Vivek Oberoi Fraud Case: ಬಾಲಿವುಡ್ ನಟ ವಿವೇಕ್ ಒಬೆರಾಯ್‍ಗೆ ಭಾರೀ ವಂಚನೆ!

Vivek Oberoi Fraud Case: ವಿವೇಕ್ ಒಬೆರಾಯ್‍ ಅವರ ಚಾರ್ಟರ್ಡ್ ಅಕೌಂಟೆಂಟ್ ಮೂವರ ವಿರುದ್ಧ ಅಂಧೇರಿ ಪೂರ್ವದ ಎಂಐಡಿಸಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದಾಗ ವಂಚನೆಯ ಘಟನೆ ಬೆಳಕಿಗೆ ಬಂದಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Written by - Puttaraj K Alur | Last Updated : Jul 22, 2023, 03:54 PM IST
  • ಬಾಲಿವುಡ್‍ನ ಖ್ಯಾತ ನಟ ವಿವೇಕ್ ಒಬೆರಾಯ್‍ಗೆ ಭಾರೀ ವಂಚನೆ ಮಾಡಲಾಗಿದೆ
  • ಈವೆಂಟ್ & ಸಿನಿಮಾ ನಿರ್ಮಾಣ ಸಂಸ್ಥೆಯಲ್ಲಿ ಹೂಡಿಕೆ ಮಾಡಿದ್ರೆ ಉತ್ತಮ ಆದಾಯದ ಭರವಸೆ
  • ಸಿನಿಮಾ ನಿರ್ಮಾಪಕ ಸೇರಿದಂತೆ ಮೂವರು ಆರೋಪಿಗಳ ವಿರುದ್ಧ ದೂರು ನೀಡಿರುವ ನಟ
Vivek Oberoi Fraud Case: ಬಾಲಿವುಡ್ ನಟ ವಿವೇಕ್ ಒಬೆರಾಯ್‍ಗೆ ಭಾರೀ ವಂಚನೆ! title=
ವಿವೇಕ್ ಒಬೆರಾಯ್‍ಗೆ ಭಾರೀ ವಂಚನೆ

ಮುಂಬೈ: ಬಾಲಿವುಡ್‍ನ ಖ್ಯಾತ ನಟ ವಿವೇಕ್ ಒಬೆರಾಯ್‍ಗೆ ಭಾರೀ ವಂಚನೆ ಮಾಡಿರುವ ಮಾಹಿತಿ ಬಹಿರಂಗವಾಗಿದೆ. ವರದಿಗಳ ಪ್ರಕಾರ, ಮೂವರು ವ್ಯಕ್ತಿಗಳು ನಟನಿಗೆ 1.55 ಕೋಟಿ ರೂ. ವಂಚಿಸಿದ್ದಾರೆಂದು ಆರೋಪಿಸಲಾಗಿದೆ.

ಈವೆಂಟ್ ಮತ್ತು ಸಿನಿಮಾ ನಿರ್ಮಾಣ ಸಂಸ್ಥೆಯಲ್ಲಿ ಹೂಡಿಕೆ ಮಾಡಿದ್ರೆ ಉತ್ತಮ ಆದಾಯ ಸಿಗುತ್ತದೆ ಅಂತಾ ವಂಚಕರು ನಟನಿಗೆ ಭರವಸೆ ನೀಡಿದ್ದರಂತೆ. ಅದರಂತೆ ವಿವೇಕ್ ಒಬೆರಾಯ್‍ ನೀಡಿದ ಹಣವನ್ನು ಈ ಮೂವರು ತಮ್ಮ ವೈಯಕ್ತಿಕ ಬಳಸಿಕೊಂಡಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ನಂಬಿಕೆ ಸುಳ್ಳಾಗಿಸಿದ್ದಕ್ಕೆ ಧನ್ಯವಾದ...'ಹಾಸ್ಟೆಲ್ ಹುಡುಗರಿಗೆ' ರಾಜ್ ಬಿ ಶೆಟ್ಟಿ ಸಂದೇಶ..!

ವಿವೇಕ್ ಒಬೆರಾಯ್‍ ಅವರ ಚಾರ್ಟರ್ಡ್ ಅಕೌಂಟೆಂಟ್ ಮೂವರ ವಿರುದ್ಧ ಅಂಧೇರಿ ಪೂರ್ವದ ಎಂಐಡಿಸಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದಾಗ ವಂಚನೆಯ ಘಟನೆ ಬೆಳಕಿಗೆ ಬಂದಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ದೂರಿನ ಪ್ರಕಾರ, ಸಿನಿಮಾ ನಿರ್ಮಾಪಕ ಸೇರಿದಂತೆ ಮೂವರು ಆರೋಪಿಗಳು ನಟನ ವ್ಯಾಪಾರ ಪಾಲುದಾರರಾಗಿದ್ದು, ಈವೆಂಟ್ ಮತ್ತು ಚಿತ್ರ ನಿರ್ಮಾಣ ಸಂಸ್ಥೆಯಲ್ಲಿ ಹಣ ಹೂಡುವಂತೆ ಕೇಳಿದ್ದರು. ಈ ಯೋಜನೆಯಲ್ಲಿ ನಟ 1.55 ಕೋಟಿ ರೂ. ಹೂಡಿಕೆ ಮಾಡಿದ್ದರು.

ಇದನ್ನೂ ಓದಿ: Shivarajkumar : ಪೈಲೆಟ್.. ಟ್ರೈನ್ ಮಾಸ್ಟರ್ ಲುಕ್‌ನಲ್ಲಿ ಸೆಂಚುರಿ ಸ್ಟಾರ್‌..ಇದು 'ಕ್ಯಾಪ್ಟನ್ ಮಿಲ್ಲರ್' ಗೆಟಪ್ ಹೌದಾ..?

ಆದರೆ ಆರೋಪಿಗಳು ನಟ ಹೂಡಿಕೆ ಮಾಡಿದ್ದ ಹಣವನ್ನು ತಮ್ಮ ವೈಯಕ್ತಿಕ ಕಾರಣಕ್ಕೆ ಬಳಸಿಕೊಂಡಿದ್ದಾರೆಂದು ಅಧಿಕಾರಿ ತಿಳಿಸಿದ್ದಾರೆ. ವಿವೇಕ್ ಒಬೆರಾಯ್ ಕೂಡ ತನ್ನ ವ್ಯಾಪಾರ ಪಾಲುದಾರರ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಬಗ್ಗೆ ಇದೀಗ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News