"ದುಡ್ಡು ಹಾಳಾದ್ರೆ ಹೇಗೋ ಸಂಪಾದಿಸಬಹುದು, ಆದರೆ ವ್ಯಕ್ತಿತ್ವವನ್ನು ಹೇಗೆ ಸಂಪಾದಿಸೋದು?" ಅದಿತಿ ಹೀಗೆ ಹೇಳಿದ್ದೇಕೆ?

ಸ್ಯಾಂಡಲ್ ವುಡ್ ಸ್ಟಾರ್ ನಟಿಯರಲ್ಲಿ ಒಬ್ಬರಾಗಿರೋ ಚಂದದ ಚೆಲುವೆ ಅದಿತಿ ಪ್ರಭುದೇವ್ ಸದ್ಯ ಓಲ್ಡ್ ಮಾಂಕ್ (Old Monk) ಸಿನಿಮಾ ಯಶಸ್ಸಿನ ಖುಷಿಯಲ್ಲಿದ್ದಾರೆ.ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಇರೋ ನಟಿ ಯೂಟ್ಯೂಬ್ ನಲ್ಲೂ ಸಖತ್ ಸದ್ದು ಮಾಡ್ತಿದ್ದಾರೆ.

Written by - CHARITHA PATEL | Edited by - Manjunath N | Last Updated : Apr 6, 2022, 04:57 PM IST
  • ಸ್ಯಾಂಡಲ್ ವುಡ್ ಸ್ಟಾರ್ ನಟಿಯರಲ್ಲಿ ಒಬ್ಬರಾಗಿರೋ ಚಂದದ ಚೆಲುವೆ ಅದಿತಿ ಪ್ರಭುದೇವ್ ಸದ್ಯ ಓಲ್ಡ್ ಮಾಂಕ್ (Old Monk) ಸಿನಿಮಾ ಯಶಸ್ಸಿನ ಖುಷಿಯಲ್ಲಿದ್ದಾರೆ.
"ದುಡ್ಡು ಹಾಳಾದ್ರೆ ಹೇಗೋ ಸಂಪಾದಿಸಬಹುದು, ಆದರೆ ವ್ಯಕ್ತಿತ್ವವನ್ನು ಹೇಗೆ ಸಂಪಾದಿಸೋದು?" ಅದಿತಿ ಹೀಗೆ ಹೇಳಿದ್ದೇಕೆ?  title=
Photo Courtesy: Facebook

ಬೆಂಗಳೂರು: ಸ್ಯಾಂಡಲ್ ವುಡ್ ಸ್ಟಾರ್ ನಟಿಯರಲ್ಲಿ ಒಬ್ಬರಾಗಿರೋ ಚಂದದ ಚೆಲುವೆ ಅದಿತಿ ಪ್ರಭುದೇವ್ ಸದ್ಯ ಓಲ್ಡ್ ಮಾಂಕ್ (Old Monk) ಸಿನಿಮಾ ಯಶಸ್ಸಿನ ಖುಷಿಯಲ್ಲಿದ್ದಾರೆ.ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಇರೋ ನಟಿ ಯೂಟ್ಯೂಬ್ ನಲ್ಲೂ ಸಖತ್ ಸದ್ದು ಮಾಡ್ತಿದ್ದಾರೆ.

ಚಂದನವನದ ಚಂದದ ನಟಿ ಅದಿತಿ ಪ್ರಭುದೇವ್ (Aditi Prabhudeva) ದಾಂಪತ್ಯಕ್ಕೆ ಕಾಲಿಡೋಕೆ ರೆಡಿಯಾಗಿದ್ದಾರೆ. ಉದ್ಯಮಿ ಯಶಸ್ ಜೊತೆ ಅದಿತಿ ಎಂಗೇಜ್ಮೆಂಟ್ ಆಗಿದೆ.ಅದಿತಿ ತಾವು ಮದ್ವೆ ಆಗ್ತಿರೋ ಯಶಸ್ ಅವರನ್ನು ಫಿಯಾನ್ಸೆ ಅಂತ ಕರೆಯಲು ಇಷ್ಟಪಡಲ್ವಂತೆ. ಅವರು ಯಶಸ್ ತನ್ನ ಬೆಸ್ಟ್ ಫ್ರೆಂಡ್ ಅಂತ ಹೇಳಿದ್ದಾರೆ.

ಹಲವಾರು ವರ್ಷಗಳ ಕಾಲ ನಾನು ಸಿಂಗಲ್ಲಾಗಿದ್ದವಳು.ಯಶಸ್ ಸಿಕ್ಕಿರೋದು ಖುಷಿ ಕೊಟ್ಟಿದೆ. ನಂಗೆ ಫಿಯಾನ್ಸೆ ಅನ್ನೋದಕ್ಕೆ ಒಬ್ಬ ಬೆಸ್ಟ್ ಫ್ರೆಂಡ್ ಸಿಕ್ಕಿದ್ದಾರೆ. ಅವರ ನಡವಳಿಕೆ ಆಗಿರಬಹುದು..ನನ್ನ ನೋಡಿಕೊಳ್ಳೋ ರೀತಿ , ನನ್ನ ಕರಿಯರ್ ಗೆ ಸಪೋರ್ಟ್ ಮಾಡೋ ರೀತಿ , ನಂಗೆ ಬೂಸ್ಟ್ ಮಾಡೋದಾಗಿರಬಹುದು, ಟೋಟಲಿ ವೆರಿ ನೈಸ್ ಪರ್ಸನ್, ವೆರಿ ಬೆಸ್ಟ್ ಫ್ರೆಂಡ್ ಎನ್ನಬಹುದು ಎಂದು ಅದಿತಿ ಯಶಸ್ ಬಗ್ಗೆ ಮನಬಿಚ್ಚಿ ಮಾತಾಡಿದ್ದಾರೆ.

ಇದನ್ನೂ ಓದಿ: ಕನ್ನಡ ಚಿತ್ರರಂಗದಲ್ಲಿ ಕನ್ನಡತಿಯರಿಗೇ ಅವಕಾಶ ಸಿಗ್ತಿಲ್ವಾ!?

ಅಂದಹಾಗೆ ಅದಿತಿ ಪ್ರಭುದೇವ ಅವರನ್ನು ಮೊದಲು ಇಷ್ಟಪಟ್ಟಿದ್ದು ಯಶಸ್​. ಕುಟುಂಬದವರ ಮೂಲಕ ಮದುವೆ ಪ್ರಪೋಸಲ್​ ಬಂದಾಗ ಅದಿತಿ ಗ್ರೀನ್​ ಸಿಗ್ನಲ್​ ನೀಡಿದರು.ಆ ಕುರಿತು ಅದಿತಿ ಸ್ವತಃ ವಿವರ ನೀಡಿದ್ದಾರೆ.ನಮ್ಮದು ಅರೇಂಜ್​ ಮ್ಯಾರೇಜ್​. ಇದರ ಬಗ್ಗೆ ಖುಷಿ ಇದೆ. ಎಲ್ಲದಕ್ಕೂ ಕಾಲ ಕೂಡಿಬರಬೇಕು. ಯಾವಾಗಲೂ ನಾನು ಒಬ್ಬೊಂಟಿಯಾಗಿ ಇರುತ್ತಿದ್ದೆ. ಕುಟುಂಬದ ಸ್ನೇಹಿತರೊಬ್ಬರು ಯಶಸ್​ ಅವರನ್ನು ಪರಿಚಯಿಸಿದರು. ಅವರ ಕುಟುಂಬದವರಿಗೆ ನಾನೆಂದರೆ ಮೊದಲಿನಿಂದಲೂ ಇಷ್ಟ’ಎಂದು ಅದಿತಿ ಪ್ರಭುದೇವ ಹೇಳಿದರು.

ಎಲ್ಲೋ ಫಾರಿನ್​ನಲ್ಲಿ ಕುಳಿತು ಕೆಲಸ ಮಾಡುವವರು ನನಗೆ ಇಷ್ಟ ಆಗುವುದಿಲ್ಲ.ತೋಟ, ಕೃಷಿ, ಹಸು ಬಗ್ಗೆ ಆಸಕ್ತಿ ಇರುವವಳು ನಾನು. ಅಂಥ ಹುಡುಗನನ್ನು ಮನೆಯವರು ಕೂಡ ಒಪ್ಪಬೇಕಿತ್ತು. ಆ ವಿಚಾರದಲ್ಲಿ ಒತ್ತಡ ಇತ್ತು.ಯಶಸ್​ ಕೂಡ ನನ್ನ ರೀತಿಯ ವ್ಯಕ್ತಿ. ಕಾಫಿ ತೋಟ, ಮರ-ಗಿಡಗಳ ಬಗ್ಗೆ ಅವರಿಗೆ ಇಂಟರೆಸ್ಟ್​ ಇದೆ. ಆ್ಯಟಿಟ್ಯೂಡ್​ ಸಮಸ್ಯೆ ಇಲ್ಲ. ಎಲ್ಲರ ಜೊತೆ ನಗುತ್ತ ಮಾತನಾಡುತ್ತಾರೆ.ಆ ವ್ಯಕ್ತಿತ್ವವೇ ಮುಖ್ಯ.ದುಡ್ಡು ಹಾಳಾಗಿ ಹೋದರೆ ಹೇಗೋ ಸಂಪಾದನೆ ಮಾಡಬಹುದು ಆದರೆ ವ್ಯಕ್ತಿತ್ವವನ್ನು ಹೇಗೆ ಸಂಪಾದನೆ ಮಾಡೋದು? ಒಳ್ಳೆಯ ಹುಡುಗ ಎನಿಸಿತು, ಮನೆಯವರೆಲ್ಲ ಒಪ್ಪಿಕೊಂಡರು.ಎಂಗೇಜ್​ಮೆಂಟ್​ ಆದ ಬಳಿಕ ನಾನು ಖಂಡಿತಾ ಅವರನ್ನು ತುಂಬ ಪ್ರೀತಿಸುತ್ತಿದ್ದೇನೆ' ಎಂದು ಅದಿತಿ ಪ್ರಭುದೇವ ಹೇಳಿದ್ದಾರೆ.

ಇದನ್ನೂ ಓದಿ: Aditi Prabhudeva: ಶಾನೆ ಟಾಪ್ ಆಗಿತ್ತು ಅದಿತಿ ಪ್ರಭುದೇವ ಮೊದಲ ಸ್ಟ್ಯಾಂಡಪ್ ಕಾಮಿಡಿ ಶೋ!

ಆರಂಭದಲ್ಲಿ ನನ್ನ ಗುಣಕ್ಕೆ ಯಶಸ್​ ಸೆಟ್​ ಆಗುತ್ತಾರಾ ಎಂಬ ಪ್ರಶ್ನೆ ನನ್ನ ಮನದಲ್ಲಿ ಇತ್ತು. ನಾವು 18-20 ರ ವಯಸ್ಸಿನವರಲ್ಲ. ಈವರೆಗೆ ಹಲವು ಜನರನ್ನು ನೋಡಿರುತ್ತೇವೆ. ಬೇರೆಯವರ ಜೀವನವನ್ನು ನೋಡಿ ತಿಳಿದುಕೊಂಡಿರುತ್ತೇವೆ. ಆ ಮೆಚ್ಯುರಿಟಿ ಇರುವುದರಿಂದ ಯಶಸ್ ಅವರ ವಿಚಾರದಲ್ಲಿ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಯ್ತು’ಎಂದು ಅದಿತಿ ಪ್ರಭುದೇವ ತಿಳಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News