು ನಮ್ಮ ಪ್ರಧಾನಮಂತ್ರಿ ಮೋದಿ ಯವರಿಗೆ ಕಣ್ಸನ್ನೆ ಮಾಡಿದರ ಬಗ್ಗೆ ಸುದ್ದಿಯನ್ನು ನೋಡಿದೆ. ಅವರು ಕಣ್ಸನ್ನೆ ಮೂಲಕ ಸ್ವಾಗತಿಸಿದ್ದು ನಿಜಕ್ಕೂ ಪ್ರೀತಿಯ ಸೂಚಕ, ಚಿತ್ರವೊಂದರಲ್ಲಿ ನಾನು ಶುರು ಮಾಡಿದ ಈ ಗುರುತು ಎನ್ನುವುದಕ್ಕೆ ನನಗೆ ತುಂಬಾ ಸಂತಸವಾಗುತ್ತಿದೆ "ಎಂದು ತಿಳಿಸಿದರು.
 

Trending News