ʼದಳಪತಿ 68ʼ ಚಿತ್ರದಲ್ಲಿ ವಿಜಯ್‌ ಡಬಲ್‌ ರೋಲ್...ಈ ಇಬ್ಬರು ನಾಯಕಿಯರ ಜೊತೆ ರೋಮ್ಯಾನ್ಸ್‌!

Thalapathy next movie update : 'ಲಿಯೋ' ಚಿತ್ರದ ನಂತರ ನಟ ವಿಜಯ್ ಅವರ ಮುಂದಿನ ಸಿನಿಮಾದ ಬಿಗ್‌ ಅಪ್‌ಡೇಟ್ಸ್‌ ಒಂದು ಹೊರಬಿದ್ದಿದ್ದು, ಈ ಚಿತ್ರವನ್ನು ವೆಂಕಟ್ ಪ್ರಭು ನಿರ್ದೇಶಿಸಿಸಲಿದ್ದಾರೆ ಎನ್ನಲಾಗುತ್ತಿದೆ. ಜೊತೆಗೆ ಈ ಸಿನಿಮಾದಲ್ಲಿ ವಿಜಯ್‌ ಜೊತೆ ಇಬ್ಬರು ನಾಯಕಿಯರು ರೋಮ್ಯಾನ್ಸ್‌ ಮಾಡಲಿದ್ದಾರೆ. ಹಾಗಾದರೆ ಯಾರು ಆ ನಾಯಕಿಯರು ಅಂತೀರಾ ಮುಂದೆ ಓದಿ.....  

Written by - Savita M B | Last Updated : Aug 22, 2023, 11:55 AM IST
  • ಟ ವಿಜಯ್ ಅವರ ಮುಂದಿನ ಚಿತ್ರ ದಳಪತಿ 68
  • ಚಿತ್ರದ ತಾರಾಬಳಗ ಹಾಗೂ ಚಿತ್ರೀಕರಣ ಯಾವಾಗ ಆರಂಭವಾಗಲಿದೆ ಎನ್ನುವ ಮಾಹಿತಿ ಹೊರಬಿದ್ದಿದೆ.
  • ದಳಪತಿ 68 ರಲ್ಲಿ ನಟ ವಿಜಯ್ ಎರಡು ಪಾತ್ರಗಳಲ್ಲಿ ನಟಿಸುತ್ತಿದ್ದಾರೆ
ʼದಳಪತಿ 68ʼ ಚಿತ್ರದಲ್ಲಿ ವಿಜಯ್‌ ಡಬಲ್‌ ರೋಲ್...ಈ ಇಬ್ಬರು ನಾಯಕಿಯರ ಜೊತೆ ರೋಮ್ಯಾನ್ಸ್‌!  title=

Thalaphy 68 : ವೆಂಕಟ್ ಪ್ರಭು ತಮಿಳು ಚಿತ್ರರಂಗದ 'ಜಾಲಿ' ನಿರ್ದೇಶಕ ಎಂದೇ ಫೇಮಸ್. ಇವರು ಥ್ರಿಲ್ಲರ್ ಅಥವಾ ಕ್ರೈಂ ಕಥೆಯಾಗಿರಲಿ, ಅದರಲ್ಲಿ ಹಾಸ್ಯ ಅಂಶಗಳೊಂದಿಗೆ ಜನರನ್ನು ನಗಿಸಲು ಇಚ್ಚಿಸುತ್ತಾರೆ. 

ನಟ ವಿಜಯ್ ಜೊತೆಗಿನ ಅವರ ಮುಂದಿನ ಚಿತ್ರ ಥಲಪತಿ 68. ಚಿತ್ರಕ್ಕೆ ಇನ್ನೂ ಹೆಸರಿಡಲಾಗಿಲ್ಲ. ಸದ್ಯ ಈ ಚಿತ್ರಕ್ಕೆ ಕಾಸ್ಟಿಂಗ್ ಪ್ರಕ್ರಿಯೆ ನಡೆಯುತ್ತಿದ್ದು, ಚಿತ್ರದ ತಾರಾಬಳಗ ಹಾಗೂ ಚಿತ್ರೀಕರಣ ಯಾವಾಗ ಆರಂಭವಾಗಲಿದೆ ಎನ್ನುವ ಮಾಹಿತಿ ಹೊರಬಿದ್ದಿದೆ.  

ಇಬ್ಬರು ನಾಯಕಿಯರ ಜೊತೆ ವಿಜಯ್‌ ರೋಮ್ಯಾನ್ಸ್‌ : 
ದಳಪತಿ 68 ರಲ್ಲಿ ನಟ ವಿಜಯ್ ಎರಡು ಪಾತ್ರಗಳಲ್ಲಿ ನಟಿಸುತ್ತಿದ್ದಾರೆ ಎನ್ನಲಾಗಿದೆ. ಈ ಚಿತ್ರದಲ್ಲಿ ವಿಜಯ್ ಗೆ ಒಂದು ಪಾತ್ರಕ್ಕೆ ನಾಯಕಿಯಾಗಿ ಜ್ಯೋತಿಕಾ ನಟಿಸಲಿದ್ದು,  ಇನ್ನೊಂದು ಪಾತ್ರಕ್ಕೆ ಪ್ರಿಯಾಂಕಾ ಮೋಹನ್ ನಾಯಕಿಯಾಗಿ ನಟಿಸಲಿದ್ದಾರೆ ಎಂಬ ವರದಿಗಳು ಹೊರಬಿದ್ದಿವೆ.

ವಿಜಯ್ ಮತ್ತು ಜ್ಯೋತಿಕಾ ಇಬ್ಬರೂ ತಮ್ಮ ಸಿನಿಮಾ ವೃತ್ತಿಜೀವನದ ಆರಂಭಿಕ ಹಂತದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು. 2000 ರಲ್ಲಿ ಬಿಡುಗಡೆಯಾದ ಎಸ್‌ಜೆ ಸೂರ್ಯ ನಿರ್ದೇಶನದ 'ಖುಷಿ' ಚಿತ್ರದಲ್ಲಿ ಅವರ ಕೆಮಿಸ್ಟ್ರಿಗೆ ಅಭಿಮಾನಿಗಳು ಫಿದಾ ಆಗಿದ್ದರು. ನಂತರ ಇದೇ ಜೋಡಿ 2003 ರಲ್ಲಿ ಮತ್ತೊಮ್ಮೆ ಕೈ ಕೈ ಹಿಡಿದು ಟಾಲಿವುಡ್‌ ಅಂಗಳದಲ್ಲಿ ಬಾರೀ ಸದ್ದು ಮಾಡಿತ್ತು. ಇದೀಗ ಸುಮಾರು 20 ವರ್ಷಗಳ ನಂತರ ಈ ಸೂಪರ್‌ ಹಿಟ್‌ ಜೋಡಿಯನ್ನು ಮತ್ತೆ ತೆರೆಮೇಲೆ ನೋಡಿ ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾತೂರದಿಂದ ಕಾಯುತ್ತಿದ್ದಾರೆ. 

ಪ್ರಿಯಾಂಕಾ ಮೋಹನ್ ತಮಿಳು ಚಿತ್ರರಂಗದ ಇತ್ತೀಚಿನ ಟ್ರೆಂಡಿಂಗ್ ನಾಯಕಿ. ಇವರು ಶಿವಕಾರ್ತಿಕೇಯನ್‌ ನಟನೆಯ 'ಡಾಕ್ಟರ್' ಚಿತ್ರದದಿಂದ ತಮ್ಮ ನಟನೆಯನ್ನು ಪ್ರಾರಂಭಿಸಿದರು. ಇದಲ್ಲದೇ ನಟಿ ಧನುಷ್ ಅವರ 'ಕ್ಯಾಪ್ಟನ್ ಮಿಲ್ಲರ್' ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಸದ್ಯ ವಿಜಯ್ ಗೆ ಜೋಡಿಯಾಗಿ ನಟಿಸಲಿದ್ದಾರೆ ಎಂಬ ಸುದ್ದಿ ಟಾಲಿವುಡ್‌ನಲ್ಲಿ ಹರಿದಾಡುತ್ತಿದೆ. 

ಇದನ್ನೂ ಓದಿ-ರೂರಲ್ ಸ್ಟಾರ್ ಅಂಜನ್ ನಟನೆಯ ಚೋಳ ಟೀಸರ್‌ ರಿಲೀಸ್‌

ದಳಪತಿ 68 ಕಥೆ ಏನು..? 
ದಳಪತಿ 68 ಚಿತ್ರದ ಕಥೆಯ ಬಗ್ಗೆಯೂ ಸಿನಿರಂಗದಿಂದ ಮಾಹಿತಿ ಹೊರಬಿದ್ದಿದೆ. ಈ ಚಿತ್ರವು ರಾಜಕೀಯ ಥ್ರಿಲ್ಲರ್ ಸಿನಿಮಾ ಆಗಿರಲಿದೆ ಎನ್ನಲಾಗುತ್ತಿದ್ದು, ಅಲ್ಲದೇ ಈ ಚಿತ್ರದಲ್ಲಿ ವಿಜಯ್ ಅವರು ಹಿಂದೆಂದೂ ನಟಿಸಿರದ ಪಾತ್ರದಲ್ಲಿ ಕಾಣಿಸಿಕೊಳ್ಳಿದ್ದಾರೆ ಎಂದು ಹೇಳಲಾಗುತ್ತಿದೆ. 

ಇನ್ನು ನಟ ವಿಜಯ್ ಸದ್ಯದಲ್ಲೇ ಚಿತ್ರರಂಗ ತೊರೆದು ರಾಜಕೀಯಕ್ಕೆ ಬರಲಿದ್ದಾರೆ ಎನ್ನಲಾಗುತ್ತಿದೆ. ಅವರ ಕೊನೆಯ ಚಿತ್ರ ರಾಜಕೀಯ ಚಿತ್ರವಾಗಲಿದೆ ಎಂದೂ ಹೇಳಲಾಗುತ್ತಿದೆ. ಇದರಿಂದಾಗಿ ಅವರ 68ನೇ ಚಿತ್ರವೇ ಅವರ ಕೊನೆಯ ಚಿತ್ರವಾಗಬಹುದೇ ಎಂಬ ಅನುಮಾನ ಅಭಿಮಾನಿಗಳಲ್ಲಿ ಮೂಡಿದೆ. 

ಶೂಟಿಂಗ್ ಯಾವಾಗ? 
ಥಲಪತಿ 68 ರ 'ಲುಕ್ ಟೆಸ್ಟ್' ಕೆಲಸ ಶೀಘ್ರದಲ್ಲೇ ಲಂಡನ್‌ನಲ್ಲಿ ಪ್ರಾರಂಭವಾಗಲಿದೆ. ಚಿತ್ರಕ್ಕಾಗಿ ನಟರ ಆಯ್ಕೆ ಚೆನ್ನೈನಲ್ಲಿ ಭರದಿಂದ ಸಾಗುತ್ತಿದೆ. 'ಲಿಯೋ' ಬಿಡುಗಡೆಯ ನಂತರ, ದಳಪತಿ 68 ರ ಕೆಲಸವು ಅಕ್ಟೋಬರ್ ಕೊನೆಯಲ್ಲಿ ಅಥವಾ ನವೆಂಬರ್ ಮೊದಲ ವಾರದಲ್ಲಿ ಪ್ರಾರಂಭವಾಗುವ ನಿರೀಕ್ಷೆಯಿದೆ. 

ಇನ್ನು ನಿರ್ದೇಶಕ ವೆಂಕಟ್ ಪ್ರಭು ಅವರು ಚೆನ್ನೈ-28 ಚಿತ್ರವನ್ನು ನಿರ್ದೇಶಿಸುವ ಮೂಲಕ ತಮಿಳು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಮೊದಲಿನಿಂದ ಇಲ್ಲಿಯವರೆಗೂ ಅವರು ತಮ್ಮ ಚಿತ್ರಗಳಲ್ಲಿ ಅಭಿಮಾನಿಗಳನ್ನು ಆನಂದಿಸುವ ಮತ್ತು ನಗಿಸುವ ರೀತಿಯ ಚಿತ್ರಕಥೆಯನ್ನು ನೀಡುತ್ತಾ ಬಂದಿದ್ದಾರೆ. ಇತ್ತೀಚೆಗೆ ವಿಜಯ್ ಆಕ್ಷನ್-ಥ್ರಿಲ್ಲರ್ ಕಥೆಗಳಲ್ಲಿ ನಟಿಸುತ್ತಿದ್ದಾರೆ. ಹೀಗಿರುವಾಗ ಇವರಿಬ್ಬರ ಮೈತ್ರಿ ಹೇಗಿರಲಿದೆ? ಎಂಬ ಆಸೆ ಅಭಿಮಾನಿಗಳ ಮನದಲ್ಲಿ ಮೂಡಿದೆ. 

ಇದನ್ನೂ ಓದಿ-Vaibhavi Jagdish : ಸೀರೆಯಲ್ಲಿ ಮಿಂಚಿದ ಜೈ ಜಗದೀಶ್‌ ಪುತ್ರಿ..ಪೋಟೋಸ್‌ ನೋಡಿ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News