ನವದೆಹಲಿ: ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾರ ಮದುವೆ ಕುರಿತಾಗಿನ ಉಹಾಪೋಹ ದೇಶದಾದ್ಯಂತ ಸುದ್ದಿಮಾಡಿತ್ತು. ಹಾಗಾಗಿ ಈ ಜೋಡಿಗಳ ಮದುವೆ ಯಾವಾಗ ಮತ್ತು ಎಲ್ಲಿ ಮದುವೆಯಾಗಲಿದ್ದಾರೆ ಎನ್ನುವ ಚರ್ಚೆಗಳು ದಿನವು ನಡೆಯುತ್ತಿದ್ದವು.
ಈಗ ಅದಕ್ಕೆ ತೆರೆ ಬಿದ್ದಿದ್ದು, ಈ ಜೋಡಿಯ ಮದುವೆಯನ್ನುಈ ವರ್ಷದ ದೊಡ್ಡ ಮದುವೆ ಎಂದು ಬಿಂಬಿಸಲಾಗಿದೆ.ಈಗಾಗಲೇ ಮದುವೆ ಫೋಟೋಗಳು ಮತ್ತು ವೀಡಿಯೊಗಳನ್ನು ಸಾಮಾಜಿಕ ಜಾಲ ತಾಣಗಲ್ಲಿ ಹಂಚಿಕೊಂಡಿರುವ ವಿರಾಟ್ ಮತ್ತು ಅನುಷ್ಕಾ ಪರಿಪೂರ್ಣ ದಂಪತಿಗಳಂತೆ ಫೋಟೋದಲ್ಲಿ ಮಿಂಚುತ್ತಿದ್ದಾರೆ.
ವಿರಾಟ ಕೊಹ್ಲಿ ಟ್ವೀಟಿಂಗ್ ಮೂಲಕ ಮದುವೆಯನ್ನು ದೃಢಪಡಿಸಿ ತನ್ನ ಟ್ವೀಟ್ನೊಂದಿಗೆ ಚಿತ್ರವನ್ನು ಹಂಚಿಕೊಂಡಿದ್ದು "ಇಂದು ನಾವು ಪರಸ್ಪರ ಪ್ರೀತಿಸುತ್ತೇವೆಂದು ಭರವಸೆ ನೀಡುತ್ತೇವೆ. ಸ್ನೇಹಿತರ, ಸಂಬಂಧಿಕರ ಮತ್ತು ಅಭಿಮಾನಿಗಳ ಆಶೀರ್ವಾದದಿಂದಾಗಿ, ಈ ದಿನ ಇನ್ನಷ್ಟು ವಿಶೇಷವಾಗಿದೆ. ನಮ್ಮ ಪ್ರಯಾಣದ ಪ್ರಮುಖ ಭಾಗವಾಗಿರುವುದಕ್ಕೆ ಎಲ್ಲರಿಗೂ ಧನ್ಯವಾದಗಳು." ಎಂದು ಕೊಹ್ಲಿ ಟ್ವೀಟ್ ನಲ್ಲಿ ತಿಳಿಸಿದ್ದಾರೆ.
ಬಾಲಿವುಡ್ ಲೈಫ್.ಕಾಮ್ನಲ್ಲಿ ಮುದ್ರಿತವಾದ ವರದಿಯ ಪ್ರಕಾರ, ವಿರಾಟ್ ಅನುಶ್ಕಾಳಿಗಾಗಿ ಮೂರು ತಿಂಗಳ ಕಾಲ ಶೋಧಿಸಿದ ನಂತರ ಡೈಮಂಡ್ ಉಂಗುರವನ್ನು ಕೊಂಡುಕೊಂಡಿದ್ದರು. ಈ ರಿಂಗ್ ವಿಶೇಷವಾಗಿ ಆಸ್ಟ್ರೇಲಿಯಾದ ವಿನ್ಯಾಸಕರಿಂದ ವಿನ್ಯಾಸಗೊಳಿಸಲ್ಪಟ್ಟಿದೆ.ವಿಶೇಷ ವಿನ್ಯಾಸದೊಂದಿಗೆ ಈ ರಿಂಗ್ ತಯಾರುಗೊಂಡಿದೆ.