/kannada/photo-gallery/shukra-gochar-laxmi-narayana-yoga-bless-this-zodiac-signs-with-huge-wealth-and-success-221344 Laxmi Narayana Yoga: ಈ ರಾಶಿಯವರಿಗೆ ಭಾಗ್ಯೋದಯ, ಸಿಗಲಿದೆ ಅಪಾರ ಕೀರ್ತಿ ಯಶಸ್ಸು Laxmi Narayana Yoga: ಈ ರಾಶಿಯವರಿಗೆ ಭಾಗ್ಯೋದಯ, ಸಿಗಲಿದೆ ಅಪಾರ ಕೀರ್ತಿ ಯಶಸ್ಸು 221344

ಮುಂಬೈ:ಕರೋನಾ ವೈರಸ್ ಬಾಲಿವುಡ್ ನಲ್ಲಿ ತನ್ನ ಮೊದಲ ಬಲಿಪಡೆದಿದೆ. ಸುಪ್ರಸಿದ್ಧ ಸಂಗೀತ ನಿರ್ದೇಶಕ ಜೋಡಿ ಸಾಜಿದ್-ವಾಜಿದ್ ಅವರಲ್ಲಿ  ವಾಜಿದ್ ಖಾನ್ ಮುಂಬೈನ ಸುರಾನಾ ಸೇಥಿಯಾ ಆಸ್ಪತ್ರೆಯಲ್ಲಿ ಕೊರೊನಾ ವೈರಸ್ ಸೋಂಕಿನಿಂದ ಹಾಗೂ ಮೂತ್ರಪಿಂಡ ವೈಫಲ್ಯದಿಂದ ತಡರಾತ್ರಿ ಕೊನೆಯುಸಿರೆಳೆದಿದ್ದಾರೆ.ವಾಜಿದ್ ಸಾವಿನ ನಂತರ ಬಿಎಂಸಿ ನೀಡಿದ ಮರಣ ಪ್ರಮಾಣಪತ್ರದಲ್ಲಿ 43 ವರ್ಷದ ವಾಜಿದ್ ಖಾನ್ ಸಾವಿಗೆ ಕಾರಣ ಕರೋನಾ ವೈರಸ್ ಮತ್ತು ಮೂತ್ರಪಿಂಡ ವೈಫಲ್ಯ ಎಂದು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಅವರ ಸಾವಿನ ಸಮಯವನ್ನು ಮಧ್ಯಾಹ್ನ 1.00 ಕ್ಕೆ ದಾಖಲಿಸಲಾಗಿದೆ ಎನ್ನಲಾಗಿದೆ. ಈ ಕುರಿತು ಮಾಹಿತಿ ನೀಡಿರುವ ಅವರ ಸಹೋದರ ಸಾಜಿದ್ ಖಾನ್, ವಾಜಿದ್ ಕೊರೊನಾ ವೈರಸ್ ಹಾಗೂ ಕಿಡ್ನಿ ವೈಫಲ್ಯದಿಂದ ಬಳಲಿದರೂ ಕೂಡ ಅವರ ಸಾವು ಮಾತ್ರ ಹೃದಯಾಘಾತದಿಂದ ಸಂಭವಿಸಿದೆ ಎಂದು ಹೇಳಿದ್ದಾರೆ.

ಮೂತ್ರಪಿಂಡ ಮತ್ತು ಗಂಟಲಿನ ಸೋಂಕಿನಿಂದಾಗಿ ಬಳಸುತ್ತಿದ್ದ ವಾಜಿದ್ ಖಾನ್ ಕಳೆದ ಸುಮಾರು 2-3 ತಿಂಗಳಿನಿಂದ ಸುರಾನಾ ಸೇಥಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಕಳೆದ ಮೂರು ನಾಲ್ಕು ದಿನಗಳಿಂದ ವಾಜಿದ್ ವೆಂಟಿಲೇಟರ್‌ನಲ್ಲಿದ್ದರು ಮತ್ತು ಅವರ ಸ್ಥಿತಿ ಗಂಭೀರವಾಗಿದೆ ಎಂದು ಮೂಲಗಳು ಬಹಿರಂಗಪಡಿಸಿದ್ದವು.

ಏತನ್ಮಧ್ಯೆ, ವಾಜಿದ್ ಖಾನ್ ಅವರ ಶವವನ್ನು ಆಂಬ್ಯುಲೆನ್ಸ್ ಮೂಲಕ ವರ್ಸೋವಾ ಮುಸ್ಲಿಂ ಸ್ಮಶಾನಕ್ಕೆ ತರಲಾಗಿದ್ದು, ಶೀಘ್ರದಲ್ಲೇ ಅವರನ್ನು ಹಸ್ತಾಂತರಿಸುವ ಪ್ರಕ್ರಿಯೆ ಪ್ರಾರಂಭವಾಗಲಿದೆ. ಏಪ್ರಿಲ್ 29 ರಂದು ನಿಧನರಾದ ಇರ್ಫಾನ್ ಖಾನ್ ಅವರನ್ನೂ ಕೂಡ ಇದೆ ಸ್ಮಶಾನದಲ್ಲಿ 'ಸುಪುರ್ದೆ ಖಾಕ್ ಮಾಡಲಾಗಿತ್ತು.

2018 ರಲ್ಲಿ ವಾಜಿದ್ ಅವರಿಗೆ ಹೃದಯಾಘಾತ ಸಂಭವಿಸಿತ್ತು. ನಂತರ ಅವರು ಆಂಜಿಯೋಪ್ಲ್ಯಾಸ್ಟಿ ಚಿಕಿತ್ಸೆಗೂ ಕೂಡ ಒಳಗಾಗಿದ್ದರು. ಮೂತ್ರಪಿಂಡದ ಸಮಸ್ಯೆ ಇದ್ದ ಕಾರಣ ನಂತರ ಅವರಿಗೆ  ಮೂತ್ರಪಿಂಡ ಕಸಿ ಕೂಡ ನಡೆಸಲಾಗಿತ್ತು. ಅಂದಿನಿಂದ, ಅವರ ವಿಕರ್ಷಣ ಸಾಮರ್ಥ್ಯವು ತುಂಬಾ ಕಡಿಮೆಯಾಗಿತ್ತು ಎನ್ನಲಾಗಿದೆ. ಬಳಿಕ ವಾಜಿದ್‌ಗೆ ಗಂಟಲು ಸೋಂಕು ಕೂಡ ಇತ್ತು ಹಾಗೂ ನಂತರದ ದಿನಗಳಲ್ಲಿ ಅದು ಗಂಭೀರ ಸ್ವರೂಪ ಪಡೆದುಕೊಂಡಿತ್ತು ಎನ್ನಲಾಗಿದೆ.  ಮೂತ್ರಪಿಂಡ ಕಸಿ ಮಾಡಿದ ನಂತರ ವಾಜಿದ್ ಹಲವಾರು ಬಾರಿ ಮೂತ್ರಪಿಂಡದ ಸೋಂಕಿಗೆ ಒಳಗಾಗಬೇಕಾಯಿತು, ಇದರಿಂದಾಗಿ ಅವರು ತುಂಬಾ ದುರ್ಬಲರಾಗಿದ್ದರು ಎಂದು ಅವರ ಆಪ್ತರೊಬ್ಬರು ಮಾಹಿತಿ ನೀಡಿದ್ದಾರೆ.

ಸಹೋದರರಾದ ಸಾಜಿದ್ ಮತ್ತು ವಾಜಿದ್ ಇಬ್ಬರೂ 1998 ರಲ್ಲಿ ಸಲ್ಮಾನ್ ಖಾನ್-ಕಾಜೋಲ್ ಅಭಿನಯದ ಪ್ಯಾರ್ ಕಿಯಾ ತೋ ಡರನಾ ಕ್ಯಾ ಚಿತ್ರದ ಮೂಲಕ ತಮ್ಮ  ವೃತ್ತಿಜೀವನವನ್ನು ಪ್ರಾರಂಭಿಸಿದ್ದರು. ಇದರ ನಂತರ, ಸಾಜಿದ್-ವಾಜಿದ್ ನಿರ್ದೇಶಕ ಜೋಡಿ  ಸಲ್ಮಾನ್ ಖಾನ್ ಅವರ ಚಿತ್ರ ತೇರೆ ನಾಮ್, ಮುಜ್ಸೆ ಶಾದಿ ಕರೋಗಿ, ಪಾರ್ಟ್ನರ್, ಹಲೋ, ಗಾಡ್ ತುಸ್ಸಿ ಗ್ರೇಟ್ ಹೋ, ವಾಂಟೆಡ್, ವೀರ್, ದಬಂಗ್, ಏಕ್ ಥಾ ಟೈಗರ್, ನೋ ಪ್ರಾಬ್ಲಮ್ ಇಂತಹ ಅನೇಕ ಹಿಟ್ ಚಿತ್ರಗಳಿಗೆ  ಸಂಗೀತ ನಿರ್ದೇಶನ ಮಾಡಿದ್ದಾರೆ.

ನಂತರದ ದಿನಗಳಲ್ಲಿ ಸಾಜಿದ್-ವಾಜಿದ್, ಕ್ಯಾ ಯಹಿ ಪ್ಯಾರ್ ಹೈ, ಕಿಲ್ಲರ್, ಶಾದಿ ಕರ್ ಕೆ ಫಸ್ ಗಯಾ ಯಾರ್, ಚೋರಿ-ಚೋರಿ, ಕಾಲ್ ಕಿಸನೇ ದೇಖಾ, ತುಮ್ ಕೋ ನ ಭೂಲ್ ಪಾಯೆಂಗೆ, ಜಾನೆ ಕ್ಯಾ ಹೋಗಾ ಇತ್ಯಾದಿ ಚಿತ್ರಗಳಿಗೂ ಕೂಡ ಸಂಗೀತ ನಿರ್ದೇಶನ ನೀಡಿದ್ದಾರೆ. ಇದಲ್ಲದೆ ದೀರ್ಘ ಕಾಲದವರೆಗೆ ಅವರು ಖ್ಯಾತ ಸಂಗೀತ ಷೋ ಸಾರೆಗಾಮಾಪಾ ಜೊತೆಗೂ ಕೂಡ ನಂಟು ಹೊಂದಿದ್ದರು.

Section: 
English Title: 
Wajid Khan from the popular music director duo Sajid-Wajid passed away
News Source: 
Home Title: 

ಖ್ಯಾತ Bollywood ಸಂಗೀತ ನಿರ್ದೇಶಕ Wajid Khan ನಿಧನ

ಖ್ಯಾತ Bollywood ಸಂಗೀತ ನಿರ್ದೇಶಕ Wajid Khan ನಿಧನ
Yes
Is Blog?: 
No
Tags: 
Facebook Instant Article: 
Yes
Mobile Title: 
ಖ್ಯಾತ Bollywood ಸಂಗೀತ ನಿರ್ದೇಶಕ Wajid Khan ನಿಧನ
Publish Later: 
No
Publish At: 
Monday, June 1, 2020 - 14:16
Created By: 
Nitin Tabib
Updated By: 
Nitin Tabib
Published By: 
Nitin Tabib